ಬೇರೊಬ್ಬರನ್ನು ಅಪ್ಪ ಎಂದು ತಬ್ಬಿಕೊಂಡ ಐಶ್ವರ್ಯ ಮಗಳು !

in ಮನರಂಜನೆ/ಸಿನಿಮಾ 83 views

ಮಗು ಜನಸಿದ ತಕ್ಷಣ ಅಮ್ಮನ ಮಡಿಲು ಸೇರುತ್ತದೆ. ಅದಕ್ಕೆ ಅಮ್ಮನ ಮಡಲಿಗಿಂತ ಸುರಕ್ಷಿತವಾದ ಜಾಗ ಮತ್ತೊಂದಿಲ್ಲ.  ಆಕೆಯನ್ನು ಮರೆಯುವ ಮಾತು ಮಗುವಲ್ಲಿ ಬರುವುದೇ ಇಲ್ಲ. ಇನ್ನು  ಹುಟ್ಟಿದ ಮಗು ಆರು ತಿಂಗಳಲ್ಲೇ ತನ್ನ ಅಪ್ಪ ಅಮ್ಮ ಯಾರು ಎಂದು ಕಂಡುಹಿಡುಯುತ್ತದೆ. ಅನಿವಾರ್ಯ ಕಾರಣದಿಂದ ಪೋಷಕರು ತನ್ನ ಮಕ್ಕಳಿಂದ ದೂರ ಉಳಿದಿದ್ದರು, ಮಗು ಮಾತ್ರ ಇವರೇ ತನ್ನ ಹೆತ್ತವರು ಎಂದು ಗುರುತಿಸಬಲ್ಲದು. ಆದರೆ ಕೆಲವೊಮ್ಮೆ ಅವಕ್ಕೂ ಕೂಡ ಗೊಂದಲವಾಗುವುದು ಸಹಜ. ಹೀಗೆ ವಿಶ್ವಸುಂದರಿ, ಬಾಲಿವುಡ್‌ ಬ್ಯೂಟಿ ಐಶ್ವರ್ಯ ಬಚ್ಚನ್ ಅವರ ಮಗಳು ಆರಾಧ್ಯ, ತನ್ನ ಅಪ್ಪನನ್ನು ಗುರುತು ಹಿಡಿದಿರಲಿಲ್ಲ. ತಮಗೆ ನೆನಪಿರಬಹುದು ‘ಏ ದಿಲ್ ಹೇ ಮುಷ್ಕಿಲ್’ ಸಿನಿಮಾ ಬಾಲಿವುಡ್ ನಲ್ಲಿ ಸಖತ್ ಸದ್ದು ಮಾಡಿತ್ತು. ಐಶ್ವರ್ಯಾ ರೈ ಮತ್ತು ರಣಬೀರ್ ಕಪೂರ್ ಅವರು ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಂತಹ  ಈ ಸಿನಿಮಾ ಸೂಪರ್ ಹಿಟ್ ಆಗಿತ್ತು.  ಸಿನಿಮಾದಲ್ಲಿ ಐಶು ಹಾಗೂ ರಣಬೀರ್ ಅವರ ಕೆಮಿಸ್ಟ್ರಿ, ಮಿಲಿನಯನ್‌ಗಟ್ಟಲೇ ಸಿನಿ ಪ್ರಿಯರ ಮನಸ್ಸು ಕದ್ದಿತ್ತು. ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದು, ಬಾಲಿವುಡ್ ನ ಖ್ಯಾತ ಸಿನಿ ಮೇಕರ್ ಕರಣ್‌ ಜೋಹರ್ ಅವರು. ಸಹನಟರಾಗೋದಕ್ಕಿಂತ ಹೆಚ್ಚಾಗಿ ರಣಬೀರ್ ಮತ್ತು ಐಶ್ವರ್ಯಾ ಅವರ ಮಧ್ಯೆ ಅಘಾಡವಾದ ಸ್ನೇಹವಿದೆ ಎಂಬುದು ಎಲ್ಲರಿಗೂ ತಿಳಿದಿದೆ.

Advertisement

Advertisement

ಇನ್ನು ಫಿಲ್ಮ್‌ಫೇರ್ ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾತನಾಡುತ್ತ ನಟಿ ಐಶ್ವರ್ಯ ಬಚ್ಚನ್ ಈ ಚಿತ್ರದ ಚಿತ್ರೀಕರಣದ ವೇಳೆ ನಡೆದ ಒಂದು ಘಟನೆ ನೆನಪಿಸಿಕೊಂಡು, ನೆರೆದಿದ್ದವರ ಮನಸ್ಸಿನಲ್ಲಿ  ನಗು ತಂದಿದ್ದಾರೆ.ನನ್ನ ಸಿನಿಮಾ ‘ಏ ದಿಲ್ ಹೇ ಮುಷ್ಕಿಲ್’ ಸಿನಿಮಾದ ಚಿತ್ರೀಕರಣ ಅಂದು ನಡೆಯುತ್ತಿತ್ತು.  ಅಭಿಷೇಕ್ ರೀತಿಯ ಜಾಕೆಟ್ ಮತ್ತು ಟೋಪಿಯನ್ನು ರಣಬೀರ್ ಹಾಕಿಕೊಂಡಿದ್ದರು.  ಜೊತೆಗೆ ಸ್ಟಿಕ್ ಸಹ ಹಿಡಿದುಕೊಂಡಿದ್ದರು. ಇದನ್ನು ವೀಕ್ಷಿಸಿದ ನನ್ನ ಮಗಳು ಆರಾಧ್ಯ, ರಣಬೀರ್‌ ನನ್ನು ತನ್ನ ಅಪ್ಪ ಅಭಿಷೇಕ್ ಎಂದು ಭಾವುಸಿ ಓಡೋಗಿ ಅಪ್ಪಿಕೊಂಡಳು. ರಣಬೀರ್ ಆಗ ಖುಷಿಯಿಂದ ‘ವಾ…’ ಎಂದರು.

Advertisement

Advertisement

ಈ ಸನ್ನಿವೇಶವನ್ನು ವೀಕ್ಷಿಸಿದ  ಕರಣ್,  ರಣಬೀರ್ ಅವರ ಬಳಿ ಹೋಗಿ ‘ರಣಬೀರ್ ನೀವು ಚಾರ್ಮ್ ಆಗಿದ್ದೀರಿ, ನಿಜ ಆದರೆ ಈಗ ಏನಾಯ್ತು ಅಂತ ನನಗೆ ಗೊತ್ತಾಯ್ತು’ ಅಂತ ಹೇಳಿದರು. ಆಗ ಐಶ್ವರ್ಯಾ ಅವರು, ಅರಾಧ್ಯಳನ್ನು, ರಣಬೀರ್ ನನ್ನು ಅಪ್ಪ ಅಂದುಕೊಂಡೆಯಾ? ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿದ ಆರಾಧ್ಯಾ  ಹೌದು ಎಂದಿದ್ದರು. ಆ ಘಟನೆ ನಡೆದ ಮೇಲೆ  ರಣಬೀರ್ ಎಲ್ಲೇ ಕಂಡರೂ ಆರಾಧ್ಯಾ ನಾಚಿಕೊಳ್ಳುತ್ತಾಳೆ. ಈ ಹಿಂದಿನಿಂದಲೂ ರಣಬೀರ್ ಪರಿಚಯ ಆರಾಧ್ಯಾಗಿತ್ತು. ಆದರೆ ಅಪ್ಪ ಅಭಿಷೇಕ್ ಧರಿಸುತ್ತಿದ್ದ ಜಾಕೆಟ್, ಟೋಪಿ ನೋಡಿ ಆರಾಧ್ಯಾ, ರಣಬೀರ್‌ನನ್ನೇ ಅಪ್ಪ ಎಂದು ತಿಳಿದುಕೊಂಡಿದ್ದಳು.

ರಣಬೀರ್ ಕಪೂರ್ ಅವರಿಗೆ ಐಶ್ವರ್ಯಾ ರೈ  ಜೊತೆ ನಟಿಸಬೇಕು ಎಂಬ ಕನಸನ್ನು ಹೊಂದಿದ್ದರು ಜೊತೆಗೆ ಅವರ ಜೊತೆ ನಟಿಸುತ್ತೇನೆ ಎಂದು ಕನಸಲ್ಲೂ ಅಂದುಕೊಂಡಿರಲಿಲ್ಲವಂತೆ. ಐಶ್ವರ್ಯಾ ಈ ಸಿನಿಮಾ ಓಕೆ ಎಂದಾಗ ಅವರಲ್ಲಿ  ಸಂತಸ ಮನೆ ಮಾಡಿತು.  ನಿಜಕ್ಕೂ ರಣಬೀರ್ ಪಾಲಿಗೆ ಕನಸು ನನಸಾಯಿತಂತೆ. ಇವರ ಜೊತೆ ಚಿತ್ರದಲ್ಲಿ ಅನುಷ್ಕಾ ಶರ್ಮಾ ಅವರು ಕೂಡ ನಟಿಸಿದ್ದು, ಶಾರುಖ್ ಖಾನ್ ಕೂಡ ಈ ಚಿತ್ರದಲ್ಲಿ ಅತಿಥಿ ಪಾತ್ರ ಮಾಡಿದ್ದರು.

Advertisement
Share this on...