ಅಮೀರ್ ಪುತ್ರಿ ಬಾಯ್ ಫ್ರೆಂಡ್’ನಿಂದ ದೂರವಾಗಲು ಇದೇ ಅಸಲಿ ಕಾರಣ!

in ಮನರಂಜನೆ 107 views

ನಟ ಅಮೀರ್ ಖಾನ್ ಅವರ ಪುತ್ರಿ ಇರಾ ಖಾನ್ ಯಾವಾಗಲೂ ಸುದ್ದಿಯಲ್ಲಿರುತ್ತಾರೆ. ಕೆಲವೊಮ್ಮೆ ತಮ್ಮ ಫೋಟೋಗಳಿಂದ ಸುದ್ದಿಯಾದರೆ, ಮತ್ತೆ ಕೆಲವೊಮ್ಮೆ ಪ್ರೀತಿ ವಿಷಯವಾಗಿ ಸುದ್ದಿಯಲ್ಲಿರುತ್ತಾರೆ. ಇತ್ತೀಚಿನ ದಿನಗಳಲ್ಲಿ ಗೆಳೆಯ ಮಿಶಾಲ್ ಕೃಪಲಾನಿ ಅವರೊಂದಿರುವ ಚಿತ್ರಗಳನ್ನು ಹಂಚಿಕೊಂಡು ಚರ್ಚೆಗೆ ಕಾರಣವಾಗುತ್ತಿದ್ದರು ಇರಾ. ಆದರೆ ಈ ಬಾರಿ ಇವರಿಬ್ಬರೂ ಬೇರ್ಪಟ್ಟಿದ್ದಾರೆ ಎಂಬ ಸುದ್ದಿ ತಿಳಿದು ಬಂದಿದೆ.

Advertisement

 

Advertisement

Advertisement

 

Advertisement

ಕೆಲವು ಮಾಹಿತಿಯ ಪ್ರಕಾರ, ಈಗ ಇವರಿಬ್ಬರ ನಡುವೆ ಎಲ್ಲವೂ ಸರಿಯಾಗಿಲ್ಲ. ವಾಸ್ತವವಾಗಿ, ಈಗ ಇಬ್ಬರೂ ಪರಸ್ಪರ ಭೇಟಿಯಾಗುವುದನ್ನು ನಿಲ್ಲಿಸಿದ್ದಾರೆ. ಇರಾ ತನ್ನ ವೃತ್ತಿಜೀವನದತ್ತ ಗಮನಹರಿಸಲು ಪ್ರಾರಂಭಿಸಿದ ಸಮಯದಿಂದಲೂ, ಅವರ ನಡುವೆ ಸಮಸ್ಯೆಗಳು ಪ್ರಾರಂಭವಾಗಿವೆ ಎಂದು ಹೇಳಲಾಗುತ್ತಿದೆ. ಇದಕ್ಕಾಗಿಯೇ ಈ ಜೋಡಿ ವಿರಾಮ ತೆಗೆದುಕೊಳ್ಳಲು ನಿರ್ಧರಿಸಿದೆ ಎಂದು ಸಹ ಹೇಳಲಾಗುತ್ತಿದೆ.

 

 

ಇತ್ತೀಚೆಗೆ ಇರಾ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಮಿಶಾಪಲ್ ಕೃಪಲಾನಿ ಅವರೊಂದಿಗೆ ಯಾವುದೇ ಚಿತ್ರವನ್ನು ಹಂಚಿಕೊಂಡಿಲ್ಲ. ಇದರಿಂದ, ಈ ಜೋಡಿ ಬ್ರೇಕ್ ಅಪ್ ಮಾಡಿಕೊಂಡಿದೆ ಎಂದು ಊಹಿಸಲಾಗುತ್ತಿದೆ. ಇರಾ ಇದಕ್ಕೂ ಮುನ್ನ ಮಿಶಾಲ್ ಅವರೊಂದಿಗಿರುವ ರೋಮ್ಯಾಂಟಿಕ್ ಫೋಟೋಗಳು ಮತ್ತು ವೀಡಿಯೊಗಳನ್ನು ಹಂಚಿಕೊಂಡಿದ್ದರು. ಅಷ್ಟೇ ಅಲ್ಲ, 2019 ರಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ತನ್ನ ಸಂಬಂಧದ ಬಗ್ಗೆ ಬಹಿರಂಗಪಡಿಸಿದ್ದರು. ಈ ಜೋಡಿ 2 ವರ್ಷಗಳಿಗಿಂತ ಹೆಚ್ಚು ಕಾಲ ಪರಸ್ಪರ ಡೇಟಿಂಗ್ ಮಾಡುತ್ತಿದ್ದರು.

 

 

ಕಳೆದ ವರ್ಷ ಇರಾ ಮಿಶಾಲ್ ಕೃಪಲಾನಿ ಜೊತೆ ರೊಮ್ಯಾಂಟಿಕ್ ಡಾನ್ಸ್ ಮಾಡಿದ ವಿಡಿಯೋ ಇನ್ಸ್ಟಾಗ್ರಾಂ ನಲ್ಲಿ ಭಾರೀ ಸದ್ದು ಮಾಡಿತ್ತು. ಇನ್ಸ್ಟಾಗ್ರಾಂ ನಲ್ಲಿ ಒಂದು ರೊಮ್ಯಾಂಟಿಕ್ ವಿಡಿಯೋವನ್ನು ಹಂಚಿಕೊಂಡಿದ್ದಇರಾ, ನಾನು ನಿನ್ನೊಂದಿಗೆ ನೃತ್ಯ ಮಾಡಲು ಬಯಸುತ್ತೇನೆ ಎಂದು ಬರೆದುಕೊಂಡಿದ್ದರು. ಇನ್ನು ವಿಡಿಯೋದಲ್ಲಿ ಇರಾ ಮತ್ತು ಮಿಶಾಲ್ ಬಿಗಿಯಾಗಿ ತಬ್ಬಿಕೊಂಡಿರುವುದು ನೋಡಬಹುದಾಗಿತ್ತು.

 

 

View this post on Instagram

 

Me, Gulshan and kachori ✌? . . . ? @chaitanyathard #rajasthan #kachori #howcoolarewe #onitsukatiger #mizuno #allsmiles

A post shared by Ira Khan (@khan.ira) on

ಹಿಂದೊಮ್ಮೆ ಇನ್ಸ್ಟಾಗ್ರಾಂನಲ್ಲಿ #AskMeAnything ಎನ್ನುವ ಕಾರ್ಯಕ್ರಮದಲ್ಲಿ ಇರಾಗೆ ಅಭಿಮಾನಿಯೊಬ್ಬರು ಯಾರನ್ನಾದರೂ ಡೇಟಿಂಗ್ ಮಾಡುತ್ತಿದ್ದಾರಾ ಎಂದು ಪ್ರಶ್ನೆ ಕೇಳಿದ್ದರು. ಅದಕ್ಕೆ ಪ್ರತ್ಯುತ್ತರವಾಗಿ ಇರಾ, ಮಿಶಾಲ್ ಕೃಪಲಾನಿ ಅವರ ಫೋಟೋವನ್ನು ಪೋಸ್ಟ್ ಮಾಡುವ ಮೂಲಕ ಉತ್ತರಿಸಿದ್ದರು.

 

 

ಬಾಲಿವುಡ್ ನಲ್ಲಿ ಸಿನಿಮಾ ಮಾಡುವ ಆಲೋಚನೆಯಲ್ಲಿರುವ ಇರಾ, ಈಗಾಗಲೇ ಸಾಕಷ್ಟು ಪ್ರಯೋಗಗಳನ್ನು ಮಾಡುತ್ತಿದ್ದರು ಎಂಬುದಕ್ಕೆ ಇತ್ತೀಚಿನ ಕೆಲವು ಘಟನೆಗಳೇ ಸಾಕ್ಷಿ. ಅದಕ್ಕಾಗಿ ಅವರು ಬೇಕಾದ ಎಲ್ಲ ಸಿದ್ಧತೆಗಳನ್ನೂ ಮಾಡಿಕೊಳ್ಳುತ್ತಿದ್ದಾರೆ. ಇರಾ, ಅಮೀರ್ ಖಾನ್ ಮೊದಲ ಪತ್ನಿ ರೀನಾ ಅವರ ಪುತ್ರಿ. ಇರಾ ಖಾನ್ ಸದ್ಯ ಸಂಗೀತ ಅಭ್ಯಾಸ ಮಾಡುತ್ತಿದ್ದಾರೆ.

Advertisement
Share this on...