ಲಾಕ್​​​​ಡೌನ್​​​ ವೇಳೆ ಚಿತ್ರೀಕರಣ….ಒಂದೇ ಕಿರುಚಿತ್ರದಲ್ಲಿ ಶಿವಣ್ಣ, ಚಿರಂಜೀವಿ, ರಜನೀಕಾಂತ್

in ಮನರಂಜನೆ 41 views

ಒಂದು ಸಿನಿಮಾದಲ್ಲಿ ಅಬ್ಬಬ್ಬಾ ಎಂದರೆ ಮೂವರು ಸ್ಟಾರ್​​​​​ಗಳು ನಟಿಸುವುದು ಸಹಜ. ಆದರೆ ಭಾರತೀಯ ಚಿತ್ರರಂಗದ ಖ್ಯಾತ ನಟರೆಲ್ಲಾ ಒಂದೇ ಸಿನಿಮಾದಲ್ಲಿ ನಟಿಸಿದರೆ ಹೇಗೆ..? ಅದು ಹೇಗೆ ಸಾಧ್ಯ ಎಂದು ಯೋಚಿಸುತ್ತಿದ್ದೀರ..? ಖಂಡಿತ ಸಾಧ್ಯ.

Advertisement

ಸೆಂಚುರಿ ಸ್ಟಾರ್ ಶಿವರಾಜ್​ಕುಮಾರ್, ಬಿಗ್ ಬಿ ಅಮಿತಾಬ್ ಬಚ್ಚನ್, ಪ್ರಿಯಾಂಕ ಚೋಪ್ರಾ, ಆಲಿಯಾ ಭಟ್, ರಣಬೀರ್ ಕಪೂರ್​​​, ಮೆಗಾಸ್ಟಾರ್ ಚಿರಂಜೀವಿ, ಮಾಲಿವುಡ್​​​ನ ಮುಮ್ಮುಟಿ ಹಾಗೂ ಮೋಹನ್ ಲಾಲ್, ಕಾಲಿವುಡ್​​ನ ರಜನೀಕಾಂತ್ ಇವರೆಲ್ಲರೂ ಒಂದೇ ಚಿತ್ರದಲ್ಲಿ ನಟಿಸಿದ್ದಾರೆ. ಆದರೆ ಇದು ಚಲನಚಿತ್ರ ಅಲ್ಲ ಕಿರುಚಿತ್ರ. ‘ಫ್ಯಾಮಿಲಿ’ ಹೆಸರಿನ ಈ ಕಿರುಚಿತ್ರ ಈಗಾಗಲೇ ಬಿಡುಗಡೆಯಾಗಿದ್ದು ಸಖತ್ ವೈರಲ್ ಆಗುತ್ತಿದೆ. ಜನರು ಈ ಕಿರುಚಿತ್ರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಕಿರುಚಿತ್ರದ ಶೂಟಿಂಗ್ ನಡೆದಿರುವುದು ಕೂಡಾ ಲಾಕ್ ಡೌನ್​​ ವೇಳೆ.

Advertisement

 

Advertisement

Advertisement

 

ಸಿನಿಮಾ ಚಿತ್ರೀಕರಣವೆಲ್ಲಾ ನಿಂತಿರುವ ಈ ಸಮುಯದಲ್ಲಿ ಇದು ಹೇಗೆ ಸಾಧ್ಯ ಎಂದು ಎಲ್ಲರಿಗೂ ಅನುಮಾನ ಮೂಡುವುದು ಸಹಜ. ಆದರೆ ಇಲ್ಲಿ ನಟಿಸಿರುವ ಯಾವ ನಟ-ನಟಿ ಕೂಡಾ ಮನೆಯಿಂದ ಹೊರಗೆ ಬಂದಿಲ್ಲ. ಎಲ್ಲರೂ ತಮ್ಮ ತಮ್ಮ ಮನೆಯಲ್ಲಿ ಇದ್ದುಕೊಂಡೇ ಈ ಕಿರುಚಿತ್ರದಲ್ಲಿ ಭಾಗಿಯಾಗಿದ್ಧಾರೆ. ಈ ಎಲ್ಲಾ ಕ್ರೆಡಿಟ್ ನಿರ್ದೇಶಕ ಪ್ರಸೂನ್ ಪಾಂಡೆಗೆ ಸಲ್ಲಬೇಕು. ಈ ಚಿತ್ರಕ್ಕೆ ಕಥೆ ಬರೆದಿರುವುದು ಕೂಡಾ ಪ್ರಸೂನ್ ಪಾಂಡೆ.

 

 

ಕೊರೊನಾ ಸಮಯದಲ್ಲಿ ಲಾಕ್​ ಡೌನ್ ಇದ್ದರೂ ಮನೆಯಿಂದ ಹೊರಬಂದು ಬೇಕಾಬಿಟ್ಟಿ ತಿರುಗುವ ಜನರಿಗೆ ತಿಳಿ ಹೇಳುವ ಉದ್ದೇಶದಿಂದ ಈ ಕಿರುಚಿತ್ರವನ್ನು ತಯಾರಿಸಲಾಗಿದೆ. ಕಿರುಚಿತ್ರದ ಕೊನೆಯಲ್ಲಿ ಅಮಿತಾಬ್ ಬಚ್ಚನ್ ಜನರನ್ನು ಕುರಿತು ಎಲ್ಲರೂ ಮನೆಯಲ್ಲಿ ಇರಿ, ಯಾರೂ ಮನೆಯಿಂದ ಹೊರ ಬರಬೇಡಿ ಎಂಬ ಸಂದೇಶ ನೀಡಿದ್ದಾರೆ. ಇದರೊಂದಿಗೆ ನಿರ್ಗತಿಕರಿಗೆ ಸಹಾಯ ಮಾಡಲು ಈ ಕಿರುಚಿತ್ರ ತಂಡ ನಿರ್ಧರಿಸಿದೆ.

Advertisement
Share this on...