ಈ ರಾಜ್ಯದಲ್ಲಿ ಶೇ.90 ರಷ್ಟು ಕೊರೊನಾ ಸೋಂಕಿತರು ಗುಣಮುಖರಾಗಿದ್ದಾರೆ!

in ಕನ್ನಡ ಮಾಹಿತಿ 14 views

ಕೊರೊನಾ ಎಂಬ ಸಾಂಕ್ರಾಮಿಕ ರೋಗವವು ವಿಶ್ವಾದ್ಯಂತ ಜನರನ್ನು ಆತಂಕಕ್ಕೆ ದೂಡಿದೆ. ಎಲ್ಲೆಡೆ ರೋಗಿಗಳ ಸಂಖ್ಯೆ ಹೆಚ್ಚುತ್ತಿದೆ. ಇದೇ ಸಮಯದಲ್ಲಿ ಸಾವಿನ ಸಂಖ್ಯೆಯೂ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಏತನ್ಮಧ್ಯೆ, ಛತ್ತೀಸ್ ಗರ್ ದಿನದಿಂದ ದಿನಕ್ಕೆ ಹಬ್ಬುತ್ತಿರುವ ಈ ರೋಗವನ್ನು ತಡೆಗಟ್ಟುತ್ತಿರುವ ರಾಜ್ಯವಾಗಿ ಹೊರಹೊಮ್ಮಿದೆ. ಯಾಕೆಂದರೆ ಇಲ್ಲಿ ರೋಗಿಗಳ ಸಂಖ್ಯೆ ಹೆಚ್ಚಿಲ್ಲ, ಆದರೆ ಪತ್ತೆಯಾದ ಹೆಚ್ಚಿನ ರೋಗಿಗಳು ಗುಣಮುಖರಾಗಿದ್ದಾರೆ.

Advertisement

 

Advertisement

Advertisement

 

Advertisement

ಕೊರೊನಾಗೆ ಸಂಬಂಧಿಸಿದಂತೆ ದೇಶದ ಪರಿಸ್ಥಿತಿಯನ್ನು ನಾವು ಗಮನಿಸಿದರೆ, ರೋಗಿಗಳ ಸಂಖ್ಯೆ ಮತ್ತು ಸಾವಿನ ಅಂಕಿ ಅಂಶಗಳು ಪ್ರತಿದಿನ ಹೆಚ್ಚುತ್ತಿವೆ ಎಂಬ ಒಂದು ವಿಷಯ ಸ್ಪಷ್ಟವಾಗುತ್ತದೆ. ಈಗ, ದೇಶದಲ್ಲಿ ರೋಗಿಗಳ ಸಂಖ್ಯೆ ನಾಲ್ಕು ಸಾವಿರವನ್ನು ದಾಟಿದೆ. ಆದರೆ ಛತ್ತೀಸ್ಗರ್’ನಲ್ಲಿ ಇಲ್ಲಿಯವರೆಗೆ 10 ಮಂದಿಗೆ ಕೊರೊನಾ ಕಾಣಿಸಿಕೊಂಡಿದ್ದು, ಅದರಲ್ಲಿ ಒಂಬತ್ತು ಮಂದಿ ಚೇತರಿಸಿಕೊಂಡಿದ್ದಾರೆ. ಅನೇಕರು ತಮ್ಮ ಮನೆಗಳಿಗೆ ಮರಳಿದ್ದಾರೆ. ಈವರೆಗೆ ರಾಜ್ಯದಲ್ಲಿ ಯಾವುದೇ ರೋಗಿಗಳು ಸಾವನ್ನಪ್ಪಿಲ್ಲ.

 

 

ಕೊರೊನಾವೈರಸ್ ಸೋಂಕಿಗೆ ಒಳಗಾದ 10 ರೋಗಿಗಳಲ್ಲಿ ಒಂಬತ್ತು ರೋಗಿಗಳು ಚಿಕಿತ್ಸೆಯ ನಂತರ ಸಂಪೂರ್ಣವಾಗಿ ಚೇತರಿಸಿಕೊಂಡಿರುವುದು ರಾಜ್ಯಕ್ಕೆ ಸಮಾಧಾನಕರ ಸಂಗತಿಯಾಗಿದೆ ಎಂದು ಛತ್ತೀಸ್ ಗರ್ ಸಿಎಂ ಭೂಪೇಶ್ ಬಾಗೆಲ್ ಹೇಳಿದ್ದಾರೆ. ರಾಜ್ಯದಲ್ಲಿ ಕೊರೊನಾ ಸೋಂಕಿತ ಏಕೈಕ ರೋಗಿಯು ಏಮ್ಸ್ ರಾಯ್ಪುರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಈ ರೋಗಿಯ ಸ್ಥಿತಿಯೂ ಈಗ ಸುಧಾರಿಸುತ್ತಿದೆ.

 

 

ಈ ಸಾಂಕ್ರಾಮಿಕ ರೋಗವನ್ನು ಎದುರಿಸಲು ಕೇಂದ್ರ ಸರ್ಕಾರ ಸೇರಿದಂತೆ ಎಲ್ಲಾ ರಾಜ್ಯ ಸರ್ಕಾರಗಳು ಅನೇಕ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದು, ಈ ಹಿಂದೆ ಪಿಎಂ ನರೇಂದ್ರ ಮೋದಿ ಅವರು ಪ್ರತಿಪಕ್ಷದ ಮುಖಂಡರೊಂದಿಗೆ ದೂರವಾಣಿಯಲ್ಲಿ ಚರ್ಚಿಸಿ ಕೊರೊನಾವನ್ನು ಎದುರಿಸಲು ಸಲಹೆಗಳನ್ನು ಕೇಳಿದ್ದಾರೆ. ಈಗ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಪಿಎಂ ಮೋದಿಗೆ ಪತ್ರ ಬರೆದಿದ್ದು, ಸಂಸದರ ವೇತನವನ್ನು ಶೇಕಡ 30 ರಷ್ಟು ಕಡಿತಗೊಳಿಸುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಸೋನಿಯಾ ಗಾಂಧಿ ಬೆಂಬಲಿಸಿದ್ದಾರೆ.

 

 

ಇದಲ್ಲದೆ, 5 ಸಲಹೆಗಳನ್ನು ಪ್ರಧಾನಿ ಮೋದಿ ಅವರಿಗೆ ನೀಡಿದ್ದಾರೆ. ಟೆಲಿವಿಷನ್, ಪ್ರಿಂಟ್ ಮತ್ತು ಆನ್ಲೈನ್ ಮಾಧ್ಯಮಗಳಿಗೆ ಸರ್ಕಾರ ನೀಡುವ ಎಲ್ಲಾ ಜಾಹೀರಾತುಗಳನ್ನು ನಿಷೇಧಿಸಬೇಕು. ಅವುಗಳನ್ನು ಎರಡು ವರ್ಷಗಳ ಕಾಲ ಕೊಡಬಾರದು. ಇದರಿಂದ ವರ್ಷಕ್ಕೆ 1250 ಕೋಟಿ ರೂ.ಗಳ ಉಳಿತಾಯವಾಗುತ್ತದೆ. ಇದನ್ನು ಕೊರೊನಾದ ವಿರುದ್ಧ ಹೋರಾಡಲು ಬಳಸಬೇಕು, ಸಂಸದರ ಪಿಂಚಣಿಯನ್ನು ಶೇ 30 ರಷ್ಟು ಕಡಿತಗೊಳಿಸಲಾಗಿದ್ದು, ಇದನ್ನು ಕಾರ್ಮಿಕರು, ರೈತರು ಮತ್ತು ಸಣ್ಣ ಉದ್ಯಮಿಗಳಿಗೆ ಆರ್ಥಿಕ ನೆರವು ನೀಡುವ ಮೂಲಕ ಬಳಸಬಹುದು ಎಂಬ ಇತ್ಯಾದಿ ಸಲಹೆಗಳನ್ನು ಸೋನಿಯಾ ಪಿಎಂಗೆ ನೀಡಿದ್ದಾರೆ.

Advertisement
Share this on...