ಚಾಣಕ್ಯನ ಪ್ರಕಾರ ಈ 6 ರೀತಿಯ ಜನರು ಎಂದಿಗೂ ಶ್ರೀಮಂತರಾಗಲು ಸಾಧ್ಯವಿಲ್ಲ…!

in ಕನ್ನಡ ಮಾಹಿತಿ 58 views

ಕೌಟಿಲ್ಯ, ವಿಷ್ಣುಗುಪ್ತಾ ಎಂದೇ ಪ್ರಸಿದ್ಧನಾದ ಚಾಣಕ್ಯ, ಪ್ರಾಚೀನ ಭಾರತ ಕಂಡ ಅದ್ಭುತ ಅರ್ಥಶಾಸ್ತ್ರಜ್ಞ. ಚಾಣಕ್ಯ ಬರೆದ ಅರ್ಥಶಾಸ್ತ್ರ ಹೆಸರಿನ ಪುಸ್ತಕ ಇಂಗ್ಲೀಷ್, ಫ್ರೆಂಚ್, ಜರ್ಮನ್- ಹೀಗೆ ಹಲವು ಭಾಷೆಗಳಿಗೆ ಅನುವಾದವಾಗಿದೆ. ಅರ್ಥಶಾಸ್ತ್ರ ಪುಸ್ತಕ ಇಂದು ಜಗತ್ಪ್ರಸಿದ್ಧ. ಯೂರೋಪಿನ ರಾಜ್ಯಶಾಸ್ತ್ರ ನಿಪುಣರು, ಸಮಾಜಶಾಸ್ತ್ರ ನಿಪುಣರು, ಅರ್ಥಶಾಸ್ತ್ರ ನಿಪುಣರು ಇದನ್ನು ಕುತೂಹಲದಿಂದ ಅಧ್ಯಯನ ಮಾಡುತ್ತಾರೆ. ಅರ್ಥಶಾಸ್ತ್ರ ಮತ್ತು ಚಾಣಕ್ಯ ನೀತಿ ಸಾರ(ಚಾಣಕ್ಯ ನೀತಿ ಶಾಸ್ತ್ರ)ಚಾಣಕ್ಯನ ಎರಡು ಮುಖ್ಯ ಪುಸ್ತಕಗಳಾಗಿವೆ. ಇದರಲ್ಲಿರುವ ಉಲ್ಲೇಖನಗಳನ್ನು ಇಂದಿಗೂ ಪ್ರತಿಯೊಬ್ಬರು ಅಳವಡಿಸಿಕೊಳ್ಳಲು ಬಯಸುತ್ತಾರೆ. ಅಂದಹಾಗೆ ಚಾಣಕ್ಯನು ನಾವು ಜೀವನದಲ್ಲಿ ಯಾವ ವಿಷಯಗಳನ್ನು ಅಳವಡಿಸಿಕೊಂಡರೆ ಜೀವನದಲ್ಲಿ ಯಶಸ್ವಿಯಾಗಬಹುದು ಎಂಬುದರ ಕುರಿತು ಕೆಲವು ಪುಸ್ತಕಗಳಲ್ಲಿ ವಿವರಿಸಿದ್ದು, ಆಚಾರ್ಯ ಚಾಣಕ್ಯರ ನೀತಿ ಪುಸ್ತಕದ ಪ್ರಕಾರ ಈ 6 ರೀತಿಯ ಜನರು ಎಂದಿಗೂ ಶ್ರೀಮಂತರಾಗಲು ಸಾಧ್ಯವಿಲ್ಲ. ಹಾಗಾದರೆ ಮತ್ತೇಕೆ ತಡ, ಆ ರೀತಿಯ ಜನರು ಯಾರು ಎಂದು ಬನ್ನಿ ತಿಳಿಯೋಣ.

Advertisement

 

Advertisement

Advertisement

*ಚಾಣಕ್ಯನ ಪ್ರಕಾರ, ಕೊಳಕು ಬಟ್ಟೆಗಳನ್ನು ಧರಿಸುವವರಿಗೆ ಲಕ್ಷ್ಮಿ ಎಂದಿಗೂ ಒಲಿಯುವುದಿಲ್ಲ. ಕೊಳೆಯನ್ನು ಇಷ್ಟಪಡುವವರು, ತಮ್ಮ ಸುತ್ತಲಿನ ಸ್ವಚ್ಛತೆಯನ್ನು ನೋಡಿಕೊಳ್ಳುವುದಿಲ್ಲ, ಅವರಿಗೆ ಎಂದಿಗೂ ಲಕ್ಷ್ಮಿ ದೇವಿಯ ಅನುಗ್ರಹ ಇರುವುದಿಲ್ಲ.
* ಯಾರ ಹಲ್ಲುಗಳು ಸ್ವಚ್ಛವಾಗಿರುವುದಿಲ್ಲವೋ, ಅದರ ಬಗ್ಗೆ ಹೆಚ್ಚು ಗಮನಹರಿಸುವುದಿಲ್ಲವೋ ಅಂತಹ ವ್ಯಕ್ತಿಯು ಬಡತನವನ್ನು ಎದುರಿಸುತ್ತಾನೆ ಎಂದು ಹೇಳಲಾಗುತ್ತದೆ. ಅಂತಹವರನ್ನು ಲಕ್ಷ್ಮಿ ಇಷ್ಟಪಡುವುದಿಲ್ಲ. ಪ್ರತಿದಿನ ಹಲ್ಲು ಸ್ವಚ್ಛಗೊಳಿಸುವವರಿಗೆ ಲಕ್ಷ್ಮಿಯ ಅನುಗ್ರಹವಿರುತ್ತದೆ ಎಂದು ಹೇಳಲಾಗುತ್ತದೆ.
* ಚಾಣಕ್ಯನ ಪ್ರಕಾರ, ಹಸಿವಿಗಿಂತ ಹೆಚ್ಚು ತಿನ್ನುವ ವ್ಯಕ್ತಿಯು ಎಂದಿಗೂ ಶ್ರೀಮಂತನಾಗಿರಲು ಸಾಧ್ಯವಿಲ್ಲ. ಏಕೆಂದರೆ ಅದು ನಿಧಾನವಾಗಿ ವ್ಯಕ್ತಿಯನ್ನು ಬಡತನಕ್ಕೆ ತಳ್ಳುತ್ತದೆ.

Advertisement

 

* ಕಹಿ ಪದಗಳನ್ನು ಮಾತನಾಡುವ ಜನರು ಯಾವಾಗಲೂ ಬಡವರು ಎಂದು ಹೇಳಲಾಗುತ್ತದೆ. ಚಾಣಕ್ಯನ ಪ್ರಕಾರ, ಪ್ರತಿಯೊಬ್ಬ ವ್ಯಕ್ತಿಯು ಮಧುರವಾಗಿ ಮಾತನಾಡಬೇಕು . ತನ್ನ ಮಾತಿನಿಂದ ಇತರರ ಮನಸ್ಸನ್ನು ನೋಯಿಸುವವರ ಮೇಲೆ ಲಕ್ಷ್ಮಿ ಯಾವಾಗಲೂ ಕೋಪಗೊಳ್ಳುತ್ತಾಳೆ.
* ಬೆಳಗ್ಗೆಯಿಂದ ಸಂಜೆಯವರೆಗೆ ಮಲಗುವ ವ್ಯಕ್ತಿಯು ಎಂದಿಗೂ ಶ್ರೀಮಂತನಾಗಲು ಸಾಧ್ಯವಿಲ್ಲ ಎಂದು ಹೇಳಲಾಗುತ್ತದೆ. ಚಾಣಕ್ಯನ ಪ್ರಕಾರ, ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ನಿದ್ರೆಯಲ್ಲಿರುವ ಜನರು ಎಂದಿಗೂ ಹಣವನ್ನು ಹೊಂದಿರುವುದಿಲ್ಲ.

 

* ಚಾಣಕ್ಯನ ಪ್ರಕಾರ, ಅನ್ಯಾಯ, ಮೋಸ ಅಥವಾ ಅಪ್ರಾಮಾಣಿಕತೆಯ ಮೂಲಕ ಹಣ ಸಂಪಾದಿಸುವುದರಲ್ಲಿ ನಂಬಿಕೆ ಇರುವವರು ಬಹಳಬೇಗ ದೌರ್ಜನ್ಯಕ್ಕೊಳಗಾಗುತ್ತಾರೆ

Advertisement
Share this on...