ದೇಸಿ ಹಸುಗಳ ಮೂಲಕವೂ ಲಾಭ ಮಾಡಬಹುದು ಎಂದು ತೋರಿಸಿಕೊಟ್ಟ ಆಧುನಿಕ ರೈತ !

in ಕನ್ನಡ ಮಾಹಿತಿ 1,115 views

ನಾಟಿ ಹಸುಗಳಿಂದ ಏನು ಲಾಭ ಎಂದು ಮೂಗು ಮುರಿಯುವ ಜನತೆಯ ನಡುವೆಯೇ, ಈ ಹಸುಗಳಿಂದಲೂ ಲಾಭ ಇದೆ ಎಂಬುದನ್ನು ತೋರಿಸಿಕೊಟ್ಟು ಮಾದರಿಯಾಗಿದ್ದಾರೆ ಇಲ್ಲೊಬ್ಬ ಆಧುನಿಕ ರೈತ. ಹೌದು, ಅವರ ಹೆಸರು ಶರತ್. ಓದಿದ್ದು ಡಿಪ್ಲೊಮಾ, ಮಾಡ್ತಾ ಇರೋದು ಹೈನುಗಾರಿಕೆ. ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ತಾಲೂಕಿನಲ್ಲಿ ಫಾರ್ಮ್ ಮಾಡಿಕೊಂಡಿರುವ ಇವರಿಗೆ ಮೊದ ಮೊದಲು ಅಪ್ಪ-ಅಮ್ಮ ಬಡ್ಡಿ ವ್ಯವಹಾರ ಮಾಡಿಕೊಂಡು ಸುಖವಾಗಿರು ಅಂದರಂತೆ. ಆದರೆ ಶರತ್ ಅವರು ಇಷ್ಟಪಟ್ಟು ಆರಿಸಿಕೊಂಡಿದ್ದು ಹೈನುಗಾರಿಕೆ. ಅಂದಹಾಗೆ ಶರತ್ ಸಾಕುತ್ತಿರುವ ಹಸುವಿನ ತಳಿ ಗಿರ್. ಗಿರ್ ತಳಿಗಳೆಂದರೆ ಬಂಗಾರದ ಮೊಟ್ಟೆ ಇಡುವ ಕೋಳಿಯ ಹಾಗೆ. ಈ ತಳಿಗಳ ಬಣ್ಣ ಸಹ ಬಂಗಾರದಂತಿದೆ. ಇದರ ಹಾಲಿಗೂ ಸಹ ಬಂಗಾರದ ಬೆಲೆ. ಸಗಣಿ ಮತ್ತು ಮೂತ್ರದಲ್ಲಿಯೂ ಬಂಗಾರದ ಗುಣ ಇದೆ. ಗಿರ್ ತಳಿಗಳು ಗುಜಾರಾತ್’ನ ಸೌರಾಷ್ಟ್ರ ಬಳಿಯ ಗಿರ್ ಅರಣ್ಯಪ್ರದೇಶದ ಬಳಿ ಹೆಚ್ಚಾಗಿ ಕಂಡುಬರುತ್ತವೆ. ಹಾಗಾಗಿ ಈ ಕಾಡು ಹಸುಗಳ ಬಣ್ಣ ಕೆಂಪಾಗಿದೆ. ಹಾಗೆಯೇ ಕಿವಿಗಳು ಅಗಲವಾಗಿದ್ದು, ಜೋತಾಡುತ್ತಿರುತ್ತವೆ. ಈ ಹಸು ಉದ್ದನೆಯ ಬಾಲ ಹೊಂದಿದ್ದು, ದೊಡ್ಡ ತಲೆ ಹೊಂದಿರುತ್ತದೆ.

Advertisement

 

Advertisement

Advertisement

ಗಿರ್ ತಳಿಗಳ ಕೋಡುಗಳು ಸಹ ವಿಭಿನ್ನವಾಗಿದ್ದು, ಕಾಡಿನಲ್ಲಿರುವ ಸಿಂಹಗಳಿಂದ ರಕ್ಷಣೆ ಪಡೆಯಲು ಈ ರೀತಿಯ ಕೋಡುಗಳು ಸೃಷ್ಟಿಯಾಗಿವೆ ಎಂದು ಹೇಳಲಾಗುತ್ತದೆ. ರಾಜ ಮಹಾರಾಜರ ಕಾಲದಿಂದಲೂ ಗಿರ್ ಹಸುಗಳು ಪ್ರಸಿದ್ಧಿ ಪಡೆದಿದ್ದು, ಪ್ರತಿ ದಿನ 12-14 ಲೀಟರ್ ಹಾಲು ಕೊಡುತ್ತವೆ. ಇದಕ್ಕೆ ರೋಗ ನಿರೋಧಕ ಶಕ್ತಿ ಹೆಚ್ಚು. ಹಾಲಿನ ಸ್ವಾದ ಸಹ ವಿಭಿನ್ನವಾಗಿರುತ್ತದೆ. ಇದರಲ್ಲಿ ಪೋಷಕಾಂಶಗಳು ಹೆಚ್ಚಿದ್ದು, ಜೆರ್ಸಿ ಹಸುಗಳಿಗಿಂತ ಇದರ ಹಾಲಿಗೆ ಬೆಲೆ ಜಾಸ್ತಿ. ಕೇವಲ 2 ಗಿರ್ ತಳಿಯ ಹಸುಗಳಿಂದ ಸಾಕಾಣಿಕೆ ಪ್ರಾರಂಭಿಸಿ ಇಂದು 68ಕ್ಕೂ ಹೆಚ್ಚು ಹಸುಗಳನ್ನು ಸಾಕಿದ್ದಾರೆ ಶರತ್. ಈ ಫಾರ್ಮ್’ಗೆ ‘ಭಾರತ್ ಮಾತಾ ಗೋ ಫಾರ್ಮ್’ ಹೆಸರು ಇಡಲಾಗಿದ್ದು, ಇಲ್ಲಿ ಇನ್ನು 4 ದೊಡ್ಡ ಜಾತಿಯ ಹಸುಗಳನ್ನು ಸಹ ಕಾಣಬಹುದು. 4 ಎಕರೆ ಜಮೀನು ಗುತ್ತಿಗೆ ಪಡೆದುಕೊಂಡು ಅದರಲ್ಲಿ ಒಂದು ಕಡೆ ಹಸುಗಳನ್ನು ಕಟ್ಟಲು ಫಾರ್ಮ್ ನಿರ್ಮಿಸಿದ್ದಾರೆ ಶರತ್. ಮತ್ತೊಂದು ಕಡೆ ಹಸುಗಳಿಗೆ ಹುಲ್ಲನ್ನು ಬೆಳೆಸಲಾಗುತ್ತದೆ. ಮತ್ತೊಂದು ಸ್ವಲ್ಪ ಜಾಗದಲ್ಲಿ ಅವುಗಳಿಗೆ ಅಡ್ಡಾಡಲು ಜಾಗ ಮಾಡಲಾಗಿದೆ.

Advertisement

ಗಿರ್ ತಳಿಯ ಹಸುವಿನ ಹಾಲು, ತುಪ್ಪಕ್ಕೆ ಬೇಡಿಕೆ ಹೆಚ್ಚಿದ್ದು, ಶರತ್ ಮೊದಲೆಲ್ಲಾ ಬೆಂಗಳೂರಿಗೆ ತಂದು ಮಾರಾಟ ಮಾಡುತ್ತಿದ್ದರಂತೆ. ಆದರೀಗ ಈಗ ಅವರಿರುವ ಸ್ಥಳದಲ್ಲೇ ಬೇಡಿಕೆ ಹೆಚ್ಚಿರುವುರಿಂದ ಅಲ್ಲಿಯೇ ಮಾರಾಟ ಮಾಡಲಾಗುತ್ತಿದೆ. ಇಲ್ಲಿನ ಜನ ಹಾಲು ಮತ್ತು ಹಾಲಿನ ಇತರ ಉತ್ಪನ್ನಗಳಿಗಾಗಿ ಅಡ್ವಾನ್ಸ್ ಬುಕಿಂಗ್ ಸಹ ಮಾಡ್ತಾರೆ. ಇದರ ಮೂತ್ರ, ಸಗಣಿ ಸಹ ಆದಾಯ ತಂದುಕೊಟ್ಟಿದ್ದು, ಫಾರ್ಮ್ ಬಳಿಯಿರುವ ತೋಟದ ಮನೆಯಲ್ಲಿ ಹೋಟೆಲ್ ಸಹ ಪ್ರಾರಂಭಿಸಲಾಗಿದೆ. ಹೋಟೆಲ್ ನಲ್ಲಿ ಇದೇ ಗಿರ್ ಹಸುವಿನ ಹಾಲಿನ ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತದೆ. ಒಂದು ಲೀಟರ್ ಹಾಲಿಗೆ 80 ರೂಪಾಯಿ, ಒಂದು ಕೆಜಿ ತುಪ್ಪಕ್ಕೆ 2000 ರೂ, ಗೋವಿನ ಮೂತ್ರದಿಂದ ತಯಾರಾಗುವ ಅರ್ಕಗೆ 200-300 ರೂ (ಇದು ಸಿದ್ಧ ಔಷಧಿ)ಬೆಲೆಯಲ್ಲಿ ಮಾರಾಟ ಮಾಡಲಾಗುತ್ತದೆ. ವಿಶೇಷವೆಂದರೆ ಹಸುವಿನ ಹಾಲಿಗಿಂತ ಮೂತ್ರಕ್ಕೆ ಬೆಲೆ ಜಾಸ್ತಿ.

Advertisement
Share this on...