ಅಂಬರೀಷ್ ಜೊತೆ ನಟಿಸಿದ್ದ ಈ ನಟಿ ಕಷ್ಟವನ್ನು ಎದುರಿಸಿ ಈಗ ಹೇಗಿದ್ದಾರೆ ಗೊತ್ತಾ…?

in ಸಿನಿಮಾ 50 views

ಜೀವನದ ಸಂತಸ ಅರಳುವ ಸಮಯದಲ್ಲಿ ಆ ದೇವರು ಈ ಸುಂದರ ನಟಿಗೆ ನೋವಿನಿಂದ ನರಳುವಂತೆ ಮಾಡಿದ. ಮಹಾಮಾರಿ ಕಾಯಿಲೆಯೊಂದಕ್ಕೆ ಈ ನಟಿ ತುತ್ತಾಗಿದ್ದರು. ಆದರೆ ಮಾರಣಾಂತಿಕ ಕಾಯಿಲೆಯಿಂದ ಈ ನಟಿ ಪಾರಾಗಿ ಮತ್ತೆ ಬದುಕಿನತ್ತ ಮುಖ ಮಾಡಿದರು. ಹಾಗಾದರೆ ಆ ನಟಿ ಯಾರು? ಆ ನಟಿಗೆ ಬಂದ ಕಾಯಿಲೆಯಾದರೂ ಏನು ಗೊತ್ತಾ?ಗೌತಮಿ ದಕ್ಷಿಣ ಭಾರತ ಚಿತ್ರರಂಗ ಕಂಡ ಸುಂದರ ಹಾಗೂ ಪ್ರತಿಭಾನ್ವಿತ ನಟಿಯರಲ್ಲಿ ಈಕೆ ಕೂಡ ಒಬ್ಬರು. ಆಂಧ್ರ ಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯಲ್ಲಿ ಈ ನಟಿ ಜನಿಸಿದರು. ತೆಲುಗಿನ ದಯಾ ಮಯುಡು ಎಂಬ ಚಿತ್ರದಿಂದ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಿದರು. ನಂತರ ತಮಿಳು, ತೆಲುಗು, ಮಲಯಾಳಂ ಹಾಗೂ ಕನ್ನಡ ಚಿತ್ರಗಳಲ್ಲಿಯೂ ಈ ನಟಿ ನಾಯಕಿಯಾಗಿ ನಟಿಸಿದ್ದರು. ಹೀಗೆ ದಕ್ಷಿಣ ಭಾರತದ ನಾಲ್ಕು ಭಾಷೆಗಳ ಚಿತ್ರ ರಸಿಕರಿಗೆ ಗೌತಮಿ ನೆಚ್ಚಿನ ನಟಿಯಾದರು. ಕನ್ನಡದಲ್ಲಿ ಏಳು ಸುತ್ತಿನ ಕೋಟೆ ಚಿತ್ರದಲ್ಲಿ ರೆಬೆಲ್ ಸ್ಟಾರ್ ಅಂಬರೀಷ್ ಅವರಿಗೆ ನಾಯಕಿಯಾಗಿ ನಟಿಸುವ ಮೂಲಕ ಮೊದಲ ಬಾರಿಗೆ ಕನ್ನಡ ಚಿತ್ರರಂಗಕ್ಕೆ ಪ್ರವೇಶ ಮಾಡಿದರು. ನಂತರ ಕನ್ನಡದಲ್ಲಿ ಸಾಹಸ ವೀರ, ಚಿಕ್ಕೆಜಮಾನ್ರು, ಚೆಲುವ ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದ್ದರು.

Advertisement

 

Advertisement

Advertisement

ತಮಿಳಿನ ವಸಂತಮೇ ವರುಗು, ಗುರುಶಿಷ್ಯನ್, ಕಾಲಿಚರಣ್, ಪೊಂಗಿ ವರುಂ ಕಾವೇರಿ, ಎನ್ನ ತಂಗೈ, ರಾಜ ಚಿನ್ನ ರೋಜ, ಸೀತಾ ತೆಲುಗಿನ ಅಗಿರಮೂಡು, ಚೈತನ್ಯ, ಚಕ್ರವ್ಯೂಹ, ಡಿಯರ್ ಬ್ರದರ್, ಸಂಕಲ್ಪಂ, ಅಣ್ಣ, ಹಿಂದಿಯಲ್ಲಿ ವೀರ್, ತ್ರಿಮೂರ್ತಿ, ಗಾಡ್ ಅಂಡ್ ಗನ್, ಧಾಳ್, ನಾಕಬ್, ಮಲೆಯಾಳಂನಲ್ಲಿ ಡ್ಯಾಡಿ, ಧ್ರುವಂ, ಜಾಕ್ ಪಾಟ್, ಸುಕ್ರುತಂ, ಸಾಕ್ಷಯಂ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ.ಗೌತಮಿಯವರು 1998ರಲ್ಲಿ ಸಂದೀಪ್ ಭಾಟಿಯಾ ಎಂಬ ಉದ್ಯಮಿಯನ್ನು ಮದುವೆಯಾದರು. ಆದರೆ ದಾಂಪತ್ಯದಲ್ಲಿ ಬಿರುಕು ಉಂಟಾಗಿ ಕೇವಲ ಒಂದೇ ವರ್ಷಕ್ಕೆ ಅಂದರೆ 1999ರಲ್ಲಿ ಗೌತಮಿಯವರ ಪತಿ ಸಂದೀಪ್ ಭಾಟಿಯಾರವರಿಗೆ ವಿಚ್ಛೇಧನ ನೀಡಿದರು. ಇವರಿಬ್ಬರ ದಾಂಪತ್ಯದಲ್ಲಿ ಒಂದು ಹೆಣ್ಣು ಮಗು ಕೂಡ ಜನಿಸಿತ್ತು. ಇದಾದ ನಂತರ ಗೌತಮಿಯವರು ಕ್ಯಾನ್ಸರ್ ಎಂಬ ಮಹಾಮಾರಿ ಕಾಯಿಲೆಗೆ ತುತ್ತಾದರು. ಗೌತಮಿಯವರು ಸ್ತನ ಕ್ಯಾನ್ಸರಿಗೆ ತುತ್ತಾಗಿ ನಂತರ ಕಾಯಿಲೆಯನ್ನು ಸಮರ್ಥವಾಗಿ ಎದುರಿಸಿ ಈ ಕಾಯಿಲೆಯನ್ನು ಗೆದ್ದರು.

Advertisement

 

ಗಂಡನಿಂದ ಬೇರೆಯಾಗಿದ್ದ ಗೌತಮಿ ಸುಮಾರು 13 ವರ್ಷಗಳ ಕಾಲ ಖ್ಯಾತ ನಟ ಕಮಲ್ ಹಾಸನ್ ರವರೊಂದಿಗೆ ಲಿವಿಂಗ್ ರಿಲೇಶನ್ ಶಿಪ್ ನಲ್ಲಿ ಇದ್ದರು. ಕ್ಯಾನ್ಸರ್ ಎಂಬ ಭೀಕರ ಕಾಯಿಲೆಯಿಂದ ಗುಣಮುಖರಾಗುತ್ತಿದ್ದ ಇವರಿಗೆ ಕಮಲ್ ಹಾಸನ್ ರವರು ಬೆಂಬಲವಾಗಿ ನಿಂತರು. ಗೌತಮಿಯವರ ಜೊತೆಗಿನ ಸುದೀರ್ಘ 13 ವರ್ಷಗಳ ಸಂಬಂಧದಿಂದ ಕಮಲ್ ಹಾಸನ್ ರವರು 2016ರಲ್ಲಿ ಲಿವಿಂಗ್ ರಿಲೇಷನ್ ಶಿಪ್ ನಿಂದ ಹೊರ ಬಂದರು.

 

 

ಈಗ ಗೌತಮಿಯವರು ಸಿಂಗಲ್ ಆಗಿ ಇದ್ದು ಕಳೆದ ಮೂರ್ನಾಲ್ಕು ವರ್ಷಗಳಿಂದ ಈಚೆಗೆ ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.

– ಸುಷ್ಮಿತಾ

Advertisement
Share this on...