ಅಣ್ಣ ರಾಜ್ಯಕ್ಕೆ ಮುಖ್ಯಮಂತ್ರಿ… ತಂಗಿ ಟೀ ಮಾರಿ ಜೀವನ ನಡೆಸುತ್ತಿದ್ದಾರೆ..!

in ಕನ್ನಡ ಮಾಹಿತಿ/ಮನರಂಜನೆ 180 views

ಅಧಿಕಾರ ಸಿಕ್ಕರೆ ತನ್ನ ಮೊಮ್ಮಕ್ಕಳು ಸಹ ಕೂತು ತಿನ್ನುವಷ್ಟು ಹಣ ಗಳಿಸಲು ಹೆಚ್ಚು ರಾಜಕಾರಣಿಗಳು ನೋಡುತ್ತಾರೆ. ಆದರೆ ಅಧಿಕಾರ ಗಳಿಸುವುದು ಜನರ ಸೇವೆ ಮಾಡುವುದಕ್ಕೆ ಮಾತ್ರ ಎಂಬ ಆಲೋಚನೆಯಲ್ಲಿರುವ ನಾಯಕ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್. ಇವರ ನಿಜವಾದ ಹೆಸರು ಅಜಯ್ ಮೋಹನ್. ಚಿಕ್ಕವಯಸ್ಸಿನಲ್ಲಿ ಸಂಬಂಧಗಳನ್ನು ತ್ಯಜಿಸಿ ಸನ್ಯಾಸತ್ವ ಸ್ವೀಕರಿಸಿದರು ಇವರು. ಯೋಗಿ ಆದಿತ್ಯನಾಥ್ ರವರಿಗೆ ಮೂವರು ಸಹೋದರರು ಹಾಗೂ ಮೂವರು ಸಹೋದರಿಯರು. ಒಬ್ಬ ಸಹೋದರ ಚೀನಾ ಬಾರ್ಡರ್ ನಲ್ಲಿ ವೀರ ಸೈನಿಕನಾಗಿ ಕೆಲಸ ಮಾಡುತ್ತಿದ್ದಾರೆ. ಇನ್ನುಳಿದವರು ಚಿಕ್ಕ-ಪುಟ್ಟ ಕೆಲಸ ಮಾಡಿಕೊಂಡು ಸಾಮಾನ್ಯವಾದ ಜೀವನ ಸಾಗಿಸುತ್ತಿದ್ದಾರೆ. ಯೋಗಿ ಆದಿತ್ಯನಾಥ್ ಅವರ ಒಬ್ಬ ಸಹೋದರಿ ಉತ್ತರ ಪ್ರದೇಶದ ಕುಗ್ರಾಮದಲ್ಲಿ ಒಂದು ಚಿಕ್ಕ ಟೀ ಅಂಗಡಿ ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದಾರೆ.ಅವರ ಹೆಸರು ಶಶಿದೇವಿ.

Advertisement

Advertisement

25 ವರ್ಷದಿಂದ ಅಣ್ಣ ಯೋಗಿ ಆದಿತ್ಯನಾಥ್ ರವರಿಗೆ ರಾಖಿ ಕಟ್ಟಲು ಎದುರು ನೋಡುತ್ತಿದ್ದಾರೆ ಈ ತಂಗಿ. ಯೋಗಿ ಆದಿತ್ಯನಾಥ್ ಅವರು ಮುಖ್ಯಮಂತ್ರಿಯಾದರು ಸಹ ಅವರ ಕುಟುಂಬದಲ್ಲಿ ಯಾವುದೇ ಬದಲಾವಣೆಗಳು ಇಲ್ಲ. ನಿಮ್ಮ ಅಣ್ಣ ಮುಖ್ಯಮಂತ್ರಿ ನಿಮ್ಮಗೆ ಯಾವುದೇ ಸಹಾಯ ಮಾಡಲ್ಲ ಅಂತ ಬೇಜಾರು ಇದೆಯಾ..? ಎಂದು ಶಶಿ ದೇವಿಯವರನ್ನು ಕೇಳಿದರೆ ಇವರು ಹೇಳುವುದು ಏನು ಗೊತ್ತಾ..? ನನ್ನ ಸಹೋದರ ಜನ ಸೇವೆಗಾಗಿ ಮನೆ ಬಿಟ್ಟು ಹೊರಟು ಹೋದರು. ಅವರಿಂದ ನಾವು ಏನನ್ನು ಆಶಿಸುವುದಿಲ್ಲ. ನಮ್ಮಿಂದ ಅವರಿಗೆ ಕೆಟ್ಟ ಹೆಸರು ಬರದೇ ಇದ್ದರೆ ಅಷ್ಟೇ ಸಾಕು. ನಮ್ಮ ಅಣ್ಣ ಮಾಡುವ ಕೆಲಸಗಳನ್ನು ನೋಡಿ ನಮಗೆ ತುಂಬಾ ಸಂತೋಷವಾಗುತ್ತದೆ ಎನ್ನುತ್ತಾರೆ ಯೋಗ್ಯ ಆದಿತ್ಯನಾಥ್ ರವರ ಸಹೋದರಿ.

Advertisement

Advertisement

ನಿಜಕ್ಕೂ ಯೋಗಿ ಆದಿತ್ಯನಾಥ್ ಅವರ ಬಳಿ ನಾಲ್ಕು ಜೊತೆ ಬಟ್ಟೆ ಬಿಟ್ಟರೆ ಬೇರೆ ಏನು ಇಲ್ಲ. ಹಣದ ಮೇಲೆ ಆಸೆ ಇಲ್ಲದೆ ಜನ ಸೇವೆಗಾಗಿ ಬದುಕುತ್ತಿರುವ ವ್ಯಕ್ತಿ ಇವರು. ಜನರ ದುಡ್ಡು ದೋಚಲು ಕಾಯುವ ನಾಯಕರ ಮಧ್ಯೆ ಇಂತಹ ಆದರ್ಶ ನಾಯಕರು ಎಷ್ಟು ಜನ ಇರುತ್ತಾರೆ ಹೇಳಿ? ಜನ ಸೇವೆಗೆ ಇಳಿದ ಅಣ್ಣ ಒಂದು ಕಡೆ, ನಮ್ಮಿಂದ ಅಣ್ಣನಿಗೆ ಕೆಟ್ಟ ಹೆಸರು ಬರದಿದ್ದರೆ ಸಾಕು ಎಂದು ಆಲೋಚಿಸುವ ತಂಗಿ ಇನ್ನೊಂದು ಕಡೆ. ಎಂತಹ ಆದರ್ಶ ಜೀವನ ಅಲ್ಲವೇ..?

– ಸುಷ್ಮಿತಾ

Advertisement
Share this on...