ತಮ್ಮ ಹಾಡಿಗಾಗಿ ಅಣ್ಣಾವ್ರು, ರೆಬಲ್​ ಸ್ಟಾರ್​​​​​​​​​​​​, ಕರಾಟೆಕಿಂಗ್​​​ನಂತ ಸ್ಟಾರ್​​​​ಗಳನ್ನು ಕರೆತಂದ ಯುವಕಲಾವಿದ

in ಮನರಂಜನೆ 118 views

ಚೀನಾದ ವುಹಾನ್​​​ನಲ್ಲಿ ಜನ್ಮ ತಾಳಿದ ಈ ಮಾರಕ ಕೊರೊನಾ ಪ್ರಪಂಚಾದ್ಯಂತ ವ್ಯಾಪಿಸಲು ಆರಂಭಿಸಿದ್ದೇ ತಡ ಜನರ ಜೀವನ ಅಸ್ತವ್ಯಸ್ತವಾಯ್ತು. ಎಲ್ಲರೂ 2020 ವರ್ಷವನ್ನು ಶಪಿಸಲು ಆರಂಭಿಸಿದರು. ಈ ವರ್ಷ ಹಾಗೆ ಇರಬೇಕು…ಹೀಗೆ ಇರಬೇಕು ಎಂದೆಲ್ಲಾ ಪ್ಲ್ಯಾನ್ ಮಾಡಿದವರ ಲೆಕ್ಕಾಚಾರ ತಲೆಕೆಳಕಾಯ್ತು. ಲಾಕ್​ಡೌನ್ ಸಮಯದಲ್ಲಂತೂ ಮನೆಯಿಂದ ಹೊರ ಬಾರದೆ ಕೆಲವರು ಡಿಪ್ರೆಷನ್​​ಗೆ ಒಳಗಾದ್ರು. ಎಷ್ಟೊತ್ತಿಗೆ ಈ ಕೋವಿಡ್​​-19 ಭೂತ ತೊಲಗುವುದೋ ಎಂದು ಕಾದು ಕುಳಿತಂತಾಗಿದೆ ಪರಿಸ್ಥಿತಿ. ಭಾರತದಲ್ಲಿ ಸುಮಾರು 48 ಲಕ್ಷಕ್ಕೂ ಹೆಚ್ಚು ಮಂದಿ ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ. ಮಹಾರಾಷ್ಟ್ರದಲ್ಲಿ 10 ಲಕ್ಷ ಪ್ರಕರಣಗಳು ವರದಿಯಾಗಿದ್ದು ಇಡೀ ದೇಶದಲ್ಲಿ ಮೊದಲ ಸ್ಥಾನದಲ್ಲಿದ್ದರೆ ಕರ್ನಾಟದಲ್ಲಿ ಸೋಂಕಿತರ ಸಂಖ್ಯೆ 4.5 ಲಕ್ಷ ಮುಟ್ಟಿದೆ. ಒಂದೆಡೆ ಸೋಂಕಿತರು ಚಿಕಿತ್ಸೆ ಪಡೆದು ಗುಣಮುಖರಾಗುತ್ತಿದ್ದರೆ ಮತ್ತೊಂದೆಡೆ ಅಷ್ಟೇ ಸಂಖ್ಯೆಯಲ್ಲಿ ಪ್ರಕರಣಗಳು ವರದಿಯಾಗುತ್ತಿದೆ.

Advertisement

Advertisement

ಇನ್ನು ದೇಶದಲ್ಲಿ ಇಷ್ಟು ಹೆಚ್ಚು ಪ್ರಮಾಣದಲ್ಲಿ ಕೊರೊನಾ ಪ್ರಕರಣಗಳು ವರದಿಯಾಗುತ್ತಿರುವುದಕ್ಕೆ ಜನರ ಅಜಾಗರೂಕತೆ ಕೂಡಾ ಕಾರಣ. ಬಹಳಷ್ಟು ಕಲಾವಿದರು ಲಾಕ್​ ಡೌನ್ ಆರಂಭವಾದಾಗಿನಿಂದ ಸಾಕಷ್ಟು ವಿಡಿಯೋಗಳು, ಹಾಡುಗಳು, ಬೀದಿ ನಾಟಕಗಳ ಮೂಲಕ ಜನರಿಗೆ ಜಾಗೃತಿ ಮೂಡಿಸುವ ಕೆಲಸ ಮಾಡಿದರು. ಕೆಲವರು ಬಹಳ ಜಾಗರೂಕತೆಯಿಂದ ಇದ್ದರೆ ಮತ್ತೆ ಕೆಲವರು ನಮಗೂ ಇದಕ್ಕೂ ಸಂಬಂಧವೇ ಇಲ್ಲ ಎನ್ನುವಂತೆ ಇದ್ದಾರೆ. ಆದರೆ ಕೊರೊನಾ ವಾರಿಯರ್​​​ಗಳು ಕೊರೊನಾ ಕುರಿತಾಗಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡುತ್ತಲೇ ಇದ್ದಾರೆ. ಅಭಿಲಾಷ್ ಜಿ.ವಿ ಎಂಬ ಯುವಪ್ರತಿಭೆ ಕೂಡಾ ಕೊರೊನಾ ಕುರಿತಾದ ಜಾಗೃತಿ ಗೀತೆಯೊಂದನ್ನು ತಯಾರಿಸಿ ಬಿಡುಗಡೆ ಮಾಡಿದ್ದಾರೆ.

Advertisement

‘ಭೂಮಿ ಬದಲಾಗಿಲ್ಲ’ ಎಂಬ ಹಾಡಿಗೆ ಅಭಿಲಾಷ್ ಜಿ.ವಿ ಸಾಹಿತ್ಯ ಬರೆದು ಧ್ವನಿ ನೀಡಿದ್ದಾರೆ. ಈ ಹಾಡಿಗೆ ಅನಂತ್ ಆರ್ಯನ್ ಸಂಗೀತ ಸಂಯೋಜಿಸಿದ್ದಾರೆ. ಅಭಿಲಾಷ್ ಮಿಮಿಕ್ರಿ ಕಲಾವಿದರಾಗಿದ್ದು ಖಾಸಗಿ ವಾಹಿನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಹಾಡಿನಲ್ಲಿ ಡಾ. ರಾಜ್​ಕುಮಾರ್, ಕರಾಟೆ ಕಿಂಗ್ ಶಂಕರ್ ನಾಗ್, ಅಂಬರೀಶ್​ ಅವರನ್ನು ಅಭಿಲಾಷ್ ಇಮಿಟೇಟ್ ಮಾಡಿದ್ದಾರೆ. ಡಾ. ಎಸ್​​.ಪಿ. ದಯಾನಂದ್​​ ಅವರು ಈ ಹಾಡನ್ನು ನಿರ್ಮಿಸಿದ್ದಾರೆ. ಬೆಂಗಳೂರು ನಿರ್ಗಮಿತ ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ಬೆಂಗಳೂರು ನಗರ ಪೊಲೀಸ್ ಜಂಟಿ ಆಯುಕ್ತರಾದ ಕೆ. ರಾಮಚಂದ್ರ ಹಾಗೂ ಇನ್ನಿತರರು ಅಭಿಲಾಷ್ ಅವರ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಾವು ಮುನ್ನೆಚರಿಕೆಯಿಂದ ಇದ್ದರೆ ಕೊರೊನಾವನ್ನು ಹೋಗಲಾಡಿಸುವುದು ಕಷ್ಟದ ಕೆಲಸವೇನಲ್ಲ ಎಂಬುದು ಈ ಹಾಡಿನ ಸಾರಾಂಶ. ಎ2 ಮ್ಯೂಸಿಕ್ ಈ ಹಾಡನ್ನು ಹೊರತಂದಿದ್ದಾರೆ.

Advertisement

ಇದಕ್ಕೂ ಮುನ್ನ ಅಭಿಲಾಷ್ ಕನ್ನಡಕ್ಕೆ ಸಂಬಂಧಿಸಿದಂತೆ ‘ಕನ್ನಡ ಮಾತಾಡು’ ಎಂಬ ಹಾಡನ್ನು ಹಾಡಿದ್ದರು. ಇದು ಅಭಿಲಾಷ್ ಅವರ ಮೊದಲ ವಿಡಿಯೋ ಸಾಂಗ್. ಈ ಹಾಡನ್ನು ಕೇಳಿ ಮಾಜಿ ಪ್ರಧಾನಿ ಹೆಚ್​.ಡಿ. ದೇವೇಗೌಡ, ಮಾಜಿ ಸಿಎಂ ಹೆಚ್​​.ಡಿ. ಕುಮಾರಸ್ವಾಮಿ, ಮಾಜಿ ಸಿಎಂ ಸಿದ್ದರಾಮಯ್ಯ, ಖ್ಯಾತ ಸಾಹಿತಿ ದೊಡ್ಡರಂಗೇಗೌಡ, ಜಯಕರ್ನಾಟಕ ಸಂಘಟನೆ ಸಂಸ್ಥಾಪಕ ದಿವಂಗತ ಮುತ್ತಪ್ಪ ರೈ, ನಿರ್ಮಾಪಕ ಸಾರಾ ಗೋವಿಂದು, ಕರವೇ ಅಧ್ಯಕ್ಷ ಶ್ರೀ ನಾರಾಯಣಗೌಡ ಹಾಗೂ ಇನ್ನಿತರು ಮೆಚ್ಚುಗೆ ಸೂಚಿಸಿ ಅಭಿಲಾಷ್ ಬೆನ್ನು ತಟ್ಟಿದ್ದರು. ನಿಮಗೆ ಒಳ್ಳೆ ಭವಿಷ್ಯ ಇದೆ ಎಂದು ಹಾರೈಸಿದ್ದರು.

ಒಟ್ಟಿನಲ್ಲಿ ಹಾಸನದ ಈ ಪ್ರತಿಭೆ ಮತ್ತಷ್ಟು ಬೆಳೆಯಲಿ ಚಿತ್ರರಂಗಕ್ಕೆ, ಕಿರುತೆರೆಗೆ ಅವರಿಂದ ಮತ್ತಷ್ಟು ಕೊಡುಗೆ ಲಭಿಸಲಿ ಎಂಬುದೇ ನಮ್ಮ ಹಾರೈಕೆ.

ಶ್ರೀ ಆದಿಶಕ್ತಿ ಚೌಡೇಶ್ವರಿ ಆರಾಧಕರಾದ ಶ್ರೀ ಪಂಡಿತ್ ಶ್ರೀನಿವಾಸ್ ಭಟ್ ( ಕುಡ್ಲ ) ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡದ ಪ್ರಸಿದ್ಧ ಜ್ಯೋತಿಷ್ಯರು. ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗ ಆರೋಗ್ಯ ವ್ಯಾಪಾರ ಲಗ್ನ ಸಂತಾನ ಸ್ತ್ರೀ – ಪುರುಷ ವಶೀಕರಣ ಶತ್ರುನಾಶ ಮಾಟ ಮಂತ್ರ ಸತಿಪತಿ ಕಲಹ ರ ಮದುವೆ ದುಷ್ಟಶಕ್ತಿ ಲೈಂಗಿಕ ಸಮಸ್ಯೆ ಇತರ ಎಲ್ಲಾ ನಿಮ್ಮ ವೈಯಕ್ತಿಕ ಸಮಸ್ಯೆಗಳಿಗೆ 48 ಗಂಟೆಗಳ ಒಳಗೆ ಪರಿಹಾರ ಶತಸಿದ್ಧ. ಬೇರೆ ಜ್ಯೋತಿಷ್ಯರುಗಳ ಬಳಿ ಜ್ಯೋತಿಷ್ಯ ಕೇಳಿ ಪರಿಹಾರ ಸಿಗದೆ ನೊಂದಿದ್ದರೆ ಒಮ್ಮೆ ಕರೆ ಮಾಡಿ. ಶ್ರೀ ಆದಿಶಕ್ತಿ ಚಾಮುಂಡೇಶ್ವರಿ ಜ್ಯೋತಿಷ್ಯ ಕೇಂದ್ರ Phone no : 9972245888 ಬದಲಾಗುತ್ತದೆ. ಫೋನಿನ ಮೂಲಕ ಪರಿಹಾರವನ್ನು ನೀಡಲಾಗುತ್ತದೆ.

ವಾಕ್ ಸಿದ್ಧಿ ಜಪ ಸಿದ್ಧಿ ಯಂತ್ರ ಸಿದ್ಧಿ ಹಾಗೂ ಮಂತ್ರ ಸಿದ್ಧಿಯಲ್ಲಿ ಪರಿಣಿತಿ ಹೊಂದಿರುವ ಪಂಡಿತ್ ಶ್ರೀನಿವಾಸ ಭಟ್ ಇವರು ವಶೀಕರಣ ಮಹಾ ಮಾಂತ್ರಿಕರು ಸರ್ವಸಿದ್ಧಿ ಸಾಧಕರಾದ ಇವರು ನಿಮ್ಮ ಧೀರ್ಘ ಕಾಲದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ನೀಡುತ್ತಾರೆ. ಪ್ರೀತಿ ಪ್ರೇಮದ ಸಮಸ್ಯೆಗಳು ಅಥವ ಒಳ್ಳೆಯ ಸರ್ಕಾರೀ ಕೆಲಸ ಸಿಗಲು ಅಥವ ಹಣಕಾಸಿನ ಸಮಸ್ಯೆಗಳು ಅಥವ ಸ್ತ್ರೀ ವಶೀಕರಣ, ಹಾಗೂ ಪುರುಷ ವಶೀಕರಣ, ಅತ್ತೆ ಸೊಸೆ ಕಿರಿಕಿರಿ, ಸಂತಾನಫಲ, ಶತ್ರುನಾಶ, ರಾಜಕೀಯ, ಹಣಕಾಸಿನ ಸಮಸ್ಯೆ, ಇನ್ನು ಯಾವುದೇ ರೀತಿಯ ಗುಪ್ತ ಸಮಸ್ಯೆಗಳಿಗೂ ಸಹ 48 ಗಂಟೆಗಳ ಒಳಗೆ ಶಾಶ್ವತ ಪರಿಹಾರ. ಈ ಕೂಡಲೇ 9972245888 ಸಂಖ್ಯೆಗೆ ಕರೆ ಮಾಡಿರಿ.

Advertisement
Share this on...