ಐರಾ ಜೊತೆ ಅನಿವಾರ್ಯ ಕಾರಣಕ್ಕೆ ಹೊರ ಬಂದ ಯಶ್ !

in ಮನರಂಜನೆ/ಸಿನಿಮಾ 75 views

ಮಹಾಮಾರಿ ಕೊರೋನಾದಿಂದ ಇಡೀ ದೇಶವೇ ತತ್ತರಿಸಿಹೋಗಿದ್ದು, ಮನೆಯಿಂದ ಆಚೆ ಬರಲು ಜನ ಹೆದರುತ್ತಿದ್ದಾರೆ. ಇನ್ನು ಬೆಂಗಳೂರಿನಲ್ಲಿ ನೆಲಸಿದ್ದ ಹಲವರು, ಈ ಸೋಂಕಿಗೆ ಹೆದರಿ ಗಂಟುಮೂಟೆ ಕಟ್ಟಿಕೊಂಡು ಬೆಂಗಳೂರಿನ ಸಹವಾಸವೇ ಬೇಡ ಅಂತಾ ಹುಟ್ಟೂರಿನ ಕಡೆ ಹಿಂತಿರುಗಿ ಹೋಗುತ್ತಿದ್ದಾರೆ. ಸದ್ಯ ಸಿನಿಮಾ ವಿಚಾರಕ್ಕೆ ಬಂದರೆ, ಸಿನಿಮಾದ ಚಿತ್ರಕರಣ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಚಿತ್ರೀಕರಣ ನಡೆಸಲು ಅನುಮತಿ ಇಲ್ಲದ ಕಾರಣ ಕಲಾವಿದರೆಲ್ಲ ಮನೆಯಲ್ಲೇ ಕುಳಿತು ತಮ್ಮ ಕುಟುಂಬದೊಂದಿಗೆ ಸಮಯ ಕಳೆಯುತ್ತಿದ್ದಾರೆ. ಚಿತ್ರೀಕರಣ ಇಲ್ಲದೇ ಹೋದರು, ಡಬ್ಬಿಂಗ್,  ಪೊಸ್ಟ್ ಪ್ರೊಡಕ್ಷನ್ಸ್ ಹಾಗೂ ಹೊಸ ಚಿತ್ರದ ಕಥೆ ತಯಾರಿಗಳು ಮಾತ್ರ ನಡೆಯುತ್ತಿವೆ. ಮೊದಮೊದಲು ಕಲಾವಿದರುಗಳು ಮನೆ ಸೇರುವುದು ಅಪರೂಪವಾಗಿತ್ತು. ಆದರೆ ಇದೀಗ ಮನೆಯಲ್ಲೇ ಕೂರುವುದು ಅನಿವಾರ್ಯಾವಾಗಿ ಬಿಟ್ಟಿದೆ.ಇನ್ನು ರಾಕಿಂಗ್ ಸ್ಟಾರ್ ಯಶ್ ಅಭಿನಯದ ಭಾರತ ಚಿತ್ರರಂಗದ ಬಹು ನಿರೀಕ್ಷಿತ ಚಿತ್ರ ಕೆಜಿಎಫ್ ೨ ಸಿನಿಮಾ ಅಕ್ಟೋಬರ್ ತಿಂಗಳಲ್ಲಿ ಬಿಡುಗಡೆಯಾಗ ಬೇಕಿತ್ತು. ಆದರೆ ಇದೀಗ ಇದು ಸಂಶಯವಾಗಿದೆ. ಕಾರಣ ಕೆಜಿಎಫ್ ೨ ಚಿತ್ರದ ಕೆಲ ಚಿತ್ರೀಕರಣ ಬಾಕಿ ಇದೆ. ಇದರ ನಡುವೆ ರಾಜ್ಯದಲ್ಲಿ ಕೊರೋನಾ ಹಾವಳಿ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಚಿತ್ರಮಂದರಗಳಿಗೆ ಜನ  ಸೇರುವುದು ಅಸಾಧ್ಯವಾಗಿದೆ.

Advertisement

Advertisement

ಇನ್ನು ಕೆಜಿಎಫ್ ಚಿತ್ರದ ನಂತರ ಯಶ್ ಯಾವ ಸಿನಿಮಾದಲ್ಲಿ ನಟಿಸುತ್ತಾರೆ ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿತ್ತು. ಕೆಲವರು ಕಿರಾತಕ ೨ ಮಾಡುತ್ತಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಳ್ಳುತ್ತಿದ್ದಾರೆ, ಇನ್ನು ಕೆಲವರು ತೆಲುಗು ಚಿತ್ರದಲ್ಲಿ ನಟಿಸುತ್ತಾರೆ ಎಂದು ಹೇಳುತ್ತಿದ್ದರು. ಆದರೆ ಇದೀಗ ಈ ವಂದತಿಗಳಿಗೆ ತೆರೆ ಬಿದ್ದಿದ್ದು, ಯಶ್ ಕೆಜಿಎಫ್ ಚಿತ್ರದ ಬಳಿಕ ಮಫ್ತಿ ಸಿನಿಮಾದ ನಿರ್ದೇಶಕ ನರ್ತನ್ ಅವರ ಜೊತೆ ಸಿನಿಮಾ ಮಾಡುವುದು ಬಹುತೇಕ ಕನ್ಫರ್ಮ್ ಆಗಿದೆ. ಈಗಾಗಲೇ ನರ್ತನ್ ಕಥೆ ತಯಾರಿಯಲ್ಲಿ ತೊಡಗಿದ್ದು, ನಟ ಯಶ್ ಅವರು ಕೂಡ ಕಥೆ ಬರೆಯಲು ಸಹಾಯ ಮತ್ತು ಸಲಹೆ ನೀಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

Advertisement

 

Advertisement
View this post on Instagram

 

Our fight is NOT over yet.. these are tough times but it will pass soon! Till then, Wear your mask whenever u step out and plz maintain social distancing. Stay safe, stay happy ? #nimmaRP #radhikapandit

A post shared by Radhika Pandit (@iamradhikapandit) on

ಇದೆಲ್ಲದರ ನಡುವೆ ಸದ್ಯ ರಾಕಿಂಗ್ ಸ್ಟಾರ್ ತಮ್ಮ ಕುಟುಂಬದೊಂದಿಗೆ ಮನೆಯಿಂದ ಹೊರ ಬಂದಿದ್ದು, ಅನಿವಾರ್ಯ ಕಾರಣವೊಂದಕ್ಕೆ ಮಗಳು ಐರಾಳಿಗೂ ಕೂಡ ಮಾಸ್ಕ್ ಧರಿಸಿ ಹೊರ ಕರೆದುಕೊಂಡು ಬಂದಿದ್ದಾರೆ. ಈ ವಿಚಾರವನ್ನು ರಾಧಿಕಾ ಪಂಡಿತ್ ಅವರು  ಯಶ್ ಹಾಗೂ ಐರಾ ಜೊತೆ ಹೊರ ಹೋಗುತ್ತಿರುವ ಫೋಟೋವೊಂದನ್ನು  ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ಇನ್ನು ನಮ್ಮ ಹೋರಾಟ ಮುಗಿದಿಲ್ಲ, ಆದರೆ ಈ ಕಷ್ಟದ ಸಮಯ ಆದಷ್ಟು ಬೇಗ ಕಳೆದು ಹೋಗಲಿದೆ, ಅಲ್ಲಿಯವರೆಗೆ ಹೊರಗೆ ಹೋಗುವಾಗ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ  ಎಂದು ಬರೆದು ಚಿತ್ರವನ್ನು ಹಂಚಿಕೊಂಡಿದ್ದಾರೆ..

Advertisement
Share this on...