ತೆಲುಗಿಗೆ ರೀಮೇಕ್ ಆಗ್ತಿದೆ ದಯಾಳ್ ಪದ್ಮನಾಭನ್ ನಿರ್ದೇಶನದ ಸಿನಿಮಾ…ಯಾವುದು ಆ ಚಿತ್ರ…?

in ಸಿನಿಮಾ 24 views

ಕನ್ನಡದ ಸಾಕಷ್ಟು ಸಿನಿಮಾಗಳು ತಮಿಳು, ತೆಲುಗು, ಹಿಂದಿ, ಮಲಯಾಳಂ ಭಾಷೆಗಳಿಗೆ ಈಗಾಗಲೇ ರೀಮೇಕ್ ಆಗಿವೆ. ಇದೀಗ ಮತ್ತೊಂದು ಕನ್ನಡ ಚಿತ್ರ ತೆಲುಗು ಭಾಷೆಗೆ ರೀಮೇಕ್ ಆಗುತ್ತಿದೆ. ಮಾಜಿ ಬಿಗ್​ ಬಾಸ್​​ ಸ್ಫರ್ಧಿ, ನಿರ್ದೇಶಕ ದಯಾಳ್ ಪದ್ಮನಾಭನ್ ನಿರ್ದೇಶನದ ‘ಆ ಕರಾಳ ರಾತ್ರಿ’ ಸಿನಿಮಾ ಟಾಲಿವುಡ್​​​​ನಲ್ಲಿ ತಯಾರಾಗಲು ಹೊರಟಿದೆ.

Advertisement

 

Advertisement

Advertisement

 

Advertisement

ಈ ಚಿತ್ರದ ರೀಮೇಕ್ ಹಕ್ಕನ್ನು ತೆಲುಗಿನ ಖ್ಯಾತ ಗೀತಾ ಆರ್ಟ್ ಸಂಸ್ಥಾಪಕ, ಅಲ್ಲು ಅರ್ಜುನ್ ತಂದೆ ಅಲ್ಲು ಅರವಿಂದ್ ನಿರ್ಮಿಸುತ್ತಿದ್ದಾರೆ. ಅಲ್ಲು ಅರವಿಂದ್ ಇದಕ್ಕೂ ಮುನ್ನ ಕನ್ನಡದ ‘ಮಾಂಗಲ್ಯಂ ತಂತು ನಾನೇನ ‘ ಹಾಗೂ ‘ಸುಂದರಾಂಗ ಜಾಣ ‘ ಚಿತ್ರವನ್ನು ತೆಲುಗಿಗೆ ರೀಮೇಕ್ ಮಾಡಿದ್ದಾರೆ. ಇದೀಗ ಅನುಪಮಾ ಗೌಡ ಹಾಗೂ ಜಯರಾಮ್ ಕಾರ್ತಿಕ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದ ‘ಆ ಕರಾಳ ರಾತ್ರಿ ‘ ಚಿತ್ರವನ್ನು ತೆಲುಗಿನಲ್ಲಿ ನಿರ್ಮಿಸಲು ಹೊರಟಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಅಲ್ಲು ಅರವಿಂದ್ ಈಗಾಗಲೇ ದಯಾಳ್ ಪದ್ಮನಾಭನ್ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ.

 

 

ವಿಶೇಷ ಎಂದರೆ ತೆಲುಗಿನಲ್ಲಿ ಕೂಡಾ ದಯಾಳ್ ಪದ್ಮನಾಭನ್ ಅವರೇ ಈ ಚಿತ್ರವನ್ನು ನಿರ್ದೇಶಿಸಲು ಹೊರಟಿದ್ಧಾರೆ. ತೆಲುಗು ನೇಟಿವಿಟಿಗೆ ತಕ್ಕಂತೆ ಈಗಾಗಲೇ ದಯಾಳ್ ಪದ್ಮನಾಭನ್ ಕಥೆಯನ್ನು ಕೂಡಾ ರೆಡಿ ಮಾಡಿದ್ದಾರಂತೆ. ತೆಲುಗಿನ ಖ್ಯಾತ ನಟರು ದಯಾಳ್ ಅವರ ಈ ಮೊದಲ ತೆಲುಗು ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಎನ್ನಲಾಗಿದೆ.

 

 

ದಯಾಳ್ ನಿರ್ದೇಶನದ ಯೋಗೀಶ್ ಹಾಗೂ ಅದಿತಿ ಪ್ರಭುದೇವ ಪ್ರಮುಖ ಪಾತ್ರದಲ್ಲಿ ನಟಿಸಿರುವ ‘ಒಂಭತ್ತನೇ ದಿಕ್ಕು ‘ ಸಿನಿಮಾ ಸೆನ್ಸಾರ್​​​ಗೆ ಹೋಗುವುದಷ್ಟೇ ಬಾಕಿ. ತೆಲುಗು ಚಿತ್ರ ನಿರ್ದೇಶನದ ನಂತರ ದಯಾಳ್ ಪದ್ಮನಾಭನ್ ಇನ್ನೆರಡು ಸಿನಿಮಾಗಳನ್ನು ನಿರ್ದೇಶನ ಮಾಡಲಿದ್ಧಾರಂತೆ. ಲಾಕ್​​ ಡೌನ್​​​​​​​​​ನಿಂದ ಮನೆಯಲ್ಲಿರುವ ದಯಾಳ್ ಪದ್ಮನಾಭನ್ ಈಗಾಗಲೇ ‘ಮಾಯಾವತಿ ‘ ಹಾಗೂ ‘ಮಾರುತಿ ನಗರ ಪೊಲೀಸ್ ಸ್ಟೇಷನ್ ‘ ಎಂಬ ಸಿನಿಮಾಗಳಿಗೆ ಕಥೆ ರೆಡಿ ಮಾಡಿಟ್ಟುಕೊಂಡಿದ್ದಾರಂತೆ. ಒಟ್ಟಿನಲ್ಲಿ ಕನ್ನಡ ಸಿನಿಮಾ ಪರಭಾಷೆಗೆ ರೀಮೇಕ್ ಆಗುವುದು ನಿಜಕ್ಕೂ ಸಂತೋಷದ ವಿಷಯ.

Advertisement
Share this on...