ಅಂಬಿ ಹಾಗೂ ವಿಷ್ಣು ಸ್ನೇಹಕ್ಕೆ ಮಸಿ ಬಳಿಯುತ್ತಿರುವವರು ಯಾರು ? ಸುಮಲತಾ ಹೇಳಿದ್ದೇನು..?

in Uncategorized/ರಾಜಕೀಯ/ಸಿನಿಮಾ 210 views

ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಬೆರೆತು ಹೋಗಿರುವ ನಟರೆಂದರೆ ಡಾಕ್ಟರ್ ರಾಜ್ ಕುಮಾರ್, ವಿಷ್ಣುವರ್ಧನ್, ಶಂಕರ್ ನಾಗ್ ಮತ್ತು ಅಂಬರೀಷ್. ಇವರೆಲ್ಲ ಅಗಲಿ ವರ್ಷಗಳೇ ಕಳೆದರು ಚಲನಚಿತ್ರೋದ್ಯಮಕ್ಕೆ ಮಾಡಿರುವ ಸೇವೆ ಅಪಾರ. ಚಿತ್ರರಂಗ ಇಷ್ಟು ಮಟ್ಟಕ್ಕೆ ಬೆಳೆಯಲು ಶ್ರಮ ಪಟ್ಟು ಕೆಲಸ ನಿರ್ವಹಿಸಿದ್ದಾರೆ. ಈ ದಿಗ್ಗಜರು ಕನ್ನಡ ಪ್ರೇಕ್ಷಕರಿಗೆ ನೀಡಿರುವ ಸಿನಿಮಾಗಳು ಮತ್ತು ಅವರ ಪಾತ್ರಗಳು ಇನ್ನೂ ದಶಕಗಳು ಕಳೆದರು ಮರೆಯಲು ಸಾಧ್ಯವಿಲ್ಲ. ಕನ್ನಡ ಚಿತ್ರರಂಗಕ್ಕೆ ರಾಜ್ ಅವರು ಮುತ್ತಾದರೆ, ವಿಷ್ಣು ಅವರು ಕೆರಳಿದ ಸಿಂಹ. ಇನ್ನು ಅಂಬರೀಶ್ ಅವರು ಕರುನಾಡ ಕರ್ಣನಾದರೆ ಶಂಕರ್ ನಾಗ್ ಅವರು ಆಟೋಗಳ ಮಹಾರಾಜ. ಇಲ್ಲಿಯ ತನಕ ಈ ರೀತಿಯಾದ ನಟರು ಹುಟ್ಟಿಲ್ಲ, ಯುಗ ಯುಗ ಕಳೆದರೂ ಈ ರೀತಿಯಾದ ನಟರು ಮತ್ತೆ ಹುಟ್ಟುವುದಿಲ್ಲ. ಇನ್ನು ನಮ್ಮ ಚಂದನವನದಲ್ಲಿ ಕುಚುಕುಗಳು ಎಂದ ಕೂಡಲೇ ತಕ್ಷಣ  ನೆನಪಾಗುವುದು ವಿಷ್ಣುದಾದ ಹಾಗೂ ಅಂಬಿ ಅಣ್ಣ. ಸ್ನೇಹ ಎಂದರೆ ಹೇಗಿರಬೇಕು ಎಂಬುದನ್ನು ಈ ಗೆಳೆಯರನ್ನು ನೋಡಿ ಕಲಿಯಬೇಕು. ಅವರಿಬ್ಬರ ಬಾಂದವ್ಯ ಅಷ್ಟು ಆಪ್ತವಾಗಿತ್ತು.

Advertisement

 

Advertisement

Advertisement

ಇನ್ನು ರೆಬೆಲ್ ಸ್ಟಾರ್ ಅಂಬರೀಶ್ ಅವರ ಸ್ಮಾರಕ ನಿರ್ಮಾಣ ಕಾರ್ಯಕ್ಕೆ ಮಾನ್ಯ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಅವರು ಅನುಮತಿಯನ್ನು ನೀಡಿ, ಕಂಠೀರವ ಸ್ಟುಡಿಯೋ ಆವರಣದಲ್ಲಿ ಅವರ ಸ್ಮಾರಕ ನಿರ್ಮಾಣ ಕಾರ್ಯಕ್ಕೆ ಒಪ್ಪಿಗೆ ನೀಡಲಾಗಿದೆ. ಈ ವಿಷಯವನ್ನು ಸಾಮಾಜಿಕ ಜಾಲತಾಣದಲ್ಲಿ ಅಂಬಿ ಅವರ ಪತ್ನಿ, ಸಂಸದೆ ಸುಮಲತ ಅಂಬರೀಶ್ ಅವರು ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಆದರೆ ಈ ಪೋಸ್ಟ್ ನೆಟ್ಟಿಗರನ್ನು ಕೆರಳಿಸಿದ್ದು, ವಿಷ್ಣುವರ್ಧನ್ ಅವರ ಸ್ಮಾರಕ ಕಾರ್ಯಕ್ಕೆ ಏಕೆ ಈ ಹುರುಪು ಹಾಗೂ ಉತ್ಸಾಹ ಇಲ್ಲ ಎಂದು ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ.

Advertisement

 

ನೆಟ್ಟಿಗರೊಬ್ಬರು ಈ ಪೋಸ್ಟ್ ಗೆ ಪ್ರತಿಕ್ರಿಯಿಸಿದ್ದು, ಮೇಡಮ್ ಕನ್ನಡ ಚಿತ್ರರಂಗದಲ್ಲಿ ಡಾ.ರಾಜ್ ಕುಮಾರ್ ಅವರ ನಂತರದ ಸ್ಥಾನದಲ್ಲಿ ವಿಷ್ಣು ಸರ್, ತದನಂತರ ಶಂಕರನಾಗ್ ಸಾರ್. ಆಮೇಲೆ ಅಂಬಿ ಅಣ್ಣ ಆದ್ರೂ ಕೂಡ ಭಾರತಿ ಅಕ್ಕನ ಜೊತೆ ಒಂದು ಮಾತುಕತೆ ನಡೆಸಿಲಿಲ್ಲ.. ಬಿಜೆಪಿ ಸಪೋರ್ಟ್ ರ ಅಂತಾ ಆಂಧ್ರದ ಸುಮಕ್ಕನ ಜೊತೆಗೆ ವಿಷ್ಣುವರ್ಧನ್ ಸ್ಮಾರಕಕಿಂತ ಮುಂಚಿತವಾಗಿ ಅಂಬರೀಶ್ ಸ್ಮಾರಕನಾ?’ ಎಂದು ಹರಿಹಾಯ್ದಿದ್ದಾರೆ..

 

ಇನ್ನು ಇದಕ್ಕೆ ಪ್ರತಿಕ್ರಿಯಿಸಿರುವ ಸಂಸದೆ ಸುಮಲತಾ ಅಂಬರೀಶ್ ಅವರು ವಿಷ್ಣು ಅವರ ಮೇಲೆ ನೀವು ಇಟ್ಟಿರುವ ಪ್ರೀತಿ ನೋಡಿ ನನಗೆ ಬಹಳ ಖುಷಿ ಆಗುತ್ತದೆ ಮತ್ತು ನಾನೂ ಕೂಡ ನಿಮ್ಮ ಹಾಗೆಯೇ ಅವರ ಅಭಿಮಾನಿ. ವಿಷ್ಣು ಅವರ ಸ್ಮಾರಕ ಇನ್ನು ಯಾಕೆ ಪ್ರಾರಂಭ ಆಗಿಲ್ಲ ಎಂದು ಕೆಲವರು ಕೇಳುತ್ತಿರುವುದು ನೋಡಿ ಆಶ್ಚರ್ಯವಾಗುತ್ತಿದೆ. ನಿಜವಾದ ಅಭಿಮಾನಿಗಳಿಗೆ ತಪ್ಪು ಕಲ್ಪನೆ ಬೇಡ. ಈಗಾಗಲೇ ವಿಷ್ಣುವರ್ಧನ್ ಅವರ ಸ್ಮಾರಕದ ಕೆಲಸ ಒಂದು ವರ್ಷದ ಹಿಂದೆಯೇ ಶುರುವಾಗಿದ್ದು, ಮೈಸೂರಿನ ಸಮೀಪ, ಅವರ ಕುಟುಂಬದವರ ಇಚ್ಛೆಯಂತೆ, ಸ್ಮಾರಕ ರೂಪಗೊಳ್ಳುತ್ತಿದೆ. ಸರಕಾರ ಅದಕ್ಕಾಗಿ 10 ಕೋಟಿ ರೂಪಾಯಿ ಘೋಷಿಸಿದೆ. ಅದರಲ್ಲಿ 5 ಕೋಟಿ ರೂಪಾಯಿಯನ್ನು ಈಗಾಗಲೇ ಬಿಡುಗಡೆ ಮಾಡಿದೆ. ಬಹುತೇಕ ವಿಷ್ಣು ಅಭಿಮಾನಿಗಳಿಗೆ ತಿಳಿದಿದೆ’.

‘ಕನ್ನಡ ಚಿತ್ರರಂಗ ಹಾಗೂ ಕರ್ನಾಟಕದ ಎಲ್ಲೆಡೆ ಇರುವ ಅಭಿಮಾನಿಗಳು ಅಂಬಿ ಹಾಗೂ ವಿಷ್ಣು ಅವರ ಕಲಾ ಸೇವೆಯನ್ನು ಹಾಗೂ ಸಾಮಾಜಿಕ ಸೇವೆಯ ಹಿನ್ನೆಲೆಯಲ್ಲಿ ಮತ್ತು ಸ್ಮಾರಕದ ವಿಷಯದಲ್ಲಿ ಯಾವಾಗಲೂ ಒಗ್ಗಟ್ಟಾಗಿ ಹೆಜ್ಜೆ ಇಟ್ಟಿದ್ದೇವೆ. ಅಂಬಿ ಹಾಗೂ ವಿಷ್ಣುವರ್ಧನ್ ಅವರ ಆತ್ಮೀಯ ಸ್ನೇಹ ಹಾಗೂ ಒಬ್ಬರಿಗಗೊಬ್ಬರು ತೋರುತ್ತಿದ್ದ ಪ್ರೀತಿ ಚಿಕ್ಕವರಿಗೆ ಸ್ಫೂರ್ತಿ ಆಗಬೇಕು. ಬೇಡದ ಮಾತುಗಳಿಂದ ಅವರಿಬ್ಬರ ವ್ಯಕ್ತಿತ್ವಕ್ಕೆ ಮಾತ್ರವಲ್ಲ ಅವರ ಸ್ನೇಹಕ್ಕೂ ಅಪಮಾನ. ನಾಲ್ಕು ದಶಕಗಳ ಕಾಲ ಅವರ ಸ್ನೇಹ ಯಾವುದೇ ಅಹಂಗೂ ಒಳಗಾಗಲಿಲ್ಲ, ಯಾವ ವಿಷಯವೂ ಅವರ ನಡುವೆ ಕಂದಕ ತರಲಿಲ್ಲ. ಈಗ ಅವರನ್ನು ಬೇರೆ ಮಾಡಿ ಅವರ ನೆನಪುಗಳಿಗೆ ಮಸಿ ಬಳಿಯೋದು ಬೇಡ’ ಎಂದು ಪ್ರತಿಕ್ರಿಯಿಸಿದ್ದಾರೆ.

Advertisement
Share this on...