ಆರ್ ಆರ್ ಆರ್ ಗೆ ಆಲಿಯಾ ಪಡೆದ ಸಂಭಾವನೆ ಎಷ್ಟು ಗೊತ್ತಾ…?

in ಸಿನಿಮಾ 64 views

ಬಾಲಿವುಡ್ ಕ್ಯೂಟ್ ಬೆಡಗಿ ಆಲಿಯಾ ಭಟ್ ಹಿಟ್ ಸಿನಿಮಾಗಳ ಮೂಲಕವೇ ಫೇಮಸ್. ಅವರ ಕ್ಯೂಟ್ ಆಕ್ಟಿಂಗ್ ಬಾಲಿವುಡ್ ನಲ್ಲಿ ಮೋಡಿ ಮಾಡಿದೆ. ಹೀಗಾಗಿ ಹೆಚ್ಚು ಹೆಚ್ಚು ಅವಕಾಶಗಳು ಬರುತ್ತಿವೆ. ಅದೇ ರೀತಿ ಸ್ಟಾರ್ ನಿರ್ದೇಶಕ ಎಸ್.ಎಸ್ ರಾಜಮೌಳಿ ನಿರ್ದೇಶನದ ರೌದ್ರ, ರಣ, ರುಧೀರಾ ಚಿತ್ರದಲ್ಲಿ ನಟಿಸುತ್ತಿದ್ದು ಭಾರಿ ಮೊತ್ತದ ಸಂಭಾವನೆ ಪಡೆಯುತ್ತಿದ್ದಾರಂತೆ. ಇದೇ ಮೊದಲ ಬಾರಿಗೆ ಆಲಿಯಾ ಭಟ್ ದಕ್ಷಿಣ ಭಾರತದ ಚಿತ್ರರಂಗಕ್ಕೆ ಕಾಲಿಟ್ಟಿದ್ದು ಜೂನಿಯರ್ ಎನ್ ಟಿ ಆರ್ ಹಾಗೂ ರಾಮ್ ಚರಣ್ ತೇಜ ನಟನೆಯ ಬಹುಭಾಷಾ ಸಿನಿಮಾ ರೌದ್ರ, ರಣ, ರುದೀರಾ ಚಿತ್ರದಲ್ಲಿ ನಟಿಸುತ್ತಿದ್ದಾರೆ.

Advertisement

 

Advertisement

Advertisement

 

Advertisement

ಈಗಾಗಲೇ ಈ ಚಿತ್ರದ ಫಸ್ಟ್ ಲುಕ್ ರಿಲೀಸ್ ಆಗಿದ್ದು ಸಾಕಷ್ಟು ಸದ್ದು ಮಾಡುತ್ತಿದೆ. ಬೆಂಕಿ ಹಾಗೂ ನೀರಿನ ಸಂಗಮದ ಸಂಕೇತವನ್ನ ಪೋಸ್ಟರ್ ನಲ್ಲಿ ತೋರಿಸಲಾಗಿದೆ. ಕನ್ನಡ, ತೆಲುಗು, ಹಿಂದಿ ಸೇರಿ ಒಟ್ಟು 5 ಭಾಷೆಗಳಲ್ಲಿ ಫಸ್ಟ್ ಲುಕ್ ರಿಲೀಸ್ ಆಗಿದ್ದು ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ. ಫಸ್ಟ್ ಲುಕ್ ನೋಡಿದ ಪ್ರೇಕ್ಷಕರು ಆರ್ ಆರ್ ಆರ್ ಸಿನಿಮಾದಲ್ಲಿಯೂ ರಾಜಮೌಳಿಯವರು ಮೋಡಿ ಮಾಡುತ್ತಾರೆ ಎಂದು ಆಶಯವನ್ನ ಇಟ್ಟುಕೊಂಡಿದ್ದಾರೆ.

 

 

ಅದೇ ರೀತಿ ಚಿತ್ರತಂಡ ಸಹ ಕಾರ್ಯನಿರ್ವಹಿಸುತ್ತಿದ್ದು ಸ್ಟಾರ್ ನಟ-ನಟಿಯರನ್ನು ಚಿತ್ರ ತಂಡಕ್ಕೆ ಸೇರಿಸಿಕೊಂಡಿದೆ. ಫಸ್ಟ್ ಲುಕ್ ಬಿಡುಗಡೆ ಮಾಡಿದ ಸಂದರ್ಭದಲ್ಲೇ ಆರ್ ಆರ್ ಆರ್ ವಿಸ್ಕೃತ ರೂಪವನ್ನ ರಾಜಮೌಳಿ ಬಹಿರಂಗಪಡಿಸಿದ್ದರು. ಈ ಮೂಲಕ ಆರ್ ಆರ್ ಆರ್ ಟೈಟಲ್ ನ ವಿಸ್ಕೃತ ರೂಪ ಕ್ಯೂರ್ಯಾಸಿಟಿ ತಣಿಸಿದರು.

 

 

ಅಂದ ಹಾಗೆ ಬಾಲಿವುಡ್ ಬೆಡಗಿ ಆಲಿಯಾ ಭಟ್ ರವರು ಆರ್ ಆರ್ ಆರ್ ಸಿನಿಮಾಗೆ ಹತ್ತು ದಿನಗಳ ಡೇಟ್ ನೀಡಿದ್ದು ಒಟ್ಟು 5 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ. ಅಂದರೆ ಪ್ರತಿ ದಿನಕ್ಕೆ 50 ಲಕ್ಷ ರೂಪಾಯಿಗಳನ್ನು ಆಲಿಯಾ ಪಡೆಯುತ್ತಿದ್ದಾರೆ. ನಯನತಾರ, ಪೂಜ ಅಗರ್ವಾಲ್, ಕಾಜ಼ಲ್ ಸೇರಿದಂತೆ ಇತರ ನಟಿಯರಿಗೆ 2-3 ಕೋಟಿ ರೂಪಾಯಿ ಮಾತ್ರ ಸಂಭಾವನೆ ನೀಡಲಾಗುತ್ತಿದೆ. ಆದರೆ ಆಲಿಯಾಗೆ ಕೇವಲ ಹತ್ತು ದಿನಗಳ ಚಿತ್ರೀಕರಣಕ್ಕೆ 5 ಕೋಟಿ ನೀಡಲಾಗುತ್ತಿದೆ. ಆಲಿಯಾ ಭಟ್ ಆರ್ ಆರ್ ಆರ್ ಸಿನಿಮಾದಲ್ಲಿ ನಟ ರಾಮ್ ಚರಣ್ ಗೆ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದು ಸೀತೆಯ ಪಾತ್ರ ನಿರ್ವಹಿಸುತ್ತಿದ್ದಾರೆ.

– ಸುಷ್ಮಿತಾ

Advertisement
Share this on...