ಡಾಕ್ಟರ್ ಹೃದಯ ಕದ್ದ ಸ್ಯಾಂಡಲ್​​​ವುಡ್​ ನಟಿ…ಶೀಘ್ರದಲ್ಲೇ ಹಸೆಮಣೆ ಏರುತ್ತಿರುವ ಮಮತಾ ರಾಹುತ್​​​​​​​​​​​​

in ಮನರಂಜನೆ 128 views

ಕನ್ನಡ ಚಿತ್ರರಂಗದಲ್ಲಿ ಸಿಕ್ಸ್​​ ಪ್ಯಾಕ್ ಹುಡುಗಿ ಎಂದೇ ಹೆಸರಾದ ನಟಿ ಮಮತಾ ರಾಹುತ್​​​ ಮದುವೆ ನಿಶ್ಚಯವಾಗಿದ್ದು ಶೀಘ್ರದಲ್ಲೇ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಕೆಲವು ದಿನಗಳ ಹಿಂದಷ್ಟೇ ಮಮತಾ ನಿಶ್ಚಿತಾರ್ಥ ನೆರವೇರಿದೆ. ಮಮತಾ ರಾಹುತ್​​​​​​​​ ಮದುವೆಯಾಗುತ್ತಿದ್ದಾರೆ ಎಂಬ ವಿಚಾರ ತಿಳಿದು ಅಭಿಮಾನಿಗಳು ಸಂತೋಷ ವ್ಯಕ್ತಪಡಿಸಿದ್ದಾರೆ. ಮಮತಾ ತಾವು ಮದುವೆ ಆಗುತ್ತಿರುವ ಹುಡುಗನನ್ನು ಯುಗಾದಿ ಹಬ್ಬದಂದು ಸೋಷಿಯಲ್ ಮೀಡಿಯಾ ಮೂಲಕ ಪರಿಚಯಿಸಿದ್ದರು. ಸುರೇಶ್ ಕೋಟ್ಯನ್ ಎಂಬುವವರನ್ನು ಮಮತಾ ಕೈ ಹಿಡಿಯುತ್ತಿದ್ದಾರೆ. ಈ ವಿಚಾರ ತಿಳಿಯುತ್ತಿದ್ದಂತೆ ಸೋಷಿಯಲ್ ಮೀಡಿಯಾದಲ್ಲಿ ಎಲ್ಲರೂ ಶುಭ ಕೋರುವ ಮೂಲಕ ಮಮತಾಗೆ ಹಾರೈಸಿದ್ದರು. ಮೇ 11 ರಂದು ಮಮತಾ ರಾಹುತ್​​​​ ಹಾಗೂ ಸುರೇಶ್ ಕೋಟ್ಯನ್ ಬೆಂಗಳೂರಿನಲ್ಲಿ ಸಪ್ತಪದಿ ತುಳಿಯಲಿದ್ದಾರೆ.

Advertisement

Advertisement

ಮಮತಾ ರಾಹುತ್​​​​ ಅವರನ್ನು ಮದುವೆಯಾಗುತ್ತಿರುವ ಸುರೇಶ್ ಕೋಟ್ಯನ್​ ಮಂಗಳೂರು ಮೂಲದವರು. ವಿದೇಶದಲ್ಲಿ ಪಿಹೆಚ್​​​ಡಿ ಮಾಡಿರುವ ಸುರೇಶ್ ಕೋಟ್ಯನ್ ಕರ್ನಾಟಕ ಆರೋಗ್ಯ ಇಲಾಖೆಯಲ್ಲಿ ಸೈಕಾಲಜಿಸ್ಟ್​ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಸಿನಿಮಾ ಬಗ್ಗೆಯೂ ಅವರಿಗೆ ಒಲವಿದ್ದು ಚಿತ್ರ ನಿರ್ಮಾಣ ಸಂಸ್ಥೆಯನ್ನು ಹೊಂದಿದ್ದಾರೆ ಎನ್ನಲಾಗಿದೆ. ಆ ಕಾರಣದಿಂದಲೇ ನಾನು ಮದುವೆಯಾದ ನಂತರ ಕೂಡಾ ಚಿತ್ರರಂಗದಲ್ಲಿ ಮುಂದುವರೆಯಲು ಸುರೇಶ್ ಅವರ ಸಂಪೂರ್ಣ ಬೆಂಬಲ ಇದೆ ಎನ್ನುತ್ತಾರೆ ಮಮತಾ ರಾಹುತ್.

Advertisement

Advertisement

ನಿರೂಪಕಿಯಾಗಿ ಬಣ್ಣದ ಬದುಕು ಆರಂಭಿಸಿದ ಮಮತಾ ನಂತರ ಚಿತ್ರರಂಗಕ್ಕೆ ಬಂದರು. ಆರಂಭದ ದಿನಗಳಲ್ಲಿ ಮಮತಾ ರಾಹುತ್ ಪುಟ್ಟ ಪಾತ್ರಗಳಲ್ಲಿ ನಟಿಸುತ್ತಿದ್ದರು. ನಂತರ ಅವರು ‘ಗೂಳಿಹಟ್ಟಿ’ ಚಿತ್ರದ ಮೂಲಕ ನಾಯಕಿ ಪಟ್ಟಕ್ಕೆ ಏರಿದರು. ಕನ್ನಡ ಮಾತ್ರವಲ್ಲ ತೆಲುಗು ಹಾಗೂ ತಮಿಳು ಚಿತ್ರರಂಗದಲ್ಲಿ ಕೂಡಾ ಮಮತಾ ರಾಹುತ್ ನಾಯಕಿಯಾಗಿ ಗುರುತಿಸಿಕೊಂಡಿದ್ದಾರೆ. ಕನ್ನಡದಲ್ಲಿ ಗ್ಯಾಪಲ್ಲೊಂದ್ ಸಿನಿಮಾ, ಮನಸ್ಸು, ನಮ್ಮೂರ ಹೈಕ್ಳು, ರೂಪ, ಬಿಂದಾಸ್ ಗೂಗ್ಲಿ, ಅನಂತನ ಚೆಲ್ಲಾಟ, ಪುಣ್ಯಾತ್​​​​​ಗಿತ್ತೀರು, ಮಂಗಾಟ ಸೇರಿ ಅನೇಕ ಸಿನಿಮಾಗಳಲ್ಲಿ ಮಮತಾ ನಟಿಸಿದ್ದಾರೆ. ತೆಲುಗಿನಲ್ಲಿ ಕಾಲಿಂಗ್ ಬೆಲ್, ಮಾಯಾಭವನಂ, ಜಗನ್ನಾಯುಕುಡು, ಪಂಚಮುಖಿ ಸಿನಿಮಾಗಳಲ್ಲಿ ಮಮತಾ ಅಭಿನಯಿಸಿದ್ದಾರೆ. ಸದ್ಯಕ್ಕೆ ತೆಲುಗಿನ ಶಿವನಾಗಿಣಿ ಸಿನಿಮಾದಲ್ಲಿ ಮಮತಾ ರಾಹುತ್ ಬ್ಯುಸಿಯಾಗಿದ್ದಾರೆ.

ವರ್ಕೌಟ್​​​​​​ಗೆ ಹೆಚ್ಚು ಮಹತ್ವ ನೀಡುವ ಮಮತಾ ರಾಹುತ್​​​ ಸಿಕ್ಸ್ ಪ್ಯಾಕ್ ಗಳಿಸಿ ಹೆಸರಾಗಿದ್ದರು. ಕನ್ನಡ ಚಿತ್ರರಂಗದಲ್ಲಿ ಬಹುಶ: ಯಾವ ನಟಿ ಕೂಡಾ ಇಂತಹ ಪ್ರಯತ್ನಕ್ಕೆ ಕೈ ಹಾಕಿರಲಿಲ್ಲ. ಆಗ್ಗಾಗ್ಗೆ ಫೋಟೋಶೂಟ್ ಮಾಡಿಸಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ಯುವಕರ ಎದೆಗೆ ಕಿಚ್ಚು ಹಚ್ಚುವ ಮಮತಾ ಎಂಗೇಜ್ ಆಗಿದ್ದಾರೆ ಎಂದು ತಿಳಿದು ಕೆಲವರಿಗೆ ಹಾರ್ಟ್ ಬ್ರೇಕ್​ ಆಗಿರುವುದೂ ಉಂಟು. ಒಟ್ಟಿನಲ್ಲಿ​​​ ಅವರ ಭವಿಷ್ಯ ಸುಂದರವಾಗಿರಲಿ ಎಂದು ಹಾರೈಸೋಣ.
-ರಕ್ಷಿತ ಕೆ.ಆರ್​​.ಎಸ್

Advertisement
Share this on...