ಅಗ್ನಿಸಾಕ್ಷಿ ರಾಜೇಶ್ವರಿ ಮಗಳು ಎಷ್ಟು ಮುದ್ದು ಮುದ್ದಾಗಿದ್ದಾಳೆ ಗೊತ್ತಾ…?

in ಮನರಂಜನೆ 420 views

ಅಗ್ನಿಸಾಕ್ಷಿ ಸೀರಿಯಲ್ ಕನ್ನಡ ಕಿರುತೆರೆ ಕಂಡಂತಹ ಮೋಸ್ಟ್ ಸಕ್ಸಸ್ ಫುಲ್ ಧಾರಾವಾಹಿಗಳಲ್ಲಿ ಒಂದು. ಅದರಲ್ಲೂ ಈ ಸೀರಿಯಲ್ ಅದ್ಭುತವಾಗಿ, ಆಕರ್ಷಕವಾಗಿ ಮೂಡಿ ಬರಲು ಪ್ರಮುಖ ಪಾತ್ರವಹಿಸಿದ್ದು ಚಂದ್ರಿಕಾ ಅನ್ನುವ ಪಾತ್ರ. ಅಗ್ನಿಸಾಕ್ಷಿ ಸೀರಿಯಲ್ ಪ್ರಾರಂಭವಾದಾಗ ಚಂದ್ರಿಕಾ ಪಾತ್ರವನ್ನು ಮಾಡಿ ಜನರನ್ನು ಈ ಸೀರಿಯಲ್ ಕಡೆ ಸೆಳೆದಿದ್ದು ನಟಿ ರಾಜೇಶ್ವರಿ. ನಟಿ ರಾಜೇಶ್ವರಿಯವರು ನೆಗೆಟಿವ್ ಶೇಡ್ ಇರುವ ಪಾತ್ರ ಮಾಡಿದರೂ ಸಹ ನಟ-ನಟಿಗಿಂತ ಹೆಚ್ಚು ಪ್ರಸಿದ್ಧಿ ಹಾಗೂ ಅಭಿಮಾನಿಗಳನ್ನು ಗಳಿಸಿಕೊಂಡರು. ಕೆಲವು ವರ್ಷಗಳು ಚಂದ್ರಿಕಾ ಪಾತ್ರ ಮಾಡಿದ ರಾಜೇಶ್ವರಿಯವರು ತಮ್ಮ ಮದುವೆ ಫಿಕ್ಸ್ ಆದ ಕಾರಣ ಸೀರಿಯಲ್ ನಿಂದ ಹೊರಗೆ ಬಂದರು. ಆಸ್ಟ್ರೇಲಿಯಾದ ಕಾಮನ್ ವೆಲ್ತ್ ಬ್ಯಾಂಕ್ ನಲ್ಲಿ ಬಿಜಿ಼ನೆಸ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿರುವ ಕಲ್ಯಾಣ ಕ್ರಿಶ್ ಅನ್ನುವವರನ್ನು ನಟಿ ರಾಜೇಶ್ವರಿ ಮದುವೆಯಾದರು.
ಮದುವೆಯ ನಂತರ ರಾಜೇಶ್ವರಿಯವರು ಗಂಡನ ಜೊತೆ ಆಸ್ಟ್ರೇಲಿಯಾಗೆ ಹೋಗಿ ಅಲ್ಲೇ ನೆಲೆಸಿದ್ದರು.

Advertisement

 

Advertisement

Advertisement

 

Advertisement

ಆಸ್ಟ್ರೇಲಿಯಾದಲ್ಲಿ ಸುಂದರ ಸಂಸಾರವನ್ನು ಕಟ್ಟಿಕೊಂಡ ರಾಜೇಶ್ವರಿಯವರು ಸಿಡ್ನಿಯಾ ಒಂದು ಪ್ರೈವೇಟ್ ಕಂಪನಿಯಲ್ಲಿ ಕೆಲಸಕ್ಕೆ ಸೇರಿಕೊಂಡರು. ಇದರ ಮಧ್ಯೆ ನಟಿ ರಾಜೇಶ್ವರಿಗೆ ಮುದ್ದಾದ ಮಗಳು ಹುಟ್ಟಿದ್ದಳು. ಆ ಕಂದಮ್ಮ ರಾಜೇಶ್ವರಿಯವರ ಜೀವನ ಇನ್ನಷ್ಟು ಸುಂದರವಾಗಿರುವಂತೆ ಮಾಡಿರುತ್ತಾಳೆ. ಇತ್ತೀಚಿಗೆ ಮುದ್ದಿನ ಮಗಳ ನಾಮಕರಣ ಮಾಡಿದ ರಾಜೇಶ್ವರಿಯವರು ಮಗಳಿಗೆ ಹವ್ಯ ಕೃಷ್ಣ ಎಂದು ಹೆಸರಿಟ್ಟಿದ್ದಾರೆ. ಸಡನ್ ಆಗಿ ನಟಿ ರಾಜೇಶ್ವರಿಯವರು ಅಗ್ನಿಸಾಕ್ಷಿ ಸೀರಿಯಲ್ ಬಿಟ್ಟಾಗಂತೂ ಹೆಚ್ಚು ಸೀರಿಯಲ್ ಅಭಿಮಾನಿಗಳಂತೂ ಬೇಜಾರಾಗಿದ್ದರು. ಯಾಕೆಂದರೆ ಚಂದ್ರಿಕಾ ಪಾತ್ರದಲ್ಲಿ ರಾಜೇಶ್ವರಿಯವರನ್ನು ಬಿಟ್ಟು ಬೇರೆಯವರನ್ನು ನೋಡಲು ಅಭಿಮಾನಿಗಳು ಇಷ್ಟ ಪಡುತ್ತಿರಲಿಲ್ಲ.

ಮದುವೆಯಾಗಿ ಆಸ್ಟ್ರೇಲಿಯಾದಲ್ಲಿ ಇದ್ದರೂ ಬೆಂಗಳೂರಿಗೆ ಬಂದಾಗ ತಮ್ಮ ಕಿರುತೆರೆಯ ಸ್ನೇಹಿತರನ್ನು ಭೇಟಿಯಾಗುವ ನಟಿ ರಾಜೇಶ್ವರಿ ತಮ್ಮ ಸ್ನೇಹವನ್ನು ಹಾಗೆ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಈಗ ರಾಜೇಶ್ವರಿಯವರು ನಟನೆಯನ್ನು ಮಾಡದೇ ಇದ್ದರೂ ಸಹ ಕಿರುತೆರೆಯ ಅಭಿಮಾನಿಗಳಲ್ಲಿ ರಾಜೇಶ್ವರಿಯವರು ಅಚ್ಚಳಿಯದೇ ಉಳಿದಿದ್ದಾರೆ ಅನ್ನುವುದೂ ಅಷ್ಟೇ ಸತ್ಯ.

– ಸುಷ್ಮಿತಾ

Advertisement
Share this on...