“ಕೃಷಿ ಮಂತ್ರಿ ಇದ್ದಾನಲ್ಲಾ.. ಅವನ ಹರಕುಬಾಯಿಯನ್ನು ತಕ್ಷಣ ಮುಚ್ಚಿಸಿ”: ಕೋಡಿಹಳ್ಳಿ ಚಂದ್ರಶೇಖರ್

in Kannada News 80 views

ಬೆಂಗಳೂರು: ನಿಮ್ಮ ಕ್ಯಾಬಿನೆಟ್ ನಲ್ಲಿ ಯಾರೋ ಒಬ್ಬ ಕೃಷಿ ಮಂತ್ರಿ ಇದ್ದಾನಲ್ಲ. ಅಂತಹಾ ಹರಕುಬಾಯಿಗಳನ್ನು ತಕ್ಷಣ ಬಾಯಿ ಮುಚ್ಚಿಸಿ ಇಲ್ಲವಾದರೆ ನೀವು ಪರಿಣಾಮ ಎದುರಿಸಬೇಕಾಗುತ್ತದೆ ಎಂದು ರೈತ ನಾಯಕ ಕೋಡಿಹಳ್ಳಿ ಚಂದ್ರಶೇಖರ್ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ. ಇಂದು ನಡೆದ ರೈತ ಪ್ರತಿಭಟನೆ ವೇಳೆ ಮಾತನಾಡಿದ ಅವರು, ಈ ಕಾಯ್ದೆಗಳನ್ನು ವಾಪಸ್ ಪಡೆಯಿರಿ ತಕ್ಷಣ ನಾವೂ ಜಾಗ ಖಾಲಿ ಮಾಡಿಕೊಂಡು ಹೋಗುತ್ತೇವೆ. ಇಲ್ಲವಾದರೆ ನಾವು ಈ ಕರ್ನಾಟಕವನ್ನು ಬೆಂಗಳೂರನ್ನು ಉಸಿರುಗಟ್ಟುವಂತೆ ಮಾಡುತ್ತೇವೆ. ಯಡಿಯೂರಪ್ಪ ಮಾತನಾಡುತ್ತಿದ್ದಾರೆ. ನಾವು ನಿಮಗೆ ಎದುರಾಳಿಗಳಲ್ಲ. ಈ ಸಂಘಟನೆಗಳ ಮೂಲಕ ನಾವು ಸಿಎಂ ಆಗಬೇಕಿಲ್ಲ. ಅಂದ ಹಾಗೆ ನಿಮ್ಮ ಕ್ಯಾಬಿನೆಟ್ ನಲ್ಲಿ ಯಾರೋ ಒಬ್ಬ ಕೃಷಿ ಮಂತ್ರಿ ಇದ್ದಾನಲ್ಲ. ಅಂತಹಾ ಹರಕುಬಾಯಿಗಳನ್ನು ತಕ್ಷಣ ಬಾಯಿ ಮುಚ್ಚಿಸಿ ಇಲ್ಲವಾದರೆ ನೀವು ಪರಿಣಾಮ ಎದುರಿಸಬೇಕಾಗುತ್ತದೆ ಎಂದು ವಾಗ್ದಾಳಿ ನಡೆಸಿದರು.

Advertisement

Advertisement

“ನರೇಂದ್ರ ಮೋದಿಗೆ ಅಹಂಕಾರ”

Advertisement

ಪ್ರತಿಭಟನೆ ಹಿಂದೆ ಪಾಕಿಸ್ತಾನಿಗಳು, ಖಲಿಸ್ತಾನಿಗಳು ನಕ್ಸಲರು ಇದ್ದಾರೆ ಎನ್ನುತ್ತಿದ್ದಾರೆ. ಅನ್ನ ತಿನ್ನೋರು ಹೇಳೋ ಮಾತಾ ಇದು. ಬಿಜೆಪಿ ಮತ್ತು ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ಕೊಡುತ್ತೇವೆ. ನಿಮಗೆ ಈ ದುರಹಂಕಾರ ಬರಲು ನಾವೆ ಕಾರಣ. ನಿಮಗೆ ಭಾರಿ ಬಹುಮತ ಕೊಟ್ಟೆವು. ಈ ಹಿಂದೆ ಇಂದಿರಾಗಾಂಧಿಗೂ ಹೀಗೆ ಬಹುಮತ ಕೊಟ್ಟು ಎಮರ್ಜೆನ್ಸಿ ಹೇರಿಸಿಕೊಂಡೆವು‌. ಈಗ ನರೇಂದ್ರ ಮೋದಿ ಅಹಂಕಾರಕ್ಕೂ ಇದೆ ಕಾರಣ. ನರೇಂದ್ರ ಮೋದಿ ನಿನ್ನ ಮನ್ ಕಿ ಬಾತ್ ನಲ್ಲಿ ಎಂದಾದರೂ ರೈತರ ಬಗ್ಗೆ ಮಾತನಾಡಿದ್ದೀಯಾ. ಈ ಸರ್ವಾಧಿಕಾರಿ ಧೋರಣೆ, ಸರ್ವಾಧಿಕಾರತ್ವ ಧೋರಣೆ ಹೆಚ್ಚು ದಿನ ನಡೆಯೋದಿಲ್ಲ ಮಿಸ್ಟರ್ ನರೇಂದ್ರ ಮೋದಿ ಎಂದು ಏಕವಚನದಲ್ಲೇ ವಾಗ್ದಾಳಿ ನಡೆಸಿದರು.

Advertisement

ನಿಮ್ಮಪ್ಪಂದಿರದಲ್ಲ ಈ ದೇಶ. ನಮ್ಮ ಅಪ್ಪಂದಿರು ಈ ದೇಶಕ್ಕೆ ತಮ್ಮ ಎದೆ ರಕ್ತ ಬಸಿದಿದ್ದಾರೆ‌. ಈ ದೇಶವನ್ನು ಕಾರ್ಪೊರೆಟ್ ಕಂಪನಿಗಳಿಗೆ ,ಎಂಎನ್ ಸಿ ಕಂಪನಿಗಳಿಗೆ ಮಾರಲು ಹೊರಟಿದ್ದೀರಿ. ನಾವು ಅದಕ್ಕೆ ಬಿಡಲ್ಲ. ಜಾನುವಾರು ಹತ್ಯೆ ನಿಷೇಧ ಕಾಯ್ದೆ ಜಾರಿಗೆ ತರಲು ಹೊರಟಿದ್ದೀರಿ‌. ಹಸುವನ್ನು ನಾವು ಪೂಜೆ ಮಾಡೋರು ಎನ್ನುತ್ತಾರೆ. ಯಾರು ಬೇಡ ಅಂತಾರೆ ಮಾಡಿ. ಆದರೆ ಹಸುವನ್ನು ಸಾಕೋದು ಹೇಗೆ ಅಂತಾ ನಮಗೆ ಜಯನಗರ ಬಸವನಗುಡಿಯವರು ಹೇಳಿಕೊಡೋದು ಬೇಡ‌. ಈಗ ಸಂತೆಗಳಲ್ಲಿ ರೈತರು ತಮ್ಮ ಜಾನುವಾರುಗಳನ್ನು ಬಿಟ್ಟು ಹೋಗುತ್ತಿದ್ದಾರೆ ಎಂದರು.

ಲಕ್ಷಾಂತರ ಟ್ರಾಕ್ಟರ್ ಗಳ ಮೂಲಕ ರೈತರು ಇಂದು ದೆಹಲಿ ಪ್ರವೇಶ ಮಾಡಿದ್ದಾರೆ. ಹತ್ತನೆ ಸುತ್ತು ಮಾತುಕತೆ ಮುಕ್ತಾಯವಾಗುವರೆಗೆ ಕಾಯ್ದೆಗಳನ್ನು ವಾಪಸ್ ತೆಗೆಯೋದು ಬಿಟ್ಟು ಬೇರೆ ಬೇಡಿಕೆಗಳೇನಿವೆ ಹೇಳಿ ಎಂಬುದು ಸರ್ಕಾರದ ವಾದವಾಗಿತ್ತು. ಸುಪ್ರಿಂ ಕೋರ್ಟ್ ಮಧ್ಯಪ್ರವೇಶಿಸಿ ಕಾಯ್ದೆಗಳ ತಾತ್ಕಾಲಿಕ ತಡೆ ಮಾಡಿತು. ಸುಪ್ರಿಂ ಕೋರ್ಟ್ ಗೆ ಅಷ್ಟೇ ಅಧಿಕಾರ ಇರೋದು. ಹಾಗಾಗಿ ರೈತರು ಪ್ರತಿಭಟನೆ ಮುಂದುವರಿಸಿದ್ರು. ಸರ್ಕಾರ ಹನ್ಮೊಂದನೆ ಸುತ್ತಿನ ಮಾತುಕತೆ ವೇಳೆ ಕಾಯ್ದೆಗಳನ್ನು ಒಂದೂವರೆ ತಿಂಗಳು ಮುಂದೂಡುವ ಆಶ್ವಾಸನೆ ನೀಡಿತು. ಆದರೆ ರೈತರು ಒಪ್ಪಲಿಲ್ಲ. ಪರ್ಯಾಯ ಗಣರಾಜ್ಯೋತ್ಸವ ಪೆರೇಡ್ ಮಾಡಿದ್ರು.

Advertisement