serial actress aishwarya

ಕಸ್ತೂರಿಯಾಗಿ ಪರಭಾಷೆಯಲ್ಲಿ ಮೋಡಿ ಮಾಡುತ್ತಿರುವ ಐಶ್ವರ್ಯಾ

in ಮನರಂಜನೆ/ಸಿನಿಮಾ 614 views

ಕನ್ನಡ ಕಿರುತೆರೆಯಲ್ಲಿ ಅಭಿನಯಿಸಿ ನಟನಾ ಕಂಪನ್ನು ಪಸರಿಸಿರುವ ಹಲವರು ಇಂದು ಪರಭಾಷೆಯ ಕಿರುತೆರೆಯಲ್ಲಿ ನಟಿಸುತ್ತಿದ್ದಾರೆ. ಈಕೆಯೂ ಅಷ್ಟೇ! ಕನ್ನಡ ಕಿರುತೆರೆಯ ಮೂಲಕ ಬಣ್ಣದ ಪಯಣ ಶುರು ಮಾಡಿರುವ ಚೆಂದುಳ್ಳಿ ಚೆಲುವೆ ಇದೀಗ ಪರಭಾಷೆಯ ಕಿರುತೆರೆಯಲ್ಲಿ ಬ್ಯುಸಿ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಪುನರ್ ವಿವಾಹ ಧಾರಾವಾಹಿ ಮೂಲಕ ನಟನಾ ಲೋಕ ಪ್ರವೇಶಿಸಿದ ಮುದ್ದು ಮುಖದ ಬೆಡಗಿ ಐಶ್ವರ್ಯಾ ಪಿಸ್ಸೆ ಇದೀಗ ಕಸ್ತೂರಿ ಆಗಿ ಮೋಡಿ ಮಾಡುತ್ತಿದ್ದಾರೆ. ಹೌದು, ತೆಲುಗು ಭಾಷೆಯಲ್ಲಿ ಪ್ರಸಾರವಾಗುತ್ತಿರುವ ಕಸ್ತೂರಿ ಧಾರಾವಾಹಿಯಲ್ಲಿ ನಾಯಕಿ ಕಸ್ತೂರಿಯಾಗಿ ನಟಿಸುತ್ತಿರುವ ಐಶ್ವರ್ಯಾ ಅಲ್ಲಿ ಡಾಕ್ಟರ್ ಪಾತ್ರಕ್ಕೆ ಜೀವ ತುಂಬುತ್ತಿದ್ದಾರೆ‌ ಆ ಮೂಲಕ ಕೇವಲ ಕನ್ನಡ ಮಾತ್ರವಲ್ಲದೇ ಪರಭಾಷೆಯಲ್ಲಿಯೂ ತಮ್ಮ ನಟನಾ ಛಾಪನ್ನು ಮೂಡಿಸುತ್ತಿದ್ದಾರೆ. ಪುನರ್ ವಿವಾಹ ಧಾರಾವಾಹಿಯಲ್ಲಿ ಸಣ್ಣ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ನಟನಾ ಕ್ಷೇತ್ರಕ್ಕೆ ಕಾಲಿಟ್ಟ ಮುದ್ದು ಮುಖದ ಚೆಲುವೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಅನುರೂಪ ಧಾರಾವಾಹಿಯಲ್ಲಿ ನಾಯಕಿಯಾಗಿ ಐಶ್ವರ್ಯಾ ಕಾಣಿಸಿಕೊಂಡಿದ್ದಾರೆ. ಅನುರೂಪ ಧಾರಾವಾಹಿಯಲ್ಲಿ ಮೇಘನಾ ಆಗಿ ನಟಿಸಿರುವ ಐಶ್ವರ್ಯಾ ಮುದ್ದಾದ ಅಭಿನಯದಿಂದ ಕಿರುತೆರೆ ಪ್ರೇಕ್ಷಕರ ಮನದಲ್ಲಿ ಸ್ಥಾನ ಪಡೆದಿದ್ದಾರೆ.

Advertisement

Advertisement

ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಪೌರಾಣಿಕ ಧಾರಾವಾಹಿ ಗಿರಿಜಾ ಕಲ್ಯಾಣದಲ್ಲಿ ಅಭಿನಯಿಸಿರುವ ಐಶ್ವರ್ಯಾ ಗೆ ಮೇಘನಾ ಪಾತ್ರ ಜನಪ್ರಿಯತೆಯನ್ನು ತಂದುಕೊಟ್ಟಿತು. ತದ ನಂತರ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಸರ್ವ ಮಂಗಳ ಮಾಂಗಲ್ಯೇ ಧಾರಾವಾಹಿಯಲ್ಲಿ ಪಾರ್ವತಿ ಪಾತ್ರಧಾರಿಯಾಗಿ ಕಾಣಿಸಿಕೊಂಡರು. ಮುಖ್ಯವಾದ ವಿಚಾರವೆಂದರೆ ಸರ್ವ ಮಂಗಳ ಮಾಂಗಲ್ಯೇ ಧಾರಾವಾಹಿ ಅಗ್ನಿಸಾಕ್ಷಿ ಹೆಸರಿನಲ್ಲಿ ತೆಲುಗಿನಲ್ಲಿಯೂ ಪ್ರಸಾರ ಕಾಣುತ್ತಿದ್ದು ಅಲ್ಲಿಯೂ ಪಾರ್ವತಿ ಪಾತ್ರಕ್ಕೆ ಸ್ವತಃ ಐಶ್ವರ್ಯಾ ಅವರೇ ಜೀವ ತುಂಬಿದ್ದಾರೆ. ಒಂದೇ ಪಾತ್ರ, ಬೇರೆ ಬೇರೆ ಭಾಷೆಯಲ್ಲಿ ಒಬ್ಬರಿಗೆ ನಟಿಸುವ ಅವಕಾಶ ಸಿಗುವುದು ತುಂಬಾ ಕಡಿಮೆ. ಅದು ಐಶ್ವರ್ಯಾ ಅವರಿಗೆ ದೊರೆತಿದೆ. ಇಂತಹ ಅವಕಾಶ ಹೆಚ್ಚಿನವರಿಗೆ ಸಿಗುವುದಿಲ್ಲ.

Advertisement

ರಾಕಿಂಗ್ ಸ್ಟಾರ್ ಯಶ್ ಅಭಿನಯದ “ಸಂತು ಸ್ಟ್ರೈಟ್ ಫಾರ್ವರ್ಡ್” ಚಿತ್ರದಲ್ಲಿ ಯಶ್ ತಂಗಿಯಾಗಿ ನಟಿಸಿರುವ ಐಶ್ವರ್ಯಾ ಅವರಿಗೆ ಸಾಕಷ್ಟು ಸಿನಿಮಾ ಆಫರ್ಸ್ ಗಳು ಬಂದಿದ್ದವು. ಆದರೆ ಐಶ್ವರ್ಯಾ ಅವರು ಕನ್ನಡ ಹಾಗೂ ತೆಲುಗು ಧಾರಾವಾಹಿಗಳಲ್ಲಿ ಬ್ಯುಸಿಯಾಗಿದ್ದ ಕಾರಣ ಯಾವುದೇ ಸಿನಿಮಾಗಳನ್ನು ಒಪ್ಪಿಕೊಳ್ಳಲಿಲ್ಲ.

Advertisement

ಸದ್ಯ ಕಸ್ತೂರಿಯಾಗಿ ತೆಲುಗು ಕಿರುತೆರೆಯಲ್ಲಿ ಬ್ಯುಸಿಯಾಗಿರುವ ಐಶ್ವರ್ಯಾ ಅವರು ಪರಭಾಷೆಗೆ ಕಾಲಿಟ್ಟಿದ್ದು ನಿಜವಾಗಿಯೂ ರೋಚಕದ ಸಂಗತಿ. ಗಿರಿಜಾ ಕಲ್ಯಾಣ ಧಾರಾವಾಹಿಯನ್ನು ಬಾಹುಬಲಿ ನಿರ್ಮಾಪಕರು ಮಾಡಿದ್ದರಿಂದ ತಮಿಳು ಹಾಗೂ ತೆಲುಗು ಭಾಷೆಯಲ್ಲಿ ಅವರಿಗೆ ನಟಿಸುವ ಅವಕಾಶ ಸಿಕ್ಕಿತು. ಸಂತಸದಿಂದಲೇ ನಟಿಸುತ್ತಿರುವ ಆಕೆ ಕನ್ನಡದ ಜೊತೆಗೆ ತಮಿಳು, ತೆಲುಗು ಭಾಷೆಯಲ್ಲಿ ನಟಿಸಿದ್ದಾರೆ. ಇದರ ಜೊತೆಗೆ ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲಿಯೂ ನಟಿಸುವ ಆಸೆ ಆಕೆಯದು!
– ಅಹಲ್ಯಾ

Advertisement
Share this on...