ದಯವಿಟ್ಟು ಎಲ್ಲಾ ಭಕ್ತಾದಿಗಳು ಇನ್ನು 15 ದಿನಗಳ ಕಾಲ ಮಂತ್ರಾಲಯಕ್ಕೆ ಬರಬೇಡಿ ಎಂದು ಮಂತ್ರಾಲಯ ಮಠದಿಂದ ಅಧಿಕೃತ ಆದೇಶ ಹೊರಡಿಸಿದೆ

in News 43 views

ದಯವಿಟ್ಟು ಭಾರತದಲ್ಲಿರುವ ಎಲ್ಲಾ ರಾಘವೇಂದ್ರಸ್ವಾಮಿ ಭಕ್ತಾದಿಗಳಲ್ಲಿ ವಿನಂತಿ ಮಾಡಿಕೊಳ್ಳುವುದು ಏನೆಂದರೆ ಶ್ರೀ ಗುರು ರಾಘವೇಂದ್ರ ಸ್ವಾಮಿ ನೆಲೆಸಿರುವ ಅದ್ಭುತ ಪುಣ್ಯ ಕ್ಷೇತ್ರವಾದ ಮಂತ್ರಾಲಯ ಮಠಕ್ಕೆ ಬರಬೇಡಿ ಎಂದು ಸ್ವತಹ ರಾಘವೇಂದ್ರ ಸ್ವಾಮಿ ದೇವಸ್ಥಾನದ ಮಂಡಳಿ ವತಿಯಿಂದ ಅಧಿಕೃತ ಪತ್ರ ಹೊರಗಡೆ ಬಂದಿದ್ದು ಮತ್ತು ಪ್ರತಿ ನಿತ್ಯ ಭಕ್ತರು ದೇಶ ಹಾಗೂ ಹೊರದೇಶಗಳಿಂದ ಇಲ್ಲಿಗೆ ಬರುವುದು ನಮ್ಮ-ನಿಮ್ಮೆಲ್ಲರಿಗೆ ಗೊತ್ತಿರುವ ವಿಚಾರ ಆದರೆ ಸಧ್ಯಕ್ಕೆ ಭೂತದಂತೆ ಕಾಡುತ್ತಿರುವ ಕೊರೊನಾ ವೈರಸ್ ಭೀತಿ ಇದ್ದು ಪುಣ್ಯಕ್ಷೇತ್ರ ಮಂತ್ರಾಲಯದಲ್ಲಿ ಕೂಡಾ ಇದರ ಬಗ್ಗೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದು ಮಂತ್ರಾಲಯಕ್ಕೆ ಬರುವ ಭಕ್ತರಿಗೆ ಕೆಲವು ವಿಶೇಷ ಸೂಚನೆಗಳನ್ನು ಕೊಟ್ಟಿದ್ದಾರೆ ಮತ್ತು ಅಧಿಕೃತ ಪ್ರಕಟಣೆಯಲ್ಲಿ ಮಂತ್ರಾಲಯ ಶ್ರೀ ಕ್ಷೇತ್ರ ಮಂತ್ರಾಲಯ ಮಠದ ವತಿಯಿಂದ ಭಕ್ತರು ವಹಿಸಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಸುದ್ದಿಯನ್ನು ನೀಡಲಾಗಿದೆ ಹೊರದೇಶಗಳಿಂದ ಬರುವ ಭಕ್ತರು ಮತ್ತು ಅವರಲ್ಲಿ ಆರೋಗ್ಯ ಸಮಸ್ಯೆ ಇರುವವರು 15 ದಿನಗಳ ಕಾಲ ಶ್ರೀ ಕ್ಷೇತ್ರಕ್ಕೆ ಮಂತ್ರಾಲಯಕ್ಕೆ ಬರಬೇಡಿ ಎಂದು ಮುನ್ನೆಚ್ಚರಿಕೆಯನ್ನು ನೀಡಿದ್ದಾರೆ.

ಇದನ್ನು ಹೊರತುಪಡಿಸಿ ಶ್ರೀ ಕ್ಷೇತ್ರ ಮಂತ್ರಾಲಯಕ್ಕೆ ಭೇಟಿ ಕೊಡುವ ಭಕ್ತಾದಿಗಳು ತಮ್ಮೊಂದಿಗೆ ಮಾಸ್ಕ್ ಸ್ಯಾನಿಟೈಗಳನ್ನು ತಪ್ಪದೇ ನಿಮ್ಮೊಂದಿಗೆ ತರಬೇಕೆಂದು ಕೂಡಾ ಈ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ ಮತ್ತು ಕ್ಷೇತ್ರದ ಸುಚಿತ್ವ ಕಾಪಾಡಲು ಈಗಾಗಲೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆಯೆಂದೂ ರಾಘವೇಂದ್ರ ಸ್ವಾಮಿ ಮಠದ ಸಿಬ್ಬಂದಿ ತಿಳಿಸಿದ್ದಾರೆ ಮತ್ತು ವ್ಯಾಪಾರಸ್ಥರಿಗೂ ಕೂಡಾ ವೈಯಕ್ತಿಕ ಶುಚಿತ್ವವನ್ನು ಕಾಪಾಡಿಕೊಳ್ಳಬೇಕೆಂದು ವಿಶೇಷ ಸೂಚನೆಗಳನ್ನು ನೀಡಿದ್ದಾರೆ ರಾಘವೇಂದ್ರ ಸ್ವಾಮಿ ಭಕ್ತರಲ್ಲಿ ಯಾರಾದರೂ ಕೆಮ್ಮು ನೆಗಡಿ ಜ್ವರ ಅಥವಾ ಉಸಿರಾಟದ ಸಮಸ್ಯೆಗೆ ಸಿಲುಕಿ ಬಳಲುತ್ತಿದ್ದರೆ ಅವರು ರಾಘವೇಂದ್ರ ಸ್ವಾಮಿ ಮಠದ ಆರೋಗ್ಯಾಲಯದಲ್ಲಿ ಚಿಕಿತ್ಸೆ ಪಡೆಯುವಂತೆ ಮಠದ ಸಿಬ್ಬಂದಿಗಳು ಅಧಿಕೃತವಾಗಿ ಸೂಚಿಸಿದೆ.

Advertisement

ಮತ್ತು ರಾಘವೇಂದ್ರ ಸ್ವಾಮಿ ಮಠದ ಮೇಲ್ವಿಚಾರಕರಿಂದ ಈ ಬಗ್ಗೆ ಮಠದ ಅಧಿಕೃತ ವೆಬ್ಸೈಟ್ ನಲ್ಲೂ ಮಾಹಿತಿ ಕೊಟ್ಟಿದ್ದಾರೆ ಇಷ್ಟು ಮಾತ್ರವಲ್ಲದೆ ಸರ್ಕಾರಿ ಆರೋಗ್ಯ ವೈದ್ಯಕೀಯ ಅಧಿಕಾರಿಗಳು ‌ನೀಡುವ ಸೂಚನೆಗಳನ್ನು ಕೂಡಾ ತಪ್ಪದೇ ಪಾಲಿಸಬೇಕು ಎಂದಿದ್ದಾರೆ ಅಲ್ಲದೇ ಈ ಸಮಸ್ಯೆ ನಿವಾರಣೆಗಾಗಿ ಶಾಂತಿಗಾಗಿ ಶ್ರೀ ಮಠದಲ್ಲಿ ನಡೆಸುವ ಹೋಮ ಯಜ್ಞ ಹ್ವವನಗಳು ಮತ್ತು ಪ್ರಾರ್ಥನೆಗಳಲ್ಲಿ ಭಕ್ತರು ಕೂಡಾ ತಮ್ಮ ಆತ್ಮ ಶುದ್ಧದ ತನು ಮನದಿಂದ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಎಂದು ಸೂಚನೆ ನೀಡಲಾಗಿದ್ದು ಭಕ್ತರು ಈ ಒಂದು ಕಾರ್ಯಕ್ಕೆ ತಮ್ಮ ಸಂಪೂರ್ಣ ಸಹಕಾರ ನೀಡಬೇಕೆಂದು ರಾಘವೇಂದ್ರ ಸ್ವಾಮಿ ಮಠದ ಅಧಿಕೃತ ಮೇಲ್ವಿಚಾರಣೆ ತಂಡದವರು ತಿಳಿಸಿದ್ದಾರೆ ಭಕ್ತರಲ್ಲಿ ಹೃದಯಪೂರ್ವಕವಾಗಿ ತಮ್ಮ ಮನವಿಯನ್ನು ಇಟ್ಟಿದ್ದಾರೆ.

Advertisement
Advertisement

Advertisement
Share this on...