ಐಶ್ವರ್ಯಾ ರೈ ಆಯ್ತು, ಈಗ ಕೀರ್ತಿ ಸುರೇಶ್ … ಏನಿದು ಸೆನ್ಸೇಶನ್ ನ್ಯೂಸ್ !

in ಮನರಂಜನೆ 242 views

ಇತ್ತೀಚೆಗೆ ನಟಿ ಐಶ್ವರ್ಯಾ ರೈ ಅವರ ತದ್ರೂಪು ಯುವತಿಯ ಟಿಕ್ ಟಾಕ್ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ನಂತರ, ಈಗ ನಟಿ ಕೀರ್ತಿ ಸುರೇಶ್ ಅವರನ್ನು ಹೋಲುವ ಯುವತಿಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಬಿರುಗಾಳಿ ಎಬ್ಬಿಸಿದೆ. ಹೌದು ಇಂದು ನಾವು ಹೇಳುತ್ತಿರುವ ಯುವತಿಯ ಹೆಸರು ಮಾರಿಯಾ ಪ್ರಿನ್ಸ್. ಮಾರಿಯಾ ಪ್ರಿನ್ಸ್, ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದು, ಹಳೆಯ ಮಲಯಾಳಂ ಚಲನಚಿತ್ರಗಳನ್ನು ಡಬ್ಸ್ ಮ್ಯಾಶ್ ಮಾಡಿದ ನಂತರ ನೆಟ್ಟಿಗರ ಗಮನ ಸೆಳೆದರು. ಮರಿಯಾ ಮಂಜು ವಾರಿಯರ್ನಿಂದ ಊರ್ವಶಿವರೆಗೆ ಮಲಯಾಳಂ ಚಿತ್ರರಂಗದ ಹಲವಾರು ಜನಪ್ರಿಯ ಪಾತ್ರಗಳ ವಿಡಿಯೋಗಳನ್ನು ಡಬ್ಸ್ ಮ್ಯಾಶ್ ಮಾಡಿದ್ದಾರೆ. ಹೆಚ್ಚಿನ ವೀಡಿಯೊಗಳು ಈಗಾಗಲೇ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ. ಮರಿಯಾ ಟಿಕ್ ಟಾಕ್ ವಿಡಿಯೋಗಳಲ್ಲಿ ಕೀರ್ತಿ ಸುರೇಶ್ ಅವರ ಹೋಲಿಕೆ ಬರುತ್ತಿದ್ದು, ಈ ವಿಡಿಯೋ ನೋಡಿದ ನಂತರ ಹಲವಾರು ನೆಟ್ಟಿಗರು ಮರಿಯಾಗೆ ಕೀರ್ತಿ ಸುರೇಶ್ ನಟಿಸಿರುವ ಚಿತ್ರಗಳ ದೃಶ್ಯಗಳನ್ನು ಮರುಸೃಷ್ಟಿಸಲು ವಿನಂತಿ ಮಾಡುತ್ತಿದ್ದಾರೆ.

Advertisement

Advertisement

ಮರಿಯಾ ಸೋಷಿಯಲ್ ಮೀಡಿಯಾ ಹ್ಯಾಂಡಲ್ ನೋಡಿದರೆ, ಅವರು ಒಂದೆರಡು ಕಿರುಚಿತ್ರಗಳು ಮತ್ತು ಧಾರಾವಾಹಿಗಳಲ್ಲಿ ನಟಿಸಿದ್ದಾರೆ ಎಂಬುದು ಸ್ಪಷ್ಟವಾಗಿದೆ.
ಕೆಲವು ದಿನಗಳ ಹಿಂದೆಯಷ್ಟೇ ಅಮೃತ ಎನ್ನುವ ಯುವತಿಯ ಟಿಕ್ ಟಾಕ್ ವಿಡಿಯೋವೊಂದು ಭಾರೀ ವೈರಲ್ ಆಗಿತ್ತು. ಆ ಟಿಕ್ ಟಾಕ್ ‘ನಲ್ಲಿ ಕಾಣಿಸಿಕೊಂಡಿದ್ದ ಯುವತಿ ಥೇಟ್ ಬಾಲಿವುಡ್ ನಟಿ ಐಶ್ವರ್ಯಾ ರೈ ಅವರಂತೆ ಕಾಣಿಸುತ್ತಿದ್ದರು. ಆ ವಿಡಿಯೋ ನೋಡಿದ ಐಶು ಅಭಿಮಾನಿಗಳು ವಿಡಿಯೋವನ್ನು ತಮ್ಮ ಪ್ರೊಫೈಲ್’ನಲ್ಲಿ ಹಾಕಿ ಐಶ್ವರ್ಯಾ ಅವರ “ಜೆರಾಕ್ಸ್” ಮತ್ತು “ಕಾರ್ಬನ್ ಕಾಪಿ” ಎಂದು ಕರೆಯಲು ಶುರು ಮಾಡಿದರು.

Advertisement

 

Advertisement
View this post on Instagram

 

A post shared by Mariya Prince (@mariyaprince) on


ಅಮೃತಾ ಸೂಪರ್ ಸ್ಟಾರ್ ಮಮ್ಮುಟ್ಟಿ ಹಾಗೂ ಐಶ್ವರ್ಯಾ ರೈ ನಟನೆಯ, ‘ಕಂದುಕೊಂಡೈನ್ ಕಂದುಕೊಂಡೈನ್’ಚಿತ್ರದ ಐಶ್ವರ್ಯಾ ಅವರ ಸಂಭಾಷಣೆಗಳಿಗೆ ಲಿಪ್-ಸಿಂಕ್ ಮಾಡಿದ್ದು, ತಮ್ಮ ಅಮ್ಮುಜ್ ಅಮೃತಾ ಟಿಕ್ ಟಾಕ್ ಪೇಜ್’ನಲ್ಲಿ ಅಪ್ ಲೋಡ್ ಮಾಡಿದ್ದರು. ಈ ವಿಡಿಯೋದಲ್ಲಿ ಅಮೃತಾ ಹೆಚ್ಚು ಕಡಿಮೆ ಐಶ್ವರ್ಯಾ ಅವರನ್ನೇ ಹೋಲುತ್ತಿದ್ದು, ಈ ವಿಡಿಯೋ ಅಪ್ಲೋಡ್ ಮಾಡಿದ ಕೂಡಲೇ ಇದು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿತ್ತು.

Advertisement
Share this on...