ಕರ್ನಾಟಕದ ದಿನಕೂಲಿ ಕಾರ್ಮಿಕರಿಗೂ ಹಣ ಸಹಾಯ ಮಾಡಿದ ತಮಿಳು ನಟ…ಇವರು ನೀಡಿದ ಹಣ ಎಷ್ಟಿರಬಹುದು…?

in Kannada News 41 views

ಕೊರೊನಾ ವೈರಸ್ ಕಾರಣ ದೇಶದಲ್ಲಿ ಲಾಕ್​ಡೌನ್ ಇರುವುದರಿಂದ ಜನರಿಗೆ ಬಹಳ ತೊಂದರೆಯಾಗುತ್ತಿದೆ. ಹೇಗಾದರೂ ಸರಿ ಲಾಕ್​​ಡೌನ್​ ಮುಗಿಯುವವರೆಗೂ ಮನೆಯಲ್ಲಿ ಎಂಜಾಯ್ ಮಾಡುತ್ತಾ ಕೂರೋಣ ಎಂಬುದು ಅನುಕೂಲಸ್ಥರ ಮಾತಾದರೆ, ದಿನದ ಕೂಲಿಯನ್ನೇ ನಂಬಿ ಬದುಕುತ್ತಿದ್ದವರು ಎಷ್ಟು ಬೇಗ ಈ ಸಮಸ್ಯೆಗಳೆಲ್ಲಾ ಪರಿಹಾರವಾಗುವುದೋ ಎಂದು ಕಾದುಕುಳಿತಿದ್ದಾರೆ. ಸರ್ಕಾರ ನೀಡುತ್ತಿರುವ ಅಕ್ಕಿ, ಬೇಳೆ ಎಷ್ಟು ದಿನ ಬರುತ್ತದೆ. ಕೈಯ್ಯಲ್ಲಿ ಬಿಡಿಗಾಸು ಇಲ್ಲದೆ ಎಷ್ಟೋ ಮಂದಿ ಸಂಕಷ್ಟಕ್ಕಿಡಾಗಿದ್ದಾರೆ.

Advertisement

 

Advertisement

Advertisement

Advertisement

 

ಇನ್ನು ಈ ಪರಿಸ್ಥಿತಿಯಲ್ಲಿ ಸೆಲಬ್ರಿಟಿಗಳು ಬಡಜನರಿಗೆ ತಮ್ಮದೇ ಆದ ರೀತಿಯಲ್ಲಿ ಸಹಾಯ ಮಾಡುತ್ತಿದ್ದಾರೆ. ಈಗಾಗಲೇ ಕನ್ನಡದ ಸ್ಟಾರ್​​​ಗಳು ಸಿಎಂ ಪರಿಹಾರ ನಿಧಿಗೆ ತಮ್ಮ ಕೈಲಾದ ಹಣ ಸಹಾಯ ಮಾಡಿದ್ದಾರೆ. ಕೆಲವರು ತಾವೇ ಖುದ್ದಾಗಿ ಜನರ ಬಳಿ ಹೋಗಿ ಆಹಾರ ಪದಾರ್ಥಗಳನ್ನು ನೀಡಿ ಬರುತ್ತಿದ್ದಾರೆ. ತಮ್ಮ ತಮ್ಮ ರಾಜ್ಯಗಳ ಜನರಿಗೆ ಸಿನಿಮಾ ನಟರು ಸಹಾಯ ಮಾಡುತ್ತಿದ್ದಾರೆ. ಆದರೆ ತಮಿಳು ನಟ ವಿಜಯ್ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಕರ್ನಾಟಕ ಸೇರಿ ಕೊರೊನಾ ಹೆಚ್ಚಾಗಿರುವ ಇತರ ರಾಜ್ಯಗಳಿಗೂ ಹಣ ಸಹಾಯ ಮಾಡಿದ್ದಾರೆ. ದಕ್ಷಿಣ ಭಾರತದ ಸಿನಿ ಕಾರ್ಮಿಕರ ಸಂಘಕ್ಕೆ ವಿಜಯ್ 1. 30 ಕೋಟಿ ರೂಪಾಯಿ ದೇಣಿಗೆ ನೀಡಿದ್ದಾರೆ ಎನ್ನಲಾಗಿದೆ.

 

 

ಸಿನಿಮಾಗೆ ಸಂಬಂಧಿಸಿದ ಎಲ್ಲಾ ಕೆಲಸಗಳು ಸಂಪೂರ್ಣ ಬಂದ್ ಆಗಿದೆ. ನಾಯಕ, ನಾಯಕಿ, ಕೆಲವು ಪೋಷಕರ ನಟರು ಸೇರಿದಂತೆ ಸಿನಿಮಾಗಳಿಗೆ ಲಕ್ಷ, ಕೋಟಿ ಸಂಭಾವನೆ ಪಡೆಯುತ್ತಿದ್ದವರು ಲಾಕ್​​ಡೌನ್ ಇದ್ದರೂ ನೆಮ್ಮದಿಯಾಗಿದ್ದಾರೆ. ಆದರೆ ಸಿನಿಮಾ ಕ್ಷೇತ್ರವನ್ನೇ ನಂಬಿ ಬದುಕುತ್ತಿದ್ದ ದಿನಕೂಲಿ ಕಾರ್ಮಿಕರು ಊಟಕ್ಕೆ ಕಷ್ಟಪಡುವಂತಾಗಿದೆ. ಆದ್ದರಿಂದ ಇವರನ್ನೆಲ್ಲಾ ಗಮನದಲ್ಲಿಟ್ಟುಕೊಂಡು ವಿಜಯ್ ಈ ಸಹಾಯ ಮಾಡಿದ್ದಾರೆ. ಆದರೆ ಅವರು ಕರ್ನಾಟಕಕ್ಕೆ ಎಷ್ಟು ಹಣ ನೀಡಿದ್ದಾರೆ ಎಂಬ ವಿಚಾರ ಮಾತ್ರ ತಿಳಿದುಬಂದಿಲ್ಲ. ತಮಿಳುನಾಡಿನ ಮುಖ್ಯಮಂತ್ರಿ ಪರಿಹಾರ ನಿಧಿಗೆ 50 ಲಕ್ಷ ರೂಪಾಯಿ ಹಾಗೂ ಪ್ರಧಾನ ಮಂತ್ರಿ ಪರಿಹಾರ ನಿಧಿಗೆ 25 ಲಕ್ಷ ರೂಪಾಯಿ ನೀಡಿದ್ದಾರೆ. ದಳಪತಿ ವಿಜಯ್ ಮೊದಲಿನಿಂದಲೂ ಸಮಾಜ ಸೇವೆಯಲ್ಲಿ ತೊಡಗಿದ್ದಾರೆ. ಕಷ್ಟದಲ್ಲಿರುವವರಿಗೆ ನೆರವು ನೀಡುತ್ತಾ ಬಂದಿದ್ದಾರೆ.

 

 

ಸಿನಿಮಾ ವಿಚಾರಕ್ಕೆ ಬರುವುದಾದರೆ 2019 ರಲ್ಲಿ ವಿಜಯ್ ನಟಿಸಿದ್ದ ‘ಬಿಗಿಲ್’ ಬಾಕ್ಸ್ ಆಫೀಸಿನಲ್ಲಿ 300 ಕೋಟಿ ರೂಪಾಯಿ ಲಾಭ ಮಾಡಿತ್ತು. ಸದ್ಯಕ್ಕೆ ಅವರು ‘ಮಾಸ್ಟರ್’​​​ ಸಿನಿಮಾದಲ್ಲಿ ನಟಿಸುತ್ತಿದ್ದು ಲಾಕ್​​​ಡೌನ್ ಕಾರಣ ಚಿತ್ರೀಕರಣಕ್ಕೆ ವಿರಾಮ ದೊರೆತಿದೆ. ವಿಜಯ್ ಪುತ್ರ ಸಂಜಯ್ ಕೂಡಾ ಶೀಘ್ರದಲ್ಲೇ ಕಾಲಿವುಡ್​​ಗೆ ಎಂಟ್ರಿ ಕೊಡಲಿದ್ದು ಇದಕ್ಕಾಗಿ ಎಲ್ಲಾ ಸಿದ್ಧತೆ ನಡೆಯುತ್ತಿದೆ.

Advertisement
Share this on...