ಎರಡನೇ ಮದುವೆ ರೂಮರ್ ಬಗ್ಗೆ ಅಮಲಾ ಪೌಲ್ ಹೇಳಿದ್ದಿಷ್ಟು!

in ಸಿನಿಮಾ 44 views

ನಟಿ ಅಮಲಾ ಪೌಲ್ 2010 ರಲ್ಲಿ ‘ಮೈನಾ’ ಚಿತ್ರದಲ್ಲಿ ನಟಿಸಿದ ಮೇಲೆ ತಮಿಳು ಚಿತ್ರರಂಗದಲ್ಲಿ ಕ್ಲಿಕ್ ಆದರು. ಇದಾದ ನಂತರ ಕ್ರಮೇಣ ತಮಿಳು, ತೆಲುಗು ಮತ್ತು ಮಲಯಾಳಂ, ಕನ್ನಡದಲ್ಲಿ ಅನೇಕ ಸೂಪರ್ ಹಿಟ್ ಚಿತ್ರಗಳಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ಬೋಲ್ಡ್ ಮತ್ತು ಸವಾಲಿನ ಪಾತ್ರಗಳನ್ನು ನಿರ್ವಹಿಸುತ್ತಾ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ. ಪ್ರಸ್ತುತ ಅವರು ಮೂರು ಮಹಿಳಾ ಕೇಂದ್ರಿತ ಚಿತ್ರದಲ್ಲಿ ನಟಿಸಲು ಸಜ್ಜಾಗಿದ್ದು, ಅಭಿಮಾನಿಗಳಿಗೆ ಯಾವ ರೀತಿ ಮೋಡಿ ಮಾಡಲಿದ್ದಾರೆ ಕಾದು ನೋಡಬೇಕಿದೆ.

Advertisement

 

Advertisement

Advertisement

 

Advertisement

ಅಂದಹಾಗೆ ಅಮಲಾ ನಿರ್ದೇಶಕ ಎ.ಎಲ್.ವಿಜಯ್ ಅವರಿಗೆ ವಿಚ್ಛೇದನ ನೀಡಿದ ನಂತರ, ಅವರ ವೈಯಕ್ತಿಕ ಜೀವನ ಬೇರೆಯದೆ ರೀತಿ ತಿರುವು ಪಡೆದುಕೊಂಡಿತು. ವಿಚ್ಛೇದನ ನೀಡಿದ ಕೆಲವೇ ದಿನಗಳಲ್ಲಿ ‘ಅಡೈ’ ಸಿನಿಮಾದಲ್ಲಿ ನಟಿಸಿದರು. ಈ ಸಿನಿಮಾದ ಬಿಡುಗಡೆಯ ಸಮಯದಲ್ಲಿ ಅವರು ಓರ್ವ ವ್ಯಕ್ತಿಯನ್ನು ಪ್ರೀತಿ ಮಾಡುತ್ತಿರುವುದಾಗಿ ರಿವೀಲ್ ಮಾಡಿದರು. ಅಷ್ಟೇ ಅಲ್ಲ ಆ ವ್ಯಕ್ತಿ, ನಟಿಯಾಗಿ ವೃತ್ತಿಜೀವನದಲ್ಲಿ ಮುಂದುವರಿಯಲು ಪ್ರೇರೇಪಿಸುತ್ತಾರೆ ಎಂದು ಹೇಳಿದ್ದರು.

 

 

ಈ ಎಲ್ಲಾ ವಿಷಯಗಳು ಸುದ್ದಿಯಲ್ಲಿರುವಾಗಲೇ ಕೆಲವು ವಾರಗಳ ಹಿಂದೆ ಅಮಲಾ ಮತ್ತು ಬಾಲಿವುಡ್ ಗಾಯಕ ಭವನಿಂದರ್ ಸಿಂಗ್ ಪಂಜಾಬಿ ಶೈಲಿಯಲ್ಲಿ ವಿವಾಹದ ಫೋಟೋಗಳು ಅಂತರ್ಜಾಲದಲ್ಲಿ ಕಾಣಿಸಿಕೊಂಡವು. ಆದರೆ ಈ ಜೋಡಿ ವಿವಾಹಕ್ಕೆ ಸಂಬಂಧಿಸಿದಂತೆ ಯಾವುದೇ ಪ್ರತಿಕ್ರಿಯೆ ಕೊಡಲಿಲ್ಲ.

 

 

ಇದೀಗ ಪ್ರಮುಖ ದಿನಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅಮಲಾ ಪೌಲ್ ಅವರ ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿದ್ದಾರೆ ಎಂದು ಟಾಲಿವುಡ್ ವರದಿಗಳು ತಿಳಿಸಿವೆ. ಅಮಲಾ “ನನ್ನ ಮದುವೆಗೆ ಇನ್ನೂ ಸ್ವಲ್ಪ ಸಮಯವಿದೆ. ನಾನು ಪ್ರಸ್ತುತ ಚಿತ್ರಗಳಲ್ಲಿ ನಿರತರಾಳಾಗಿದ್ದೇನೆ. ಅವುಗಳು ಮುಗಿದ ನಂತರ, ನನ್ನ ವಿವಾಹದ ಬಗ್ಗೆ ಪ್ರಕಟಿಸುತ್ತೇನೆ. ಈಗಾಗಲೇ ನನ್ನ ಪ್ರೀತಿಯ ಬಗ್ಗೆ ಮಾತನಾಡಿದ್ದೇನೆ. ಹಾಗಾಗಿ ನನ್ನ ವಿವಾಹದ ಬಗ್ಗೆಯೂ ಮಾತನಾಡುತ್ತೇನೆ. ಆದ್ದರಿಂದ ನನ್ನ ವಿವಾಹದ ಕುರಿತು ವದಂತಿಗಳನ್ನು ಹರಡಬೇಡಿ. ಸಮಯ ಬಂದಾಗ ನಾನು ಅದನ್ನು ಘೋಷಿಸುತ್ತೇನೆ” ಎಂದು ಸ್ಪಷ್ಟಪಡಿಸಿದ್ದಾರೆ.

 

 

ಸೋಶಿಯಲ್ ಮೀಡಿಯಾದಲ್ಲಿ ಸದಾ ಸಕ್ರೀಯವಾಗಿರುವ ಅಮಲಾ, ಇತ್ತೀಚೆಗಷ್ಟೇ ತಮ್ಮ ಕೇರಳದ ಮನೆಯಲ್ಲಿರುವ ನಾಯಿ, ಬೆಕ್ಕಿನ ಮರಿಗಳ ಜೊತೆ ಎಂಜಾಯ್ ಮಾಡುತ್ತಿರುವ ವಿಡಿಯೋವನ್ನು ಅಪ್ ಲೋಡ್ ಮಾಡಿದ್ದರು. ಈ ಸಮಯದಲ್ಲಿ ಅವರು “ಪ್ರತಿಯೊಂದು ಮೊದಲುಗಳು ವಿಶೇಷವಾಗಿರುತ್ತವೆ. ಇದು ಲಾಕ್ ಡೌನ್ ಆದ ಮೇಲೆ ಮೊದಲ ಮಳೆ, ನಮ್ಮ ಮನೆಯಲ್ಲಿರುವ ಪುಟ್ಟ ಪುಟ್ಟ ಮರಿಗಳಿಗೂ ಇದು ಮೊದಲ ಮಳೆ, ಇದು ನಮ್ಮ ಮನೆಯ 2020 ನೇ ಇಸವಿಯ ಮೊದಲನೇ ಮಾವಿನಕಾಯಿ, ಮಳೆ ಕೊಡುವ ಸಂತೋಷ ಅಷ್ಟಿಷ್ಟಲ್ಲ, ನೀವು ಕೇಳುತ್ತಿರುವ ಧ್ವನಿ ನನ್ನ ಅಮ್ಮನದು” ಎಂದೆಲ್ಲಾ ಬರೆದುಕೊಂಡಿದ್ದರು.

Advertisement
Share this on...