90 ರ ದಶಕದ ಕ್ರಿಕೆಟಿಗನಿಗೆ ಕ್ಲೀನ್ ಬೋಲ್ಡ್ ಆಗಿದ್ದ ಮಾಧುರಿ..! ಆ ಕ್ರಿಕೆಟಿಗ ಯಾರು ಗೊತ್ತಾ..?

in ಮನರಂಜನೆ 16 views

ಬಾಲಿವುಡ್ ಗೂ ಕ್ರಿಕೆಟ್ ಮೈದಾನಕ್ಕೂ ಬಹಳ ಹಳೆಯ ನಂಟ್ಟಿದೆ. ಕ್ರಿಕೆಟಿಗರು ಮತ್ತು ಬಾಲಿವುಡ್ ಬೆಡಗಿಯರ ಮಧ್ಯೆ ಪ್ರೀತಿ ಹುಟ್ಟುವುದು ಹಿಂದಿನಿಂದಲೂ ನಡೆದುಕೊಂಡು ಬಂದ ಪದ್ಧತಿಯಂತಾಗಿದೆ. ಅಂತೆಯೇ 90 ರ ದಶಕದ ನಟಿ ಮಾಧುರಿ ದೀಕ್ಷಿತ್ ಕೂಡ ಕ್ರಿಕೆಟ್ ಆಟಗಾರನೊರ್ವನ ಪ್ರೀತಿಯ ಬಲೆಯಲ್ಲಿ ಬಿದ್ದಿದ್ದರು.

Advertisement

 

Advertisement

Advertisement

 

Advertisement

90 ರ ದಶಕದ ಪಡ್ಡೆಹುಡುಗರ ಕನಸಿನ ರಾಣಿಯಾಗಿದ್ದ ಮಾಧುರಿ ದೀಕ್ಷಿತ್ ರವರ ಹೆಸರು ಈ ಹಿಂದೆಯೇ ಭಾರತದ ಕ್ರಿಕೆಟ್ ಆಟಗಾರನೊಂದಿಗೆ ಕೇಳಿಬಂದಿತ್ತು. ಮಾಧುರಿ ದೀಕ್ಷಿತ್ ರವರ ಹೆಸರು ಟೀಮ್ ಇಂಡಿಯಾದ ಮಾಜಿ ಕ್ರಿಕೆಟ್ ಆಟಗಾರ ಅಜಯ್ ಜಡೇಜಾರೊಂದಿಗೆ ಕೇಳಿಬಂದಿತ್ತು. ಜೊತೆಗೆ ಇವರಿಬ್ಬರು ಮದುವೆಯಾಗುತ್ತಾರೆ ಎಂದು ಹೇಳಲಾಗಿತ್ತು. ಆದರೆ ಗಾಳಿಸುದ್ದಿಯಾಗಿ ಬಂದ ಮಾತುಗಳು ಗಾಳಿಯಲ್ಲಿಯೇ ತೇಲಿ ಹೋಗಿದ್ದವು.

 

 

ಅಜಯ್ ಜಡೇಜಾ ಮತ್ತು ಮಾಧುರಿ ಮೊದಲಿಗೆ ಜಾಹೀರಾತುವೊಂದರ ಫೋಟೋಶೂಟ್ ವೇಳೆ ಭೇಟಿಯಾಗಿದ್ದರು. ಈ ವೇಳೆ ಭೇಟಿಯಲ್ಲಿ ಪರಿಚಯವಾಗಿ ನಂತರ ಪರಿಚಯ ಪ್ರೀತಿಯಾಗಿ ಬದಲಾಗಿತ್ತು. ಆಗ ಭಾರತ ಕ್ರಿಕೆಟ್ ತಂಡದ ಕಾಯಂ ಆಟಗಾರನಾಗಿದ್ದ ಅಜಯ್ ಜಡೇಜಾ ನಟಿ ಮಾಧುರಿ ಜೊತೆ ಆಗಾಗ ಕಾಣಿಸಿಕೊಳ್ಳುತ್ತಿದ್ದರು. ಆಗ ತಾನೆ ಸಿನಿಮಾದಲ್ಲಿ ಹಿಟ್ ಮೇಲೆ ಹಿಟ್ ಕೊಡುತ್ತಿದ್ದ ಮಾಧುರಿ ಕೂಡ ಅಜಯ್ ರವರಿಗೆ ಕ್ಲೀನ್ ಬೋಲ್ಡ್ ಆಗಿದ್ದರು. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಅಜಯ್ ಹಾಗೂ ಮಾಧುರಿ ಮದುವೆಯಾಗಲು ಕೂಡ ತಯಾರಿ ನಡೆಸಿದ್ದರು.

 

ಆದರೆ ರಾಜಮನೆತನದ ಹುಡುಗನಾಗಿದ್ದ ಅಜಯ್ ಮಾಧುರಿಯನ್ನ ಮದುವೆಯಾಗುವುದು ಅವರ ಕುಟುಂಬಸ್ಥರಿಗೆ ಇಷ್ಟವಿರಲಿಲ್ಲ. ಈ ಕಾರಣದಿಂದ ಇವರ ಪ್ರೀತಿ ಮುರಿದುಬಿತ್ತು. ಆನಂತರ ಅಜಯ್ ಕ್ರಿಕೆಟ್’ನಲ್ಲಿ ಬಿಜಿ಼ಯಾದರು. ಬಾಲಿವುಡ್ ನಲ್ಲಿ ಹೆಚ್ಚು ಅವಕಾಶಗಳು ಬರುತ್ತಿದ್ದ ಕಾರಣ ಮಾಧುರಿ ಸಹ ಸಿನಿಮಾ ಮಾಡುತ್ತಾ ಅಜಯ್ ಜೊತೆಗಿನ ಪ್ರೀತಿಗೆ ಬ್ರೇಕ್ ಹಾಕಿದರು.
ಇದಾದ ನಂತರ ಅಜಯ್ ಜಡೇಜಾ ಫಿಕ್ಸಿಂಗ್ ನಲ್ಲಿ ಸಿಕ್ಕಿ ಬಿದ್ದು 5 ವರ್ಷ ನಿಷೇಧಕ್ಕೆ ಒಳಗಾದರು.

 

 

ಈ ಮೂಲಕ 1992 ರಿಂದ 2000ದವರೆಗೆ ಭಾರತದ ತಂಡಕ್ಕಾಗಿ ಆಡಿದ ಅಜಯ್ ಜಡೇಜಾರವರ ಕ್ರಿಕೆಟ್ ಜೀವನ ಮುಗಿದುಹೋಗಿತ್ತು. ಆದರೆ ಈ ನಡುವೆ ಬಾಲಿವುಡ್ ನಲ್ಲಿ ರಾಣಿಯಾಗಿ ಮೆರೆದ ಮಾಧುರಿ ಸೂಪರ್ ಹಿಟ್ ಸಿನಿಮಾಗಳನ್ನು ಕೊಟ್ಟು ಬಾಲಿವುಡ್ ಸಿನಿರಂಗದಲ್ಲಿ ಮೇರು ನಟಿಯಾಗಿ ಬೆಳೆದು ನಿಂತರು.

 

 

ಅಜಯ್ ನಂತರ ಸಂಜಯ್ ದತ್ ಅವರ ಪ್ರೀತಿ ಬಲೆಯಲ್ಲಿ ಸಿಲುಕಿದ ಮಾಧುರಿ ಕೆಲಕಾಲ ಸಂಜಯ್ ದತ್ ಜೊತೆ ಡೇಟಿಂಗ್ ಕೂಡ ಮಾಡುತ್ತಿದ್ದರು. 1991 ರ ‘ಸಾಜನ್’ ಸಿನಿಮಾದಲ್ಲಿ ಸಂಜಯ್ ಮತ್ತು ಮಾಧುರಿಗೆ ಪ್ರೇಮಾಂಕುರವಾಗಿತ್ತು. ಈ ನಡುವೆ ಸಂಜಯ್ ದತ್ ರವರು ‘ಕಳನಾಯಕ್’ ಸಿನಿಮಾದಲ್ಲಿ ನಟಿಸುವಾಗ ಜೈಲಿಗೆ ಹೋದರು. ಆಗ ಇವರಿಬ್ಬರ ಪ್ರೀತಿಯು ಮುರಿದುಬಿತ್ತು. ನಂತರ ಮಾಧುರಿ 1999 ರಲ್ಲಿ ಶ್ರೀ ರಾಮ್ ಮಾಧವ್ ನೇನಿ ಯವರನ್ನು ಮದುವೆಯಾದರು.

– ಸುಷ್ಮಿತಾ

Advertisement
Share this on...