ಜಗತ್ತನ್ನು ಗೆಲ್ಲಲು ಹೊರಟ ಅಲೆಕ್ಸಾಂಡರ್ ಕೊನೆಗೆ ಕೊಂಡೊಯ್ದಿದ್ದು ಏನನ್ನ ಗೊತ್ತಾ?

in ಕನ್ನಡ ಮಾಹಿತಿ 309 views

ಜಗತ್ತನ್ನು ಗೆಲ್ಲಲು ಹೊರಟ ಅಲೆಕ್ಸಾಂಡರ್ ಬಹುಶಃ ಯಾರಿಗೂ ಕೂಡಾ ಗೊತ್ತಿರದೆ ಇರಲಿಕ್ಕೆ ಸಾಧ್ಯವೇ ಇಲ್ಲ. ಅಲೆಕ್ಸಾಂಡರ್ ತನ್ನ 13 ನೇ ವಯಸ್ಸಿನಲ್ಲಿ ಒಂದು ಕೆರಳಿದ ಕುದುರೆಯನ್ನು ಕಟ್ಟಿ ಹಾಕಿ ತನ್ನ ತಂದೆಯಿಂದ ಶಹಬಾಷ್ಗಿರಿಯನ್ನು ಪಡೆದುಕೊಂಡನು.ಆವಾಗ ಅವನ ತಂದೆ ಅವನಿಗೆ “ನಿನ್ನ ಶೌರ್ಯಕ್ಕೆ ಈ ಮ್ಯಾಸಿಡೋನಿಯಾ ಸಾಮ್ರಾಜ್ಯ ಸಾಕಾಗುವುದಿಲ್ಲ”…ಎಂದು ಹೇಳಿದರು. ಆ ಕ್ಷಣದಲ್ಲಿ ಅಲೆಕ್ಸಾಂಡರ್ನಿಗೆ “ಹೇಗೆ ಸ್ವರ್ಗದಲ್ಲಿ ಇಬ್ಬರು ಸೂರ್ಯರು ಉದಯಿಸಲು ಸಾಧ್ಯವಿಲ್ಲವೋ,ಅದೇ ರೀತಿ ಈ ಪೃಥ್ವಿ ಮೇಲೆ ಇಬ್ಬರು ಸಾಮ್ರಾಟರಿರಲು ಸಾಧ್ಯವಿಲ್ಲ. ಒಬ್ಬನೇ ಸಾಮ್ರಾಟ ಇರಬೇಕು.ಅದು ನಾನೇ ಆಗಿರಬೇಕು”ಎಂಬಾಸೆ ಹುಟ್ಟಿತು.ಈ ರೀತಿಯಲ್ಲಿ ಜಗತ್ತನ್ನು ಗೆಲ್ಲಬೇಕೆಂಬ ಕನಸು ಮೊಳಕೆ ಒಡೆಯಿತು. ಉತ್ತರಭಾರತಕ್ಕೆ ಬಂದಿದ್ದ ಅಲೆಕ್ಸಾಂಡರ್ ದಕ್ಷಿಣದಲ್ಲಿರುವ ಮಹಾಸಾಗರವನ್ನು ತಲುಪಿ ತನ್ನ ವಿಶ್ವವಿಜಯಯಾನವನ್ನು ಅಂತ್ಯವಾಗಿಸುವ ಉತ್ಸಾಹದಲ್ಲಿ ಇದ್ದನು.ಆದರೆ ಅವನಲ್ಲಿದ್ದ ಉತ್ಸಾಹ ಅವನ ಸೈನಿಕರಲ್ಲಿ ಇರಲಿಲ್ಲ. ಏಕೆಂದರೆ ಅವನ ಸೈನಿಕರು ಸತತ 10 ವರ್ಷಗಳ ಕಾಲ ಯುದ್ಧದಿಂದ ಬಳಲಿದ್ದರು.ಅವರ ದೈಹಿಕ ನೋವಿನ ಜೊತೆಗೆ ಕೆಲವು ಕಾಯಿಲೆಗಳು ಅಂಟಿಕೊಂಡಿದ್ದವು.ಅಲ್ಲದೆ ಅವರಿಗೆ ಭಾರತದ ಉಷ್ಣವಲಯದ ವಾತಾವರಣದ ಪರಿಚಯವಿರಲಿಲ್ಲ.

Advertisement

Advertisement

ಭಾರತದ ಅನಿರೀಕ್ಷಿತ ಮಳೆ ಅವ್ರಿಗೆ ತಲೆ ನೋವಾಯಿತು. ಅದಕ್ಕಾಗಿ ಅವರು ವ್ಯಾಸ ನದಿಯನ್ನು ದಾಟಲು ಹಿಂದೇಟು ಹಾಕಿದರು.ಭಾರತಕ್ಕೆ ಬಂದ ಮೇಲೆ ಅಲೆಕ್ಸಾಂಡರನಿಗೆ “ಭಾರತ ಪುಟ್ಟ ದೇಶವಲ್ಲ. ಭಾರತ ನನ್ನ ಕಲ್ಪನೆಗಿಂತಲೂ ವಿಶಾಲವಾಗಿದೆ”ಎಂಬ ಸತ್ಯ ಅರಿವಾಯಿತು. ಅಲ್ಲದೆ ಅವನಿಗೆ ಗಂಗಾನದಿ ತಟದಲ್ಲಿರುವ ಬಲಿಷ್ಠ ನಂದಾ ಸಾಮ್ರಾಜ್ಯದ ಕಲ್ಪನೆ ಇತ್ತು.ಅಷ್ಟರಲ್ಲಿ ಪೋರಸನ ವಿಶ್ವಾಸದ್ರೋಹ ಅವನ ಆತ್ಮವಿಶ್ವಾಸ ಕುಗ್ಗಿಸಿತು. ಅದಕ್ಕಾಗಿ ಅಲೆಕ್ಸಾಂಡರ್ ಯುದ್ಧ ನಿಲ್ಲಿಸಿ ಗ್ರೀಸ್ ಗೆ ಮರಳಿದನು.  ಗ್ರೀಸ್ ಗೆ ಮರಳಿದ ನಂತರ ಅಲೆಕ್ಸಾಂಡರ್ ಕಾಯಿಲೆಯಿಂದ ಬಳಲಿ ಹಾಸಿಗೆ ಹಿಡಿದನು.ಅವನಿಗೆ ತನ್ನ ತಾಯಿಯನ್ನು ನೋಡಬೇಕೆಂಬ ಆಸೆ ಯಿತ್ತು.ಆದರೆ ಅವನಿಗೆ ಅವನ ಸಾವು ಸಮೀಪಿಸುತ್ತಿರುವುದು ಗೊತ್ತಾಗಿತ್ತು.

Advertisement

ನನ್ನನ್ನು ಸಾವಿನ ದವಡೆಯಿಂದ ಕಾಪಾಡಲು ಯಾರಿಂದಲೂ ಸಾಧ್ಯವಿಲ್ಲ ಎಂಬ ಸತ್ಯ ಅವನಿಗೆ ಮನದಟ್ಟಾಯಿತು. ಅದಕ್ಕಾಗಿ ತನ್ನ ಆರ್ಮಿ ಜನರಲ್ ಕರೆಸಿ 3 ಬೇಡಿಕೆಗಳನ್ನು ಅವನು ಮುಂದಿಟ್ಟನು. ಮೊದಲೆಯದಾಗಿ ನನಗೆ ಚಿಕಿತ್ಸೆ ನೀಡಿದ ವೈದ್ಯರೇ ನನ್ನ ಹೆಣವನ್ನು ಸ್ಮಶಾನದ ತನಕ ಹೊತ್ತುಕೊಂಡು ಹೋಗಬೇಕು. ಎರಡನೆಯದಾಗಿ ನಾನು ಯುದ್ಧ ಮಾಡಿ ಸಂಪಾದಿಸಿದ ಮುತ್ತು ರತ್ನ ವಜ್ರವೈಢೂರ್ಯಗಳನ್ನು ನನ್ನ ಶವದ ಮೇಲೆ ಚೆಲ್ಲಬೇಕು. ಕೊನೆಯದಾಗಿ “ನನ್ನ ಎರಡೂ ಕೈಗಳನ್ನು ಆಗಸದ ಕಡೆಗೆ ಮುಖಮಾಡಿ ನನ್ನನ್ನು ಸಮಾಧಿ ಮಾಡಬೇಕು”…ಆದ ಕಾರಣದಿಂದ ಅಲೆಕ್ಸಾಂಡರನ ಪ್ರತಿಮೆಯಲ್ಲಿ ಅವನ ಎರಡು ಕೈಯನ್ನು ಆಕಾಶದ ಕಡೆ ಎತ್ತಿ ಹಿಡಿದ ಹಾಗೆ ಚಿತ್ರಿಸಲಾಗಿದೆ.

Advertisement

ಅಲೆಕ್ಸಾಂಡರ್ ಆಸೆ ಯಾಕೆ ಅಷ್ಟು ವಿಚಿತ್ರವಾಗಿ ಇದ್ದವು ಎಂದರೆ,ನಮ್ಮ ಸಾವು ಬಂದಿದ್ದರೆ ಯಾರಿಂದಲೂ ನಮ್ಮನ್ನು ರಕ್ಷಿಸಲು ಸಾಧ್ಯವಿಲ್ಲ.ವೈದ್ಯರು ನಮ್ಮ ಜೀವನವನ್ನು ನಿಭಾಯಿಸ ಬಲ್ಲರು.ಆದರೆ ನಮಗೆ ಜೀವ ಕೊಡಲು ಸಾಧ್ಯವಿಲ್ಲ.ನಾವು ಸಂಪಾಸಿದ ಸಂಪತ್ತೆಲ್ಲಾ ನಾವು ಸಾಯುವಾಗ ಪ್ರಯೋಜನಕ್ಕೆ ಬರುವುದಿಲ್ಲ.ನಾವು ಪ್ರೀತಿಯಿಂದ ಗಳಿಸಿದಷ್ಟೇ ಕಡೆತನಕ ಜೊತೆಗಿರುವುದು.ಬರಿಗೈಯಲ್ಲಿ ಬಂದ ನಾವು ಇಡೀ ಜಗತ್ತನ್ನೇ ಗೆದ್ದರೂ ಬರಿಗೈಯಲ್ಲಿ ಹೋಗಬೇಕು ಎಂಬ ಸತ್ಯ ಅಲೆಕ್ಸಾಂಡರ್ ತಿಳಿಯಿತು.ಅದೇ ರೀತಿ ಎಲ್ಲರೂ ತಿಳಿದುಕೊಳ್ಳಬೇಕಾದ ಸನ್ನಿವೇಶ ಇದೆ.

Advertisement
Share this on...