ತನ್ನ ತಾಯಿಗೆ ಬೇಗ ಮುಕ್ತಿ ಸಿಗಲಿ ಎಂದು ದೇವರಲ್ಲಿ ಬೇಡಿಕೊಂಡಿದ್ದ ಸ್ಟಾರ್ ನಟ….!

in ಕನ್ನಡ ಮಾಹಿತಿ/ಸಿನಿಮಾ 88 views

ಪ್ರತಿಯೊಬ್ಬ ಮನುಷ್ಯನು ಹುಟ್ಟಿದ ಮೇಲೆ ಸಾಯಲೇಬೇಕು. ಹುಟ್ಟು ಆಕಸ್ಮಿಕ ಆದರೆ ಸಾವು ನಿಶ್ಚಿತ. ಈ ಭೂಮಿಯ ಮೇಲೆ ಹುಟ್ಟಿದ ಪ್ರತಿಯೊಂದು ಜೀವಿಯು ಒಂದಲ್ಲ ಒಂದು ದಿನ ಸಾಯಲೇ ಬೇಕು. ಸಾವಿಗೆ ಸಾವಿರ ಕಾರಣಗಳಿರುತ್ತವೆ. ಕೆಲವರಿಗೆ ಬದುಕು ಸುಂದರವಾಗಿರಬಹುದು ಆದರೆ ಸಾವು ತುಂಬಾ ಭೀಕರವಾಗಿರುತ್ತದೆ.
ತೆಲುಗಿನ ಖ್ಯಾತ ನಟ ಎವರ್ಗ್ರೀನ್ ಹೀರೋ ಟಾಲಿವುಡ್ ನಲ್ಲಿ ಇಂದಿಗೂ ಮನೆ ಮಾತಾಗಿಯೇ ಉಳಿದಿರುವ 58 ರ ಹರೆಯದ ನಾಯಕ ನಟ ಅಕ್ಕಿನೇನಿ ನಾಗಾರ್ಜುನ. ಅಕ್ಕಿನೇನಿ ನಾಗಾರ್ಜುನ ಕೇವಲ ಲವರ್ ಬಾಯ್ ಪಾತ್ರಗಳಲ್ಲದೆ ಭಕ್ತಿ ಪ್ರಧಾನ ಚಿತ್ರಗಳಲ್ಲಿ ಅದ್ಭುತವಾಗಿ ನಟಿಸಿ ಕೇವಲ ತೆಲುಗು ಚಿತ್ರರಂಗವಲ್ಲದೆ ಭಾರತ ಚಿತ್ರರಂಗದಲ್ಲೇ ಸೈ ಎನಿಸಿಕೊಂಡು ಕೋಟಿ ಕೋಟಿ ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಂಡಿದ್ದಾರೆ. ತನ್ನ ವೃತ್ತಿ ಕ್ಷೇತ್ರದಲ್ಲಿ ಉನ್ನತ ಸ್ಥಾನದಲ್ಲಿದ್ದರು ವೈಯಕ್ತಿಕವಾಗಿ ತುಂಬಾ ನೋವುಗಳನ್ನು ಮನಸ್ಸಿನಲ್ಲಿ ಅವಿತಿಟ್ಟುಕೊಂಡಿದ್ದರು. ಅದರಲ್ಲಿ ಅಕ್ಕಿನೇನಿ ನಾಗಾರ್ಜುನ ಅವರ ತಾಯಿ ಅನ್ನಪೂರ್ಣ ಸಾವು ಕೂಡ ಒಂದು. ನಾಗಾರ್ಜುನರವರಿಗೆ ಅವರ ತಾಯಿ ಎಂದರೆ ತುಂಬಾ ಅಭಿಮಾನ ಮತ್ತು ಪ್ರೀತಿ. ಆದರೆ ಆಕೆ ಸಾಯಬೇಕೆಂದು ತಿರುಪತಿ ತಿಮ್ಮಪ್ಪನನ್ನು ಬೇಡಿಕೊಂಡಿದ್ದರಂತೆ ನಾಗಾರ್ಜುನ.

Advertisement

Advertisement

ಒಬ್ಬ ಮಗ ತನ್ನ ಸಾವನ್ನು ಕೋರಿ ಕೊಳ್ಳುವುದೇಂದರೆ ಏನು? ನಂಬಬೇಕೋ ಬೇಡವೋ? ಅನ್ನುವಷ್ಟು ವಿಚಿತ್ರವಾಗಿದೆ ಅಲ್ವಾ? ಆದರೆ ನಿಜ. ವಾಸ್ತವವಾಗಿ 70 ವರ್ಷ ದಾಟಿದ ಅನ್ನಪೂರ್ಣರವರ ಆರೋಗ್ಯ ಕ್ಷೀಣಿಸಿತು. ಸತತ 3 ವರ್ಷ ಆಕೆ ಸಂಪೂರ್ಣ ಹಾಸಿಗೆ ಹಿಡಿದಿದ್ದರು. ಸಾಕಷ್ಟು ಹಣ ಇದ್ದಿದ್ದರಿಂದ ಆಕೆಯನ್ನು ಹಾಸಿಗೆ ಮೇಲೆ ಮಹಾರಾಣಿಯಂತೆ ನೋಡಿಕೊಳ್ಳುವುದು ಅಕ್ಕಿನೇನಿ ಕುಟುಂಬಕ್ಕೆ ದೊಡ್ಡ ಕಷ್ಟವೇನೂ ಆಗಿರಲಿಲ್ಲ. ಆಕೆ ಮಾತ್ರ ಹಾಸಿಗೆಯ ಮೇಲೆ ದಿನನಿತ್ಯ ನರಳುತ್ತಿದ್ದರು. ಆಕೆಗೆ ಸತತವಾಗಿ ಡಯಾಲಿಸಿಸ್ ಮಾಡಬೇಕಾಗಿತ್ತು. ರಾತ್ರಿ-ಹಗಲು ನಿದ್ದೆಯಿಲ್ಲದೆ ದೇಹದಲ್ಲಿ ನೋವು ತುಂಬಾ ಬಾಧಿಸುತ್ತಿತ್ತು ಅನ್ನಪೂರ್ಣರವರಿಗೆ. ತನ್ನ ತಾಯಿಯ ನೋವನ್ನು ನೋಡಿದ ನಾಗಾರ್ಜುನರವರಿಗೆ ಮನಸ್ಸು ತುಂಬಾ ಬಾಧಿಸುತ್ತಿತ್ತು. ಆದರೆ ಅವರ ಕೈಯಲ್ಲಿ ಏನೂ ಇರಲಿಲ್ಲ.

Advertisement

 

Advertisement

2011 ಡಿಸೆಂಬರ್ 28 ರ ಆ ದಿನ ಅನ್ನಪೂರ್ಣರವರ ಸ್ಥಿತಿ ವಿಷಮಿಸಿತು. ಉಸಿರಾಡಲು ಶಕ್ತಿಯಿಲ್ಲದೆ ಆಕೆ ಮೃತ್ಯುನೊಂದಿಗೆ ಸೇಣಸುತ್ತಿದ್ದರು. ತನ್ನ ತಾಯಿಯ ನೋವನ್ನು ನೋಡಲಾರದೆ ಆ ಪರಿಸ್ಥಿತಿಯಲ್ಲಿನ ತಿರುಪತಿ ತಿಮ್ಮಪ್ಪನನ್ನು ಬೇಡಿಕೊಂಡಿದ್ದರು. ಅಲ್ಲಿಯವರೆಗೂ ತನ್ನ ತಾಯಿಯನ್ನು ಕಾಪಾಡು ಸ್ವಾಮಿ ಎಂದು ಬೇಡಿಕೊಳ್ಳುತ್ತಿದ್ದ ನಾಗಾರ್ಜುನ ಆ ಬಾರಿ ಮಾತ್ರ ಸ್ವಾಮಿ ಈ ಬಾಧೆಯಿಂದ ನನ್ನ ತಾಯಿಗೆ ಮರಣವನ್ನು ಪ್ರಸಾದಿಸಿ ನನ್ನ ತಾಯಿಗೆ ವಿಮುಕ್ತಿ ನೀಡೆಂದು ಬೇಡಿಕೊಂಡಿದ್ದರು.
ಬೆಂಗಳೂರಿಗೆ ಹೊರಟಿದ್ದ ನಾಗಾರ್ಜುನ ಅಲ್ಲಿ ಫ್ಲೈಟ್ ನಿಂದ ಇಳಿಯುವಷ್ಟರಲ್ಲಿ ತನ್ನ ಕೋರಿಕೆ ತೀರಿಸು ಎಂದು ತಿಮ್ಮಪ್ಪನನ್ನು ಬೇಡಿಕೊಳ್ಳುತ್ತಾರೆ. ಸರಿಯಾಗಿ ನಾಗಾರ್ಜುನ ಬೆಂಗಳೂರಿನಲ್ಲಿ ಇಳಿಯುವ ಹೊತ್ತಿಗೆ ಅನ್ನಪೂರ್ಣ ತೀರಿಹೋಗಿದ್ದಾರೆ ಎಂದು ಪೋನ್ ಕಾಲ್ ಬರುತ್ತದೆ.

ಎದೆಯಲ್ಲಿ ತನ್ನ ತಾಯಿ ಸತ್ತು ಹೋಗಿದ್ದಾಳೆ ಎಂಬ ಬಾದೆಯಿದ್ದರು ಆಕೆಗೆ ವಿಮುಕ್ತಿ ಲಭಿಸಿದೆ ಎಂಬ ಸಂತೃಪ್ತಿಯಿಂದ ಮತ್ತೆ ಹೈದರಾಬಾದಿಗೆ ಮರಳಿದರು ನಾಗಾರ್ಜುನ. ಇದೆಲ್ಲವೂ ನಾಗಾರ್ಜುನರವರ ಬಾಯಿಂದಲೇ ಬಂದಂತಹ ಮಾತುಗಳು. ಆ ಮಧ್ಯೆ ‘ಓಂ ನಮೋ ವೆಂಕಟೇಶಾಯ’ ಸಿನಿಮಾ ಪ್ರೀರಿಲೀಸ್ ಕಾರ್ಯಕ್ರಮದಲ್ಲಿ ತಿರುಪತಿ ತಿಮ್ಮಪ್ಪ ನನಗೆ ಒಳ್ಳೆಯದು ಮಾಡಿದ ಸಂದರ್ಭಗಳು ಅನೇಕ ಇದೆ ಎಂದು ಇದನ್ನು ಉದಾಹರಣೆಯಾಗಿ ಪ್ರಸ್ತಾಪಿಸಿದ್ದರು. ಇವನ್ನೆಲ್ಲಾ ಹೇಳುತ್ತಾ ಹೇಳುತ್ತಾ ಕಣ್ಣೀರು ಸುರಿಸಿದರು ನಾಗಾರ್ಜುನ.

– ಸುಷ್ಮಿತಾ

Advertisement
Share this on...