ನಟಿ, ನಿರೂಪಕಿಯಾಗಿ ಮೋಡಿ ಮಾಡಿದ ಈ ಚೆಲುವೆ ಇಂದು ನಿರ್ಮಾಪಕಿ! - Namma Kannada Suddi
chaitra

ನಟಿ, ನಿರೂಪಕಿಯಾಗಿ ಮೋಡಿ ಮಾಡಿದ ಈ ಚೆಲುವೆ ಇಂದು ನಿರ್ಮಾಪಕಿ!

in ಮನರಂಜನೆ/ಸಿನಿಮಾ 421 views

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಕಲರ್ಸ್ ಕನ್ನಡ ಸಿನಿಮಾ ಕಾರ್ಯಕ್ರಮದ ನಿರೂಪಕಿಯಾಗಿ ಮೋಡಿ ಮಾಡಿದ್ದ ಮುದ್ದು ಮುಖದ ಚೆಲುವೆ ಚೈತ್ರಾ ವಾಸುದೇವನ್ ಅವರು ಜನರಿಗೆ ಹತ್ತಿರವಾದುದು ದೊಡ್ಮನೆಗೆ ಕಾಲಿಟ್ಟ ಬಳಿಕವೇ! ಬಿಗ್ ಬಾಸ್ ಸೀಸನ್ 7 ರ ಸ್ಪರ್ಧಿಯಾಗಿ ಕಾಣಿಸಿಕೊಂಡ ಚೈತ್ರಾ ಬಿಗ್ ಬಾಸ್ ಮನೆಯಲ್ಲಿ ಇದ್ದಿದ್ದು ಕೇವಲ ಹದಿನಾಲ್ಕು ದಿನಗಳು ಮಾತ್ರ! ಆದರೂ ತಮ್ಮ ಮಾತು, ನಗು, ನಡವಳಿಕೆಯ ಮೂಲಕ ಸಹ ಸ್ಪರ್ಧಿಗಳ ಜೊತೆಗೆ ಕಿರುತೆರೆ ವೀಕ್ಷಕರನ್ನು ರಂಜಿಸಿದ ಬೆಡಗಿ ಚೈತ್ರಾ ಇದೀಗ ನಿರ್ಮಾಪಕಿ ಆಗಿ ಬಡ್ತಿ ಪಡೆದಿದ್ದಾರೆ. ಹೌದು, ಕಲರ್ಸ್ ಕನ್ನಡ ಸಿನಿಮಾ ವಾಹಿನಿಯಲ್ಲಿ ಪ್ರಸಾರವಾಗಲಿರುವ ಚಂದನವನದ ಗೊಂಬೆ ಎಂಬ ಟಾಕಿಂಗ್ ಕಾರ್ಯಕ್ರಮದ ನಿರೂಪಕಿಯಾಗಿ ಚೈತ್ರಾ ವಾಸುದೇವನ್ ಕಾಣಿಸಿಕೊಳ್ಳಲಿದ್ದಾರೆ‌. ನಾಡಹಬ್ಬ ದಸರಾದ ಸಲುವಾಗಿ ಚಂದನವನದ ಗೊಂಬೆ ಕಾರ್ಯಕ್ರಮ ಪ್ರಸಾರವಾಗಲಿದ್ದು ಅದರಲ್ಲಿ ಚಂದನವನದ ಚೆಲುವೆಯರು ಅತಿಥಿಗಳಾಗಿ ಮೋಡಿ ಮಾಡಲಿದ್ದಾರೆ. ಕಾಕತಾಳೀಯ ಎಂದರೆ ಬಿಗ್ ಬಾಸ್ ಶೋ ಆರಂಭವಾಗಿ ಸರಿಯಾದ ಒಂದು ವರ್ಷಕ್ಕೆ ಚೈತ್ರಾ ಅವರು ಹೊಸ ಯೋಜನೆಗೆ ಮುಂದಾಗಿದ್ದು, ಈ ಶೋವಿನಲ್ಲಿ ಆಕೆ ನಟಿ ಮಣಿಯರಿಗೆ ಕ್ರೇಜಿ ಪ್ರಶ್ನೆಗಳನ್ನು ಕೇಳಲಿದ್ದಾರೆ‌. ಇನ್ನು ಶೋವಿನಲ್ಲಿ ಶ್ರೀಲೀಲಾ, ಅದಿತಿ ಪ್ರಭುದೇವ, ಹರ್ಷಿಕಾ ಪೂಣಚ್ಚ, ರಾಧಿಕಾ ಚೇತನ್, ಪ್ರಿಯಾ ಮಣಿ, ಪ್ರಣೀತಾ ಸುಭಾಷ್, ಶ್ವೇತಾ ಶ್ರೀವಾತ್ಸವ್, ಮಾನ್ವಿತಾ ಹರೀಶ್, ನೇಹಾ ರಾಮಕೃಷ್ಣ ಹಾಗೂ ಸೋನು ಗೌಡ ಭಾಗವಹಿಸಲಿದ್ದಾರೆ.

Advertisement

Advertisement

ಅಂದ ಹಾಗೇ ಕಾಲೇಜು ದಿನಗಳಿಂದಲೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಒಂದು ಹೆಜ್ಜೆ ಮುಂದೆ ಇದ್ದ ಚೈತ್ರಾ ವಾಸುದೇವನ್ ನಿರೂಪಕಿಯಾಗಿ ಕಿರುತೆರೆಗೆ ಕಾಲಿಟ್ಟರು.ಉದಯ ಟಿವಿಯ ಮೂಲಕ ನಿರೂಪಕಿಯಾಗಿ ಮನ ಸೆಳೆದ ಈಕೆ ಈಗಾಗಲೇ ಅದೆಷ್ಟೋ ಲೈವ್ ಕಾರ್ಯಕ್ರಮಗಳನ್ನು ನೀಡಿದ್ದಾರೆ‌. ಉದಯ ವಾಹಿನಿಯಲ್ಲಿ ಈಕೆ ನಡೆಸಿಕೊಡುತ್ತಿದ್ದ ರೀಚಾರ್ಜ್ ಕಾರ್ಯಕ್ರಮ ಬಹಳ ಜನಪ್ರಿಯವಾಗಿತ್ತು.

Advertisement

ಮುದ್ದಾದ ಮಾತುಗಳಿಂದಲೇ ವೀಕ್ಷಕರ ಮನಸೆಳೆದ ಚೈತ್ರಾ ಕ್ರೀಡಾ ನಿರೂಪಕಿಯಾಗಿಯೂ ಗುರುತಿಸಿಕೊಂಡಿದ್ದಾರೆ. ಕೆಪಿಎಲ್ ಹಾಗೂ ಕೆಸಿಸಿ ಕ್ರಿಕೆಟ್ ಕಾರ್ಯಕ್ರಮಗಳ ನಿರೂಪಣೆ ಮಾಡಿರುವ ಚೈತ್ರಾ ಈವೆಂಟ್ ಫ್ಯಾಕ್ಟರಿ ಎಂಬ ಈವೆಂಟ್ ಕಂಪೆನಿಯ ಮಾಲಕಿ ಹೌದು. ತಮ್ಮ ಈವೆಂಟ್ ಕಂಪೆನಿಯ ಮೂಲಕ ಬರ್ತ್ ಡೇ ಡೆಕೋರೇಷನ್, ಬೇಬಿ ಶವರ್, ವೆಡ್ಡಿಂಗ್ ಡೆಕೋರೇಷನ್ ಮುಂತಾದ ಒಂದಷ್ಟು ಕಾರ್ಯಕ್ರಮಗಳನ್ನು ತನ್ನ ಈವೆಂಟ್ ಕಂಪೆನಿಯ ಮೂಲಕ ಆಯೋಜಿಸಿದ್ದಾರೆ.

Advertisement

ನಟಿ, ನಿರೂಪಕಿಯಾಗಿ ಬಣ್ಣದ ಲೋಕದಲ್ಲಿ ಕಮಾಲ್ ಮಾಡಿರುವ ಚೆಂದುಳ್ಳಿ ಚೆಲುವೆ ಚೈತ್ರಾ ವಾಸುದೇವನ್ ಇದೀಗ ನಿರ್ಮಾಪಕಿಯಾಗಿಯೂ ಕಾಣಿಸಿಕೊಳ್ಳುವುದು ನಿಜಕ್ಕೂ ಸಂತಸದ ಸಂಗತಿ. ಅಲ್ಲೂ ಕೂಡಾ ಆಕೆ ಯಶಸ್ಸನ್ನೇ ಸಾಧಿಸಲಿ ಎಂಬುದೇ ನಮ್ಮ ಹಾರೈಕೆ.
– ಅಹಲ್ಯಾ

Advertisement
Share this on...

Latest from ಮನರಂಜನೆ

ಕಡೆಗೂ ಔಟ್ ಆಯ್ತು ಬಿಗ್ ಬಾಸ್ ಸಿಸನ್ -9 ಸ್ಪರ್ಧಿಗಳ ಲಿಸ್ಟ್ ; ಯಾರ‍್ಯಾರು ದೊಡ್ಮನೆ ಸೇರಲಿದ್ದಾರೆ ಗೊತ್ತಾ?

ವಾಹಿನಿಗಳಿಗೆ ಟಿಆರ್‌ಪಿ ಮಾನದಂಡ ಆರಂಭವಾದ ದಿನದಿಂದ ಪೈಪೋಟಿಯೂ ಆರಂಭಗೊಂಡಿದೆ. ಹಾಗಾಗಿ ಒಂದು ವಾಹಿನಿಗಿಂತ ಇನ್ನೊಂದು ವಾಹಿನಿ…

ಡಾಕ್ಟರ್ ಹೃದಯ ಕದ್ದ ಸ್ಯಾಂಡಲ್​​​ವುಡ್​ ನಟಿ…ಶೀಘ್ರದಲ್ಲೇ ಹಸೆಮಣೆ ಏರುತ್ತಿರುವ ಮಮತಾ ರಾಹುತ್​​​​​​​​​​​​

ಕನ್ನಡ ಚಿತ್ರರಂಗದಲ್ಲಿ ಸಿಕ್ಸ್​​ ಪ್ಯಾಕ್ ಹುಡುಗಿ ಎಂದೇ ಹೆಸರಾದ ನಟಿ ಮಮತಾ ರಾಹುತ್​​​ ಮದುವೆ ನಿಶ್ಚಯವಾಗಿದ್ದು…

Go to Top