ತಮ್ಮ ಮಗನಿಗೆ ನಟ ಪ್ರಕಾಶ್ ರಾಜ್ ಹೇಳಿಕೊಡುತ್ತಿರುವುದೇನು ಗೊತ್ತಾ ?

in ಮನರಂಜನೆ 27 views

55 ವರ್ಷದ ಪ್ರಕಾಶ್ ರಾಜ್, ಅವರ ಮಾನವೀಯ ಕೆಲಸ, ರಾಜಕೀಯ ಜೀವನದ ಹೊರತಾಗಿ ಯಾವಾಗಲೂ ತಮ್ಮ ಕೈಯ್ಯಲ್ಲಿ ಅನೇಕ ದೊಡ್ಡ ದೊಡ್ಡ ಚಲನಚಿತ್ರಗಳನ್ನು ಹೊಂದಿರುವ ಕಾರ್ಯನಿರತ ವ್ಯಕ್ತಿ. ಸದ್ಯ ಈ ಲಾಕ್ ಡೌನ್ ಸಮಯದಲ್ಲಿ ಪ್ರಕಾಶ್ ರಾಜ್ ತಮ್ಮ ಹೆಂಡತಿ ಮತ್ತು ಮಗನೊಂದಿಗೆ ಸ್ವಲ್ಪ ಗುಣಮಟ್ಟದ ಸಮಯವನ್ನು ಕಳೆಯಲು ಬಯಸುತ್ತಿದ್ದು, ಒಂದು ರೀತಿಯಲ್ಲಿ ಲಾಕ್ ಡೌನ್ ಅವರಿಗೆ ಕುಟುಂಬದವರ ಜೊತೆ ಕಾಲಕಳೆಯಲು ಅವಕಾಶ ಮಾಡಿಕೊಟ್ಟಂತಾಗಿದೆ. ಬಹುಶಃ ಇಲ್ಲಿರುವ ಫೋಟೋಗಳನ್ನು ನೋಡಿದರೆ ನಿಮಗೆ ಹಾಗನಿಸಿದೆ ಇರದು.

Advertisement

 

Advertisement


ಇಲ್ಲಿರುವ ಫೋಟೋಗಳನ್ನು ನೋಡಿದರೆ ಪ್ರಕಾಶ್ ಅವರು ತಮ್ಮ ತೋಟದ ಮನೆಯಲ್ಲಿ ಪ್ರಶಾಂತ ವಾತವರಣದಲ್ಲಿ ಶಾಂತಿಯುತ ಜೀವನವನ್ನು ಕಳೆಯುತ್ತಿರುವುದು ಗೊತ್ತಾಗುತ್ತದೆ. ವಾಸ್ತವವಾಗಿ ಈ ಎಲ್ಲಾ ಫೋಟೋಗಳು ನ್ಯಾಚುರಲ್ ಆಗಿವೆ. ಫೋಟೋಗಳಲ್ಲಿ ಪ್ರಕಾಶ್ ಅವರ 5 ವರ್ಷದ ಮಗ ವೇದಾಂತ್ ತಮ್ಮ ತಂದೆಯ ಜೊತೆ ತಾಲೀಮುಗಳಲ್ಲಿ ಭಾಗಿಯಾಗಿರುವುದನ್ನೂ ನೀವು ನೋಡಬಹುದು. ಅಷ್ಟೇ ಅಲ್ಲ, ಚಹಾ ಸಮಯದಲ್ಲಿ ಎಂಜಾಯ್ ಮಾಡುತ್ತಿರುವುದನ್ನು ನೋಡಬಹುದು.
ಸುಂದರವಾದ ತೋಟಗಳ ಮಧ್ಯೆ ಟ್ರಾಕ್ಟರ್ ಸವಾರಿಯ ಆನಂದ ಅನುಭವಿಸುತ್ತಿರುವ ವೇದಾಂತ್ ಜಮೀನಿನಲ್ಲಿ ಹೇಗೆ ಬದುಕಬೇಕು ಎಂದು ಕಲಿಯುತ್ತಿದ್ದಾನೆ. ಬಹಳ ದಿನಗಳ ಹಿಂದೆಯೇ ಪ್ರಕಾಶ್ ರಾಜ್ ತಮ್ಮ ಮಗನ ಫೋಟೋವನ್ನು ಮಾವಿನಹಣ್ಣಿನೊಂದಿಗೆ ಪೋಸ್ಟ್ ಮಾಡಿ ‘ಅವನ ಮಾವಿನ ಮಾರಾಟಗಾರ’ ಎಂಬ ಶೀರ್ಷಿಕೆಯನ್ನು ನೀಡಿದ್ದರು. ಇಲ್ಲಿ ಹೇಳಲೇಬೇಕಾದ ವಿಷಯವೆಂದರೆ ಪ್ರಕಾಶ್, ತಮ್ಮ ಮಗನಿಗೆ ಮೂಲ ಕೃಷಿಯ ಅನುಭವ ತೋರಿಸುವ ಮೂಲಕ ಬೆಳೆಸುತ್ತಿದ್ದಾರೆ.

Advertisement

 

Advertisement


ಅಂದಹಾಗೆ ಪ್ರಕಾಶ್ ರಾಜ್ ಅವರು ತಮ್ಮ ಜನ್ಮದಿನವನ್ನು ತಮ್ಮ ತೋಟದ ಮನೆಯಲ್ಲಿ ಸರಳವಾಗಿ ಆಚರಿಸಿದರು. ಅವರ ಪತ್ನಿ ಪೋನಿ ವರ್ಮಾ ಸಹ ಈ ಲಾಕ್ ಡೌನ್ ಸಮಯದಲ್ಲಿ ರುಚಿಕರವಾದ ಆಹಾರವನ್ನು ಬೇಯಿಸುವುದು, ತನ್ನ ಪ್ರೀತಿಪಾತ್ರರ ಜೊತೆ ಚಿತ್ರಗಳನ್ನು ತೆಗೆಯುತ್ತಿರುವುದು ಕಂಡುಬರುತ್ತದೆ. ಆಗಾಗ್ಗೆ ತಮ್ಮ ಕೆಲಸದಲ್ಲಿ ಹೆಚ್ಚು ನಿರತರಾಗಿರುವ ಪ್ರಕಾಶ್ ರಾಜ್, ಈಗ ಸಾಧ್ಯವಾದಷ್ಟು ತಮ್ಮ ಕುಟುಂಬದೊಂದಿಗೆ ಸಮಯವನ್ನು ಕಳೆಯುವ ಮಾರ್ಗಗಳನ್ನು ಕಂಡುಕೊಳ್ಳುತ್ತಿದ್ದಾರೆ. ಇಲ್ಲಿರುವ ಫೋಟೋಗಳನ್ನು ನೋಡಿದರೆ ಪ್ರಕಾಶ್ ರಾಜ್ ಅವರು ಇಡೀ ದಿನ ಆನಂದದಾಯಕ ಕೆಲಸಗಳೊಂದಿಗೆ ಉತ್ತಮ ಸಮಯವನ್ನು ಕಳೆಯುತ್ತಿರುವಂತೆ ಕಾಣುತ್ತದೆ.

 


ಈ ಹಿಂದೆ ಪ್ರಕಾಶ್ ರಾಜ್ ದೈನಂದಿನ ವೇತನವನ್ನು ಅವಲಂಬಿಸಿರುವ ತಮ್ಮ ಸಿಬ್ಬಂದಿ ವರ್ಗದವರಿಗೆ ಅರ್ಧದಷ್ಟು ಸಂಬಳವನ್ನು ಪಾವತಿಸಿದ್ದರು ಎಂಬ ಸುದ್ದಿ ಕೇಳಿಬಂದಿತ್ತು. ಲಾಕ್ಡೌನ್’ನ ಆರಂಭದಲ್ಲಿಯೇ, ತಮ್ಮ ಕಾರ್ಮಿಕರಿಗೆ ಮೇ ವರೆಗೆ ಸಂಬಳವನ್ನು ಪಾವತಿಸಿದ್ದೇನೆ ಎಂದು ಪ್ರಕಾಶ್ ರಾಜ್ ಹೇಳಿದ್ದರು.

Advertisement
Share this on...