ಆ ನಟನನ್ನು ತನ್ನ ಅಪ್ಪ ಎಂದು ತಪ್ಪು ತಿಳಿದಿದ್ದಳಂತೆ ಐಶ್ ಪುತ್ರಿ ಆರಾಧ್ಯ…ಯಾರಿರಬಹುದು ಆತ..|

in ಮನರಂಜನೆ 46 views

ಆರಾಧ್ಯ, ಬಾಲಿವುಡ್ ನಟ ಅಭಿಷೇಕ್ ಬಚ್ಚನ್​​​​ ಹಾಗೂ ಮಾಜಿ ವಿಶ್ವಸುಂದರಿ, ಬಾಲಿವುಡ್ ನಟಿ ಐಶ್ವರ್ಯ ರೈ ದಂಪತಿಯ ಒಬ್ಬಳೇ ಪುತ್ರಿ. 16 ನವೆಂಬರ್ 2011 ರಂದು ಹುಟ್ಟಿದ ಈ ಮುದ್ದು ಗೊಂಬೆಗೆ ಈಗ 9 ವರ್ಷ ವಯಸ್ಸು. ಅಮ್ಮ ಐಶ್ವರ್ಯ ರೈ ಅವರಂತೆ ಆರಾಧ್ಯ ಕೂಡಾ ಫೇಮಸ್. ಇತ್ತೀಚೆಗಷ್ಟೇ ಆರಾಧ್ಯ ಬರೆದಿರುವ ಪೇಯ್ಟಿಂಗ್ ಒಂದನ್ನು ಅಭಿಷೇಕ್, ಐಶ್ವರ್ಯ , ತಾತ ಅಮಿತಾಬ್ ಬಚ್ಚನ್ ಮೂವರೂ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಷೇರ್ ಮಾಡಿಕೊಂಡಿದ್ದರು.ಇನ್ನು ಆರಾಧ್ಯ ಒಮ್ಮೆ ರಣಬೀರ್ ಕಪೂರ್ ಅವರನ್ನು ತನ್ನ ಅಪ್ಪ ಎಂದು ತಪ್ಪು ತಿಳಿದು ಆತನನ್ನು ಅಪ್ಪಿಕೊಂಡಿದ್ದರಂತೆ. ಈ ವಿಚಾರವನ್ನು ಸ್ವತ: ಐಶ್ವರ್ಯ ರೈ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. ಐಶ್ವರ್ಯ ರೈ ಹಾಗೂ ರಣಬೀರ್ ಅವರ ನಡುವೆ ಒಳ್ಳೆಯ ಸ್ನೇಹವಿದೆ. ‘ಏ ದಿಲ್​​​ ಹೇ ಮುಷ್ಕಿಲ್’ ಚಿತ್ರದಲ್ಲಿ ಈ ಜೋಡಿ ಒಟ್ಟಿಗೆ ನಟಿಸಿತ್ತು. ಇವರಿಬ್ಬರ ಕೆಮಿಸ್ಟ್ರಿ ಕೂಡಾ ಇದರಲ್ಲಿ ಸಖತ್ ವರ್ಕೌಟ್ ಆಗಿತ್ತು. ಈ ಚಿತ್ರವನ್ನು ಕರಣ್ ಜೋಹರ್ ನಿರ್ಮಿಸಿದ್ದರು.

Advertisement

 

Advertisement

Advertisement

ಒಮ್ಮೆ ಚಿತ್ರದ ಶೂಟಿಂಗ್ ವೇಳೆ ಐಶ್ವರ್ಯ ತಮ್ಮೊಂದಿಗೆ ಮಗಳು ಆರಾಧ್ಯಳನ್ನೂ ಕರೆದೊಯ್ದಿದ್ದರಂತೆ. ಆಗ ಆರಾಧ್ಯಗೆ 5 ವರ್ಷ ವಯಸ್ಸು. ಶೂಟಿಂಗ್​ ಸೆಟ್​​​ನಲ್ಲಿ ರಣಬೀರ್ ಕಪೂರ್​​​​​​​​​​​​​​​​​​​ ಅಭಿಷೇಕ್ ಅವರಂತೆ ಜಾಕೆಟ್​, ಟೋಪಿ ಧರಿಸಿದ್ದರಂತೆ. ಆರಾಧ್ಯ ಅವರನ್ನು ನೋಡಿದೊಡನೆ ಹೋಗಿ ಪಪ್ಪಾ ಎಂದು ತಬ್ಬಿಕೊಂಡಿರಂತೆ. ರಣಬೀರ್ ಕೂಡಾ ಖುಷಿಯಿಂದ ಆರಾಧ್ಯಳನ್ನು ಅಪ್ಪಿಕೊಂಡಿದ್ದಾರೆ. ಆದರೆ ನಂತರ ಅದು ತನ್ನ ಅಪ್ಪ ಅಲ್ಲ ಎಂದು ಆರಾಧ್ಯಗೆ ಅರಿವಾಗಿದೆ. ಆ ಘಟನೆ ನಡೆದಾಗಿನಿಂದ ಇಂದಿನವರೆಗೂ ಆರಾಧ್ಯ ಎಲ್ಲಾದರೂ ರಣಬೀರ್​​​​ ಕಪೂರನ್ನು ನೋಡಿದರೆ ನಾಚಿಕೊಳ್ಳುತ್ತಾಳಂತೆ.

Advertisement

 

ಸದ್ಯಕ್ಕೆ ಆರಾಧ್ಯ ಅಪ್ಪ, ಅಮ್ಮ, ಅಜ್ಜಿ, ತಾತನೊಂದಿಗೆ ಮುಂಬೈನ ‘ಜಲ್ಸಾ’ ಮನೆಯಲ್ಲಿ ಲಾಕ್​​​ಡೌನ್ ದಿನಗಳನ್ನು ಎಂಜಾಯ್ ಮಾಡುತ್ತಿದ್ದಾಳೆ. ಮಹಾರಾಷ್ಟ್ರದ ಮುಂಬೈನಲ್ಲಿ ಇತರ ಕಡೆಗಳಿಗಿಂತ ಕೊರೊನಾ ಹೆಚ್ಚಾಗಿರುವುದರಿಂದ ಜನಜೀವನ ಸಹಜ ಸ್ಥಿತಿಯತ್ತ ಮರಳಲು ಇನ್ನೂ ಸಮಯ ಬೇಕು.

Advertisement
Share this on...