ಮಾಸ್ಕ್​, ಟೋಪಿ ಧರಿಸಿ ಮೈಸೂರು ರಸ್ತೆ ಸುತ್ತಾಡಿ ಎಂಜಾಯ್ ಮಾಡಿದ ಸ್ಯಾಂಡಲ್​ವುಡ್​​​​​​​ ನಟ

in ಮನರಂಜನೆ/ಸಿನಿಮಾ 360 views

ಯಾವಾಗಲೂ ಪರದೆಯ ಮೇಲೆ ನೋಡುವ ಸಿನಿಮಾ ನಟ-ನಟಿಯರನ್ನು ಎದುರಿಗೆ ನೋಡಿದರೆ ಅಭಿಮಾನಿಗಳು ಆಟೋಗ್ರಾಫ್​​​​, ಸೆಲ್ಫಿಗಾಗಿ ಅವರನ್ನು ಸುತ್ತುವರೆಯುವುದು ಸಾಮಾನ್ಯ. ಕೆಲವೊಮ್ಮೆ ಸೆಲಬ್ರಿಟಿಗಳ ನಂಬರ್​​ಗಳಿಗಾಗಿ ಕೂಡಾ ಅಭಿಮಾನಿಗಳು ಬೇಡಿಕೆ ಇಡುವುದುಂಟು. ಸೆಲಬ್ರಿಟಿಗಳಿಗೆ ಇದು ಕಿರಿಕಿರಿ ಎನಿಸುತ್ತದೆ. ಕೆಲವೊಮ್ಮೆ ಮಾಧ್ಯಮಗಳ ಕಣ್ಣಿಗೆ ಕಂಡರೂ ಕಷ್ಟ ಎಂದು ಸೆಲಬ್ರಿಟಿಗಳು ಆದಷ್ಟು ಇವೆಲ್ಲದರಿಂದ ದೂರ ಇರುತ್ತಾರೆ. ಶೂಟಿಂಗ್, ಡಬ್ಬಿಂಗ್, ಪಂಕ್ಷನ್​ ಎಂದು ಬ್ಯುಸಿ ಇರುವ ಸೆಲಬ್ರಿಟಿಗಳಿಗೆ ಬಿಡುವು ದೊರೆಯುವುದು ಕಷ್ಟ. ಬಿಡುವು ದೊರೆತರೂ ಜನಸಾಮಾನ್ಯರಂತೆ ಅವರು ಸಾರ್ವಜನಿಕವಾಗಿ ಹೊರಗೆ ಸುತ್ತಾಡಲು ಸಾಧ್ಯವಿಲ್ಲ. ಆದ್ದರಿಂದ ಕೆಲವೊಮ್ಮೆ ತಲೆಗೆ ಕ್ಯಾಪ್ ಧರಿಸಿ ಮಾಸ್ಕ್​ ಧರಿಸಿ ನಾರ್ಮಲ್ ಲೈಫ್ ಎಂಜಾಯ್ ಮಾಡಲು ಪ್ರಯತ್ನಿಸುತ್ತಾರೆ. ಕೆಲವೊಮ್ಮೆ ನಟರು ಹೆಲ್ಮೆಟ್ ಧರಿಸಿ ಬೈಕ್ ಏರಿ ತಮ್ಮ ಇಷ್ಟದ ಜಾಗದಲ್ಲೆಲ್ಲಾ ಸುತ್ತಾಡುವುದೂ ಉಂಟು. ನಟಿಯರಾದರೆ ಅವರೂ ಕೂಡಾ ದುಪ್ಪಟ್ಟಾದಿಂದ ಮುಖವನ್ನು ಸುತ್ತಿಕೊಂಡು ಹೊರಗೆ ಸುತ್ತಾಡುತ್ತಾರೆ.

Advertisement

Advertisement

ನಾನು ಹೊರಗೆ ಹೋಗಬೇಕು ಎಂದುಕೊಂಡಾಗಲೆಲ್ಲಾ ಪತಿಯೊಡನೆ ಬೈಕ್​​ನಲ್ಲಿ ಹಿಂದೆ ಹೆಲ್ಮೆಟ್ ಧರಿಸಿ ಕುಳಿತು ಬೆಂಗಳೂರಿನಲ್ಲಿ ಇಷ್ಟದ ಸ್ಥಳಗಳನ್ನು ಸುತ್ತುತ್ತಾ ಎಂಜಾಯ್ ಮಾಡಿದ್ದೆ ಎಂದು ನಟಿ ಸೌಂದರ್ಯ ಸಂದರ್ಶನದಲ್ಲಿ ಹೇಳಿಕೊಂಡಿದ್ದರು. ಅದೇ ರೀತಿ ರಜನಿಕಾಂತ್, ರಮ್ಯ, ಜಗ್ಗೇಶ್ ಹಾಗೂ ಇನ್ನಿತರ ನಟ-ನಟಿಯರು ಕೂಡಾ ಮುಖಕ್ಕೆ ಸ್ಕಾರ್ಫ್​ ಅಥವಾ ದುಪ್ಪಟ್ಟಾ ಸುತ್ತಿಕೊಂಡು ಹೊರಗೆ ಸುತ್ತಾಡಿದ ತಮ್ಮ ಅನುಭವವನ್ನು ಹೇಳಿಕೊಂಡಿದ್ದರು. ಇದೀಗ ಕನ್ನಡ ನಟ ಸತೀಶ್ ನೀನಾಸಂ ಕೂಡಾ ಮಾಸ್ಕ್​ ಹಾಗೂ ಕ್ಯಾಪ್ ಧರಿಸಿ ಮೈಸೂರಿನ ರಸ್ತೆಯಲ್ಲೆಲ್ಲಾ ಓಡಾಡಿದ್ಧಾರೆ.

Advertisement

ಮೈಸೂರಿನಲ್ಲಿ ನವರಾತ್ರಿ ಸಂಭ್ರಮ ಮುಗಿದಿದೆ. ಸತೀಶ್ ನೀನಾಸಂ ಈಗ ಮೈಸೂರಿನಲ್ಲಿದ್ದಾರೆ. ಪೆಟ್ರೋಮ್ಯಾಕ್ಸ್ ಚಿತ್ರೀಕರಣದಲ್ಲಿ ಬ್ಯುಸಿ ಇರುವ ಸತೀಶ್ ಬಿಡುವು ಮಾಡಿಕೊಂಡು ನಗರಾದ್ಯಂತ ಸುತ್ತಾಡಿದ್ದಾರೆ. ಯಾರಾದರೂ ನೋಡಿದರೆ ನನ್ನನ್ನು ಗುರುತುಹಿಡಿಯಬಹುದು ಎಂಬ ಕಾರಣಕ್ಕೆ ತಲೆಗೆ ಟೋಪಿ ಹಾಗೂ ಮಾಸ್ಕ್​ ಧರಿಸಿ ಮೈಸೂರು ಅರಮನೆ, ದೇವರಾಜ ಅರಸ್​ ರಸ್ತೆ, ಸಿಟಿ ಬಸ್ ಸ್ಟ್ಯಾಂಡ್​ ರಸ್ತೆ ಕಡೆಯೆಲ್ಲಾ ಸುತ್ತಾಡಿ ಎಂಜಾಯ್ ಮಾಡಿದ್ದಾರೆ. ಇವರ ಜೊತೆ ಚಿತ್ರತಂಡದ ಇತರ ಸದಸ್ಯರು ಕೂಡಾ ಸತೀಶ್ ಜೊತೆಯಾಗಿದ್ದಾರೆ. ತಾವು ಮೈಸೂರು ಸುತ್ತಾಡಿರುವ ವಿಡಿಯೋವನ್ನು ಸತೀಶ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಪೆಟ್ರೋಮ್ಯಾಕ್ಸ್ ಚಿತ್ರವನ್ನು ವಿಜಯ್ ಪ್ರಸಾದ್ ನಿರ್ದೇಶಿಸುತ್ತಿದ್ದಾರೆ. ಈ ಚಿತ್ರದಲ್ಲಿ ಸತೀಶ್​​ಗೆ ಹರಿಪ್ರಿಯಾ ಜೊತೆಯಾಗಿದ್ದಾರೆ. ಕೆಲವು ದಿನಗಳ ಹಿಂದೆ ಸತೀಶ್ ಹಾಗೂ ಹರಿಪ್ರಿಯಾ ಶೂಟಿಂಗ್ ಸ್ಥಳದಲ್ಲಿ ಕ್ಲಿಕ್ ಮಾಡಿದ್ದ ಫೋಟೋಗಳು ವೈರಲ್ ಆಗಿತ್ತು. ಇದು ಕಾಮಿಡಿ ಚಿತ್ರವಾಗಿದ್ದು ಮುಂದಿನ ವರ್ಷ ಸಿನಿಮಾ ತೆರೆಗೆ ಬರಲಿದೆ.

Advertisement
Share this on...