ಆರ್ ಎಸ್ ಎಸ್ ಮೂಲಕ ‘ಅಮೂಲ್ಯ’ ನೆರವು…!

in ಕನ್ನಡ ಮಾಹಿತಿ 194 views

ಚೆಲುವಿನ ಚಿತ್ತಾರ ಬೆಡಗಿ ನಟಿ ಅಮೂಲ್ಯ ದಂಪತಿ ಹಲವು ನಟ-ನಟಿಯರು ಹಾಗೂ ಗಣ್ಯರಂತೆ ಸಾಮಾಜಿಕ ಹೊಣೆಗಾರಿಕೆ ತೊರಿದ್ದು ಸಹಾಯಹಸ್ತ ಚಾಚುವ ಮೂಲಕ ಇತರ ನಟ-ನಟಿಯರಿಗೆ ಮಾದರಿಯಾಗಿದ್ದಾರೆ.

Advertisement

 

Advertisement

Advertisement

 

Advertisement

ಸ್ಯಾಂಡಲ್ ವುಡ್ ಚೆಲುವೆ ನಟಿ ಅಮೂಲ್ಯ ರವರು ಸಾಮಾಜಿಕ ಹೊಣೆಗಾರಿಕೆಯನ್ನ ತೋರಿದ್ದು ಹಲವರಿಗೆ ಈಗಾಗಲೇ ನೆರವು ನೀಡುತ್ತಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮೂಲಕ ನೆರವನ್ನ ನೀಡಿದ್ದಾರೆ. ಬಡವರಿಗೆ,ನಿರ್ಗತಿಕರಿಗೆ,ಅಸಹಾಯಕರಿಗೆ ಆರ್ ಎಸ್ ಎಸ್ ಈಗಾಗಲೇ ಸಹಾಯಹಸ್ತ ಚಾಚಿದೆ. ಇದೀಗ ನಟಿ ಅಮೂಲ್ಯ ಸಂಘದ ಮೂಲಕ ಸಹಾಯ ಮಾಡಿದ್ದಾರೆ.
ಕೊರೊನಾ ತುರ್ತುಪರಿಸ್ಥಿತಿ ಹಿನ್ನಲೆ ಕೆಲಸವಿಲ್ಲದಂತೆ ಆಗಿದ್ದು ಹಲವು ಬಡವರು ಊಟವಿಲ್ಲದೆ ಕಷ್ಟ ಪಡುವಂತಾಗಿದೆ. ಅಂತಹ ಅಸಹಾಯಕರಿಗೆ ಹಲವು ದಿನಗಳಿಂದ ನಟ-ನಟಿಯರು, ಧನಿಕರು ಸಹಾಯ ಹಸ್ತ ಚಾಚುತ್ತಿದ್ದಾರೆ. ಕೆಲವರು ನೇರವಾಗಿ ಸಹಾಯ ಮಾಡಿದರೆ ಇನ್ನೂ ಕೆಲವರು ಸಂಘ-ಸಂಸ್ಥೆಗಳು, ಸಿ.ಎಂ ಪರಿಹಾರ ನಿಧಿ, ಪಿ.ಎಂ ಕೇರ್ಸ್ ಫಂಡ್ ಗಳ ಮೂಲಕ ಧನ ಸಹಾಯ ಮಾಡುತ್ತಿದ್ದಾರೆ. ಇನ್ನೂ ಕೆಲವರು ಕಾರ್ಮಿಕ ಖಾತೆಗೆ ನೇರವಾಗಿ ಹಣ ಹಾಕುತ್ತಿದ್ದಾರೆ. ಇದರ ಮಧ್ಯೆ ಅಲ್ಲಲ್ಲಿ ಆಹಾರ ಧಾನ್ಯ ವಿತ್ತರಿಸುವ ಕಾರ್ಯ ಸಹ ನಡೆದಿದೆ.

 

ಇದೀಗ ನಟಿ ಅಮೂಲ್ಯ-ಜಗದೀಶ್ ದಂಪತಿ ಆರ್ ಎಸ್ ಎಸ್ ಗೆ ಸುಮಾರು 1 ಟನ್ ಅಕ್ಕಿಯನ್ನ ನೀಡಿದ್ದು ಈ ಮೂಲಕ ಬಡವರ ಹೊಟ್ಟೆ ತುಂಬಿಸಲು ಮುಂದಾಗಿದ್ದಾರೆ. ಆರ್ ಎಸ್ ಎಸ್ ನ ಅಭ್ಯುದಯ ಉಚಿತ ಕಲಿಕಾ ಕೇಂದ್ರಕ್ಕೆ ತೆರಳಿ ಅಕ್ಕಿ ಹಾಗೂ ಮಾಸ್ಕ್ ಗಳನ್ನ ನೀಡಿದ್ದಾರೆ. ಅಲ್ಲದೆ ಅವರ ಪತಿ ಸಹ ಹಲವು ದಿನಗಳಿಂದ ಬೀದಿ ನಾಯಿಗಳಿಗೆ ಆಹಾರ ನೀಡುತ್ತಿದ್ದಾರೆ.
ಅಂದ ಹಾಗೆ ಇವರು ಸಹಾಯ ಮಾಡುತ್ತಿರುವುದು ಇದೇ ಮೊದಲಲ್ಲ ಹುಟ್ಟುಹಬ್ಬದಂತಹ ವಿಶೇಷ ಸಂದರ್ಭದಲ್ಲಿ ಅನಾಥಾಶ್ರಮದ ಮಕ್ಕಳಿಗೆ ಪುಸ್ತಕ, ಬ್ಯಾಗ್ ನೀಡಿ ಅವರೊಂದಿಗೆ ಕಾಲ ಕಳೆಯುತ್ತಾರೆ.

 

ಈ ಕುರಿತು ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಹಾಕಿರುವ ಅವರು ದೇಶದಲ್ಲಿ ಪ್ರವಾಹ, ಭೂಕಂಪದಂತಹ ಪ್ರಾಕೃತಿಕ ವಿಕೋಪಗಳಾದಾಗ ಮತ್ತು ಈಗಿನ ಕೋರೊನಾ ವಿಪತ್ತಿನ ಸಂದರ್ಭದಲ್ಲಿಯೂ ಯಾವುದೇ ಜಾತಿ, ಧರ್ಮ ಅಂತ ಭೇದ ಮಾಡದೆ ಪ್ರತಿಯೊಬ್ಬರು ಭಾರತೀಯರು ಅಂತ ಸಹಾಯ ಮಾಡುವ ಆರ್ ಎಸ್ ಎಸ್ ಸಂಘಟನೆಗೆ ನಮ್ಮ ಕಿರು ಸಹಾಯ ನೀಡಿದ ಕ್ಷಣ be good, do good ಅಂತ ಬರೆದುಕೊಂಡಿದ್ದಾರೆ.

 

 

ಬಾಲ ನಟಿಯಾಗಿ ಹಲವು ಸಿನಿಮಾಗಳಲ್ಲಿ ನಟಿಸಿದ್ರು ಅಮೂಲ್ಯರವರು ಹೆಚ್ಚು ಪ್ರಚಲಿತಕ್ಕೆ ಬಂದಿದ್ದು ಚೆಲುವಿನ ಚಿತ್ತಾರ ಸಿನಿಮಾ ಮೂಲಕ, ಅವರ ಐಶು ಪಾತ್ರ ಇನ್ನೂ ಜನಪ್ರಿಯ. 2001ರಲ್ಲಿ ‘ಪರ್ವ’ ಸಿನಿಮಾದ ಮೂಲಕ ಬಣ್ಣ ಹಚ್ಚಿದ ಇವರು ಚಿಕ್ಕವಯಸ್ಸಿನಲ್ಲಿಯೇ ಹೀರೋಯಿನ್ ಸಹ ಆದರು. 2017ರಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ‘ಮುಗುಳುನಗೆ’ ಸಿನಿಮಾದ ನಂತರ ಅಮೂಲ್ಯ ಯಾವ ಸಿನಿಮಾದಲ್ಲೂ ನಟಿಸಿಲ್ಲ. ಜಗದೀಶ್ ಆರ್.ಚಂದ್ರ ಜೊತೆ ಮೂರು ವರ್ಷಗಳ ಹಿಂದೆ ಹಸೆಮಣೆ ಏರಿದ್ದಾರೆ. ಸಿನಿಮಾಗಳಲ್ಲಿ ಹೆಚ್ಚು ನಟಿಸುತ್ತಿಲ್ಲ ಆದರೆ ಸಾಮಾಜಿಕ ಕೆಲಸಗಳಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ.

– ಸುಷ್ಮಿತಾ

Advertisement
Share this on...