ಇದು ಕೇವಲ ಫೋಟೋವಲ್ಲ …ಅಂಬರೀಶ್ ರನ್ನು ನೆನಪಿಸಿಕೊಂಡ ಅಭಿಷೇಕ್ ಬರೆದುಕೊಂಡಿರುವುದೇನು ಗೊತ್ತಾ ? !

in ಮನರಂಜನೆ/ಸಿನಿಮಾ 111 views

ಜೀ ಕನ್ನಡ ವಾಹನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ ಗಟ್ಟಿಮೇಳದಲ್ಲಿ ನಾಯಕನ ತಮ್ಮ ವಿಕ್ರಾಂತ್ ವಸಿಷ್ಟ ಆಗಿ ನಟಿಸುತ್ತಿರುವ ನಟ ಅಭಿಷೇಕ್ ದಾಸ್ ಅವರು ರೆಬಲ್ ಸ್ಟಾರ್ ಅಂಬರೀಶ್ ಅವರನ್ನು ತುಂಬಾನೇ ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಮತ್ತು ಈ ವಿಚಾರವನ್ನು ಸ್ವತಃ ಅಭಿಷೇಕ್ ಅವರೇ ಹೇಳೊಕೊಂಡಿದ್ದಾರೆ‌. ಅಂದ ಹಾಗೇ ಅಂಬರೀಶ್ ಅಭಿನಯಸ ಕೊನೆಯ ಚಿತ್ರ ಅಂಬಿ ನಿಂಗ್ ವಯಸ್ಸಾಯ್ತೋ ಸಿನಿಮಾದಲ್ಲಿ ಅಭಿಷೇಕ್ ಅವರು ನಟಿಸಿದ್ದರು. ಅಂಬರೀಶ್ ಜೊತೆಗೆ ತೆರೆ ಹಂಚಿಕೊಂಡಿರುವ ಅಭಿಷೇಕ್ ಇದೀಗ ಅವರ ಜೊತೆಗಿನ ಫೋಟೋವೊಂದನ್ನು ಇನ್ ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ಮತ್ತು ಇದರ ಜೊತೆಗೆ “ಅಂಬಿ ನಿನಗೆ ವಯಸ್ಸಾಯ್ತೋ ಸಿನಿಮಾ ಬಿಡುಗಡೆಯಾಗಿ ಎರಡು ವರುಷಗಳು ಕಳೆದರು‌. ಸಿನಿಮಾಕ್ಕೆ ಎರಡು ವರುಷಗಳು ಆದುದು ನಿಜವಾಗಿಯೂ ಬಹು ದೊಡ್ಡ ವಿಷಯವಲ್ಲ. ಇದರ ಬದಲಿಗೆ ನಾನು ಇಂತಹ ಲೆಜೆಂಡ್ ಜೊತೆಗೆ ನಟಿಸಿದ್ದೇನೆ‌ ಎಂಬುದೇ ನನ್ನ ಪಾಲಿಗೆ ತುಂಬಾ ಮುಖ್ಯವಾದ ವಿಚಾರವೂ ಹೌದು. ಇದು ಕೇವಲ ಫೋಟೋವಲ್ಲ. ಇದರಲ್ಲಿ ಹಲವು ನೆನಪುಗಳಿವೆ. ನನಗೆ ಆಶೀರ್ವದಿಸಿ ಅಂಬಿ ಅಂಕಲ್ “ಎಂದು ಅಭಿಷೇಕ್ ಬರೆದುಕೊಂಡಿದ್ದಾರೆ. ಆ ಮೂಲಕ ರೆಬಲ್ ಸ್ಟಾರ್ ಅವರನ್ನು ನೆನಪಿಸಿಕೊಂಡಿದ್ದಾರೆ.

Advertisement

Advertisement

2018ರಲ್ಲಿ ತೆರೆಕಂಡ “ಅಂಬಿ ನಿನಗೆ ವಯಸ್ಸಾಯ್ತೋ” ಸಿನಿಮಾದಲ್ಲಿ ಪೋಷಕ ಪಾತ್ರದಲ್ಲಿ ಅಭಿಷೇಕ್ ನಟಿಸಿದ್ದರು. ಅದರಲ್ಲೂ ರೆಬಲ್ ಸ್ಟಾರ್ ಅವರ ಸ್ನೇಹಿತನಾಗಿ ಅವರು ಕಾಣಿಸಿಕೊಂಡಿದ್ದು ವಿಶೇಷ. ಇನ್ನು ಕನ್ನಡ ನಾಡಿನ ಜನರಿಗೂ ಇದು ತುಂಬಾ ವಿಶೇಷವಾದ ಸಿನಿಮಾ ಎಂದರೆ ತಪ್ಪಲ್ಲ. ಯಾಕೆಂದರೆ ಅದು ರೆಬಲ್ ಸ್ಟಾರ್ ಅಭಿನಯದ ಕೊನೆಯ ಸಿನಿಮಾವೂ ಹೌದು. ಅಂಬಿ ನಿಂಗ್ ವಯಸ್ಸಾಯ್ತೋ ಸಿನಿಮಾದ ಹೇ ಜಲೀಲ ಕನ್ವರ್ ಲಾಲ ಹಾಡು ಕೂಡಾ ಸಾಕಷ್ಟು ಸದ್ದು ಮಾಡಿತ್ತು.

Advertisement

ಅಂದ ಹಾಗೇ ಇದು ಧನುಷ್ ನಿರ್ಮಾಣದ ತಮಿಳಿನ ಪವರ್ ಪಾಂಡಿ ಸಿನಿಮಾದ ರಿಮೇಕ್ ಆಗಿದೆ. ಮತ್ತೊಂದು ವಿಶೇಷವೆಂದರೆ ಈ ಸಿನಿಮಾದಲ್ಲಿ ಅಂಬರೀಶ್ ಗೆ ಸುಹಾಸಿನಿ ಜೋಡಿಯಾಗಿ ನಟಿಸಿದ್ದು ಬರೋಬ್ಬರಿ ಹದಿನಾಲ್ಕು ವರುಷಗಳ ಬಳಿಕ ಈ ಜೋಡಿ ಈ ಸಿನಿಮಾದ ಮೂಲಕ ಮತ್ತೆ ಒಂದಾಗಿದೆ.

Advertisement

ಸದ್ಯ ಗಟ್ಟಿಮೇಳದಲ್ಲಿ ವಿಕ್ರಾಂತ್ ವಸಿಷ್ಠ ಪಾತ್ರ ಮಾಡುತ್ತಿರುವ ಅಭಿಷೇಕ್ ದಾಸ್ ಅವರು ಉದಯ ವಾಹಿನಿಯ ಸರಯೂ ಧಾರಾವಾಹಿಯ ಮೂಲಕ ಕಿರುತೆರೆ ಪ್ರವೇಶ ಮಾಡಿದ್ದರು. ನಟನೆಯ ಜೊತೆಗೆ ನೃತ್ಯಗಾರರಾಗಿಯೂ ಗುರುತಿಸಿಕೊಂಡಿರುವ ಅಭಿಷೇಕ್ ಈಗಾಗಲೇ ಸುಮಾರು 500 ಕ್ಕೂ ಹೆಚ್ಚಿನ ಶೋ ಗಳಲ್ಲಿ ನೃತ್ಯ ಪ್ರದರ್ಶನ ಮಾಡಿದ್ದಾರೆ. ಮತ್ತು ಒಂದೆರಡು ಡ್ಯಾನ್ಸ್ ರಿಯಾಲಿಟಿ ಶೋಗಳಲ್ಲಿಯೂ ಭಾಗವಹಿಸಿದ್ದಾರೆ.
– ಅಹಲ್ಯಾ

ಓಂ ಶ್ರೀ ವಿದ್ಯಾ ಚೌಡೇಶ್ವರಿ ಜ್ಯೋತಿಷ್ಯ ಫಲ ದ ಪ್ರಸಿದ್ಧ ಜ್ಯೋತಿಷಿಗಳಾದ ಶ್ರೀ ಪಂಡಿತ್ ಬ್ರಹ್ಮನಂದ ಭಟ್ ರವರು ನಿಮ್ಮ ಸಮಸ್ಯೆ ಏನೇ ಇರಲಿ,  ಎಷ್ಟೇ ಕಠಿಣ ವಾಗಿರಲಿ , ನಿಮ್ಮ ಗುಪ್ತ ಸಮಸ್ಯೆಗಳು ಹಾಗೂ ನಿಮ್ಮ ಕಠಿಣ ಸಮಸ್ಯೆಗಳಿಗೆ ಪರಿಹಾರ ಒಂದೇ ನಿಮಿಷದಲ್ಲಿ ಒಂದು ಕರೆಯಲ್ಲಿ ಸೂಚಿಸುತ್ತಾರೆ. ಒಮ್ಮೆ ಕರೆ ಮಾಡಿ 7618717450 ಎಷ್ಟೋ ಜ್ಯೋತಿಷಿಗಳ ಬಳಿ ಹೋಗಿ ಜ್ಯೋತಿಷ್ಯ ಕೇಳಿ ನಿಮಗೆ ಪರಿಹಾರ ಸಿಗದೇ ಹೋಗಿದ್ದರೆ ಇಲ್ಲಿ ಪರಿಹಾರ ಖಂಡಿತ.

Advertisement
Share this on...