ನಟ ಅಚ್ಯುತ್ ಕುಮಾರ್ ಅವರ ಹೆಂಡತಿ ಕೂಡ ಫೇಮಸ್ ನಟಿ..! ಯಾರು ಗೊತ್ತಾ..?

in ಮನರಂಜನೆ 459 views

ತುಮಕೂರು ಜಿಲ್ಲೆಯ ತಿಪುಟೂರು ಪಟ್ಟಣದಲ್ಲಿ ಮಾರ್ಚ್ 8, 1966 ರಲ್ಲಿ ನಟ ಅಚ್ಯುತ್ ಕುಮಾರ್ ಜನಿಸಿದರು. ಅಚ್ಯುತ್ ಕುಮಾರ್ ರವರಿಗೆ ರಂಗಭೂಮಿಯಲ್ಲಿ ತುಂಬಾ ಆಸಕ್ತಿ ಇತ್ತು. ನೀನಾಸಂ ನಲ್ಲಿ ಅಚ್ಯುತ್ ಕುಮಾರ್ ತರಬೇತಿಯನ್ನು ಪ್ರಾರಂಭಿಸಿದರು. ಅದೇ ಸಮಯದಲ್ಲಿ ರಂಗಭೂಮಿಯಲ್ಲಿ ಕೆಲಸ ಮಾಡುತ್ತಿದ್ದ ಗಿರೀಶ್ ಕಾಸರವಳ್ಳಿಯವರು 2000ನೇ ಇಸವಿಯಲ್ಲಿ ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ ತಮ್ಮ ನಿರ್ದೇಶನದ ಗೃಹಭಂಗ ಸೀರಿಯಲ್ ನಲ್ಲಿ ನಟಿಸಲು ಅವಕಾಶ ನೀಡಿದರು. ನಂತರ ಅಚ್ಯುತ್ ಕುಮಾರ್ ರವರು ಮೂಡಲ ಮನೆ, ಪ್ರೀತಿ ಇಲ್ಲದ ಮೇಲೆ ಧಾರವಾಹಿಗಳಲ್ಲಿ ಖಾಯಂ ನಟರಾಗಿ ಗುರುತಿಸಿಕೊಂಡರು. ಅಚ್ಯುತ್ ಕುಮಾರ್ ರವರಿಗೆ ತಮ್ಮ ವ್ಯತ್ತಿ ಜೀವನದಲ್ಲಿ ತಿರುವು ಸಿಕ್ಕಿದ್ದು ಮೊಗ್ಗಿನ ಮನಸು ಚಿತ್ರದ ಮೂಲಕ. ನಾಯಕಿಯ ತಂದೆಯಾಗಿ ಅಚ್ಯುತ್ ಕುಮಾರ್ ರವರ ಪಾತ್ರ ಅಭಿನಯ ಅಮೋಘವಾಗಿತ್ತು.

Advertisement

Advertisement

ನಂತರ ಆ ದಿನಗಳು ಸಿನಿಮಾದಲ್ಲಿ ಆಯಿಲ್ ಕುಮಾರ್ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು ಅಚ್ಯುತ್ ಕುಮಾರ್ ಇದಾದ ನಂತರ ಅಚ್ಯುತ್ ಕುಮಾರ್ ಅವರಿಗೆ ಹೇರಳವಾಗಿ ಅವಕಾಶಗಳು ಹುಡುಕಿಕೊಂಡು ಬಂದವು. ಹಲವಾರು ಹಿಟ್ ಚಿತ್ರಗಳಲ್ಲಿ ಪೋಷಕ ನಟನಾಗಿ ಮಿಂಚಿದರು ಈ ನಟ. ಅಚ್ಯುತ್ ಕುಮಾರ್ ರವರಿಗೆ ಅತ್ಯುತ್ತಮ ಪೋಷಕ ಪಾತ್ರಕ್ಕಾಗಿ ಫಿಲಂ ಫೇರ್ ಪ್ರಶಸ್ತಿ ಕೂಡ ದೊರಕಿದೆ ಹಾಗೂ ‘ಹೆಜ್ಜೆಗಳು’ ಎಂಬ ಚಿತ್ರದಲ್ಲಿ ಜೂಜಿನ ವ್ಯಸನಿಯ ಪಾತ್ರದಲ್ಲಿ ಕರ್ನಾಟಕ ರಾಜ್ಯ ಅತ್ಯುತ್ತಮ ಪೋಷಕ ನಟ ಪ್ರಶಸ್ತಿಯನ್ನು ಕೂಡ ಇವರು ಪಡೆದಿದ್ದಾರೆ. ಇವರ ಪತ್ನಿ ನಂದಿನಿ ಪಟವರ್ಧನ್ ರವರು ಕೂಡ ನಟಿ.

Advertisement

Advertisement

ನಂದಿನಿಯವರು ಅನೇಕ ಸೀರಿಯಲ್ ಗಳಲ್ಲಿ ಕೂಡ ನಟಿಸಿದ್ದಾರೆ. ಇವರು ಕೂಡ ನೀನಾಸಂ ನಲ್ಲಿ ನಾಟಕ ತರಬೇತಿ ಪಡೆದಿದ್ದಾರೆ. ಅಚ್ಯುತ್ ಕುಮಾರ್ ರವರು ಹಲವಾರು ಸ್ಟಾರ್ ನಟರ ಜೊತೆ ನಟಿಸಿದ್ದಾರೆ. ಮೊಗ್ಗಿನ ಮನಸ್ಸು, ಮಿಸ್ಟರ್ ಅಂಡ್ ಮಿಸ್ಸೆಸ್ ರಾಮಾಚಾರಿ, ಕಿರಿಕ್ ಪಾರ್ಟಿ ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ಪೋಷಕ ಪಾತ್ರದಲ್ಲಿ ನಟ ಅಚ್ಯುತ್ ಕುಮಾರ್ ರವರು ಅಭಿನಯಿಸಿದ್ದಾರೆ.

– ಸುಷ್ಮಿತಾ

Advertisement
Share this on...