ನಟಿ ಮಂಜುಳಾ ಅವರ ಮಗ ತನ್ನ ತಾಯಿ ಬಗ್ಗೆ ಏನು ಹೇಳಿದ್ದಾರೆ ಗೊತ್ತಾ…?

in ಸಿನಿಮಾ 559 views

ಇವತ್ತಿಗೂ ಹಳ್ಳಿ ಹುಡುಗಿ ಪಾತ್ರ ನಮ್ಮ ಕಣ್ಣ ಮುಂದೆ ಬರುವುದೇ ನಟಿ ಮಂಜುಳಾರವರ ಮೂಲಕ. ಆ ಪಾತ್ರಕ್ಕೆ ಆಯ್ಕೆಯಾಗುವ ಹಿಂದೆ ಸ್ವಾರಸ್ಯಕರವಾದ ಘಟನೆ ನಟಿ ಮಂಜುಳಾರವರ ಜೀವನದಲ್ಲಿ ನಡೆದ್ದಿತು. ಅದು ಏನು ಗೊತ್ತಾ..?

Advertisement

 

Advertisement

Advertisement

 

Advertisement

ಡಾ.ರಾಜ್ ಕುಮಾರ್ ಅವರ ಬಂಗಾರದ ಪಂಜರ ಚಿತ್ರದ ತಯಾರಿ ಸಮಯದಲ್ಲಿ ಈ ಚಿತ್ರದ ನಿರ್ಮಾಪಕರಾದ ಕೆ.ಸಿ.ಎನ್ ಗೌಡ ರವರು ಹೀರೋಯಿನ್ ಗಾಗಿ ಹೊಸ ಪ್ರತಿಭೆಯನ್ನು ಹುಡುಕುತ್ತಿದ್ದರು.ಹಾಗೆ ಛಾಯಾಗ್ರಾಹಕರಾದ ಅಶ್ವಥ್ ರವರ ಜೊತೆ ಮಾತನಾಡಿ ಯಾರಾದರೂ ಹೊಸ ಪ್ರತಿಭೆ ಇದ್ದರೆ ಫೋಟೋ ಕೊಡಿ ಎಂದು ಕೇಳಿದ್ದರು. ಆಗಾಗಲೆ ಚಿಕ್ಕ ಪುಟ್ಟ ಪಾತ್ರ ಮಾಡಿದ್ದ ಮಂಜುಳಾರವರನ್ನು ನೋಡಿದ ಛಾಯಾಗ್ರಹಕ ಅಶ್ವಥ್ ರವರು ಮಂಜುಳಾರವರ ಕೆಲವು ಫೋಟೋಗಳನ್ನು ಸಂಗ್ರಹಿಸಿ ನಿರ್ಮಾಪಕ ಕೆ.ಸಿ.ಎನ್ ಗೌಡ ರವರ ಆಫಿಸ್ ಗೆ ಹೋದರು. ಆದರೆ ಅವರು ಬೇರೆಯವರ ಜೊತೆ ಮಾತನಾಡುತ್ತಾ ಬಿಜಿ಼ ಇದ್ದ ಕಾರಣ ಮಂಜುಳಾರವರ ಫೋಟೋಗಳನ್ನ ಟೇಬಲ್ ಮೇಲೆ ಇಟ್ಟು ಹೋದರು ಅಶ್ವಥ್ ರವರು.

 

 

ಆದರೆ ಫ್ಯಾನ್ ಜೋರಾಗಿ ಓಡುತ್ತಿದ್ದ ಕಾರಣ ಮಂಜುಳಾರವರ ಫೋಟೋಗಳು ಹಾರಿ ಡೆಸ್ಟ್ ಬೀನ್ ಗೆ ಬಿದ್ದವು. ಇದನ್ನು ಗಮನಿಸಿದ ನಿರ್ಮಾಪಕ ಕೆ.ಸಿ.ಎನ್ ಗೌಡರವರು ಇದೇನ್ ಸ್ವಾಮಿ ನಾನು ನೋಡುವ ಮುಂಚೆಯೇ ಆ ಫೋಟೋಗಳು ಡೆಸ್ಟ್ ಬಿನ್ ಗೆ ಬಿದ್ದಿದೆ ಎಂದು ಭಾವಿಸಿ ಮಂಜುಳಾರವರ ಫೋಟೋಗಳನ್ನು ನೋಡಲು ಇಷ್ಟಪಡುದೇ ಇದು ಒಳ್ಳೆಯ ಸೈನ್ ಅಲ್ಲ ಎಂದು ಭಾವಿಸಿ ನಂತರ ಆ ಪಾತ್ರಕ್ಕೆ ಆರತಿ ಅವರನ್ನು ಆಯ್ಕೆ ಮಾಡಿಕೊಂಡರು. ಆದರೆ ಅದೃಷ್ಟ ಹೇಗಿತ್ತು ನೋಡಿ..

 

 

ಅದೇ ವರ್ಷದಲ್ಲಿ ಡಾ. ರಾಜ್ ಕುಮಾರ್ ಅವರ ಜೊತೆ ‘ಸಂಪತ್ತಿಗೆ ಸವಾಲ್’ ಚಿತ್ರದಲ್ಲಿ ನಟಿಸುವ ಅವಕಾಶ ಮಂಜುಳಾರವರಿಗೆ ಸಿಕ್ಕಿತು. ಆ ಚಿತ್ರದ ಸಕ್ಸಸ್ ಬಗ್ಗೆ ನಾನು ಹೇಳಬೇಕಾಗಿಲ್ಲ. ಹೀಗೆ ಕನ್ನಡದ ಟಾಪ್ ನಟಿಯಾದರೂ ಮಂಜುಳಾರವರು.

 

 

ನಟಿ ಮಂಜುಳಾ ರವರ ಪ್ರೀತಿಯ ಮಗ ಅಭಿಷೇಕ್ ಮೀಡಿಯಾ ಜೊತೆ ತಮ್ಮ ತಾಯಿಯ ಬಗ್ಗೆ ಮಾತನಾಡಿದ ಇವರು ನಾನು ಮಂಜುಳಾರವರ ಮಗ ಎಂದು ಗೊತ್ತಾದರೆ ಜನ ತುಂಬಾ ಪ್ರೀತಿ ತೋರಿಸುತ್ತಾರೆ, ಅಭಿಮಾನದಿಂದ ಮಾತನಾಡಿಸುತ್ತಾರೆ ಎಂದು ಹೇಳಿದ್ದು ತಾಯಿಯನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ. ನಟಿ ಮಂಜುಳಾರವರು ಬದುಕಿದ್ದು ಕೇವಲ 32 ವರ್ಷ ಮಾತ್ರ. ಆದರೆ ಕನ್ನಡ ಚಿತ್ರರಂಗ ಇರುವವರೆಗೂ ಅವರು ಅಜರಾಮರರಾಗಿರುತ್ತಾರೆ. ಅವರ ನಟನೆ ಅದೆಷ್ಟೋ ನಟಿಯರಿಗೆ ದಾರಿದೀಪವಾಗಿದೆ.

– ಸುಷ್ಮಿತಾ

Advertisement
Share this on...