ಗೋವಾ ಪ್ರವಾಸದಲ್ಲಿರುವ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಮತ್ತು ಪ್ರೇರಣಾ, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಫೋಟೋ

in ಸಿನಿಮಾ 2,558 views

ಸ್ಯಾಂಡಲ್ ವುಡ್ ನ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಸದ್ಯ ಪತ್ನಿ ಪ್ರೇರಣಾ ಜೊತೆ ಜಾಲಿ ಟ್ರಿಪ್ ಎಂಜಾಯ್ ಮಾಡುತ್ತಿದ್ದಾರೆ. ಇತ್ತೀಚಿಗಷ್ಟೆ ಧ್ರುವ ಪೊಗರು ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಸಿನಿಮಾ ರಿಲೀಸ್ ಆಗಿ ಯಶಸ್ಸು ಕಾಣುತ್ತಿದ್ದಂತೆ ಬಿಡುವು ಮಾಡಿಕೊಂಡು ಪತ್ನಿ ಜೊತೆ ಪ್ರವಾಸಕ್ಕೆ ತೆರಳಿದ್ದಾರೆ. ಇನ್ನು ಗೋವಾದ ಸುಂದರ ಸಂಜೆಯಲ್ಲಿ ಪತ್ನಿ ಜೊತೆ ರೊಮ್ಯಾಂಟಿಕ್ ಮೂಡ್ ನಲ್ಲಿರುವ ಧ್ರುವ ಸರ್ಜಾ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದೀಗ ಅಭಿಮಾನಿಗಳಿಂದ ಕಾಮೆಂಟ್ಸ್ ಗಳು ಬರುತ್ತಿದೆ.ಆದರೆ ಇತ್ತೀಚಿಗೆ ಸಿನಿ ಸೆಲೆಬ್ರಿಟಿಗಳು ಮಾಲ್ಡೀವ್ಸ್ ಕಡೆ ಪಯಣ ಬೆಳೆಸುತ್ತಿದ್ದಾರೆ. ಮಾಲ್ಡೀವ್ಸ್ ಸಿನಿಮಾ ತಾರೆಯರ ಸ್ವರ್ಗ ಎಂದೇ ಪ್ರಸಿದ್ಧಿಯಾಗಿದೆ. ಆದರೆ ಧ್ರುವ ಸರ್ಜಾ ಮತ್ತು ಪತ್ನಿ ಪ್ರೇರಣಾ ಜಾಲಿ ಟ್ರಿಪ್ ಗೆ ಆಯ್ಕೆಮಾಡಿಕೊಂಡ ಸ್ಥಳ ಗೋವಾ. ಸುಮಾರು ನಾಲ್ಕು ವರ್ಷಗಳಿಂದ ಪೊಗರು ಸಿನಿಮಾದಲ್ಲಿ ಬ್ಯುಸಿಯಾಗಿದ್ದ ಧ್ರುವ ಸದ್ಯ ಸ್ವಲ್ಪ ವಿರಾಮ ಪಡೆದು ಪತ್ನಿ ಜೊತೆ ಪ್ರವಾಸ ಎಂಜಾಯ್ ಮಾಡುತ್ತಿರುವ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

Advertisement

Advertisement

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಕನ್ನಡ ಚಿತ್ರರಂಗದಲ್ಲಿ ಬಹುಬೇಡಿಕೆಯ ನಟ.ಚಿಕ್ಕಪ್ಪ ಅರ್ಜುನ್ ಸರ್ಜಾ ಸಲಹೆಯಂತೆ ನಟನೆ ತರಬೇತಿ ಪಡೆದ ಧ್ರುವ, ನಿರ್ದೇಶಕ A.P ಅರ್ಜುನ್ ಅವರ ‘ಅದ್ಧೂರಿ’ ಚಿತ್ರಕ್ಕಾಗಿ ನಡೆಸಿದ ಆಡಿಷನ್ ನಲ್ಲಿ ಆಯ್ಕೆಯಾದರು. 2012 ರಲ್ಲಿ ತೆರೆಕಂಡ ‘ಅದ್ಧೂರಿ’ ಚಿತ್ರದಲ್ಲಿ ನಟಿಸುವ ಮೂಲಕ ಬೆಳ್ಳಿತೆರೆಗೆ ಪ್ರವೇಶ ಮಾಡಿದರು.
ನಂತರ 2013 ರಲ್ಲಿ ಬಿಡುಗಡೆಗೊಂಡ ‘ಬಹುದ್ಧೂರ್’ ಚಿತ್ರದಲ್ಲಿ ರಾಧಿಕಾ ಪಂಡಿತ್ ಜೊತೆಯಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡು ಯಶಸ್ಸು ಕಂಡರು.

Advertisement

2017ರಲ್ಲಿ ತೆರೆಗೆ ಬಂದ ‘ಭರ್ಜರಿ’ ಚಿತ್ರ ಕೂಡ ಶತದಿನ ಪೂರೈಸಿತು. ಧ್ರುವ ಸರ್ಜಾ ನಟಿಸಿದ ಮೊದಲ ಮೂರು ಚಿತ್ರಗಳು ಮೆಗಾಹಿಟ್ ಆಗಿದ್ದು ಅಭಿಮಾನಿಗಳ ಮನಸ್ಸನ್ನು ಗೆದ್ದಿದ್ದಾರೆ.ಕನ್ನಡ ಸಿನಿಮಾಗಳಲ್ಲಿ ನಟಿಸುವುದರ ಮೂಲಕ ಅನೇಕ ಅಭಿಮಾನಿಗಳನ್ನು ಸಂಪಾದಿಸಿಕೊಂಡ ಧ್ರುವ ಸರ್ಜಾ ಅಭಿನಯದ ಪೊಗರು ಸಿನಿಮಾ ಬಿಡುಗಡೆಯಾಗಿದೆ. ಇದರ ವಿವಾದವನ್ನು ಎಳೆದು ಕೊಂಡ ಚಿತ್ರತಂಡ, ಎಲ್ಲಾ ವಿವಾದಗಳಿಗೂ ತೆರೆ ಎಳೆದಿದೆ.

Advertisement

ಪೊಗರು ಸಿನಿಮಾ ಯಶಸ್ಸು ಕಾಣುತ್ತಿದ್ದಂತೆ ಬಿಡುವು ಮಾಡಿಕೊಂಡು ಧ್ರುವ ಸರ್ಜಾ ಮತ್ತು ಪತಿ ಪ್ರೇರಣಾ ಪ್ರವಾಸದಲ್ಲಿ ಎಂಜಾಯ್ ಮಾಡುತ್ತಿದ್ದಾರೆ. ಅಂದಹಾಗೆ, ಪತ್ನಿ ಪ್ರೇರಣಾ ಮಡಿಲಲ್ಲಿ ಧ್ರುವ ತಲೆ ಇಟ್ಟು ಮಲಗಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಸುಂದರ ಫೋಟೋವನ್ನು ಪ್ರೇರಣಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ..ಧ್ರುವ ಸರ್ಜಾ ದಂಪತಿಯ ಈ ಫೋಟೋಗೆ ಅಭಿಮಾನಿಗಳಿಂದ ಸಿಕ್ಕಾಪಟ್ಟೆ ಲೈಕ್ಸ್ ಮತ್ತು ಕಾಮೆಂಟ್ಸ್ ಹರಿದುಬರುತ್ತಿದೆ.

ಧ್ರುವ ಸರ್ಜಾ ದಂಪತಿ ಜೊತೆ ಧ್ರುವ ಗೆಳೆಯ ಅಲ್ಲು ರಘು ಕೂಡ ಗೋವಾ ಪ್ರವಾಸ ಕೈಗೊಂಡಿದ್ದಾರೆ.ಪೊಗರು ಧ್ರುವ ಸರ್ಜಾ ಅಭಿನಯದ 4ನೇ ಸಿನಿಮಾವಾಗಿದೆ. ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ನೀಡಿರುವ ಧ್ರುವ ಪೊಗರು ಬಳಿಕ ದುಬಾರಿ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಸಿನಿಮಾದ ಸ್ಕ್ರಿಪ್ಟ್ ಪೂಜೆಯಾಗಿದ್ದು, ಸದ್ಯದಲ್ಲೇ ಚಿತ್ರೀಕರಣ ಪ್ರಾರಂಭ ಮಾಡಲಿದ್ದಾರೆ. ಇನ್ನು ಈ ಸಿನಿಮಾ ಯಾವುದು ಕಥೆ ಹೇಗಿರಲಿದೆ ಎಂಬುದನ್ನು ಮುಂಬರುವ ದಿನಗಳಲ್ಲಿ ಕಾದು ನೋಡಬೇಕು ಅಷ್ಟೇ

Advertisement