ಐಶ್ವರ್ಯಾ ರೈ ಅವರ “ಜೆರಾಕ್ಸ್” …! ತದ್ರೂಪು ಯುವತಿ ಗೆ ಒಲಿದು ಬಂದ ಅದೃಷ್ಟ ನೋಡಿ !

in ಮನರಂಜನೆ 34 views

ಕೆಲವು ದಿನಗಳ ಹಿಂದೆಯಷ್ಟೇ ಟಿಕ್ ಟಾಕ್ ವಿಡಿಯೋವೊಂದು ಭಾರೀ ವೈರಲ್ ಆಗಿತ್ತು. ಕಾರಣವೇನು ಗೊತ್ತಾ?, ಆ ಟಿಕ್ ಟಾಕ್ ‘ನಲ್ಲಿ ಕಾಣಿಸಿಕೊಂಡಿದ್ದ ಯುವತಿ ಥೇಟ್ ಬಾಲಿವುಡ್ ನಟಿ ಐಶ್ವರ್ಯಾ ರೈ ಅವರಂತೆ ಕಾಣಿಸುತ್ತಿದ್ದಳು. ಆ ವಿಡಿಯೋ ನೋಡಿದ ಐಶು ಅಭಿಮಾನಿಗಳು ಸುಮ್ಮನಿರುತ್ತಾರೆಯೇ, ಆ ವಿಡಿಯೋವನ್ನು ತಮ್ಮ ಪ್ರೊಫೈಲ್’ನಲ್ಲಿ ಹಾಕಿ ಐಶ್ವರ್ಯಾ ಅವರ “ಜೆರಾಕ್ಸ್” ಮತ್ತು “ಕಾರ್ಬನ್ ಕಾಪಿ” ಎಂದು ಕರೆಯಲು ಶುರು ಮಾಡಿದರು. ಅಂದಹಾಗೆ ಈ ಟಿಕ್ ಟಾಕ್ ವಿಡಿಯೋದಲ್ಲಿರುವ ಯುವತಿಯ ಹೆಸರು ಅಮೃತಾ. ಈಕೆ ಸೂಪರ್ ಸ್ಟಾರ್ ಮಮ್ಮುಟ್ಟಿ ಹಾಗೂ ಐಶ್ವರ್ಯಾ ರೈ ನಟನೆಯ, ರಾಜೀವ್ ಮೆನನ್ ನಿರ್ದೇಶನದ, ಮೇ 4 ರಂದು 20 ವರ್ಷಗಳನ್ನು ಪೂರ್ಣಗೊಳಿಸಿದ್ದ ‘ಕಂದುಕೊಂಡೈನ್ ಕಂದುಕೊಂಡೈನ್’ ಚಿತ್ರದ ಐಶ್ವರ್ಯಾ ಅವರ ಸಂಭಾಷಣೆಗಳಿಗೆ ಲಿಪ್-ಸಿಂಕ್ ಮಾಡಿದ್ದು, ತಮ್ಮ ಅಮ್ಮುಜ್ ಅಮೃತಾ ಟಿಕ್ ಟಾಕ್ ಪೇಜ್’ನಲ್ಲಿ ಅಪ್ ಲೋಡ್ ಮಾಡಿದ್ದರು. ಈ ವಿಡಿಯೋದಲ್ಲಿ ಅಮೃತಾ ಹೆಚ್ಚು ಕಡಿಮೆ ಐಶ್ವರ್ಯಾ ಅವರನ್ನೇ ಹೋಲುತ್ತಿದ್ದು, ಈ ವಿಡಿಯೋ ಅಪ್ಲೋಡ್ ಮಾಡಿದ ಕೂಡಲೇ ಇದು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

Advertisement

 

Advertisement


ಐಶ್ವರ್ಯಾ ಅವರ ಫ್ಯಾನ್ಸ್ ಪೇಜ್ ನಲ್ಲಿಯೂ ಈ ವಿಡಿಯೋ ಶೇರ್ ಆಗುತ್ತಲೇ ಇದೆ. ನಿಮಗೂ ಈ ವಿಡಿಯೋ ನೋಡಿದಾಗ ಅಮೃತ ಮತ್ತು ಐಶ್ವರ್ಯಾ ರೈ ಬಚ್ಚನ್ ನಡುವಿನ ಹೋಲಿಕೆಯನ್ನು ನಿರಾಕರಿಸುವುದು ಕಷ್ಟವಾಗುತ್ತದೆ. ಈ ವರ್ಷದ ಆರಂಭದಲ್ಲಿ ಐಶ್ವರ್ಯಾ ಅವರ ಅಭಿಮಾನಿಗಳು ಮರಾಠಿ ನಟಿ ಮಾನಸಿ ನಾಯಕ್ ಅವರನ್ನು ಐಶ್ವರ್ಯಾ ಅವರ ತದ್ರೂಪು ಎಂದು ಬಣ್ಣಿಸಿದ್ದರು. ಮಾನಸಿ ನಾಯಕ್ ಮಾತ್ರವಲ್ಲ, ಇರಾನಿನ ಮಾಡೆಲ್ ಮಹ್ಲಘಾ ಜಬೇರಿ ಮತ್ತು ಬಾಲಿವುಡ್ ನಟಿ ಸ್ನೇಹಾ ಉಲ್ಲಾಳ್ ಕೂಡ ಈ ಹಿಂದೆ ಐಶ್ವರ್ಯಾ ಅಭಿಮಾನಿಗಳ ಗಮನ ಸೆಳೆದಿದ್ದು, ಇವರೆಲ್ಲಾ ಐಶ್ವರ್ಯಾ ತರಹ ಹೋಲಿಕೆ ಬರುವುದನ್ನು ಕಂಡುಹಿಡಿದಿದ್ದರು.

Advertisement

 

Advertisement


ಆದರೆ ಈಗ ಹೊಸ ಸುದ್ದಿ ಏನಪ್ಪಾ ಅಂದ್ರೆ ಮುಂಬರುವ ಮಲಯಾಳಂ ಚಿತ್ರ ‘ಪಿಕಾಸೊ’ ಚಿತ್ರದಲ್ಲಿ ಐಶ್ವರ್ಯಾ ಹೋಲಿಕೆಯಿರುವ ಅಮೃತಾ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇದು ಬಹಳಷ್ಟು ಬಗ್ಗೆ ಜನರಿಗೆ ತಿಳಿದಿಲ್ಲ. ಶೇಕ್ ಅಫ್ಸಲ್ ನಿರ್ಮಿಸುತ್ತಿರುವ ಪಿಕಾಸೊವನ್ನು ಸುನಿಲ್ ಕರಿಯಟ್ಟುಕರ ನಿರ್ದೇಶಿಸುತ್ತಿದ್ದಾರೆ. ವರ್ಷದ ಆರಂಭದಲ್ಲಿ ಬಿಡುಗಡೆಯಾದ ಈ ಚಿತ್ರದ ಟೀಸರ್ ಕೂಡ ವೈರಲ್ ಆಗಿತ್ತು.

Advertisement
Share this on...