ಈ ಕಿರುತೆರೆ ನಟಿಗೆ ಗಯ್ಯಾಳಿ ಪಾತ್ರದಲ್ಲಿ ನಟಿಸುವ ಬಯಕೆ!

in ಮನರಂಜನೆ/ಸಿನಿಮಾ 154 views

ಇವರು ಮುದ್ದುಮುಖದ ಚೆಲುವೆ. ಮದುವೆಯಾಗಿ ಒಂದು ಮಗುವಿನ ತಾಯಿ ಆಗಿದ್ದರೂ ಇನ್ನೂ ಮಾಸದ ಸೌಂದರ್ಯ. ಸದ್ಯ ಕನ್ನಡ ಕಿರುತೆರೆಯಲ್ಲಿ ಅಮ್ಮನ ಪಾತ್ರ ನಿರ್ವಹಿಸುತ್ತಿರುವವರಲ್ಲಿ ಇವರೂ ಮುಂಚೂಣಿಯಲ್ಲಿದ್ದಾರೆ. ಆ ಮುಗ್ಧತೆ , ಅಕ್ಕರೆಯ ಅಮ್ಮನ ಪಾತ್ರಕ್ಕೆ ಹೇಳಿ ಮಾಡಿಸಿದಂತಹ ಮುಖಭಾವ ಇವರದು. ಅಂದ ಹಾಗೇ ಅವರು ಬೇರಾರೂ ಅಲ್ಲ, ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮಿಥುನ ರಾಶಿ ಧಾರಾವಾಹಿಯಲ್ಲಿ ನಾಯಕ ಮಿಥುನ್ ನ ತಾಯಿ ಗಿರಿಜಾ ಆಗಿ ಅಭಿನಯಿಸುತ್ತಿರುವ ಹರಿಣಿ ಶ್ರೀಕಾಂತ್.‌ ದೂರದರ್ಶನ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಸವಿನೆನಪು ಕಾರ್ಯಕ್ರಮದ ನಿರೂಪಕಿಯಾಗಿ ಕಿರುತೆರೆಗೆ ಕಾಲಿಟ್ಟ ಹರಿಣಿ ಶ್ರೀಕಾಂತ್ ಮೊದಲ ಬಾರಿಗೆ ಬಣ್ಣ ಹಚ್ಚಿದ ಧಾರಾವಾಹಿ ಪ್ರತಿಭೆ. ಮುಂದೆ ಆತ್ಮ ಧಾರಾವಾಹಿಯಲ್ಲಿ ಬಣ್ಣ ಹಚ್ಚಿದ ಹರಿಣಿ ಅವರಿಗೆ ಅದ್ಯಾವಾಗ ನನಗೂ ನಟನೆಗೂ ಕೂಡಿ ಬರುವುದಿಲ್ಲ ಎಂದೆನಿಸಿತೋ ಆಗ ನಟನೆಗೆ ಬಾಯ್ ಹೇಳಿದರು. ತದ ನಂತರ ದಾಂಪತ್ಯ ಜೀವನಕ್ಕೆ ಕಾಲಿರಿಸಿದ ಹರಿಣಿ ತಮ್ಮ ಪತಿಯ ಪ್ರೋತ್ಸಾಹ ಮತ್ತು ಬೆಂಬಲದಿಂದ ಮತ್ತೆ ಬಣ್ಣದ ಲೋಕದಲ್ಲಿ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದರು. ಸದ್ಯ ಮಿಥುನ ರಾಶಿಯ ಗಿರಿಜಾ ಆಗಿ ಬ್ಯುಸಿಯಾಗಿದ್ದಾರೆ ಹರಿಣಿ.

Advertisement

Advertisement

ಮನೋಜ್ಞ ಅಭಿನಯದ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆದ ಹರಿಣಿ ಕೇವಲ ಕೆಲವೇ ಧಾರಾವಾಹಿಗಳಲ್ಲಷ್ಟೇ ಬಣ್ಣ ಹಚ್ಚಿದ್ದರೂ ಅವರು ಅಭಿನಯಿಸಿರುವಂತಹ ಪಾತ್ರಗಳು ಜನರ ಮನಸ್ಸಿನಲ್ಲಿ ಇಂದಿಗೂ ಅಚ್ಚಳಿಯದೇ ಉಳಿದಿದೆ. ಅದರಲ್ಲಿಯೂ ಮಿಂಚು ಧಾರಾವಾಹಿಯಲ್ಲಿ ಹರಿಣಿ ನಿರ್ವಹಿಸಿದ ಕಾತ್ಯಾಯಿನಿ ಎಂಬ ಕುಂಟಿಯ ಪಾತ್ರ ಇಂದಿಗೂ ಜನರ ಮನಸಿನಲ್ಲಿ ಹಸಿರಾಗಿದೆ ಎನ್ನುವ ಹರಿಣಿ ಇಂದಿಗೂ ಜನ ಸಿಕ್ಕಾಗ ಅದೇ ಹೆಸರಿನಿಂದ ಗುರುತಿಸುತ್ತಾರೆ. ಮತ್ತು ಆ ಪಾತ್ರಕ್ಕೆ ಆರ್ಯಭಟ ಪ್ರಶಸ್ತಿ ಕೂಡಾ ಪಡೆದುಕೊಂಡಿದ್ದೇನೆ” ಎಂದು ಸಂತಸದಿಂದ ಹೇಳುತ್ತಾರೆ.

Advertisement

Advertisement

ಮುಂದೆ ಸಂಬಂಧ ,ಚಿಕ್ಕಮ್ಮ, ಪುಟ್ಟಗೌರಿ ಮದುವೆ , ನಾಗಿಣಿ ಮುಂತಾದ ಧಾರಾವಾಹಿಗಳಲ್ಲಿ ಕಾಣಿಸಿಕೊಂಡಿರುವ ಹರಿಣಿಗೆ ಪುಟ್ಟಗೌರಿ ಮದುವೆಯ ಅಭಿನಯಕ್ಕಾಗಿ ಅನುಬಂಧ ಅವಾರ್ಡ್ಸ್ ನ ಮನೆ ಮೆಚ್ಚಿದ ಅಮ್ಮ ಪ್ರಶಸ್ತಿಯು ದೊರಕಿದೆ. ಮೀರಾ ಮಾಧವ ರಾಘವ , ಸಂಜು ವೆಡ್ಸ್ ಗೀತಾ ,ಭೂಮಿತಾಯಿ ಮುಂತಾದ ಚಿತ್ರಗಳಲ್ಲಿ ನಟಿಸಿರುವ ಹರಿಣಿಗೆ ಗಯ್ಯಾಳಿ ಪಾತ್ರದಲ್ಲಿ ಕಾಣಿಸಿಕೊಳ್ಳುವ ಬಯಕೆ. ನಟನೆಯ ಜೊತೆಗೆ ನಿರ್ದೇಶನ ಮಾಡುವ ಕನಸು ಕೂಡಾ ತನಗಿದೆ ಎನ್ನುತ್ತಾರೆ ಹರಿಣಿ ಶ್ರೀಕಾಂತ್.
– ಅಹಲ್ಯಾ

ಶ್ರೀ ಕಟೀಲು ದುರ್ಗಾಪರಮೇಶ್ವರಿ ದೇವಿ ಕೃಪೆಯಿಂದ ಈ ರಾಶಿಗಳಿಗೆ ಇಂದು , ಇಂದಿನ ನಿಮ್ಮ ರಾಶಿ ಭವಿಷ್ಯ ನಿಮ್ಮ ಸಮಸ್ಯೆ ಏನೇ ಇರಲಿ ಕರೆ ಮಾಡಿ9886027322. ದಕ್ಷಿಣ ಕನ್ನಡದ 108 ಜ್ಯೋತಿಷ್ಯ ತಂತ್ರಗಳಿಂದ ನಿಮ್ಮ ನಿಗೂಢ ಗುಪ್ತ ಸಮಸ್ಯೆಗಳಿಗೆ, ತಾಂಬೂಲ ಪ್ರಶ್ನೆ ಮತ್ತು ಆರೂಢ ಪ್ರಶ್ನೆಯಿಂದ ಕೇವಲ 11 ದಿನದಲ್ಲೇ ಶಾಶ್ವತ ಪರಿಹಾರ. ಪ್ರಧಾನ ಅರ್ಚಕರು ಹಾಗೂ ಪ್ರಧಾನ ತಾಂತ್ರಿಕರು ಶ್ರೀ ಸುಬ್ರಮಣ್ಯ ಆಚಾರ್ಯ ದೈವಶಕ್ತಿ ಜ್ಯೋತಿಷ್ಯರು . ಇನ್ನು ನಿಮ್ಮ ಜೀವನದಲ್ಲಿ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ಕೇರಳದ 18 ದೈವಿಕ ಪೂಜಾ ಶಕ್ತಿಗಳಿಂದ ಪರಿಹಾರ ಮಾಡಿಕೊಡುತ್ತಾರೆ .ನಿಮ್ಮಲ್ಲಿ ಸಮಸ್ಯೆಗಳಾದ ಮಾಟ ಮಂತ್ರ ನಿವಾರಣೆ, ಕೋರ್ಟ್ ವಿಚಾರ ,ಆಸ್ತಿ ವಿಚಾರ , ಹಣಕಾಸಿನ ಸಮಸ್ಯೆ, ಸತಿಪತಿ ಕಲಹ , ಅತ್ತೆ-ಸೊಸೆ ಕಲಹ , ಮಕ್ಕಳ ವಿದ್ಯಭ್ಯಾಸದಲ್ಲಿ ತೊಂದರೆ, ಪ್ರೇಮ ಸಂಬಂಧದಂತ ಯಾವುದೇ ಸಮಸ್ಯೆಗಳಿಗೆ ಇಂದೇ ಕರೆ ಮಾಡಿ. 9886027322 ಪರಿಹಾರ ಮಾಡಿಕೊಡುತ್ತಾರೆ.

Advertisement
Share this on...