ಬಾಲಿವುಡ್ ನಟರ ಮಕ್ಕಳಿಗೆ ಕನ್ನಡತಿಯೇ ಟೀಚರ್ … ಈಗ ಕರ್ನಾಟಕಕ್ಕೆ ಬಂದು ಏನು ಮಾಡುತ್ತಿದ್ದಾರೆ ಗೊತ್ತಾ?

in Uncategorized/ಮನರಂಜನೆ 58 views

ಕನ್ನಡ ನಾಡಿನಲ್ಲಿ ಜನಿಸಿದ ಅನೇಕ ಪ್ರತಿಭೆಗಳು ಹೊರ ರಾಜ್ಯದಲ್ಲಿ ತಮ್ಮನ್ನು ತಾವು ಸ್ಥಾಪಿಸಿಕೊಂಡು, ಕನ್ನಡದ ಹಿರಿಮೆಯನ್ನು ಉತ್ತುಂಗಕ್ಕೆ ಏರಿಸುತ್ತಿದ್ದಾರೆ. ಯಾವ ಚಿತ್ರರಂಗವೇ ನೋಡಿ ಅಲ್ಲಿ ಒಬ್ಬರಾದರು ಕನ್ನಡಿಗರು ಟಾಪ್ ಸೆಲೆಬ್ರೆಟಿಯಾಗಿ ಮಿಂಚುತ್ತಿರುತ್ತಾರೆ. ದಶಕಗಳು ಕಳೆದರು ಕನ್ನಡ ನೆಲದ ಮಣ್ಣನ್ನು ಮರೆಯದೆ ಬದುಕುತ್ತಿರುತ್ತಾರೆ. ಆದರೆ ಇನ್ನು ಕೆಲವರು, ಕನ್ನಡ ಚಿತ್ರರಂಗ ಬಿಟ್ಟು ಪರ ಭಾಷೆಯ ಕಡೆ ಹೋಗಿದ್ದೆ ತಡ ಕನ್ನಡವನ್ನು ಕೇವಲವಾಗಿ ನೋಡುವವರನ್ನು ಸಹ ನೋಡಿದ್ದೇವೆ. ಈ ಮಧ್ಯೆ ಹೆಮ್ಮೆಯ ಕನ್ನಡತಿಯೊಬ್ಬರು, ಬಾಲಿವುಡ್ ನ ಎಲ್ಲಾ ಸ್ಟಾರ್ ಮಕ್ಕಳಿಗೆ ವಿದ್ಯೆ ಹೇಳಿಕೊಡುತ್ತಿರುವ ಶಾರದೆಯಾಗಿದ್ದಾರೆ.ಅಕ್ಷತಾ ಗಣೇಶ್, ಮೈಸೂರಿನಲ್ಲಿ ಜನಿಸಿದ ಇವರು ಎಂ.ಎ. ಪದವಿ ಇಂಗ್ಲೀಷ್ ನಲ್ಲಿ ಮುಗಿಸಿದ್ದಾರೆ. ಸುಮಾರು ೧೦ ವರುಷಗಳಿಂದ ಮುಂಬೈನ ಧೀರೂಬಾಯಿ ಅಂಬಾನಿ ಇಂಟರ್‌ ನ್ಯಾಷನಲ್ ಸ್ಕೂಲ್’ನಲ್ಲಿ ಇಂಗ್ಲೀಷ್‌ ಟೀಚರ್ ಆಗಿ ಕೆಲಸವನ್ನು ನಿರ್ವಹಿಸುತ್ತಿದ್ದಾರೆ.

Advertisement

 

Advertisement

Advertisement

ಇನ್ನು ಈ ಇಂಟರ್ ಇಂಟರ್‌ ನ್ಯಾಷನಲ್ ಶಾಲೆಗೆ ಹಲವರು ಬಾಲಿವುಡ್ ತಾರೆಯರ ಮಕ್ಕಳು ಬರುತ್ತಿದ್ದು, ಈ ವಿಚಾರವನ್ನು ಸ್ವತಃ ಅಕ್ಷತಾ ಅವರೆ ತಿಳಿಸಿದ್ದಾರೆ.ಬಾಲಿವುಡ್ ನ ದಿಗ್ಗಜ ನಟರಾದ ಶಾರುಖ್ ಖಾನ್, ಅಮೀರ್ ಖಾನ್ , ಸೈಫ್ ಅಲಿ ಖಾನ್, ಜೂಹಿ ಚಾವ್ಲಾ ಸೇರಿದಂತೆ ಕ್ರಿಕೆಟ್ ಜಗ್ಗತ್ತಿನ ದೇವರು ಎಂದು ಕರೆಸಿಕೊಳ್ಳುವ ಸಚಿನ್ ತೆಂಡೂಲ್ಕರ್ ಅವರ ಮಕ್ಕಳುಗಳಿಗೆ ಈ ಕನ್ನಡತಿಯೆ ಇಂಗ್ಲೀಷ್ ಟೀಚರ್..!ಇನ್ನು ಅಕ್ಷತಾ ಅವರಿಗೆ ಸಿನಿಮಾರಂಗದಲ್ಲಿ ನಟಿಯಾಗುವ ಕನಸು, ಆದ ಕಾರಣ ಶಾಲೆ ಮುಗಿದ ನಂತರ ಪ್ರತಿ ಸಂಜೆ ಅನುಪಮ ಖೇರ್‌ ಇನ್‌ಸ್ಟೂಟ್‌ನಲ್ಲಿ ನಟನೆಯ ತರಬೇತಿಗೂ ಕೂಡ ಹೋಗುತ್ತಿದ್ದರು. ಇದೇ ವೇಳೆ ಪೃಥ್ವಿ ಅವರ ನಾಟಕ ಗುಂಪಿಗೆ ಸೇರಿಕೊಂಡು ನಾಟಕಗಳ ಪ್ರದರ್ಶನ ಮಾಡಲು ಶುರು ಮಾಡಿದರು.

Advertisement

 

ಹಿಂದಿು ರಂಗಭೂಮಿಯಲ್ಲಿ ತೊಡಗಿಸಿಕೊಂಡ ತರಬೇತಿಯನ್ನು ಪಡೆದ ಅಕ್ಷತಾ ಅವರಿಗೆ ಮೊದಮೊದಲು ಕ್ಯಾಮೆರಾವನ್ನು ಎದುರಿಸುವ ಅವಕಾಶ ಸಿಕ್ಕಿದ್ದು ಹಿಂದಿ ಹೆಸರಾಂತ ಕ್ರೈಂ ಸರಣಿಯ ಧಾರವಾಹಿಯಾದಂತಹ ಕ್ರೈಂ ಪಾಟ್ರೋಲ್ ಎಂಬ ಧಾರವಾಹಿಯ ಮೂಲಕ. ಇದಾದ ಬಳಿಕ ಕನ್ನಡದಲ್ಲಿ ‘ಸಿಲ್ಲಿ ಲಲ್ಲಿ’ ಎಂಬುವಂತಹ ಧಾರಾವಾಹಿಯ ಆಡಿಷನ್‌ ನಡೆಯುತ್ತಿದೆ ಎಂಬುದು ತಿಳಿದು ಸೀದಾ ಬೆಂಗಳೂರಿಗೆ ಬಂದ ಅಕ್ಷತಾ ಆಡಿಷನ್‌ ನೀಡುತ್ತಾರೆ. ನಂತರ ಆಡಿಷನ್ ನಲ್ಲಿ ಆಯ್ಕೆಯಾಗಿ ಇದೀಗ ಎಲ್ಲರ ಮನ ಗೆದ್ದಿದ್ದಾರೆ.

ಇದೀಗ ಕಲರ್ಸ್ ವಾಹಿನಿಯಲ್ಲಿ ಮತ್ತೊಮ್ಮೆ ಸಿಲ್ಲಿಲಲ್ಲಿ ಧಾರವಾಹಿ ಬರುತ್ತಿದ್ದು, ಇದನ್ನು ಕೂಡ ಸಿಹಿಕಹಿ ಚಂದ್ರು ಅವರೇ ನಿರ್ದೇಶಿಸಿದ್ದಾರೆ. ಎಂ ಎಸ್ ನರಸಿಂಹ ಮೂರ್ತಿ ಅವರು ಇದಕ್ಕೆ ಸಂಭಾಷಣೆ ಬರೆದಿದ್ದು, ಸಮಾಜ ಸೇವಕಿ ಲಲಿತಾಂಬ ಪಾತ್ರದಲ್ಲಿ ಅಕ್ಷತಾ ಮಿಂಚುತ್ತಿದ್ದಾರೆ. ನಿಜಕ್ಕು ಈ ಕನ್ನಡತಿಗೆ ಶ್ಲಾಘನೆ ನೀಡಬೇಕು ಅಲ್ಲವೇ?

Advertisement
Share this on...