ಹೊಸ ದಾಖಲೆ ಬರೆದ ಅಲಾ ವೈಕುಂಠಪುರಮುಲೋ, ಬುಟ್ಟಾ ಬೊಮ್ಮಾ ಹಾಡಿಗೆ ಭಾರೀ ಪ್ರತಿಕ್ರಿಯೆ !

in ಸಿನಿಮಾ 53 views

ಇದು ತೆಲುಗು ಚಿತ್ರರಂಗದ ಇತಿಹಾಸದಲ್ಲಿಯೇ ದೊಡ್ಡ ದಾಖಲೆ. ಇತ್ತೀಚೆಗೆ ಬಿಡುಗಡೆಯಾದ ಅಲ್ಲು ಅರ್ಜುನ್, ಪೂಜಾ ಹೆಗಡೆ ನಟನೆಯ ಟಾಲಿವುಡ್ ಚಿತ್ರ ಅಲಾ ವೈಕುಂಠಪುರಮುಲೋ ಹಾಡುಗಳನ್ನು ಯುಟ್ಯೂಬ್ ಚಾನೆಲ್ನಲ್ಲಿ 1 ಬಿಲಿಯನ್’ಗೂ ಹೆಚ್ಚು ವೀಕ್ಷಕರು ವೀಕ್ಷಿಸಿದ್ದು, ಎಲ್ಲಾ ದಾಖಲೆಗಳನ್ನು ಬ್ರೇಕ್ ಮಾಡಿದೆ. ವಿಶ್ವಾಸಾರ್ಹ ವರದಿಗಳ ಪ್ರಕಾರ, ಆದಿತ್ಯ ಮ್ಯೂಸಿಕ್ 2.88 ಕೋಟಿಗೆ ಸಂಗೀತದ ಹಕ್ಕನ್ನು ಖರೀದಿಸಿತ್ತು. ಇದೀಗ ಆದಿತ್ಯ ಮ್ಯೂಸಿಕ್ “ಆಡಿಯೊ ಇಷ್ಟು ದೊಡ್ಡ ಮಟ್ಟದಲ್ಲಿ ಯಶಸ್ಸನ್ನು ಗಳಿಸಿದ್ದಕ್ಕಾಗಿ ಪ್ರತಿಯೊಬ್ಬ ಸಂಗೀತ ಪ್ರಿಯರಿಗೂ ಧನ್ಯವಾದಗಳು” ಎಂದು ಟ್ವೀಟ್ ಮಾಡಿದೆ. ಚಿತ್ರದ ಸೌಂಡ್ ಟ್ರ್ಯಾಕ್ ಅನ್ನು ಚೆನ್ನಾಗಿ ಪ್ರಚಾರ ಮಾಡಲಾಗಿದ್ದು, ಇದು ಪ್ರತಿಯೊಬ್ಬರನ್ನೂ ಕಾಡ್ಗಿಚ್ಚಿನಂತೆ ಸೆಳೆದಿದೆ. ಅದರಲ್ಲೂ ಬುಟ್ಟಾ ಬೊಮ್ಮಾ ಹಾಡಿಗೆ ಭಾರೀ ಪ್ರತಿಕ್ರಿಯೆಗಳು ಕೇಳಿಬರುತ್ತಿವೆ.

Advertisement

 

Advertisement


ಬುಟ್ಟಾ ಬೊಮ್ಮಾ ಹಾಡು ಉದ್ದವಿದೆ ಎಂಬ ಕಾರಣಕ್ಕಾಗಿ ಮೊದಲಿಗೆ ಚಿತ್ರದಿಂದ ಕತ್ತರಿ ಹಾಕಬೇಕೆಂದು ನಿರ್ಧರಿಸಲಾಗಿತ್ತು. ಆದರೆ ಚಿತ್ರದ ನಿರ್ದೇಶಕ ತ್ರಿವಿಕ್ರಮ್ ಕೂಡ ಈ ಹಾಡು ರಾಷ್ಟ್ರಮಟ್ಟದಲ್ಲಿ ಈ ರೀತಿಯ ಸೌಂಡ್ ಮಾಡುತ್ತದೆ ಎಂದು ನಿರೀಕ್ಷಿಸಿರಲಿಲ್ಲ. ಅಲ್ಲದೆ, ಈ ಹಾಡಿಗೆ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಟಿಕ್ ಟಾಕ್ ಮಾಡಿದ್ದಾರೆ. ಹಿರಿಯ ನಟಿಯರಾದ ಸಿಮ್ರಾನ್, ಶಿಲ್ಪಾ ಶೆಟ್ಟಿ, ಶಮಿತಾ ಶೆಟ್ಟಿ ಮತ್ತು ಆಸ್ಟ್ರೇಲಿಯಾದ ಅಂತರರಾಷ್ಟ್ರೀಯ ಕ್ರಿಕೆಟ್ ತಾರೆ ಡೇವಿಡ್ ವಾರ್ನರ್ ಕೂಡ ಬುಟ್ಟಾ ಬೊಮ್ಮಾ ಹಾಡಿಗೆ ಹೆಜ್ಜೆ ಹಾಕಿರುವ ವಿಡಿಯೋಗಳನ್ನು ನೀವು ಈಗಾಗಲೇ ನೋಡಿರಬಹುದು.

Advertisement

 

Advertisement


ಟಿಕ್ ಟಾಕ್ ಆದಿತ್ಯರಿಗೆ 75 ಲಕ್ಷ ರೂಪಾಯಿಗಳನ್ನು ಪಾವತಿಸಿದೆ ಎಂದು ಮೂಲಗಳು ತಿಳಿಸಿದ್ದು, ಬುಟ್ಟಾ ಬೊಮ್ಮಾ ಮಾತ್ರವಲ್ಲದೆ, ರಾಮುಲೋ ರಾಮುಲಾ ಹಾಡು ಕೂಡ ಆಡಿಯೋ ವ್ಯವಹಾರಕ್ಕೆ ಸಾಕಷ್ಟು ಕೊಡುಗೆ ನೀಡಿದೆ. ಒಟ್ಟಾರೆಯಾಗಿ ಸಂಗೀತ ನಿರ್ದೇಶಕ ತಮನ್ ಅವರ ಮ್ಯಾಜಿಕ್ ನಿಜವಾಗಿಯೂ ಎಲ್ಲರಿಗೂ ಅಚ್ಚರಿ ತಂದಿದೆ.
ಅಂದಹಾಗೆ ಈ ಚಿತ್ರದಲ್ಲಿ ತೋರಿಸಿರುವ ಮನೆಯನ್ನು ನೋಡಿದವರು ಪ್ರತಿಯೊಬ್ಬರು ಬೆರಗಾಗಿದ್ದು, ಇದು ಎಲ್ಲಿದೆ ಎಂದು ಆಶ್ಚರ್ಯಚಕಿತರಾಗಿದ್ದಾರೆ. ನಿಜ ಹೇಳಬೇಕೆಂದರೆ ಈ ಮನೆ ಇರುವುದು ಹೈದರಾಬಾದ್’ನಲ್ಲಿ. ಮೊದಲಿಗೆ ಚಿತ್ರದ ನಿರ್ದೇಶಕ ತ್ರಿವಿಕ್ರಮ್ ಮತ್ತು ಕಲಾ ನಿರ್ದೇಶಕ ಪ್ರಕಾಶ್ ಅವರು ಶೂಟಿಗ್’ಗಾಗಿ ಬೇರೆ ಯಾವುದಾದರೂ ದೇಶದಲ್ಲಿ ಮನೆಯನ್ನು ಬಾಡಿಗೆ ಪಡೆಯುವ ಬಗ್ಗೆ ಯೋಚಿಸಿದ್ದರು. ಆದರೆ ನಂತರ ಹೈದರಾಬಾದ್ನಲ್ಲಿಯೇ ಅವರ ಕಲ್ಪನೆಗೆ ಸರಿಹೊಂದುವ ಮನೆ ಇರುವುದು ಅವರಿಗೆ ತಿಳಿದುಬಂದಿದ್ದು, ನಂತರ ಅಲ್ಲೇ ಚಿತ್ರೀಕರಣ ನಡೆಸಲಾಯಿತು.

Advertisement
Share this on...