ಇಂದಿಗೂ ಅಣ್ಣಾವ್ರನ್ನ ಜನ ನೆನೆಯುತ್ತಾರೆ ಯಾಕೆ..? ಇಲ್ಲಿದೆ ನೋಡಿ…

in ಕನ್ನಡ ಮಾಹಿತಿ 55 views

ಇಂದು ಕರ್ನಾಟಕದ ಹೆಮ್ಮೆ ಕನ್ನಡ ಚಿತ್ರರಂಗ ಕಂಡ ಧೀಮಂತ ನಟ ವರನಟ ಡಾ.ರಾಜ್ ಕುಮಾರ್ ರವರ ಹುಟ್ಟುಹಬ್ಬ. ಅವರು ನಮ್ಮನ್ನಗಲಿ ದಶಕಗಳೇ ಉರುಳಿ ಹೋದರು ಅವರ ಸಿನಿಮಾಗಳು ಇಂದಿಗೂ ಅದೆಷ್ಟೋ ಜನರ ಜೀವನಕ್ಕೆ ಸ್ಫೂರ್ತಿ ನೀಡಿದೆ. ಆದ್ದರಿಂದಲೇ ಕರುನಾಡಿನಲ್ಲಿ ರಾಜ್ ಕುಮಾರ್ ರವರನ್ನ ಅಣ್ಣಾವ್ರು ಅಂತ ಜನ ಇನ್ನೂ ನೆನೆಯುತ್ತಾರೆ. ಅವರು ಇಲ್ಲದಿದ್ದರೂ ಅವರ ಸಿನಿಮಾಗಳು ಅದರಲ್ಲಿದ್ದ ಸಂದೇಶಗಳು ಇಂದಿಗೂ ಚಿರಸ್ಮರಣೀಯ. ಡಾ.ರಾಜ್ ಕುಮಾರ್ ರವರ ಸಾಧನೆಗಳನ್ನ ಮೆಲುಕು ಹಾಕುತ್ತ ಹೋದರೆ ಪುಟಗಳೇ ಸಾಲದು. ಅಷ್ಟರ ಮಟ್ಟಿಗೆ ರಾಜ್ ಕುಮಾರ್ ರವರು ಕರುನಾಡಿನಲ್ಲಿ ಖ್ಯಾತಿ, ಪ್ರೀತಿಯನ್ನು ಗಳಿಸಿದ್ದಾರೆ.

Advertisement

 

Advertisement

Advertisement

 

Advertisement

ರಾಜ್ ಕುಮಾರ್ ರವರ ಮೊದಲ ಹೆಸರು ಸಿಂಗಾನಲ್ಲೂರು ಪುಟ್ಟಸ್ವಾಮಯ್ಯ ಮುತ್ತುರಾಜ್. ಇವರು 1929ರ ಏಪ್ರಿಲ್ 24ರಂದು ಗಾಜನೂರಿನಲ್ಲಿ ಜನಿಸಿದರು. ಗುಬ್ಬಿವೀರಣ್ಣ ಗರಡಿಯಲ್ಲಿ ಪಳಗಿದ ಪ್ರತಿಭೆಯಾಗಿದ್ದು ನಾಟಕ, ಅಭಿನಯದಲ್ಲಿ ಹೆಚ್ಚು ಆಸಕ್ತಿ ಹೊಂದಿದವರು. ಗುಬ್ಬಿ ನಾಟಕ ಕಂಪನಿಯಲ್ಲಿ ನಾಟಕಗಳನ್ನ ಮಾಡುತ್ತಿದ್ದರು. ಬಳಿಕ 1958ರಲ್ಲಿ ಬೇಡರ ಕಣ್ಣಪ್ಪ ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ತಮ್ಮ ಸಿನಿಪಯಣ ಆರಂಭಿಸಿದ ಮುತ್ತುರಾಜ್, ರಾಜಕುಮಾರ್ ಆಗಿ ಕನ್ನಡ ಚಿತ್ರರಂಗದಲ್ಲಿ ಮಿಂಚಿದರು.

 

 

ಸುಮಾರು 206 ಚಿತ್ರಗಳಲ್ಲಿ ಅಭಿನಯಿಸಿದ ರಾಜ್ ಕುಮಾರ್ ರವರು ಕನ್ನಡ ಚಿತ್ರರಂಗದಲ್ಲಿ ನಟಸಾರ್ವಭೌಮನಾಗಿ, ವರನಟರಾದರು. ಆದರೆ ಕನ್ನಡದ ಪ್ರೀತಿಯ ಅಭಿಮಾನಿಗಳ ಪಾಲಿಗೆ ಅಣ್ಣಾವ್ರು ಆಗಿ ಸಾಧನೆಯ ಶಿಖರವೇರಿದರು. 2000 ರಲ್ಲಿ ತೆರೆಕಂಡ ಶಬ್ಧವೇದಿ ಚಿತ್ರ ಅವರ ಕೊನೆಯ ಚಿತ್ರವಾಗಿತ್ತು. ಇಂದು ನಮ್ಮೊಂದಿಗೆ ಅಣ್ಣಾವ್ರು ಇಲ್ಲದಿದ್ದರೂ ಅವರು ಕನ್ನಡ ಚಿತ್ರರಂಗಕ್ಕೆ ಕೊಟ್ಟ ಕೊಡುಗೆ ಇಂದಿಗೂ ಜೀವಂತವಾಗಿದೆ.

 

 

ಪದ್ಮಭೂಷಣ, ಕರ್ನಾಟಕ ರತ್ನ, ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ, ರಾಷ್ಟ್ರಪ್ರಶಸ್ತಿ, ಕೆಂಡಕಿ ಕರ್ನಲ್, 1985ರಲ್ಲಿ ಅಮೆರಿಕಾ ಕೆಂಡಕ್ಕಿ ರಾಜ್ಯದ ರಾಜ್ಯಪಾಲರು ಡಾ.ರಾಜ್ ಕುಮಾರ್ ರವರಿಗೆ ಬೆಂಗಳೂರಿನಲ್ಲಿ ಪ್ರಶಸ್ತಿ ನೀಡಿ ಗೌರವಿಸಿದರು. ನಾಡೋಜ ಪ್ರಶಸ್ತಿ, ಗುಬ್ಬಿ ವೀರಣ್ಣ ಪ್ರಶಸ್ತಿ, ಕಲಾ ಕೌಸ್ತುಭ ಪ್ರಶಸ್ತಿ ಸೇರಿದಂತೆ 10 ಬಾರಿ ಅತ್ಯುತ್ತಮ ನಟ ಫಿಲ್ಮಂ ಫೇರ್ ಪ್ರಶಸ್ತಿ, 9 ಬಾರಿ ಅತ್ಯುತ್ತಮ ನಟ ರಾಜ್ಯಪ್ರಶಸ್ತಿಗಳನ್ನು ರಾಜ್ ಕುಮಾರ್ ರವರು ತಮ್ಮದಾಗಿಸಿಕೊಂಡಿದ್ದರು.

 

 

ಮೈಸೂರು ವಿಶ್ವವಿದ್ಯಾಲಯವು ರಾಜ್ ಕುಮಾರ್ ರವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ. 100 ನೇ ಚಿತ್ರದ ಸಂದರ್ಭದಲ್ಲಿ ನಟಸಾರ್ವಭೌಮ ಬಿರುದು ಅವರ ಪ್ರತಿಭೆಗೆ ಒಲಿದುಬಂತು ಹಾಗೆಯೇ ಗಾನಗಂಧರ್ವ, ವರನಟ, ಅಣ್ಣಾವ್ರು, ರಸಿಕರ ರಾಜ, ಕನ್ನಡದ ಕಣ್ಮಣಿ, ಮೇರುನಟ ಅಂತ ಅಭಿಮಾನಿಗಳು, ಪತ್ರಕರ್ತರು ಸೇರಿ ರಾಜ್ ಕುಮಾರ್ ರವರಿಗೆ ಬಿರುದು ಕೊಟ್ಟರು. ಅಷ್ಟೇ ಅಲ್ಲದೆ ಬೆಂಗಳೂರಿನ ರಸ್ತೆಯೊಂದಕ್ಕೆ ಡಾ.ರಾಜ್ ಕುಮಾರ್ ರಸ್ತೆ ಎಂದೇ ಹೆಸರಿಡಲಾಗಿದೆ.

 

 

ಯಶವಂತಪುರ ಮೇಲ್ ಸೇತುವೆಯಿಂದ ಪ್ರಸನ್ನ ಚಿತ್ರಮಂದಿರದವರೆಗೆ ರಾಜಾಜಿನಗರದ ಮೂಲಕ ಹಾದುಹೋಗುವ ಮುಖ್ಯರಸ್ತೆಗೆ ಡಾ.ರಾಜ್ ಕುಮಾರ್ ರಸ್ತೆಯೆಂದು ಹೆಸರಿಡಲಾಗಿದೆ. ಅಣ್ಣಾವ್ರು ಇಂದು ನಮ್ಮನ್ನು ಅಗಲಿದರು, ಅವರಿಗೆ ಕನ್ನಡದ ಮೇಲೆ ಇದ್ದ ಒಲವು ಅಭಿಮಾನಿ ದೇವರುಗಳು ಅವರ ಮೇಲಿಟ್ಟಿರುವ ಪ್ರೀತಿ ಸದಾ ಜೀವಂತ.

– ಸುಷ್ಮಿತಾ

Advertisement
Share this on...