ಎರಡು ಮದುವೆಯಾದರೂ ನಟಿ ಅಂಬಿಕಾ ಒಂಟಿಯಾಗಿದ್ದಾರೆ ಕಾರಣ ಏನು ಗೊತ್ತಾ..?

in ಮನರಂಜನೆ/ಸಿನಿಮಾ 295 views

ಅಂಬಿಕಾ ಒಂದು ಕಾಲದಲ್ಲಿ ದಕ್ಷಿಣ ಭಾರತ ಚಿತ್ರರಂಗದಲ್ಲಿ ಮಿಂಚಿದ ಸುಂದರ ಹಾಗೂ ಪ್ರತಿಭಾನ್ವಿತ ನಟಿ. ನಟಿ ಅಂಬಿಕಾರವರು 1963 ರಲ್ಲಿ ಕೇರಳದಲ್ಲಿ ಜನಿಸಿದರು. ಇವರು ಸಿನಿಮಾರಂಗಕ್ಕೆ ಕಾಲಿಟ್ಟಿದ್ದು ಬಾಲ ನಟಿಯಾಗಿ. ನಂತರ 1979 ರಲ್ಲಿ ಮಲಯಾಳಂ ಚಿತ್ರದ ಮೂಲಕ ನಾಯಕಿಯಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ನಂತರ ತೆಲುಗು, ತಮಿಳು ಹಾಗೂ ಕನ್ನಡದ ಸಿನಿಮಾಗಳಲ್ಲಿ ನಟಿಸಿ ದಕ್ಷಿಣ ಭಾರತದ ಸಿನಿಮಾರಂಗದಲ್ಲಿ ಬೇಡಿಕೆಯ ನಟಿಯಾದರು. ಕನ್ನಡದಲ್ಲಿ ನಾಯಕಿಯಾಗಿ ಹಾಗೂ ಪೋಷಕ ನಟಿಯಾಗಿ ಸುಮಾರು ಮೂವತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ ನಟಿ ಅಂಬಿಕಾ. ಗರುಡರೇಖೆ, ಚಲಿಸುವ ಮೋಡಗಳು, ಎರಡು ನಕ್ಷತ್ರಗಳು, ಚಕ್ರವ್ಯೂಹ, ಭಕ್ತಪ್ರಹ್ಲಾದ, ಪ್ರಳಯಾಂತಕ ಹಾಗೂ ಇನ್ನು ಕೆಲವು ಚಿತ್ರಗಳು ಅಂಬಿಕಾರವರಿಗೆ ತುಂಬಾ ಹೆಸರು ತಂದುಕೊಟ್ಟವು. ಕನ್ನಡದ ಮೇರು ನಟ ಡಾ. ರಾಜ್ ಕುಮಾರ್, ಸಾಹಸಸಿಂಹ ವಿಷ್ಣುವರ್ಧನ್, ಪ್ರಣಯರಾಜ ಶ್ರೀನಾಥ್, ಅನಂತ್ ನಾಗ್, ರೆಬಲ್ ಸ್ಟಾರ್ ಅಂಬರೀಶ್, ಕರಾಟೆ ಕಿಂಗ್ ಶಂಕರ್ ನಾಗ್, ಟೈಗರ್ ಪ್ರಭಾಕರ್, ಕ್ರೇಜಿ಼ ಸ್ಟಾರ್ ರವಿಚಂದ್ರನ್ ಇನ್ನು ಮುಂತಾದ ಕನ್ನಡದ ಸ್ಟಾರ್ ನಟರ ಜೊತೆ ಅಂಬಿಕಾ ನಾಯಕಿಯಾಗಿ ನಟಿಸಿದ್ದಾರೆ.

Advertisement

Advertisement

ಅಂಬಿಕಾರವರು ಸಿನಿಮಾ ರಂಗದಲ್ಲಿ ಸಾಕಷ್ಟು ಮಿಂಚಿದರೂ ಅವರ ವೈಯಕ್ತಿಕ ಬದುಕಿನಲ್ಲಿ ಮಾತ್ರ ಮೋಡ ಕವಿದಿತ್ತು. ಅಂಬಿಕಾರವರ ಸಾಂಸಾರಿಕ ಬದುಕು ಅಷ್ಟೇನೂ ಸುಂದರವಾಗಿರಲಿಲ್ಲ. 1988 ರಲ್ಲಿ ಶೀನು ಜಾನ್ ಎಂಬುವವರನ್ನು ಮದುವೆಯಾದ ಅಂಬಿಕಾ ಅಮೆರಿಕದಲ್ಲಿ ನಲೆಸಿದರು. ಮದುವೆಯಾದ ನಂತರ ಅಂಬಿಕಾ ಸಿನಿಮಾರಂಗದ ಮುಖ ಮಾಡಲಿಲ್ಲ. ತಮ್ಮ ಸಂಸಾರದ ಕಡೆ ಹೆಚ್ಚು ಗಮನ ಹರಿಸಲು ಶುರುಮಾಡಿದರು. ಆದರೆ ಇವರು ಅಂದುಕೊಂಡಂತೆ ಆಗಲಿಲ್ಲ. ತಮ್ಮ ಪತಿಯ ಜೊತೆ ಮನಸ್ತಾಪಗಳು, ಜಗಳಗಳು ಹೆಚ್ಚಾಗಿ 9 ವರ್ಷದ ದಾಂಪತ್ಯದ ನಂತರ 1997 ರಲ್ಲಿ ತಮ್ಮ ಪತಿಗೆ ವಿಚ್ಛೇದನ ನೀಡಿ ಮತ್ತೆ ಸಿನಿಮಾರಂಗದಲ್ಲಿ ಬಣ್ಣ ಹಚ್ಚಲು ಶುರುಮಾಡಿದರು.

Advertisement

ನಂತರದಲ್ಲಿ ಮತ್ತೆ 2000ನೇ ಇಸವಿಯಲ್ಲಿ ರವಿಕಾಂತ್ ಎಂಬುವವರನ್ನು ಎರಡನೇ ಮದುವೆಯಾದರು. ಯಾಕೋ ಆ ದಾಂಪತ್ಯಕ್ಕೂ ಆಯಸ್ಸು ತೀರಾ ಕಡಿಮೆ ಇತ್ತು. ಕೇವಲ ಎರಡೇ ಎರಡು ವರ್ಷಕ್ಕೆ ಇವರ ಸಂಸಾರ ಸೂತ್ರವಿಲ್ಲದ ಗಾಳಿಪಟದಂತೆ ಆಯಿತು. 2002 ನೇ ಇಸವಿಯಲ್ಲಿ ರವಿಕಾಂತ್ ರವರಿಂದ ಅಂಬಿಕಾ ದೂರವಾದರು. ಅಂಬಿಕಾರವರು ತಮ್ಮ ಮೊದಲ ದಾಂಪತ್ಯದಿಂದ ಹುಟ್ಟಿದ ಇಬ್ಬರು ಪುತ್ರರೊಂದಿಗೆ ಚೆನ್ನೈನಲ್ಲಿ ನೆಲೆಸಿದ್ದಾರೆ. ಅಂಬಿಕಾ ಸಿನಿಮಾ ಮಾತ್ರವಲ್ಲದೆ ತಮಿಳು, ಮಲಯಾಳಂ, ಹಾಗೂ ಕನ್ನಡದ ಕೆಲವು ಟಿವಿ ಸೀರಿಯಲ್ ಗಳಲ್ಲಿಯೂ ಕೂಡ ನಟಿಸುತ್ತಾ ಇಂದಿಗೂ ಕ್ರಿಯಾಶೀಲರಾಗಿದ್ದಾರೆ.

Advertisement

– ಸುಷ್ಮಿತಾ

Advertisement
Share this on...