ಐಶು ತಮ್ಮ ಮಂಗಳಸೂತ್ರದ ವಿನ್ಯಾಸವನ್ನು ಬದಲಾಯಿಸಿದ್ದೇಕೆ ?

in ಸಿನಿಮಾ 92 views

ಎಲ್ಲರಿಗೂ ಗೊತ್ತಿರುವ ಹಾಗೆ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ 2007 ರಂದು ಏಪ್ರಿಲ್ ತಿಂಗಳಿನಲ್ಲಿ ಮದುವೆಯಾದರು. ಆಗ ಅಭಿಮಾನಿಗಳು ಐಶು-ಅಭಿ ಮದುವೆಯಾಗುವುದನ್ನೇ ಕುತೂಹಲದಿಂದ ಕಾಯುತ್ತಿದ್ದರು. ಅದರಲ್ಲೂ ಅವರ ಮದುವೆ ಸಮಾರಂಭ ಹೇಗಿರುತ್ತದೆ ಎಂದು ನೋಡಲು ಅಭಿಮಾನಿಗಳು ಕಾತುರರಾಗಿದ್ದರು. ಇನ್ನು ಮಹಿಳಾ ಅಭಿಮಾನಿಗಳು ಐಶ್ವರ್ಯಾ ಮತ್ತು ಅಭಿಷೇಕ್ ಅಂದು ಯಾವ ತರಹದ ದಿರಿಸನ್ನು ಧರಿಸುತ್ತಾರೆ?, ಹೇಗೆ ಡ್ರೆಸ್ ಆಗಬಹುದು ಎಂದು ಬಹಳಷ್ಟು ಉತ್ಸುಕರಾಗಿದ್ದರು. ಅಭಿಮಾನಿಗಳು ನಿರೀಕ್ಷಿಸಿದಂತೆ ಐಶ್ವರ್ಯಾ ತಮ್ಮ ಮದುವೆಯಲ್ಲಿ ರಿಚ್ ಆಗಿರುವ ಉಡುಪನ್ನು ಧರಿಸಿದ್ದರು. ಇದನ್ನು ಡಿಸೈನರ್ ನೀತಾ ಲುಲ್ಲಾ ವಿನ್ಯಾಸಗೊಳಿಸಿದ್ದರು. ಅಂದು ಸಾಂಪ್ರದಾಯಿಕ ಕಾಂಜೀವರಂ ಸೀರೆಯಲ್ಲಿ ಐಶು ಥೇಟ್ ಬೊಂಬೆಯಂತೆ ಕಂಗೊಳಿಸುತ್ತಿದ್ದರು. ಆಗ ಐಶು ಸೀರೆಗೆ ಸುಮಾರು 75 ಲಕ್ಷ ರೂಪಾಯಿ ಖರ್ಚಾಗಿದೆ ಎಂದು ವರದಿಯಾಗಿತ್ತು.

Advertisement

 

Advertisement


ಸೆಲೆಬ್ರಿಟಿಗಳು ಏನು ಧರಿಸುತ್ತಾರೆ? ಅವರ ಪರಿಕರಗಳು ಹೇಗಿರುತ್ತವೆ? ಅವರು ಅವುಗಳನ್ನು ಹೇಗೆ ವಿನ್ಯಾಸಗೊಳಿಸುತ್ತಾರೆ ಎಂಬುದನ್ನು ನೋಡಲು ಅಭಿಮಾನಿಗಳು ಬಹಳ ಇಷ್ಟಪಡುತ್ತಾರೆ. ಅಂದಹಾಗೆ ಐಶ್ವರ್ಯ ರೈ ಬಚ್ಚನ್ ಅವರ ಮಂಗಳಸೂತ್ರವನ್ನು ಅಭಿಮಾನಿಗಳು ಬಚ್ಚನ್ ಕುಟುಂಬ ತಿರುಪತಿ ದೇವಸ್ಥಾನದಲ್ಲಿ ಕಾಣಿಸಿಕೊಂಡಾಗ ಮೊದಲ ಬಾರಿಗೆ ಗುರುತಿಸಿದರು. ಮದುವೆಯಾದ ಕೂಡಲೇ ಐಶು ಪತಿ ಅಭಿಷೇಕ್ ಬಚ್ಚನ್ ಜೊತೆ ಈ ದೇವಾಲಯಕ್ಕೆ ಭೇಟಿ ನೀಡಿದ್ದರು.ಮಾಧ್ಯಮ ವರದಿಗಳ ಪ್ರಕಾರ, ಐಶು ಮಂಗಳ ಸೂತ್ರದ ಮೌಲ್ಯ ಸುಮಾರು 45 ಲಕ್ಷ ರೂಪಾಯಿಗಳು. ಈ ಮಂಗಳಸೂತ್ರವು ಉದ್ದವಾಗಿದ್ದು, ಎರಡು ಎಳೆ ಹೊಂದಿತ್ತು. ಜೊತೆಗೆ ವಜ್ರದ ಪೆಂಡೆಂಟ್ ಹೊಂದಿತ್ತು. ಆದರೆ ಮದುವೆಯಾಗಿ ಕೆಲವು ವರ್ಷಗಳ ನಂತರ ಐಶು ಮಾಂಗಲ್ಯದಲ್ಲಿ ಆದ ಬದಲಾವಣೆಗಳು ಕೆಲವರ ಗಮನಕ್ಕೆ ಬಂದಿತು.

Advertisement

 

Advertisement


ಹೌದು, ಉದ್ದವಿದ್ದ ಐಶು ಮಂಗಳಸೂತ್ರ ಚಿಕ್ಕದಾಗಿತ್ತು. ಅದು ಕೇವಲ ಕುತ್ತಿಗೆಯನ್ನು ಮಾತ್ರ ಅಲಂಕರಿಸಿತ್ತು. ಎರಡು ಎಳೆಗಳ ಬದಲಾಗಿ ಒಂದೇ ಎಳೆ ಇತ್ತು. ಆದರೆ ಪೆಂಡೆಂಟ್ ಮಾತ್ರ ಬದಲಾಗದಿರುವುದನ್ನು ನೀವು ಗಮನಿಸಬಹುದು. ಅಷ್ಟಕ್ಕೂ ಐಶ್ವರ್ಯಾ ಅವರು ಮಂಗಳಸೂತ್ರವನ್ನು ಏಕೆ ಚಿಕ್ಕದಾಗಿ ವಿನ್ಯಾಸ ಮಾಡಿಸಿಕೊಂಡಿದ್ದಾರೆ ಎಂಬ ಕುತೂಹಲವಿರುವವರಿಗೆ ಉತ್ತರ ಇಲ್ಲಿದೆ ನೋಡಿ. ಐಶು ಮಗಳು ಆರಾಧ್ಯ ಜನಿಸಿದ ನಂತರ ಮಂಗಳಸೂತ್ರದ ವಿನ್ಯಾಸವನ್ನು ಬದಲಾಯಿಸಿದರು ಎಂದು ಬಲ್ಲ ಮೂಲಗಳು ವರದಿ ಮಾಡಿವೆ. ಆರಾಧ್ಯ ಹುಟ್ಟಿದ ನಂತರ ಉದ್ದದ ಮಂಗಳಸೂತ್ರವನ್ನು ಧರಿಸಿದರೆ ಮಗಳ ಕೆಲಸ ಮಾಡುವಾಗ ಅಡೆತಡೆಯುಂಟಾಗುತ್ತದೆ ಎಂದು ಐಶು ಮಂಗಳಸೂತ್ರವನ್ನು ಚಿಕ್ಕದಾಗಿ ವಿನ್ಯಾಸ ಮಾಡಿಸಿಕೊಂಡರು.

Advertisement
Share this on...