ಅಳಿಯನಿಗಾಗಿ 67 ಬಗೆಯ ಭಕ್ಷ್ಯ ಭೋಜನ…ಏನ್ರಪ್ಪಾ ಹುಡುಗ್ರಾ ನಿಮಗೂ ಇಂತ ಅತ್ತೆ ಬೇಕಾ…?

in ಕನ್ನಡ ಮಾಹಿತಿ/ಮನರಂಜನೆ 480 views

ಭಾರತ ದೇಶ ತನ್ನದೇ ಆದ ಸಂಸ್ಕತಿ, ಆಚಾರ ವಿಚಾರ, ಆಹಾರ ಕ್ರಮವನ್ನು ಒಳಗೊಂಡ ದೇಶ. ಅಷ್ಟೇ ಅಲ್ಲ, ‘ಅತಿಥಿ ದೇವೋಭವ’ ಎಂಬ ಮಾತಿನಂತೆ ಮನೆಗೆ ಬಂದ ಅತಿಥಿಗಳನ್ನು ಸತ್ಕರಿಸದೆ ಹೋದರೆ ಕೆಲವರಂತೂ ಹನಿ ನೀರು ಕುಡಿಯುವುದಿಲ್ಲ. ಅಂತದ್ದರಲ್ಲಿ ಮನೆಗೆ ಅಳಿಯ ದೇವ್ರು ಬರುತ್ತಿದ್ದಾರೆ ಅಂದರೆ ಅವರ ಸತ್ಕಾರ ಹೇಗಿರಬೇಡ ನೀವೇ ಊಹಿಸಿ.ಅಳಿಯ ಮನೆಗೆ ಬರ್ತಿದ್ಧಾರೆ ಅಂದ್ರೆ ನಿಮ್ಮ ಮನೆಯಲ್ಲಿ ಏನೆಲ್ಲಾ ತಯಾರಿಸಬಹುದು…? ನಾನ್​​​ವೆಜ್ ತಿನ್ನುವವರಾದರೆ ಕೋಳಿ ಸಾರು, ಕೋಳಿ ಚಾಪ್ಸ್​​​, ಗೀ ರೈಸ್​, ಖೀರು ಇದರ ಜೊತೆಗೆ ಇನ್ನೂ ಒಂದೆರಡು. ವೆಜ್​​​​ ತಿನ್ನುವವರಾದರೆ ಅನ್ನ, ಬೇಳೆಸಾರು, ಚಿತ್ರಾನ್ನ, ಒಬ್ಬಟ್ಟು, ಪಲ್ಯ ಇದರ ಜೊತೆ ಮತ್ತಷ್ಟು. ಆದರೆ ಇಲ್ಲಿ ಅತ್ತೆಯೊಬ್ಬರು ಅಳಿಯ ಮನೆಗೆ ಬರುತ್ತಿದ್ದಾರೆ ಎಂಬ ಖುಷಿಯಲ್ಲಿ ಅವರಿಗೆ ಬಡಿಸಲು ಒಂದಲ್ಲಾ ಎರಡಲ್ಲ, ಸುಮಾರು 67 ಬಗೆಯ ವಿವಿಧ ಭಕ್ಷ್ಯ ಭೋಜನಗಳನ್ನು ತಯಾರಿಸಿದ್ಧಾರೆ. ನಾಲ್ಕೈದು ಐಟಮ್​​​ಗಳನ್ನು ಮಾಡುವುದರಲ್ಲಿ ಉಸ್ಸಪ್ಪಾ ಎನ್ನಿಸುತ್ತದೆ. ಅಂತದರಲ್ಲಿ ಈ ಅತ್ತೆ 67 ಬಗೆಯ ತಿಂಡಿಗಳನ್ನು ಮಾಡಿದ್ದಾರೆ ಎಂದರೆ ಗ್ರೇಟ್ ಅಲ್ವಾ..?

Advertisement

Advertisement

ಅಂದ ಹಾಗೆ ಈ ದೇವ್ರಂತಾ ಅತ್ತೆ ನೆರೆಯ ಆಂಧ್ರಪ್ರದೇಶಕ್ಕೆ ಸೇರಿದವರು. ಒಂದು ಟೇಬಲ್ ಮೇಲೆ ದೊಡ್ಡ ಬಾಳೆ ಎಲೆ ಹಾಸಿ ಬಾಳೆ ಎಲೆ ತುಂಬುವಷ್ಟು ಹಾಗೂ ಸುತ್ತ ಮುತ್ತ ತಿಂಡಿಗಳನ್ನು ಜೋಡಿಸಿದ್ದಾರೆ. ಅಳಿಯ ಮನೆಗೆ ಬಂದೊಡನೆ ಅವರಿಗಾಗಿ ಒಂದು ಹಾಡು ಹಾಡಿ ಅವರ ಕೈಯ್ಯಲ್ಲಿ ಚೈನಾಗ್ರಾಸ್​​​ನಲ್ಲಿ ಮಾಡಿದ ಕೇಕ್ ಕತ್ತರಿಸಿ ನಂತರ ವೆಲ್​​ಕಮ್ ಡ್ರಿಂಗ್ ನೀಡುತ್ತೇನೆ. ವೆಲ್​ಕಮ್ ಡ್ರಿಂಕ್ ಜೊತೆಗೆ ನಂಚಿಕೊಳ್ಳಲು ಗೋಬಿ 65, ಬೇಬಿ ಕಾರ್ನ್ 65,ಬಜ್ಜಿ ಹಾಗೂ ಇನ್ನಿತರ ತಿಂಡಿಗಳನ್ನು ನೀಡುತ್ತೇನೆ.

Advertisement

Advertisement

ನಂತರ ಭೋಜನ, ಇದಕ್ಕೆ ಎರಡು ರೀತಿಯ ಉಪ್ಪಿನಕಾಯಿ, ಸಿಹಿ ಹಾಗೂ ಖಾರ ಪಚಡಿ, 2 ರೀತಿಯ ಪಲ್ಯ, ಸಾಂಬಾರ್, ತಿಳಿ ಸಾಂಬಾರ್, ಮಜ್ಜಿಗೆ, ಮೊಸರು, ತುಪ್ಪ, ಹಪ್ಪಳ, ಬೀಡಾ, ಬಾಳೆಹಣ್ಣು, ಪರಂಗಿಹಣ್ಣು, ಕಡ್ಲೆಕಾಳು ಉಸಲಿ, ಒಬ್ಬಟ್ಟು, ಲಾಡು, ಪಾಲುಖೊವಾ, ಮೂರು ರೀತಿಯ ಅನ್ನದ ಐಟಮ್​​ಗಳು….ಅಬ್ಬಾ ಬರೆಯುತ್ತಾ ಹೋದರೆ ಮುಗಿಯುವುದೇ ಇಲ್ಲ. ಇವೆಲ್ಲದರ ಜೊತೆ ಚಾಟ್​ಗಳು ಹಾಗೂ ಸರ್​​​ಪ್ರೈಸ್​​​​​​​ ಗಿಫ್ಟ್​​, ಅಳಿಯನಿಗೆ 5 ಗ್ರಾಂ ಚಿನ್ನದ ನಾಣ್ಯ.

ಇಷ್ಟೆಲ್ಲಾ ತಿನ್ನುವುದರೊಳಗೆ ಪ್ರೀತಿಯ ಅಳಿಯನಿಗೆ ಅನಾರೋಗ್ಯ ಕಾಡದೆ ಇರುತ್ತಾ…?ಕೆಲವರು ಇದು ‘ಅಲ್ಲುಡು ವಿಂಧು ಭೋಜನಂ’ ಹೆಸರಿನ ಸ್ಪರ್ಧೆಗಾಗಿ ತಯಾರಿಸಿರುವ ಮೆನು ಎಂದು ಹೇಳುತ್ತಿದ್ದಾರೆ. ಏನೇ ಆಗಲಿ ಈ ಅಡುಗೆ ತಯಾರಿಸಿರುವುದು ಸ್ಪರ್ಧೆಗಾಗಲೀ ಅಥವಾ ಅಳಿಯನಿಗೆ ಬಡಿಸುವುದಕ್ಕಾಗಲೀ ಆ ಮಹಾತಾಯಿ ಇಷ್ಟೆಲ್ಲಾ ತಯಾರಿಸಿದ್ದು ಹೇಗೆ ಎಂದು ಎಲ್ಲರೂ ಆಶ್ಚರ್ಯ ಪಡುತ್ತಿದ್ಧಾರೆ. ಈ ವಿಡಿಯೋ ಈಗ ವೈರಲ್ ಆಗುತ್ತಿದೆ. ಇದನ್ನು ನೋಡಿದ ಹುಡುಗರು ಸಿಕ್ಕರೆ ಇಂತ ಅತ್ತೆ ಸಿಗಬೇಕಪ್ಪಾ ಎಂದುಕೊಳ್ಳುತ್ತಿರುವುದಂತೂ ಗ್ಯಾರಂಟಿ.

Advertisement
Share this on...