ವೈದ್ಯರ ಮಾಸ್ಕ್ ತೆಗೆಯಲು ಪ್ರಯತ್ನಿಸಿದ ನವಜಾತ ಶಿಶುವಿನ ಫೋಟೋ ವೈರಲ್

in ಕನ್ನಡ ಮಾಹಿತಿ 169 views

ಕೊರೊನಾ ವಕ್ಕರಿಸಿದ ಮೇಲೆ ನಮ್ಮೆಲ್ಲರಿಗೂ ಮಾಸ್ಕ್ ಅಗತ್ಯವಾಗಿದೆ. ಜೊತೆಗೆ 6 ಅಡಿಗಳ ಅಂತರವನ್ನು ಕಾಪಾಡಿಕೊಳ್ಳಬೇಕಿದೆ. ಈ ಸಮಯದಲ್ಲಿ ಅನೇಕ ವೈದ್ಯರು ತಮ್ಮ ಕೆಲಸವನ್ನು ಪ್ರಾಮಾಣಿಕತೆಯಿಂದ ಮಾಡುತ್ತಿದ್ದಾರೆ. ನೀವು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ವೈದ್ಯರ ಅನೇಕ ಚಿತ್ರಗಳನ್ನು ನೋಡಿರಬೇಕು. ಆ ಚಿತ್ರಗಳಲ್ಲಿ, ವೈದ್ಯರು ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಿರುವುದನ್ನು ಕಾಣಬಹುದು ಮತ್ತು ಆ ಚಿತ್ರಗಳು ಲಕ್ಷಾಂತರ ಜನರ ಮನ ಗೆದ್ದಿವೆ ಮತ್ತು ಜನರಿಗೆ ಹೆಚ್ಚು ಇಷ್ಟವಾಗುತ್ತಿವೆ.ಈ ಮಧ್ಯೆ ಮತ್ತೊಂದು ಫೋಟೋ ವೈರಲ್ ಆಗಿದೆ. ಈ ಫೋಟೋದಲ್ಲಿ, ನವಜಾತ ಶಿಶು ವೈದ್ಯರ ಶಸ್ತ್ರಚಿಕಿತ್ಸೆಯ ಮಾಸ್ಕ್ ತೆಗೆದುಹಾಕಲು ಪ್ರಯತ್ನಿಸುತ್ತಿದೆ. ಈಗ ಜನರು ಈ ಫೋಟೋವನ್ನು ತುಂಬಾ ಇಷ್ಟಪಡುತ್ತಿದ್ದು, ಎಲ್ಲರೂ ಇದನ್ನು ಹೊಗಳಿದ್ದಾರೆ. ಈ ಚಿತ್ರವನ್ನು ಯುಎಇಯ ಸ್ತ್ರೀರೋಗತಜ್ಞ ಡಾ.ಸಮೀರ್ ಚೀಬ್ ಇನ್ಸ್ಟಾಗ್ರಾಮ್ನಮ್’ನಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ನವಜಾತ ಶಿಶು ವೈದ್ಯರ ಮುಖದಿಂದ ಮಾಸ್ಕ್ ತೆಗೆದುಹಾಕಲು ಪ್ರಯತ್ನಿಸುತ್ತಿರುವುದನ್ನು ನೀವು ನೋಡಬಹುದು.

Advertisement

ಮಗು ಮಾಸ್ಕ್ ಅನ್ನು ಎಳೆಯುವುದನ್ನು ನೋಡಿ ವೈದ್ಯರು ನಗುತ್ತಿರುವುದನ್ನು ಕಾಣಬಹುದು. ಈ ಫೋಟೋ ಜೊತೆಗೆ, “ಇದು ನಾವೆಲ್ಲರೂ ಶೀಘ್ರದಲ್ಲೇ ಮಾಸ್ಕ್ ತೆಗೆಯಲಿದ್ದೇವೆ ಎಂಬುದರ ಸಂಕೇತವಾಗಿದೆ” ಎಂಬ ಶೀರ್ಷಿಕೆಯನ್ನು ಚೀಬ್ ಬರೆದಿದ್ದಾರೆ. ಈಗ ಜನರು ಈ ಫೋಟೋ ಬಗ್ಗೆ ವೇಗವಾಗಿ ಪ್ರತಿಕ್ರಿಯಿಸುತ್ತಿದ್ದಾರೆ. ಅಷ್ಟೇ ಅಲ್ಲ, ಈ ಫೋಟೋ ನೋಡಿದ ಕೆಲವು ಬಳಕೆದಾರರು, “ಈ ಚಿತ್ರವು ವರ್ಷದ ಅತ್ಯುತ್ತಮ ಚಿತ್ರ” ಎಂದು ಹೇಳಿದ್ದಾರೆ. ಇನ್ನು ಕೆಲವರು “ಒಂದು ದಿನ ಅದು ಖಂಡಿತವಾಗಿಯೂ ಸಂಭವಿಸುತ್ತದೆ. ಮಾಸ್ಕ್ ಅನ್ನು ನಮ್ಮ ಮುಖದಿಂದ ತೆಗೆದುಹಾಕಿ, ಕಿರುನಗೆ ಚೆಲ್ಲುತ್ತೇವೆ” ಎಂದು ಅನೇಕರು ಕಾಮೆಂಟ್ ಮಾಡಿದ್ದಾರೆ.

Advertisement

 

Advertisement
View this post on Instagram

 

Advertisement

We all want sign are we going to take off the mask soon 🙏🏻 #instagram #goodnews #goodvibes #uae🇦🇪 #dubai #instagood #love #photooftheday #cute #babyboy #instmoment @dubaimediaoffice

A post shared by Dr Samer Cheaib د سامر شعيب (@dr.samercheaib) on

ಕಳೆದ ಎರಡು ದಿನಗಳ ಹಿಂದೆ ಡಾ.ಸಯೀದ್ ಫೈಜಾನ್ ಅಹ್ಮದ್ ಅವರು ವಿಡಿಯೋವನ್ನು ಹಂಚಿಕೊಂಡಿದ್ದರು. ಅವರು ಇದನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಶೇರ್ ಮಾಡಿದ್ದು, ಜೊತೆಗೆ ಶೀರ್ಷಿಕೆಯಲ್ಲಿ “ಅಸ್ಸಾಂನ ಸಿಲ್ಚಾರ್ ವೈದ್ಯಕೀಯ ಕಾಲೇಜಿನಲ್ಲಿ ಇಎನ್ಟಿ ಶಸ್ತ್ರಚಿಕಿತ್ಸಕ, ನನ್ನ ಸಹೋದ್ಯೋಗಿ ಡಾ. ಅರುಪ್ ಸೇನಾಪತಿ ಕೋವಿಡ್ ರೋಗಿಗಳ ಮುಂದೆ ನೃತ್ಯ ಮಾಡುತ್ತಿದ್ದಾರೆ. ಕೋವಿಡ್ ರೋಗಿಗಳನ್ನು ಸಂತೋಷವಾಗಿಡಲು ಅವರ ಮುಂದೆ ಅರುಪ್ ಸೇನಾಪತಿ ಹೀಗೆ ನೃತ್ಯ ಮಾಡುತ್ತಿದ್ದಾರೆ” ಎಂದು ಬರೆದುಕೊಂಡಿದ್ದರು. ಈ ವಿಡಿಯೋವನ್ನು ಲಕ್ಷಾಂತರ ಜನರು ವೀಕ್ಷಿಸಿದ್ದರು.

Advertisement
Share this on...