ನಟಿ ಅಂಬಿಕಾ ಎಂತಹ ಅನುಭವ ಹಂಚಿಕೊಂಡಿದ್ದಾರೆ ಗೊತ್ತಾ ?

in ಮನರಂಜನೆ/ಸಿನಿಮಾ 172 views

ನೀ ಬಂದರೆ ಮೆಲ್ಲಗೆ ಎಂದು ಹಾಡು ಹೇಳುತ್ತಾ, ತನು ಮನ ಅರಳಿಸಿ ಯುವಕರಿಗೆ ಚಳಿ ಹಿಡಿಸಿ ಕನ್ನಡಕ್ಕೆ ಅಪೂರ್ವ ಸಂಗಮವಾದ ಬೆಡಗಿ ಎಂದರೆ ನಟಿ ಅಂಬಿಕಾ ಅವರು.
ಅಂಬಿಕಾ ಅವರು 80-90ರ ದಶಕದಲ್ಲಿ ಪರಭಾಷೆಯಿಂದ ಬಂದು ಕನ್ನಡದಲ್ಲಿ ಮಿಂಚಿದ ನಟಿಯರಲ್ಲಿ ಇವರು ಕೂಡ ಒಬ್ಬರು. ಇನ್ನು 80ರ ದಶಕದಲ್ಲಿ ಅನೇಕ ಕನ್ನಡ ಚಿತ್ರಗಳಲ್ಲಿ ನಟಿಸಿದ ಅವರು ವರನಟ ಡಾ ರಾಜ್, ಸಾಹಸ ಸಿಂಹ ಡಾ. ವಿಷ್ಣು, ರೆಬಲ್ ಸ್ಟಾರ್ ಅಂಬಿ, ಕ್ರೇಜಿಸ್ಟಾರ್ ರವಿಚಂದ್ರನ್, ಪ್ರಣಯರಾಜ ಶ್ರೀನಾಥ್, ಕರಾಟೆ ಕಿಂಗ್ ಶಂಕರ್ ನಾಗ್ ಹಾಗೂ ಅನಂತ್ ನಾಗ್ ಹೀಗೆ ಆ ಸಮಯದ ಎಲ್ಲ ಖ್ಯಾತ ನಾಯಕ ನಟರ ಜೊತೆ ತೆರೆಹಂಚಿಕೊಂಡಿದ್ದು, ಟಾಪ್ ನಟಿಯಾಗಿ ಮಿಂಚಿದ್ದರು.ಇದೀಗ ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ಅಭಿನಯಿಸುತ್ತಿರುವ ಅವರು, ಕನ್ನಡ ಕಿರುತೆರೆ ಧಾರಾವಾಹಿಯಲ್ಲೂ ತನ್ನದೇ ಆದ ಛಾಪು ಮೂಡಿಸುತ್ತಿದ್ದಾರೆ. ಇನ್ನು ನಟಿ ಅಂಬಿಕಾ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಾಗಿ ಸಕ್ರಿಯರಾಗಿದ್ದು, ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ ಚಿತ್ರಗಳಲ್ಲಿನ ಹಳೆಯ ಚಿತ್ರಗಳು ಹಾಗೂ ಅದರ ಸಣ್ಣ ತುಣುಕುಗಳನ್ನು ಅಭಿಮಾನಿಗಳಿಗೆ ಹಂಚಿಕೊಳ್ಳುತ್ತಿದ್ದಾರೆ.

Advertisement

Advertisement

ಮೂಲತಃ ಕೇರಳದಲ್ಲಿ ಜನಿಸಿದ ಅಂಬಿಕಾ, ದಕ್ಷಿಣ ಭಾರತದ ಎಲ್ಲ ಸಿನಿಮಾರಂಗದವರ ಪ್ರೀತಿ ಹಾಗೂ ಖ್ಯಾತಿಯನ್ನು ಗಳಿಸಿದ್ದರು.ಇತ್ತೀಚಿಗಷ್ಟೆ ಅವರು ಸಾಮಾಜಿಕ ಜಾಲತಾಣದ ತಮ್ಮ ಖಾತೆಯಲ್ಲಿ ನಮ್ಮ ಕನ್ನಡದ ಚಿತ್ರಗಳ ಎರಡು ಅನುಭವಗಳನ್ನು ಹಂಚಿಕೊಂಡಿದ್ದು, ಆ ಎರಡೂ ನೆನಪುಗಳು ಊಟಕ್ಕೆ ಸಂಬಂಧಿಸಿದ್ದು ಎನ್ನುವುದು ವಿಶೇಷ!ಕರಾಟೆ ಕಿಂಗ್ ಶಂಕರ್ ನಾಗ್ ಹಾಗೂ ವರನಟ ಡಾ. ರಾಜ್ ಅವರೊಂದಿಗೆ ಅಪೂರ್ವ ಸಂಗಮ ಎಂಬ ಸಿನಿಮಾದಲ್ಲಿ ನಟಿ ಅಂಬಿಕಾ ಸ್ಕ್ರೀನ್ ಶೇರ್ ಮಾಡಿದ್ದರು. ಡಾ. ರಾಜ್ ಅವರು ನಡೆಸಿ ಕೊಡುತ್ತಿದ್ದ ಸಂಗೀತ ರಾತ್ರಿಗಳಲ್ಲಿ ಅವರೊಂದಿಗೆ ನಾನೂ ಹಾಡುತ್ತಿದ್ದೆ ಎಂಬುದನ್ನು ಅಂಬಿಕಾ ಇದೀಗ ಸ್ಮರಿಸಿಕೊಂಡಿದ್ದಾರೆ.’ನಾನು ರಾಗಿಮುದ್ದೆಯನ್ನು ಮೊದಲ ಬಾರಿಗೆ ತಿಂದಿದ್ದು ಅವರ ಕಾರಣದಿಂದ. ‘ಚಲಿಸುವ ಮೋಡಗಳು’ ಚಿತ್ರೀಕರಣದ ವೇಳೆ ಸೆಟ್‌ನಲ್ಲಿ ಮೊದಲ ಬಾರಿಗೆ ರಾಗಿ ಮುದ್ದೆ ತಿಂದಿದ್ದೆ’ ಎಂದು ಅಂಬಿಕಾ ತಿಳಿಸಿದ್ದಾರೆ. ಈ ಚಿತ್ರವನ್ನು ಮುಂದೆ ತೆಲುಗಿನಲ್ಲಿ ಸೋಬನ್ ಬಾಬು ಅವರೊಂದಿಗೆ ‘ರಾಜ್ ಕುಮಾರ್’ ಹೆಸರಲ್ಲಿ ಮಾಡಿದ್ದ ಸಂಗತಿಯನ್ನು ಹೇಳಿಕೊಂಡಿದ್ದಾರೆ.

Advertisement

Advertisement

ಇನ್ನು ೧೯೮೪ ರಲ್ಲಿ ತೆರೆಂಕಂಡ ಮೂರುಜನ್ಮ ಎಂಬ ಸಿನಿಮಾದಲ್ಲಿ ಅಂಬಿಕಾ ಬಣ್ಣ ಹಚ್ಚಿದ್ದರು. ಭಾರ್ಗವ ಅವರು ನಿರ್ದೇಶನ ಮಾಡಿದ್ದ ಈ ಸಿನಿಮಾದಲ್ಲಿ ರೆಬಲ್ ಸ್ಟಾರ್ ಡಾ. ಅಂಬರೀಶ್ ಅವರೊಂದಿಗೆ ಅಂಬಿಕಾ ತೆರೆ ಹಂಚಿಕೊಂಡಿದ್ದರು. ಈ ಸಿನಿಮಾದ ಚಿತ್ರೀಕರಣದ ನೆನಪನ್ನೂ ಕೂಡ ಹಂಚಿಕೊಂಡಿರುವ ನಟಿ ಅಂಬಿಕಾ, ಚಿಕ್ಕಮಗಳೂರಿನಲ್ಲಿ ಮೂರುಜನ್ಮ ಸಿನಿಮಾದ ಚಿತ್ರೀಕರಣ ನಡೆಯುವ ಸಂಧರ್ಭದಲ್ಲಿ ನಾನು ಕನ್ನಡಿಗರ ಜನಪ್ರಿಯ ಹಾಗೂ ಬಹಳ ಇಷ್ಟವಾದ ಆಹಾರ ಬಿಸಿಬೇಳೆ ಬಾತ್ ಹಾಗೂ ಕೋಸಂಬರಿಯನ್ನು ಸೇವಿಸಿದ್ದೆ ಎಂದು ತಿಳಿಸಿದ್ದಾರೆ.

 

ಇನ್ನು ನಟಿ ಅಂಬಿಕಾ ಇತ್ತೀಚಿಗಷ್ಟೆ ನವರಸನಾಯಕ ಜಗ್ಗೇಶ್ ಅಭಿನಯದ ಕಾಳಿದಾಸ ಕನ್ನಡ ಮೇಷ್ಟ್ರು ಎಂಬ ಸಿನಿಮಾದಲ್ಲಿ ಶಾಲೆಯ ಪ್ರಿನ್ಸಿಪಾಲ್ ಪಾತ್ರದಲ್ಲಿ ಅಭಿನಯಿಸಿದ್ದರು. ಕನ್ನಡದಲ್ಲಿ ನಾಯಕಿ ಹಾಗೂ ಪೋಷಕ ಪಾತ್ರಗಳಲ್ಲಿ ಸುಮಾರು ೪೦ ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿರುವ ಅವರು ರಾಜ್ ಕುಮಾರ್ ಅವರೊಂದಿಗೆ ಚಲಿಸುವ ಮೋಡಗಳು, ಎರಡು ನಕ್ಷತ್ರಗಳು, ಭಕ್ತ ಪ್ರಹ್ಲಾದ, ಅಪೂರ್ವ ಸಂಗಮ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

ಜಾಹಿರಾತು

“ಇಷ್ಟ ಪಟ್ಟ ಸ್ತ್ರೀ ಪುರುಷ ವಶೀಕರಣ ದಲ್ಲಿ ಓಪನ್ ಚಾಲೆಂಜ್” ನಿಮ್ಮ ಸರ್ವ ಸಂಕಷ್ಟಗಳಿಗೆ ಪರಿಹಾರವನ್ನು ತಿಳಿಯಲು ಇಂದೆ ಕರೆ ಮಾಡಿ 9535242057. ನಂ 1 ವಶೀಕರಣ ದೈವಶಕ್ತಿ ಮಾಂತ್ರಿಕ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು ಶ್ರೀ ಪವನ ಶರ್ಮ ಗುರೂಜಿ 9535242057. ಅಮವಾಸ್ಯೆ ಹುಣ್ಣಿಮೆ ಗ್ರಹಣ ಕಾಲದ ಚೌಡೇಶ್ವರಿ ದೇವಿ ಬಲಿಷ್ಠ ಶಕ್ತಿಪೂಜೆ ಚೌಡಿ ಉಪಾಸನ ಶಕ್ತಿಗಳಿಂದ ನಿಮ್ಮ ಸಮಸ್ಯೆಗಳಾದ ವಿದ್ಯಾ ಪ್ರಾಪ್ತಿ, ಮದುವೆ, ಸಂತಾನ, ಪ್ರೀತಿಯಲ್ಲಿ ನಂಬಿ ಮೋಸ, ಸ್ತ್ರೀ ಪುರುಷ ವಶೀಕರಣ, ಜನ ವಶೀಕರಣ, ಸಾಲದಿಂದ ವಿಮುಕ್ತಿ, ನಿಮ್ಮ ಎಲ್ಲಾ ಕಾರ್ಯಗಳಿಗೆ 5 ದಿನಗಳಲ್ಲಿ ಸವರ್ಜಯ ಯಾವುದೆ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ (ನುಡಿದಂತೆ ನಡೆಯುವುದು) ಇಂದೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 9535242057

Advertisement
Share this on...