ಅಜಯ್-ವಿಜಯ್ ಚಿತ್ರದ ನಟ ಮುರುಳಿ ಮಗ ಯಾರು ಗೊತ್ತಾ..? ಈತ ದೊಡ್ಡ ಸ್ಟಾರ್ ನಟ..?

in ಕನ್ನಡ ಮಾಹಿತಿ/ಸಿನಿಮಾ 348 views

ಕನ್ನಡ ಚಿತ್ರರಂಗದಲ್ಲಿ ಒಂದು ಹೊಸ ಅಲೆಯನ್ನು ಸೃಷ್ಟಿ ಮಾಡಿದ ಚಿತ್ರ ಭೂತಯ್ಯನ ಮಗ ಅಯ್ಯು ಈ ಸಿನಿಮಾವನ್ನು ಅಂದಿನ ಕನ್ನಡದ ಖ್ಯಾತ ನಿರ್ದೇಶಕ ಎಸ್. ಸಿದ್ದಲಿಂಗಯ್ಯ ನಿರ್ದೇಶನ ಮಾಡಿದ್ದರು. ಕನ್ನಡ ಚಿತ್ರರಂಗದಲ್ಲಿ ಹೊಸತನಕ್ಕೆ ತುಡಿಯುತ್ತಿದ್ದ ನಿರ್ದೇಶಕರಲ್ಲಿ ಸಿದ್ದಲಿಂಗಯ್ಯ ಕೂಡ ಒಬ್ಬರು. ಇವರ ಮಗ ತಮಿಳಿನ ನಟ ಮುರಳಿ. ತಮಿಳು ಚಿತ್ರರಂಗದಲ್ಲಿ 80-90ರ ದಶಕದಲ್ಲಿ ಸ್ಟಾರ್ ನಟರಾಗಿ ಮಿಂಚಿದ್ದರು ನಟ ಮುರಳಿ. 1982 ರಲ್ಲಿ ‘ಗೆಲುವಿನ ಹೆಜ್ಜೆ’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಹೆಜ್ಜೆಯಿಟ್ಟರು. ನಂತರ ಪ್ರೇಮಪರ್ವ, ಬಿಳಿಗುಲಾಬಿ, ಅಜೇಯ, ಪ್ರೇಮ ಗಂಗೆ, ತಾಯಿ ಕೊಟ್ಟ ತಾಳಿ ಇನ್ನು ಮುಂತಾದ ಕೆಲವು ಚಿತ್ರಗಳಲ್ಲಿ ನಟಿಸಿದ್ದರು. ಆದರೆ ಕನ್ನಡ ಚಿತ್ರರಂಗ ಮುರಳಿಯವರ ಹೆಜ್ಜೆ ಗುರುತುಗಳನ್ನು ಅಷ್ಟಾಗಿ ಗುರುತಿಸಲಿಲ್ಲ. ಇವರು ಕನ್ನಡ ಸಿನಿಮಾಗಳಲ್ಲಿ ನಟಿಸುತ್ತಿರುವ ಸಮಯದಲ್ಲಿಯೇ ತಮಿಳಿನಲ್ಲೂ ಕೆಲವು ಸಿನಿಮಾಗಳಲ್ಲಿ ನಟಿಸಲು ಅವಕಾಶಗಳು ಬರುತ್ತಿದ್ದವು. ಕನ್ನಡದಲ್ಲಿ ಅವಕಾಶಗಳು ಕಡಿಮೆಯಾದಾಗ ತಮಿಳು ಚಿತ್ರರಂಗಕ್ಕೆ ತಮ್ಮ ಫುಲ್ ಟೈಮ್ ಮೀಸಲಿಟ್ಟರು.

Advertisement

Advertisement

ಅಜಯ್-ವಿಜಯ್ ಚಿತ್ರದ ನಂತರ ಕನ್ನಡ ಚಿತ್ರರಂಗದ ಕಡೆ ಮತ್ತೆ ಯು-ಟರ್ನ್ ಹೊಡೆಯಲಿಲ್ಲ ನಟ ಮುರುಳಿ. ಮುರಳಿಯವರ ಕಲರ್ ಮತ್ತು ಬಾಡಿಫಿಟ್ನೆಸ್ ಅನ್ನು ಕಂಡ ಅಂದಿನ ತಮಿಳು ನಿರ್ದೇಶಕರು ಪರವಾಗಿಲ್ಲ ಹುಡುಗ ತಮಿಳು ನೇಟಿವಿಟಿಗೆ ಸೆಟ್ ಆಗ್ತಾನೆ ಎಂದು ತಮ್ಮ ಸಿನಿಮಾಗಳಲ್ಲಿ ಅವಕಾಶ ನೀಡಿದರು. ಕನ್ನಡದಲ್ಲಿ ಸಕ್ಸಸ್ ಕಾಣದ ಮುರುಳಿ ತಮಿಳು ಚಿತ್ರರಂಗದಲ್ಲಿ ಸ್ಟಾರ್ ನಟರಾಗಿ ಬೆಳೆದರು. ತಮಿಳಿನಲ್ಲಿ ಸುಮಾರು 90 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ನಟ ಮುರಳಿ 2009 ರಲ್ಲಿ ತಮ್ಮ ಮಗ ಅಥರ್ವರವರನ್ನು ತಮಿಳು ಸಿನಿಮಾವೊಂದರ ಮೂಲಕ ಚಿತ್ರರಂಗಕ್ಕೆ ನಾಯಕನಾಗಿ ಪರಿಚಯ ಮಾಡಿದರು. ಕನ್ನಡದಲ್ಲಿ ತಮ್ಮ ಮಗನನ್ನು ಹೀರೋ ಮಾಡಬೇಕೆಂದು ಕನ್ನಡ ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದರು ನಟ ಮುರಳಿ. ಮಗನ ಮೊದಲ ತಮಿಳು ಚಿತ್ರ ಮುರಳಿಯವರ ಕೊನೆಯ ಚಿತ್ರವಾಗಿದ್ದು ದುರಂತದ ಸಂಗತಿ.

Advertisement

Advertisement

ನಟ ಮುರಳಿಯವರ 26 ವರ್ಷಗಳ ಸಿನಿಮಾರಂಗದ ಸುದೀರ್ಘ ಪಯಣಕ್ಕೆ ಒಂದು ದಿನ ರೆಡ್ ಸಿಗ್ನಲ್ ಬಿದ್ದಿತ್ತು. ಚಿತ್ರರಂಗದಲ್ಲಿ ತಮ್ಮ ಮಗನ ಬೆಳವಣಿಗೆಯನ್ನು ಕಂಡು ಖುಷಿ ಪಡಬೇಕು. ತಮ್ಮ ಮಕ್ಕಳ ಏಳಿಗೆಗೆ ತಾನು ದಾರಿದೀಪವಾಗಬೇಕು ಎಂದುಕೊಂಡಿದ್ದ ಮುರಳಿಯವರು ಸೆಪ್ಟೆಂಬರ್ 8, 2010 ರಂದು ಕೇವಲ 46 ವರ್ಷಕ್ಕೆ ಹೃದಯಾಘಾತದಿಂದ ವಿಧಿವಶರಾದರು. ಮುರಳಿಯವರ ನಿಧನದ ಸುದ್ದಿ ತಿಳಿದಾಗ ಇಡೀ ತಮಿಳು ಹಾಗೂ ಕನ್ನಡ ಚಿತ್ರರಂಗ ಒಂದು ಕ್ಷಣ ಮೌನವಾಯಿತು. ಎಲ್ಲರ ಕಣ್ಣಲ್ಲೂ ನೀರು ಜಾರಿತು. ಬದುಕೆಂಬ ಸಿನಿಮಾ ರಂಗದಲ್ಲಿ ದೇವರು ಕರೆದಾಗ ಮಧ್ಯಂತರದಲ್ಲಿ ಎದ್ದು ಹೋದ ನಟರಲ್ಲಿ ನಟ ಮುರಳಿ ಕೂಡ ಒಬ್ಬರು. ಇಂದು ತಮಿಳು ಚಿತ್ರರಂಗದಲ್ಲಿ ನಟ ಮುರಳಿಯವರ ಮಗ ಅಥರ್ವ ಹಲವಾರು ಸಿನಿಮಾಗಳಲ್ಲಿ ನಟಿಸಿ ನಟರಾಗಿ ಬೆಳೆದಿದ್ದಾರೆ.

– ಸುಷ್ಮಿತಾ

Advertisement
Share this on...