ಐಶು ಹಾಗು ವಿವೇಕ್ ಲವ್ ಸ್ಟೋರಿಗೆ  ವಿಲನ್ ಆಗಿದ್ದು ಸಲ್ಮಾನ್ ಖಾನ್ ಅವರ ?

in ಮನರಂಜನೆ/ಸಿನಿಮಾ 81 views

ವಿಶ್ವಸುಂದರಿ ಎಂದು ಇಡೀ ವಿಶ್ವಕ್ಕೆ ಪರಿಚಯವಾದವರು ನಟಿ ಐಶ್ವರ್ಯಾ ರೈ  ಅವರು. ಅಬ್ಬಾ ಈ ಸುಂದರಿಯನ್ನು ವಿವಾಹವಾಗಲು ಸಿನಿಮಾರಂಗದಿಂದ ಹಿಡಿದು ಎಲ್ಲಾ ವರ್ಗದ ಗಣ್ಯರು ತುದಿಗಾಲಿನಲ್ಲಿ ನಿಂತಿದ್ದರು. ಇನ್ನು ಈ ವಿಶ್ವ ಸುಂದರಿಯ ಸಿನಿಮಾ ಬದುಕು ಒಂದು ತೂಕವಾದರೆ, ಆಕೆಯ ಪ್ರೇಮ ಪುರಾಣ ಪ್ರಕರಣಗಳು ಇನ್ನೊಂದು ತೂಕ. ಖ್ಯಾತ ನಟ ಸಲ್ಮಾನ್ ಖಾನ್  ಅವರ ಜೊತೆಗಿನ ವಿವಾದಾತ್ಮಕ ಸಂಬಂಧದಿಂದ ಹಿಡಿದು ಅಮಿತಾಬ್ ಅವರ ಕರುಳಿನ ಕುಡಿ ಅಭಿಷೇಕ್ ಬಚ್ಚನ್ ವಿವಾಹದವರೆಗೂ ಐಶ್ವರ್ಯಾ ರೈ ಅವರ ಖಾಸಗಿ ಬದುಕು ಸದಾ ಸುದ್ದಿಯಲ್ಲಿತ್ತು. ಈಗಲೂ ಅವರ ಹಳೆಯ ಪ್ರೇಮ ಪುರಾಣಗಳು ಬಾಲಿವುಡ್‌ನಲ್ಲಿ ಚರ್ಚೆಯಲ್ಲಿರುತ್ತವೆ.ಐಶ್ವರ್ಯಾ ಮತ್ತು ಸಲ್ಮಾನ್ ಖಾನ್ ಅವರ  ಪ್ರೇಮ ಸಂಬಂಧದಂತೆಯೇ ಸಿಕ್ಕಾಪಟ್ಟೆ  ಕುತೂಹಲ ಕೆರಳಿಸಿದ್ದು, ಐಶ್ವರ್ಯಾ ಮತ್ತು ವಿವೇಕ್ ಒಬಿರಾಯ್ ಅವರ ಪ್ರೇಮ ಪ್ರಕರಣ. ಈ ಪ್ರೇಮ ಸಲ್ಲಾಪವೂ  ಕೇವಲ ಅಲ್ಪ ಕಾಲದ್ದಾಗಿದ್ದರೂ ಬಾಲಿವುಡ್‌ನಲ್ಲಿ ಭಾರಿ ಸದ್ದು ಮಾಡಿತ್ತು. ಆ ಕಾಲದಲ್ಲಿ ಐಶ್ವರ್ಯಾ ಮತ್ತು ವಿವೇಕ್ ಇಬ್ಬರೂ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ಧಿ ದೊಡ್ಡದಾಗಿ ಕಾಡ್ಗಿಚ್ಚಿನಂತೆ ಎಲ್ಲೆಡೆ ಹರಡಿತ್ತು.

Advertisement

Advertisement

ಆದರೆ ಖ್ಯಾತ ನಟವಿವೇಕ್ ಒಬಿರಾಯ್ ಅವರ ಜತೆಗಿನ ಸಂಬಂಧದ ಬಗ್ಗೆ ಇಂದಿಗೂ ಕೂಡ ನಟಿ ಐಶ್ವರ್ಯಾ  ಬಾಯಿಬಿಟ್ಟಿಲ್ಲ. ಜೊತೆಗೆ ಪ್ರೇಮ ಮುರಿದು ಬೀಳುವುದಕ್ಕೂ ಕಾರಣ ತಿಳಿಸಿಲ್ಲ. ಹಾಗದರೆ ಇಬ್ಬರೂ ದೂರವಾಗಲು ಕಾರಣವೇನು?ಇಬ್ಬರ ಸಂಬಂಧ ಹೇಗಿತ್ತು? ಇಬ್ಬರೂ ಬೇರ್ಪಡಲು ಸಲ್ಮಾನ್ ಖಾನ್ ಅವರೇ ಕಾರಣನಾ? ಎಂಬ ಪ್ರಶ್ನೆಗಳು ಇದೀಗ ಎದ್ದಿವೆ.. ಐಶ್ವರ್ಯ ಅವರು ವಿವೇಕ್ ಒಬೆರಾಯ್ ಆತ್ಮೀಯಾ ಸ್ನೇಹಿತ ಎಂದೇ ಯಾವಾಗಲೂ ಎಲ್ಲರ ಮುಂದೆ ಪರಿಗಣಿಸಿದ್ದರು. ಇಷ್ಟು ಮಾತ್ರವಲ್ಲದೆ  ಐಶು ಮತ್ತು ವಿವೇಕ್ ಇಬ್ಬರು ಅನೇಕ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ  ಮತ್ತು ಇತರೆ ಕಾರ್ಯಕ್ರಮಗಳಿಗೆ ಜೋಡಿಯಾಗಿಯೇ ಭಾಗವಹಿಸಿದ್ದರು. ಇಷ್ಟು ಸಾಲದು ಎಂದು ಭಾರತ ಮತ್ತು ವಿದೇಶದ ಅನೇಕ ಕಡೆ ಪ್ರಯಾಣವನ್ನು ಸಹ ಮಾಡಿದ್ದರು.  ಇದೆಲ್ಲದಿಕ್ಕಿಂತ ಹೆಚ್ಚಾಗಿ ವಿವೇಕ್ ಅವರ ಸ್ನೇಹಿತ ಸಮೀರ್ ಕಾರ್ಣಿಕ್ ನಿರ್ದೇಶನದಲ್ಲಿ ‘ಕ್ಯೂಂ… ಹೋ ಗಯಾ ನಾ’ದಲ್ಲಿ ಒಟ್ಟಿಗೆ ನಟಿಸಿದ್ದರು ಎಂದು ಐಶ್ವರ್ಯಾ ರೈ ಅವರ ಆಪ್ತರೊಬ್ಬರು ಹೇಳಿದ್ದಾರೆ.

Advertisement


ಇನ್ನೂ ಐಶ್ವರ್ಯ  ಅವರು ಮೊದಲೇ ವಿವೇಕ್  ಅವರಿಗೆ ನಿನ್ನನ್ನು ವಿವಾಹಗುವುದಿಲ್ಲ ಎಂದು ತಿಳಿಸಿದ್ದರಂತೆ. ಅಲ್ಲದೇ ನನ್ನ ಮೇಲೆ ಪ್ರೇಮವೇನಾದರು ಇದ್ದರೆ ಆ ಸಂಬಂಧವನ್ನು ಮುರಿದುಕೊಳ್ಳುವುದರ ಬಗ್ಗೆ ವಿವೇಕ್ ಜತೆ ಮಾತನಾಡಿದ್ದರು.  ಆದರೆ ಇವರಿಬ್ಬರ ಸಂಬಂಧ ಬ್ರೇಕ್‌ಅಪ್ ಆಗಲು ನಡೆದ ನೈಜ ಕಾರಣ ಅವರಿಬ್ಬರಿಗೇ ಗೊತ್ತು ಅಷ್ಟೇ. ಈ ಕುರಿತಾಗಿ ಐಶ್ವರ್ಯಾ ಅವರು ಅಂದಿನಿಂದ ಇಂದಿನ ತನಕ ಮಾಧ್ಯಮಗಳಿಗೆ ಯಾವ ಸ್ಪಷ್ಟೀಕರಣವನ್ನೂ ನೀಡಿಲ್ಲ.

Advertisement

ಈ ಕುರಿತು ಹೇಳಿಕೆಯನ್ನು ನೀಡಿರುವ ಐಶುವಿನ ಆಪ್ತರೊಬ್ಬರು ವಿವೇಕ್ ಮತ್ತು ಐಶ್ವರ್ಯಾ  ಬೇರೆಯಾಗಲು ಕಾರಣ ಏನೆಂದು ನನಗೆ ಗೊತ್ತು ಎಂದು  ತಿಳಿಸಿದ್ದಾರೆ. ಆದರೆ ಅದು ಅವರಿಬ್ಬರ ಖಾಸಗಿ ವಿಷಯವಾಗಿರುವುದರಿಂದ ಅದರ ಬಗ್ಗೆ ಹೇಳಿಕೆ ನೀಡುವುದಿಲ್ಲ. ಐಶು ಅವರು ವಿವೇಕ್ ಅವರನ್ನು ಗೆಳೆಯನ್ನಾಗಿ ಬಹಳ ಇಷ್ಟಪಡುತ್ತಾರೆ. ಆತನ ಬಗ್ಗೆ ನಕಾರಾತ್ಮಕವಾದ ಯಾವ ವಿಚಾರವನ್ನೂ ಆಕೆ ಹೇಳಲು ಬಯಸುವುದಿಲ್ಲ. ಆದರೂ ವಿವೇಕ್ ಮಾತ್ರ ಬಹಳ ಕಾಲದವರೆಗೆ ಆ ಸಂಬಂಧದ ಬಗ್ಗೆ ಭ್ರಮೆಯಲ್ಲಿಯೇ ಇದ್ದರು. ಇದು ಐಶ್ವರ್ಯಾ ರೈ ಅವರ ತಪ್ಪು ಅಲ್ಲ ತಾನೆ? ಎಂದು ತಿಳಿಸಿದ್ದಾರೆ.

ಇನ್ನು 1994ರಲ್ಲಿ ಸಲ್ಮಾನ್ ಖಾನ್ ಜೊತೆಗಿನ ಸಂಬಂಧವನ್ನು  ಮುರಿದುಕೊಂಡ  ಬಳಿಕ ಐಶ್ವರ್ಯಾ ಅವರು ವಿವೇಕ್ ಒಬಿರಾಯ್ ತೆಕ್ಕೆಗೆ ಬೀಳುತ್ತಾರೆ. ಸಲ್ಮಾನ್  ಜೊತೆಗಿನ ಸಂಬಂಧದ ಕುರಿತು ಐಶ್ವರ್ಯಾ ಅವರು ಹೆಚ್ಚಾಗಿ ಮಾತನಾಡಿದ್ದರು ಆದರೆ ವಿವೇಕ್ ಕುರಿತಾಗಿ ಎಂದು ಮಾತನಾಡಲೇ ಇಲ್ಲ ಮೌನವಹಿಸಿ ಬಿಟ್ಟರು. ಆದರೆ ಬ್ರೇಕ್‌ಅಪ್ ನಂತರ ಸಲ್ಮಾನ್, ಐಶ್ವರ್ಯಾ ಬಗ್ಗೆ ತೀವ್ರವಾಗಿ  ಕೋಪಗೊಂಡಿದ್ದರು ಎನ್ನಲಾಗಿದೆ. ಇವರಿಬ್ಬರ ಕದನದ ನಡುವೆ ವಿವೇಕ್ ಸಂಕಷ್ಟ ಅನುಭವಿಸಿದ್ದರು. ಅತ್ತ ನಟರಾಗಿ ವಿವೇಕ್ ದೊಡ್ಡ ಯಶಸ್ಸು ಕಾಣಲಿಲ್ಲ. ಐಶ್ವರ್ಯಾ ಅವರಿಂದ ದೂರವಾಗಲು ಇದೂ ಕಾರಣ ಎನ್ನಲಾಗಿದೆ.

Advertisement
Share this on...