ಈ ಫೋಟೊದಲ್ಲಿ ಐಶ್ವರ್ಯ ರೈ ಯಾರು ? ಉತ್ತರ ಒಳಗಿದೆ.. ಕ್ಲಿಕ್ ಮಾಡಿ ಓದಿ…!

in ಮನರಂಜನೆ/ಸಿನಿಮಾ 635 views

ಇತ್ತೀಚೆಗೆ ದೂರದರ್ಶನಗಳಿಗಿಂತ ಸಾಮಾಜಿಕ ಜಾಲತಾಣಗಳ ಹಾವಳಿಯೇ ಜಾಸ್ತಿಯಾಗಿದೆ. ವರ್ಷಾನು ವರ್ಷ ಟಿ.ವಿ ಧಾರಾವಾಹಿಗಳು ಮತ್ತು ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡರು ಅಷ್ಟು ಖ್ಯಾತಿ ಪಡೆದಿರುವುದಿಲ್ಲ. ಆದರೆ ಈ ಸಾಮಾಜಿಕ ಜಾಲತಾಣಗಳಲ್ಲಿ ಹಾಡು ಮತ್ತು ನೃತ್ಯದ ಟಿಕ್ ಟಾಕ್ ವಿಡೀಯೊಗಳಿಂದ ರಾತ್ರೋರಾತ್ರಿ ದೊಡ್ಡ ಸ್ಟಾರ್ಸ್ ಆಗಿ ಬಿಡುತ್ತಾರೆ. ಈ ರೀತಿಯಾದ ಅದೆಷ್ಟೋ ಘಟನೆಗಳು ನಮ್ಮ ಕಣ್ಣಮುಂದೆಯೇ ಇದೆ. ಸೋಶಿಯಲ್ ಮೀಡಿಯಾಗಳಲ್ಲಿ ಸ್ಟಾರ್ಸ್ ಗಳಾಗುವುದು ಹೆಣ್ಣುಮಕ್ಕಳಿಗೆ ಬಲು ಸುಲಭ ಅಂತಾನೆ ಹೇಳಬಹುದು. ತಮ್ಮ ಅರೆ ಬಟ್ಟೆ ಮತ್ತು ಮೈಕಾಂತಿಯನ್ನು ತೋರಿಸಿದರೇ ಸಾಕು ಲಕ್ಷ ಲಕ್ಷ ಫಾಲೋವರ್ಸ್ ಗಳನ್ನು ಸಂಪಾದಿಸುತ್ತಾರೆ. ವಿಪರ್ಯಾಸವೇನೆಂದರೆ ಟಿಕ್ ಟಾಕ್ ಮಾಡುವವರೇ ಸಿನಿಮಾ ಮತ್ತು ಧಾರಾವಾಹಿಗಳಲ್ಲಿ ಮುಖ್ಯ ಪಾತ್ರಗಳಲ್ಲಿ ಅಭಿನಯಿಸಿ ದೊಡ್ಡ ಪರೆದೆಯಲ್ಲೂ ಮಿಂಚುತ್ತಿದ್ದಾರೆ. ಬರೀ ಟಿಕ್ ಟಾಕ್ ಕಲಾವಿದರಿಗೆ ಅವಕಾಶ ಕಲ್ಪಿಸಿಕೊಟ್ಟರೆ, ವರ್ಷಗಳ ಕಾಲ ರಂಗಾಯಣ, ನಿನಾಸಂನಂತಹ ರಂಗಭೂಮಿ ಕಲಾವಿದರ ಗತಿ ಏನು? ತರಬೇತಿ ಪಡೆದು ನಟನೆಯಲ್ಲಿ ನಿಪೂಣರಾದವರು, ದೊಡ್ಡ ಪರದೆಯಲ್ಲಿ ನಟಿಸುವ ಬದಲು ಟಿಕ್ ಟಾಕ್ ಮಾಡಿ ಫೇಮಸ್ ಆದ ನಂತರ ಸಿನಿಮಾಗೆ ಬರಬೇಕಾ? ಇನ್ನು ಇಲ್ಲಿಯೂ ಕೂಡ ಸ್ಟಾರ್ ನಟರನ್ನು ಮೀರಿಸುವ ಕಲಾವಿದರು ಇದ್ದಾರೆ..

Advertisement

Advertisement

ಇತ್ತೀಚಿನ ದಿನಗಳಲ್ಲಿ ಟಿಕ್ ಟಾಕ್ ನ ವಿಡಿಯೋವೊಂದು ಭಾರೀ ಸದ್ದು ಮಾಡಿತ್ತಿದ್ದು, ಈ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದ ಯುವತಿ ಥೇಟ್ ಬಾಲಿವುಡ್ ನಟಿ ಐಶ್ವರ್ಯಾ ರೈ ಅವರಂತೆ ಕಾಣುತ್ತಿದ್ದಾರೆ. ಅಲ್ಲದೇ ಈ ವಿಡಿಯೋ ನೋಡಿದ ಐಶ್ವರ್ಯ ರೈ ಅಭಿಮಾನಿಗಳು ಈ ಟಿಕ್ ಟಾಕ್ ಅನ್ನು ತಮ್ಮ ಪ್ರೊಫೈಲ್’ನಲ್ಲಿ ಹಾಕಿ ಐಶ್ವರ್ಯಾ ಅವರ “ಜೆರಾಕ್ಸ್” ಮತ್ತು “ಕಾರ್ಬನ್ ಕಾಪಿ” ಎಂದು ಕರೆಯಲು ಶುರು ಮಾಡಿದ್ದಾರೆ. ಇನ್ನು ಈ ಟಿಕ್ ಟಾಕ್ ವಿಡಿಯೋದಲ್ಲಿರುವ ಯುವತಿಯ ಹೆಸರು ಅಮೃತಾ. ಹೌದು ಈಕೆ ಸೂಪರ್ ಸ್ಟಾರ್ ಮಮ್ಮುಟ್ಟಿ ಹಾಗೂ ಐಶ್ವರ್ಯಾ ರೈ ಅಭಿನಯಿಸಿದ್ದ ಕಂದುಕೊಂಡೈನ್’ ಸಿನಿಮಾದ ಐಶ್ವರ್ಯಾ ಅವರ ಸಂಭಾಷಣೆಗಳಿಗೆ ಅಮೃತಾ ಟಿಕ್ ಟಾಕ್ ಮಾಡಿದ್ದು, ತಮ್ಮ ಪೇಜ್’ನಲ್ಲಿ ಅಪ್ ಲೋಡ್ ಮಾಡಿದ್ದರು. ಈ ವಿಡಿಯೋದಲ್ಲಿ ಅಮೃತಾ ಅವರು ಹೆಚ್ಚು ಕಡಿಮೆ ಐಶ್ವರ್ಯಾ ಅವರ ತರಹನೇ ಕಾಣುತ್ತಿದ್ದು, ಈ ಟಿಕ್ ಟಾಕ್ ಅಪ್ಲೋಡ್ ಆಗುತ್ತಿದ್ದಂತೆ, ಎಲ್ಲಾ ಸಾಮಾಜಿಕ ಜಾಲತಾಣದಲ್ಲಿ ಬಹಳ ಸದ್ದು ಮಾಡುತ್ತಿದೆ.

Advertisement

Advertisement

ಐಶ್ವರ್ಯಾ ಬಚ್ಚನ್ ಅವರ ಫ್ಯಾನ್ಸ್ ಪೇಜ್ ನಲ್ಲಿಯೂ ಕೂಡ ಈ ವಿಡಿಯೋ ಅತಿ ಹೆಚ್ಚಾಗಿ ಶೇರ್ ಆಗುತ್ತಲೇ ಇದ್ದು, ನೋಡಿದ ಪ್ರತಿಯೊಬ್ಬರು ಕೂಡ ಅಮೃತ ಮತ್ತು ಐಶ್ವರ್ಯಾ ರೈ ಬಚ್ಚನ್ ನಡುವಿನಲ್ಲಿ ಯಾವುದೇ ಹೋಲಿಕೆ ಇಲ್ಲ ಎಂದು ಹೇಳುತ್ತಿದ್ದಾರೆ.  ಈ ವರ್ಷದ ಪ್ರಾರಂಭದಲ್ಲಿ ಐಶ್ವರ್ಯ ರೈ ಅವರ ಅಭಿಮಾನಿಗಳು ಮರಾಠಿ ನಟಿ ಮಾನಸಿ ನಾಯಕ್ ಅವರನ್ನು ಐಶ್ವರ್ಯಾ ಅವರ ತದ್ರೂಪು ಎಂದು ಸಾಮಾಜಿಕ ಜಾಲಣದಲ್ಲಿ ಬರೆದುಕೊಳ್ಳುತ್ತಿದ್ದರು. ಮಾನಸಿ ನಾಯಕ್ ಮಾತ್ರವಲ್ಲ ಇರಾನಿನ ಮಾಡೆಲ್ ಮಹ್ಲಘಾ ಜಬೇರಿ ಮತ್ತು ಬಾಲಿವುಡ್ ನಟಿ ಸ್ನೇಹಾ ಉಲ್ಲಾಳ್ ಕೂಡ ಈ ಹಿಂದೆ ಐಶ್ವರ್ಯಾ ಅಭಿಮಾನಿಗಳ ಗಮನವನ್ನು ತಮ್ಮತ್ತ ಸೆಳೆದಿದ್ದರು. ಇದೀಗ ಈ ಟಿಕ್ ಟಾಕ್ ಬೆಡಗಿ ಸಾಕಷ್ಟು ಜನಪ್ರಿಯವಾಗಿದ್ದು, ಸಿನಿಮಾದಲ್ಲೂ ಕೂಡ ಅಭಿನಯಿಸುತ್ತಿದ್ದಾರಂತೆ.


ಮಲಯಾಳಂ ನ ಪಿಕಾಸೊ ಎಂಬ ಸಿನಿಮಾದಲ್ಲಿ ಐಶ್ವರ್ಯಾ ರೈ ಅವರ ಹೋಲಿಕೆಯಿರುವ ಅಮೃತಾ ಮುಖ್ಯ ಪಾತ್ರದಲ್ಲಿ ಅಭಿನಯಿಸುತ್ತಿದ್ದು, ಇದು ಬಹಳಷ್ಟು ಜನರಿಗೆ ತಿಳಿದಿಲ್ಲ. ಶೇಕ್ ಅಫ್ಸಲ್ ಎಂಬುವವರು ನಿರ್ಮಿಸುತ್ತಿರುವ ಪಿಕಾಸೊವನ್ನು ಸುನಿಲ್ ಕರಿಯಟ್ಟುಕರ ನಿರ್ದೇಶಿಸುತ್ತಿದ್ದಾರೆ. ಈ ವರ್ಷದ ಪ್ರಾರಂಭದಲ್ಲಿ ಬಿಡುಗಡೆಯಾದ ಈ ಸಿನಿಮಾದ ಟೀಸರ್ ಕೂಡ ಸಾಕಷ್ಟು ಸದ್ದು ಮಾಡಿತ್ತು. ಒಟ್ಟಾರೆ ಟಿಕ್ ಟಾಕ್ ನಿಂದ ಫೇಮಸ್ ಆದ ಈ ನಟಿ ಇದೀಗ ಚಿತ್ರರಂಗದಲ್ಲೂ ತಮ್ಮನ್ನೂ ತಾವು ತೊಡಗಿಸಿಕೊಂಡಿದ್ದಾರೆ.

Advertisement
Share this on...