ಕನ್ನಡ ಚಿತ್ರರಂಗದಲ್ಲಿ ಮಿಂಚಿ ಈಗ ಆಫೀಸ್ ನಲ್ಲಿ ಕೆಲಸ ಮಾಡುತ್ತಿರುವ ನಟಿಯರು ಇವರೇ..?

in ಮನರಂಜನೆ/ಸಿನಿಮಾ 369 views

ಈ ಪ್ರಪಂಚದಲ್ಲಿ ಯಾವುದು ಶಾಶ್ವತ ಅಲ್ಲ. ನಮ್ಮ ಕೈಯಲ್ಲಿರುವುದು ನಾಳೆ ಬೇರೆಯವರ ಕೈ ಸೇರುತ್ತದೆ. ಹಾಗೆ ಒಂದು ಕಾಲದಲ್ಲಿ ಚಿತ್ರರಂಗದಲ್ಲಿ ಸ್ಟಾರ್ ನಟಿಯರಾಗಿ ಮಿಂಚಿ ನಂತರ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಜೀವನದ ಮತ್ತೊಂದು ಹಾದಿಯನ್ನು, ವೃತ್ತಿಯನ್ನು ಆಯ್ದುಕೊಂಡ ನಟಿಯರು ಯಾರು ಗೊತ್ತಾ..? ದಕ್ಷಿಣ ಭಾರತದ ನಾಲ್ಕು ಭಾಷೆಗಳಲ್ಲಿ ಮಿಂಚಿ ಕನ್ನಡದ ಧೃವತಾರೆ ಸೇರಿ ಹಲವಾರು ಕನ್ನಡ ಚಿತ್ರಗಳಲ್ಲಿ ನಟಿಸಿದ ನಟಿ ದೀಪ ಅವರು ಈಗ ಚಿತ್ರರಂಗವನ್ನು ತೊರೆದು ಕೇರಳದ ಒಂದು ಎನ್ ಜಿ ಓ ಮೂಲಕ ಹಿಂದುಳಿದ ಹಾಗೂ ಬುಡಕಟ್ಟು ಜನಾಂಗದ ಅಭಿವೃದ್ಧಿಗಾಗಿ ಕೆಲಸ ಮಾಡುತ್ತಿದ್ದಾರೆ. ಲಾಲಿ ಚಿತ್ರದ ಮೂಲಕ ಕನ್ನಡಿಗರ ಹೃದಯ ಗೆದ್ದ ನಟಿ ಮೋಹಿನಿ. ನಟಿ ಮೋಹಿನಿ ಅವರು ಮದುವೆಯಾದ ಮೇಲೆ ಅಮೆರಿಕಾದಲ್ಲಿ ನೆಲೆಸಿದ್ದರು. ಅಮೇರಿಕಾದಲ್ಲಿ ನೆಲೆಸಿದ ಇವರು ತುಂಬಾ ಆರೋಗ್ಯದ ಸಮಸ್ಯೆಗಳನ್ನು ಎದುರಿಸಿ ಕೊನೆಗೆ ಅದರಿಂದ ಗೆದ್ದು ಆಚೆ ಬಂದು ಈಗ ಅಮೆರಿಕಾದಲ್ಲಿನ ಒಂದು ಚರ್ಚ್ ಗೆ ಸಂಬಂಧಿಸಿದ ಆಫೀಸ್ ನಲ್ಲಿ ಕೌನ್ಸಿಲರ್ ಆಗಿ ಕೆಲಸ ಮಾಡುತ್ತಿದ್ದು ಮಾನಸಿಕ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ಕೌನ್ಸಿಲಿಂಗ್ ಮಾಡುವ ಕೆಲಸ ಮಾಡುತ್ತಿದ್ದಾರೆ.

Advertisement

Advertisement

ಕನ್ನಡದ ಕಿರುತೆರೆಯಲ್ಲಿ ಸ್ಟಾರ್ ನಟಿಯಾಗಿ ಮಿಂಚಿದವರು ನಟಿ ರಾಜೇಶ್ವರಿ. ಅದರಲ್ಲೂ ಸೆನ್ಸೇಷನ್ ಕ್ರಿಯೇಟ್ ಮಾಡಿದ ಅಗ್ನಿಸಾಕ್ಷಿ ಸೀರಿಯಲ್ ನಲ್ಲಿ ಚಂದ್ರಿಕಾ ಅನ್ನುವ ನೆಗೆಟಿವ್ ಪಾತ್ರ ಮಾಡಿ ಸೈ ಎನಿಸಿಕೊಂಡ ಇವರು ಕೊನೆಗೆ ಮದುವೆಯಾಗಿ ಆಸ್ಟ್ರೇಲಿಯಾದಲ್ಲಿ ನಲೆಸಿದರು. ಆಸ್ಟ್ರೇಲಿಯಾದಲ್ಲಿ ಒಂದು ಪ್ರೈವೇಟ್ ಕಂಪನಿಯಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದರು. ಈಗ ರಾಜೇಶ್ವರಿ ಅವರಿಗೆ ಮಗು ಹುಟ್ಟಿರುವುದರಿಂದ ಕೆಲಸಕ್ಕೆ ರಾಜೀನಾಮೆ ಕೊಟ್ಟಿದ್ದಾರೆ. ಕನ್ನಡದ ಪ್ರತಿಭಾನ್ವಿತ ನಟಿ ಪವಿತ್ರ ಲೋಕೇಶ್ ಪವಿತ್ರ.

Advertisement

ಪವಿತ್ರ ಲೋಕೇಶ್ ಅವರು ಪ್ರಾರಂಭದಲ್ಲಿ 6-7 ಚಿತ್ರಗಳಲ್ಲಿ ನಟಿಸಿದ್ದರೂ ದೊಡ್ಡ ಹಿಟ್ ಕಾಣದ ಕಾರಣ ಅವಕಾಶಗಳು ಕಡಿಮೆಯಾಗಿ ಜವಾಬ್ದಾರಿಗಳನ್ನು ನಿಭಾಯಿಸಲು ಪ್ರೈವೆಟ್ ಕಂಪನಿಯೊಂದರಲ್ಲಿ ಎಚ್ ಆರ್ ಅಸಿಸ್ಟೆಂಟ್ ಆಗಿ ಕೆಲಸಕ್ಕೆ ಸೇರಿಕೊಂಡು ಬಿ ಎಮ್ ಟಿ ಸಿ ಬಸ್ ನಲ್ಲಿ ಪ್ರಯಾಣಿಸಿ ಸುಮಾರು ಒಂದು ವರ್ಷ ಕಂಪನಿಯಲ್ಲಿ ಕೆಲಸ ಮಾಡಿದ್ದರು. ನಂತರ ಸಿನಿಮಾಗಳಲ್ಲಿ ಅವಕಾಶಗಳು ಸಿಕ್ಕ ಕಾರಣ ಈಗ ಚಿತ್ರರಂಗದಲ್ಲಿ ಬಿಜಿ಼ ನಟಿಯಾಗಿದ್ದಾರೆ.

Advertisement


ಒಂದು ಕಾಲದ ಕನ್ನಡ ಹಾಗೂ ದಕ್ಷಿಣ ಭಾರತದ ಟಾಪ್ ನಟಿಯಾಗಿದ್ದರು ನಟಿ ಮಾಧವಿ. ನಟಿ ಮಾಧವಿ ಅವರು ಮದುವೆಯಾದ ಮೇಲೆ ಅಮೇರಿಕಾದಲ್ಲಿ ನೆಲೆಸಿದ್ದಾರೆ. ನಟಿ ಮಾಧವಿ ಅವರು ಗಂಡನ ಫಾರ್ಮಸಿಟಿಕಲ್ ಕಂಪನಿಯಲ್ಲಿ ವೈಸ್ ಪ್ರೆಸಿಡೆಂಟ್ ಆಗಿ ಕೆಲಸ ಮಾಡುತ್ತಿದ್ದಾರೆ. ಶಾಸ್ತ್ರಿ ಸಿನಿಮಾ ಸೇರಿದಂತೆ ಹಲವಾರು ಕನ್ನಡದ ಹಿಟ್ ಚಿತ್ರಗಳಲ್ಲಿ ನಟಿಸಿದವರು ನಟಿ ಮಾನ್ಯ. ಮಾನ್ಯ ಅವರು ಚಿತ್ರರಂಗದಿಂದ ದೂರ ಆದ ಮೇಲೆ ಎಂಬಿಎ ಮಾಡಿ ಸಿನಿಮಾ ಹೊರತಾಗಿ ಹೊಸ ವೃತ್ತಿಯನ್ನು ಆಯ್ದುಕೊಂಡಿದ್ದು ಈಗ ಅಮೇರಿಕಾದಲ್ಲಿ ದೊಡ್ಡ ಕಂಪನಿಯಲ್ಲಿ ಬಿಜಿ಼ನೆಸ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದು ಸಂತೋಷದ ಜೀವನ ಕಂಡುಕೊಂಡಿದ್ದಾರೆ. ಒಂದು ಕಡೆ ಸಿನಿಮಾದಲ್ಲಿ ಮಿಂಚಿ ಸಿನಿಮಾನೇ ಜೀವನ ಅಲ್ಲ ಎಂದು ಬೇರೆ ವೃತ್ತಿಯಲ್ಲಿ ಯಶಸ್ಸು ಕಂಡಿರುವ ಈ ನಟಿಯರ ಆತ್ಮಸ್ಥೈರ್ಯ ಮೆಚ್ಚುವಂತಹದ್ದು.

– ಸುಷ್ಮಿತಾ

Advertisement
Share this on...