ಬಾಲಿವುಡ್’ನ ಆಕ್ಷನ್ ಕಿಂಗ್ ಅಕ್ಷಯ್ ಕುಮಾರ್ ಒಟ್ಟು ಆಸ್ತಿ ವಿವರ ಗೊತ್ತಾ?

in Uncategorized 23 views

ಬಾಲಿವುಡ್’ನ ಖ್ಯಾತ ನಟರಲ್ಲಿ ಅಕ್ಷಯ್ ಕುಮಾರ್ ಕೂಡ ಒಬ್ಬರು. ಅವರ ಪ್ರತಿಯೊಂದು ಚಿತ್ರವೂ ಬ್ಲಾಕ್ ಬಸ್ಟರ್ ಎಂಬುದು ಈಗಾಗಲೇ ಸಾಬೀತಾಗಿದೆ. ಭಾರತದ ಶ್ರೀಮಂತ ಸೆಲೆಬ್ರಿಟಿಗಳ ಪೈಕಿ ಅಕ್ಷಯ್ ಕುಮಾರ್ ಕೂಡ ಒಬ್ಬರಾಗಿದ್ದು, ಅವರ ಬಳಿ ಸಾಕಷ್ಟು ಸಂಪತ್ತಿದೆ ಎಂಬುದು ಗೊತ್ತಿರುವ ವಿಚಾರ. ಆದರೆ ಎಷ್ಟು ಸಂಪತ್ತಿದೆ ಎಂಬ ವಿಚಾರ ನಿಮಗೆ ಗೊತ್ತಾ?. ಇಂದು ನಾವು ಅಕ್ಷಯ್ ಕುಮಾರ್ ಅವರ ಒಟ್ಟು ಸಂಪತ್ತಿನ ಬಗ್ಗೆ ಹೇಳಲಿದ್ದೇವೆ. ಬನ್ನಿ, ಮತ್ತೇಕೆ ತಡ ಅವರ ಒಟ್ಟು ಆಸ್ತಿಗಳ ವಿವರ ತಿಳಿದುಕೊಳ್ಳೋಣ.
ಅಕ್ಷಯ್ ಕುಮಾರ್ ಇದುವರೆಗೂ 100 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಅಕ್ಷಯ್ ಕುಮಾರ್ ಅವರ ಒಟ್ಟು ಆಸ್ತಿ $ 273 ಮಿಲಿಯನ್. ಅಂದರೆ 1,870 ಕೋಟಿ ರೂ.

Advertisement

 

Advertisement

Advertisement

ಅಕ್ಷಯ್ ಕುಮಾರ್ ಅವರು ಜುಹು ಬೀಚ್ನಲ್ಲಿ ಐಷಾರಾಮಿ ಮನೆ ಹೊಂದಿದ್ದಾರೆ. ಬೆಂಟ್ಲೆ, ಹೋಂಡಾ ಸಿಆರ್’ವಿ, ಮರ್ಸಿಡಿಸ್ ಮತ್ತು ಪೋರ್ಷೆ ಮುಂತಾದ ಅನೇಕ ಕಾರುಗಳನ್ನು ಹೊಂದಿದ್ದಾರೆ. ಅವರು ಮೋಟರ್ ಸೈಕಲ್’ಗಳನ್ನು ಓಡಿಸಲು ಸಹ ಇಷ್ಟಪಡುತ್ತಾರೆ, ಆದ್ದರಿಂದ ಅವರು ಅನೇಕ ಬೈಕುಗಳ ಸಂಗ್ರಹವನ್ನು ಹೊಂದಿದ್ದಾರೆ.
ಆದರೆ ಅವರು ತುಂಬಾ ಆಸ್ತಿಯನ್ನು ಹೊಂದಿದ್ದರೂ ಸಹ ಬಹಿರಂಗವಾಗಿ ದಾನ ಮಾಡುತ್ತಾರೆ ಎಂಬುದು ಗಮನಾರ್ಹ. ಇಡೀ ವಿಶ್ವವನ್ನೇ ಕಾಡುತ್ತಿರುವ ಕೊರೊನಾ ವೈರಸ್ ವಿರುದ್ಧ ಭಾರತ ಸೇರಿದಂತೆ ಬಹುತೇಕ ರಾಷ್ಟ್ರಗಳು ಹೋರಾಟ ನಡೆಸುತ್ತಿದೆ. ಈ ಸಂದರ್ಭದಲ್ಲಿ ಅಕ್ಷಯ್ ಕುಮಾರ್ ಅವರು ಪಿಎಂ ಕೇರ್ಸ್ ಫಂಡ್ಗೆ ಬರೋಬ್ಬರಿ 25 ಕೋಟಿ ರೂ. ದೇಣಿಗೆ ನೀಡಿದ್ದರು. ಅದಾದ ನಂತರ ಮತ್ತೆ ಅಕ್ಷಯ್ ಕುಮಾರ್ ಮೂರು ಕೋಟಿ ದೇಣಿಗೆ ನೀಡಿದ್ದಾರೆ.

Advertisement

 

ಆದರೆ ಅಕ್ಷಯ್ ಮೂರು ಕೋಟಿ ದೇಣಿಗೆಯನ್ನು ಪಿಎಂ ಕೇರ್ಸ್ ಫಂಡ್ಗೆ ನೀಡಿಲ್ಲ. ಬದಲಾಗಿ ಬೃಹತ್ ಮುಂಬೈ ಮಹಾನಗರ ಪಾಲಿಕೆಗೆ (ಬಿಎಂಸಿ)ಗೆ ನೀಡಿದ್ದಾರೆ. ವೈದ್ಯರು, ಆರೋಗ್ಯ ಕಾರ್ಯಕರ್ತರು ಮತ್ತು ಪೌರ ಕಾರ್ಮಿಕರು ಜನರ ಜೀವ ರಕ್ಷಣೆಗಾಗಿ ಕಷ್ಟಪಡುತ್ತಿದ್ದಾರೆ. ಹೀಗಾಗಿ ಮೊದಲಿಗೆ ಅವರ ಸುರಕ್ಷತೆಯನ್ನು ಕಾಪಾಡಬೇಕು. ಹೀಗಾಗಿ ಅವರಿಗೆ ವೈಯಕ್ತಿಕ ಸುರಕ್ಷತಾ ಸಾಧನಗಳ (ಪಿಪಿಇ) ಕಿಟ್ ಬೇಕಾಗುತ್ತದೆ. ಆದ್ದರಿಂದ ಹೆಚ್ಚಿನ ಪಿಪಿಇ ಕಿಟ್ಗಳನ್ನು ತಯಾರಿಸಲು ಸಹಾಯ ಮಾಡುವ ಉದ್ದೇಶದಿಂದ ಮೂರು ಕೋಟಿ ದೇಣಿಗೆಯಾಗಿ ನೀಡಿದ್ದಾರೆ ಅಕ್ಷಯ್.

Advertisement
Share this on...