103 ವರ್ಷದ ಅಜ್ಜಿ, ಕರೊನಾಗೆ ಸೆಡ್ಡು ಹೊಡೆದ ಖುಷಿಯಲ್ಲಿ ಮಾಡಿದ್ದೇನು ? ನೀವೆ ನೋಡಿ ಆಶ್ಚರ್ಯಪಡ್ತೀರಾ !

in ಕನ್ನಡ ಮಾಹಿತಿ 18 views

ಸಾಮಾನ್ಯವಾಗಿ ವಯಸ್ಸಾದ ವೃದ್ಧರಿಗೆ ರೋಗ ನಿರೋಧಕ ಶಕ್ತಿ ಕಡಿಮೆ ಇರುವುದರಿಂದ ಅಂಥವರಿಗೆ ಕರೋನಾ ಸೋಂಕು ಹರಡಿದರೆ ಬದುಕುಳಿಯುವುದು ಕಷ್ಟ ಎಂದು ಹೇಳಲಾಗುತ್ತದೆ . ವಿಶ್ವದಾದ್ಯಂತ ಅನೇಕ ವೃದ್ಧ ವೃದ್ಧೆಯರು ಇದನ್ನು ಸುಳ್ಳು ಮಾಡಿ  ಕರೊನಾದಿಂದ ಗೆದ್ದು ಬಂದಿದ್ದಾರೆ. ಅಮೆರಿಕದ ಜೆನ್ನಿ ಸ್ಟೇಂಜಾ ಎಂಬ ವೃದ್ಧೆಯಲ್ಲಿ ಕರೋನಾ ಸೋಂಕು ಕಾಣಿಸಿಕೊಂಡಿತ್ತು. ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿತ್ತು .  ಆ ಅಜ್ಜಿಗೆ ವಯಸ್ಸು 103 ಆದ್ದರಿಂದ ಏನಾಗುತ್ತದೋ ಎಂದು  ಕುಟುಂಬಸ್ಥರಿಗೆಲ್ಲ  ಬಹಳ  ಭಯವಾಗಿತ್ತು. ಆದರೆ ಇದನ್ನೆಲ್ಲ ಮೀರಿ ಜೆನ್ನಿ  ಸ್ಟೇಂಜಾ ಕರೊನಾಗೆ  ಸೆಡ್ಡು ಹೊಡೆದಿದ್ದಾರೆ.

Advertisement

Image Credit : Craig Paulsen/Twitter

Advertisement

Advertisement

ಸುಮಾರು 58  ದಿನಗಳ ಕಾಲ ಆಸ್ಪತ್ರೆಯಲ್ಲಿ ಕರೊನಾದೊಂದಿಗೆ ಹೋರಾಡಿ ಗೆದ್ದು ಬಂದಿದ್ದಾರೆ. ವಾಷಿಂಗ್ಟನ್ ನ ಈಸ್ಟನ್ ನಲ್ಲಿ ವಾಸವಿರುವ ಈಕೆ ಇಬ್ಬರು ಮಕ್ಕಳು,  ಮೂವರು ಮೊಮ್ಮಕ್ಕಳು,  ನಾಲ್ಕು ಮರಿ ಮೊಮ್ಮಕ್ಕಳು,  ಮತ್ತು ನಾಲ್ಕು ಗಿರಿ ಮಕ್ಕಳನ್ನು ಹೊಂದಿದ್ದಾರೆ. ಈ ಬಗ್ಗೆ ಜೆನ್ನಿ ಮೊಮ್ಮಗಳಾದ ಶೆಲೈ  ಗನ್   ಮಾತನಾಡಿದ್ದು ನಮ್ಮ ಅಜ್ಜಿ ಕೋರನ ವೈರಸ್ ನಿಂದ ಗುಣಮುಖವಾಗಿದ್ದಾರೆ. ಸದಾ ಫೈಟಿಂಗ್ ಸ್ಪಿರಿಟ್ ಹೊಂದಿದ್ದ ಅವರು  ಯಾವುದನ್ನು ಬಿಟ್ಟುಕೊಡುತ್ತಿರಲಿಲ್ಲ.

Advertisement

 

ಹಾಗಾಗಿಯೇ ಕರೊನಾದಿಂದ ಗೆದ್ದು ಬಂದಿದ್ದಾರೆ ಎಂದು  ಹೇಳಿಕೊಳ್ಳುತ್ತಾರೆ. ಈ ಖುಷಿಯನ್ನು ಕುಟುಂಬಸ್ಥರು ಮತ್ತು ಜೆನ್ನಿಸ್ಟೇಂಜಾ ರವರು ಚಿಲ್ಡ್ ಬಿಯರ್ ಕುಡಿಯುವುದರ ಮೂಲಕ ಸಂಭ್ರಮಾಚರಣೆಯನ್ನು ಮಾಡಿದರು. ಈಕೆಯ ಧೈರ್ಯ ಮತ್ತು ಬದುಕುವ ಛಲ ರೀತಿಯನ್ನು ನಮ್ಮ ಯುವಕರು ಮತ್ತು  ಎಲ್ಲಾ ರೋಗಿಗಳು  ಅಳವಡಿಸಿಕೊಳ್ಳಲೇಬೇಕು.

Advertisement
Share this on...