ರೌಡಿ ಬೇಬಿ ಸಾಯಿಪಲ್ಲವಿ ಬಗ್ಗೆ ಗೊತ್ತಿರದ ಸಂಗತಿಗಳು…!

in ಸಿನಿಮಾ 225 views

ಚಿತ್ರರಂಗದಲ್ಲಿ ಯಾವುದೇ ಗಾಡ್ ಫಾದರ್ ಇಲ್ಲದೇ ಬೆಳೆದು ತನ್ನ ಡ್ಯಾನ್ಸ್ ಮತ್ತು ಕ್ಯೂಟ್ ಅಭಿನಯದ ಮೂಲಕ ಪಡ್ಡೆ ಹುಡುಗರ ಮನದರಸಿಯಾಗಿರುವ ರೌಡಿ ಬೇಬಿ ಸಾಯಿ ಪಲ್ಲವಿ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ತನ್ನ ಸ್ಟೆಪ್ ಮೂಲಕವೇ ನೋಡುಗರ ಮನ ಕದೆಯುವ ಈ ಪಿಂಪಲ್ ಕ್ವೀನ್ ಬಗ್ಗೆ ನಿಮಗೆ ಗೊತ್ತಿರದ ಸಂಗತಿಗಳು…!

Advertisement

 

Advertisement

Advertisement

 

Advertisement

ಸಾಯಿ ಪಲ್ಲವಿ ಮಲಯಾಳಂ ಚಿತ್ರದ ಮೂಲಕ ಸಿನಿಮಾರಂಗ ಪ್ರವೇಶಿಸಿದವರು. ಆದರೆ ಸಾಯಿ ಪಲ್ಲವಿಯವರು ಹುಟ್ಟಿದ್ದು ಕೇರಳದಲ್ಲಿ ಅಲ್ಲ, ಬದಲಿಗೆ ತಮಿಳುನಾಡಿನ ನೀಲಗಿರಿ ಜಿಲ್ಲೆಯ ಕೂಟಗಿರಿಯಲ್ಲಿ. ಇವರ ಊರು ಊಟಿಯ ಕೂನೂರಿಗೆ ಸಮೀಪವೇ ಇದೆ. ಆದರೆ ಅವರನ್ನು ಸಿನಿಮಾರಂಗಕ್ಕೆ ಕರೆತಂದಿದ್ದು ಮಾತ್ರ ಮಾಲಿವುಡ್. ನಿಮ್ಮೆಲ್ಲರಿಗೂ ಸಾಯಿ ಎಂದರೆ ಮೊದಲು ಅವರು ಅಭಿನಯಿಸಿದ ಮೊದಲ ಸಿನಿಮಾ ನೆನಪಿಗೆ ಬರುತ್ತದೆ. ಆದರೆ ಸಾಯಿ ಪಲ್ಲವಿಯವರ ಮೊದಲ ಸಿನಿಮಾ ಪ್ರೇಮಂ ಅಲ್ಲ.

 

 

ಅದಕ್ಕೂ ಮುಂಚೆ ಸಾಯಿ 2003ರಲ್ಲಿ ಕಸ್ಥೂರಿಮನ್ ಎಂಬ ಮಳೆಯಾಳಂ ಸಿನಿಮಾದಲ್ಲಿ ನಟಿಸಿದ್ದರು ನಂತರ 2008ರಲ್ಲಿ ಕಂಗಾನಾ ರಣಾವತ್ ಅಭಿನಯದ ಧಾಂ ಧೂಮ್ ಎಂಬ ಸಿನಿಮಾದಲ್ಲಿ ನಾಯಕಿಯ ಗೆಳತಿಯಾಗಿ ಕಾಣಿಸಿಕೊಂಡಿದ್ದರು. ಸಾಯಿಪಲ್ಲವಿ ಅವರು ನಮಗೆ ಗೊತ್ತಿರುವ ಹಾಗೆ ಸಿನಿಮಾರಂಗದಲ್ಲಿ ಯಾವುದೇ ಬ್ಯಾಗ್ರೌಂಡ್ ಇಲ್ಲದೆ ಬೆಳೆದವರು.

 

 

ಸಿನಿಮಾರಂಗಕ್ಕೆ ಬರುವ ಮೊದಲು ವುಂಗಲಿಲ್ ಯಾರ್ ಆಡುಕ್ತ ಪ್ರಭುದೇವ್ ಎಂಬ ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ ಭಾಗವಹಿಸಿ ಜನರ ಮನಸ್ಸನ್ನು ಗೆದ್ದಿದ್ದರು. ಈ ಕಾರ್ಯಕ್ರಮವಲ್ಲದೆ ಡಿ-4 ಎಂಬ ಡ್ಯಾನ್ಸ್ ರಿಯಾಲಿಟಿ ಶೋನಲ್ಲೂ ಸಹ ಭಾಗವಹಿಸಿದ್ದರು. ಸದ್ಯ ಅಭಿನಯದಲ್ಲಿ ನಂ.1 ಎನಿಸಿಕೊಂಡಿರುವ ಸಾಯಿಪಲ್ಲವಿ ಓದಿನಲ್ಲೂ ಅದ್ಭುತ ಪ್ರತಿಭೆ.

 

 

ಇಂದು ಅಭಿನಯದ ಮೂಲಕ ಎಲ್ಲರನ್ನೂ ಮಂತ್ರಮುಗ್ಧರನ್ನಾಗಿಸಿರುವ ಅವರು ಜಾರ್ಜಿಯಾದಲ್ಲಿ ಎಂ.ಬಿ.ಬಿ.ಎಸ್ ಮುಗಿಸಿದ್ದಾರೆ. ಸಾಯಿ ಚಿತ್ರರಂಗಕ್ಕೆ ಬಾರದೆ ಇದ್ದಿದ್ದರೆ ಹೃದಯ ತಜ್ಞೆ ಆಗಬೇಕೆಂಬ ಆಸೆ ಇಟ್ಟುಕೊಂಡಿದ್ದರಂತೆ. ಆದರೆ ಸಾಯಿ ಪಲ್ಲವಿಯವರು ಎಂ.ಬಿ.ಬಿ.ಎಸ್ ಮುಗಿಸಿದ್ದರು ವೈದ್ಯೆ ಎಂದು ನೊಂದಾಯಿಸಿಕೊಂಡಿಲ್ಲ.

 

 

ಸಾಯಿಯವರ ತಂದೆಯ ಹೆಸರು ಸಂತಮಾರೈ ಕಣ್ಣನ್ ತಾಯಿ ರಾಧಾ. ಇತ್ತೀಚೆಗೆ ಸಾಯಿಯವರಂತೆ ಅವರ ತಂಗಿಯ ಫೋಟೋಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ಸಕ್ಕತ್ ವೈರಲ್ ಆಗುತ್ತಿದೆ. ಸಾಯಿ ಪಲ್ಲವಿಯವರಿಗೆ ತಂಗಿ ಕೂಡ ಇದ್ದು ಅವರ ಹೆಸರು ಪೂಜಾ ಕಣ್ಣನ್. ಅವರು ಈಗಾಗಲೇ ಕೆಲವು ಕಿರು ಚಿತ್ರಗಳಲ್ಲಿ ಅಭಿನಯಿಸಿದ್ದು ಬೆಳ್ಳಿತೆರೆಗೆ ಬರಲು ಸಜ್ಜಾಗಿದ್ದಾರೆ.

– ಸುಷ್ಮಿತಾ

Advertisement
Share this on...